SRH ವಿರುದ್ಧ ಸೋತ್ರು RCBನೇ KING – ಮೇ 26ಕ್ಕೆ ಗುಜರಾತ್ VS ಬೆಂಗಳೂರು ಕಾದಾಟ

SRH ವಿರುದ್ಧ ಸೋತ್ರು RCBನೇ KING –  ಮೇ 26ಕ್ಕೆ ಗುಜರಾತ್ VS ಬೆಂಗಳೂರು ಕಾದಾಟ

ಲೀಗ್ ಹಂತದ ಕೊನೆ ಪಂದ್ಯದಲ್ಲಿ ಆರ್‌ಸಿಬಿ, ಎಸ್‌ಆರ್‌ಹೆಚ್ ವಿರುದ್ಧ ಮಂಡಿಯೂರಿದೆ. ಈ ಪಂದ್ಯ ಸಾಕಷ್ಟು ನೀರಿಕ್ಷೆಯನ್ನ ಹುಟ್ಟಿಸಿತ್ತು. ಆರ್‌ಸಿಬಿ ಈ ಪಂದ್ಯವನ್ನ ಗೆಲ್ಲುತ್ತೆ ಅನ್ನೋ ಲೆಕ್ಕಾಚಾರವಿತ್ತು.  ಆದ್ರೆ ಆರ್‌ಸಿಬಿ ಎಸ್‌ಆರ್‌ಹೆಚ್ ಬ್ಯಾಟರ್‌ಗಳ ಅಬ್ಬರಕ್ಕೆ ತತ್ತರಿಸಿ ಹೋಯ್ತು.   SRH ನೀಡಿದ 256 ರನ್​​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಸೋಲನ್ನು ಅನುಭವಿಸಿತು. SRH​ 55 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ಇದನ್ನೂ ಓದಿ: ಬೆಂಗಳೂರಿನ ಹೊಸ ಕ್ರಿಕೆಟ್ ಸ್ಟೇಡಿಯಂಗಿಂದು ಸಿಎಂ ಸಿದ್ದರಾಮಯ್ಯರಿಂದ ಶಿಲಾನ್ಯಾಸ

ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಈ ಗೆಲುವಿನ ನಂತರವೂ ಎಸ್​​ಆರ್​​ಹೆಚ್​ ಮೂರನೇ ಸ್ಥಾನದಲ್ಲೇ ಉಳಿಯಿತು. ಇದರೊಂದಿಗೆ ಕ್ವಾಲಿಯರ್-1 ರಲ್ಲಿ ಆರ್​​ಸಿಬಿ ಆಡಲು ಅಧಿಕೃತ ಆರ್ಹತೆ ಪಡೆದಿದೆ. ಗುಜರಾತ್ ಟೈಟಾನ್ಸ್ ತಂಡ 18 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್​​ಸಿಬಿ ವಿರುದ್ಧ ಎಸ್​​ಆರ್​​ಹೆಚ್ ಗೆದ್ದರೂ, ಮೂರನೇ ಸ್ಥಾನದಲ್ಲಿದೆ. 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ತಂಡಗಳು ತಲಾ 18 ಅಂಕಗಳನ್ನು ಕಲೆ ಹಾಕಿವೆ. ಆದರೆ ಆರ್‌ಸಿಬಿ ನೆಟ್‌ ರನ್‌ ರೇಟ್‌ ಉಳಿದ ಎರಡು ತಂಡಗಳಿಗಿಂತ ಉತ್ತಮವಾಗಿದೆ. ಆರ್‌ಸಿಬಿ 0.783 ರನ್‌ ರೇಟ್‌ ಹೊಂದಿದರೆ, ಗುಜರಾತ್ ಟೈಟಾನ್ಸ್‌ 0.695 ರನ್‌ ರೇಟ್‌ನೊಂದಿಗೆ ಎರಡನೇ ಸ್ಥಾನ, ಹೈದರಾಬಾದ್‌ 0.524 ರನ್‌ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ಪರಿಣಾಮ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಕ್ವಾಲಿಯರ್-1 ರಲ್ಲಿ ಆರ್​​ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಆಡಲಿದೆ. ಈ ರೋಚಕ ಪಂದ್ಯ ಮೇ 26 ರಂದು ನಡೆಯಲಿದೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್​ ನೀಡಿರಲಿಲ್ಲ. ಆದರೆ ಆರ್​​ಸಿಬಿ ಬೌಲರ್​ಗಳು ಎಸ್​ಆರ್​ಹೆಚ್ ವಿರುದ್ಧ ದಂಡಿಸಿಕೊಳ್ಳುವ ಮೂಲಕ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು 2024 ರಲ್ಲಿ  ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ನೆರವಿನಿಂದ SRH ತಂಡ ಐಪಿಎಲ್ ಇತಿಹಾಸದ ಸಾರ್ವಕಾಲಿಕ ಗರಿಷ್ಠ ಮೊತ್ತವಾದ 287 ರನ್ ಸಿಡಿಸಿತ್ತು. ಇದೀಗ ಮತ್ತೊಮ್ಮೆ ಆರ್​ಸಿಬಿ ವಿರುದ್ಧ ಅಬ್ಬರಿಸುವ ಸನ್​ರೈಸರ್ಸ್ ಹೈದರಾಬಾದ್ 255 ರನ್​ ಚಚ್ಚಿದ್ದಾರೆ.  ಈ ಪಂದ್ಯ ಸೋತ್ರೂ ಕೂಡ ಆರ್‌ಬಿಸಿನೇ ಪಾಯಿಂಟ್ ಟೇಬಲ್‌ನಲ್ಲಿ ಟಾಪ್‌ನಲ್ಲಿದೆ.

 

 

Kishor KV