IPLನಲ್ಲಿ RCB ಇತಿಹಾಸ ಸೃಷ್ಟಿ RCB ಪಕ್ಕಕ್ಕೂ ನಿಲ್ಲದ ಉಳಿದ ಟೀಂ
ಕಪ್‌ಗೂ ಮೊದಲೇ ಬೆಂಗಳೂರಿಗೆ ಜಯ

IPLನಲ್ಲಿ RCB ಇತಿಹಾಸ ಸೃಷ್ಟಿ   RCB ಪಕ್ಕಕ್ಕೂ ನಿಲ್ಲದ ಉಳಿದ ಟೀಂಕಪ್‌ಗೂ ಮೊದಲೇ ಬೆಂಗಳೂರಿಗೆ ಜಯ

ಆರ್‌ಸಿಬಿ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅನ್ನೋದು ಚಿಕ್ಕಮಕ್ಕಳಿಗೂ ಗೊತ್ತು. ಈಗ ಈ ತಂಡದ ಗರಿ ಮತ್ತಷ್ಟು ಎತ್ತರಕ್ಕೆ ಹೋಗಿದೆ. ಕಪ್ ಗೆಲ್ಲುವುದ್ದಕ್ಕೆ ಹತ್ತಿರವಿರೋ ಆರ್‌ಸಿಬಿ ಅಭಿಮಾನಿಗಳು ಬೆಟ್ಟದಷ್ಟು ಪ್ರೀತಿ ತೋರಿಸಿದ್ದು,  ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಹವಾ

ಐಪಿಎಲ್‌ ಗೆಲುವಿನ ಸಂಖ್ಯೆಗಳು ಏರಿಕೆ ಆಗುತ್ತಾ ಇದ್ದಂತೆ, ಇತ್ತ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಹಿಂಬಾಲಕರ ಸಂಖ್ಯೆಯಲ್ಲೂ ಸಹ ಭಾರೀ ಏರಿಕೆ ಆಗಿದೆ. ಈ ಮೂಲಕ ಆರ್‌ಸಿಬಿ ನವ ಇತಿಹಾಸವನ್ನು ಸೃಷ್ಟಿಸಿದೆ. ಈಗ ಎಲ್ಲಿ ನೋಡಿದ್ರೂ ಆರ್‌ಸಿಬಿ ಹವಾ ಜೋರಾಗಿದೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದೆ. ಈ ಪ್ರದರ್ಶನಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಈಗ ಸಾಮಾಜಿಕ ತಾಣದಲ್ಲಿ ಆರ್‌ಸಿಬಿ ಮತ್ತೊಂದು ಮೈಲುಗಲ್ಲು ತಲುಪಿದೆ ಈ ಮೂಲಕ ಈ ಹಿಂದೆ ಯಾವ ಐಪಿಎಲ್‌ ಫ್ರಾಂಚೈಸಿ ಮಾಡದ ಸಾಧನೆಯನ್ನು ಮಾಡಿ ಬೀಗಿದೆ ಆರ್‌ಸಿಬಿ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ 20 ಮಿಲಿಯನ್‌ ತಲುಪಿದೆ. ಆರ್‌ಸಿಬಿ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. 20 ಮಿಲಿಯನ್‌ ಹಿಂಬಾಲಕರನ್ನು ಹೊಂದಿರುವ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ. ಆರ್‌ಸಿಬಿ ಇತ್ತಿಚಿಗಷ್ಟೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿತ್ತು. ಈಗ ಚೆನ್ನೈಗಿಂತ ಹೆಚ್ಚು ಫ್ಯಾನ್ಸ್‌ಗಳನ್ನ ಹೊಂದಿರೋ ಆರ್‌ಸಿಬಿ ಫುಲ್ ಹವಾ ಸೃಷ್ಟಿ ಮಾಡಿದೆ. ಹಾಗಿದ್ರೆ ಯಾವೆಲ್ಲಾ ಟೀಂಗಳು ಎಷ್ಟೆಷ್ಟು ಫಾಲೋವರ್ಸ್‌ಗಳನ್ನ ಹೊಂದಿದೆ ಅನ್ನೋದನ್ನ ನೋಡೋಣ ಬನ್ನಿ.

ಆರ್‌ಸಿಬಿ – 20 ಮಿಲಿಯನ್‌

ಸಿಎಸ್‌ಕೆ- 18.6 ಮಿಲಿಯನ್‌

 ಮುಂಬೈ ಇಂಡಿಯನ್ಸ್‌ –  18 ಮಿಲಿಯನ್‌

 ಕೋಲ್ಕತ್ತಾ ನೈಟ್ ರೈಡರ್ಸ್‌-  7.5 ಮಿಲಿಯನ್‌

 ಸನ್‌ರೈಸರ್ಸ್‌ ಹೈದರಾಬಾದ್‌ –  5.4 ಮಿಲಿಯನ್‌

ರಾಜಸ್ಥಾನ ರಾಯಲ್ಸ್ – 5.2 ಮಿಲಿಯನ್ 

ಗುಜರಾತ್ ಟೈಟನ್ಸ್ – 4.9 ಮಿಲಿಯನ್

ಡೆಲ್ಲಿ ಕ್ಯಾಪಿಟಲ್ಸ್  – 4.6 ಮಿಲಿಯನ್

ಪಂಜಾಬ್ ಕಿಂಗ್ಸ್ – 4.1 ಮಿಲಿಯನ್

ಲಕ್ನೋ ಸೂಪರ್ ಜೈಂಟ್ಸ್-  3.6 ಮಿಲಿಯನ್

ಆರ್‌ಸಿಬಿ ಎಲ್ಲಾ ದಾಖಲೆಯನ್ನ ಉಡೀಸ್‌ ಮಾಡಿ ಐಪಿಎಲ್‌ ಕಿಂಗ್ ಎನಿಸಿಕೊಂಡಿದೆ. ತನ್ನ ತಾಕತ್ತು ಏನು ಅನ್ನೋದನ್ನ ಬೆಂಗಳೂರು ಟೀಂ ತೋರಿಸಿದೆ. ಒಂದೇ ಒಂದು ಕಪ್ ಗೆದ್ದಿಲ್ಲ ಅಂದ್ರೂ ಕೋಟಿ ಕೋಟಿ ಫ್ಯಾನ್ಸ್‌ಗಳ ಹೃದಯ ಗೆದ್ದ ಒಂದೇ ಒಂದು ಐಪಿಎಲ್ ಟೀಂ ಅಂದ್ರೆ ಅದು ಆರ್‌ಸಿಬಿ.

 

 

Kishor KV

Leave a Reply

Your email address will not be published. Required fields are marked *