ಸದ್ದು, ಗದ್ಧಲವಿಲ್ಲದೆ ಶ್ರೇಯಸ್ ಸುನಾಮಿ – ಟೀಂ ಇಂಡಿಯಾ 4ನೇ ಸ್ಲಾಟ್ ಫಿಕ್ಸ್

ತಂಡದಿಂದ ಕೈಬಿಟ್ಟ ಕಿಡಿಯೋ.. ಕರಿಯರ್ ಮುಗ್ದೇ ಹೋಯ್ತು ಅನ್ನೋ ಭಯ ಕಾಡಿತೋ.. ಶ್ರೇಯಸ್ ಅಯ್ಯರ್ ಅನ್ನೋ ಆಟಗಾರನ ಎದೆಯಲ್ಲಿ ಹೊತ್ತಿದ ಕಿಚ್ಚು ಈಗ ಬ್ಯಾಟ್ ಮೂಲಕ ಧಗಧಗಿಸ್ತಿದೆ. ಪಂದ್ಯದಿಂದ ಪಂದ್ಯಕ್ಕೆ ಬೆಸ್ಟ್ನಲ್ಲೇ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಎಲ್ಲಿ ಅವಶ್ಯಕತೆ ಇದ್ಯೋ ಅಲ್ಲಿ ಬ್ಯಾಕ್ ಬೋನ್ ಆಗಿ ನಿಂತು ರನ್ಸ್ ಕೊಡ್ತಿದ್ದಾರೆ. ಕಳೆದ ಆರು ಇನ್ನಿಂಗ್ಸ್ಗಳ ಅವ್ರ ಪ್ರದರ್ಶನವೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ : 2023ರ ಸೇಡು ತೀರಿಸುತ್ತಾ ಭಾರತ? – ಆಸಿಸ್ ನ ಈ ಮೂವರೇ ಡೇಂಜರಸ್
ಟೀಂ ಇಂಡಿಯಾ ಫ್ಯಾನ್ಸ್ಗೆ ಭಾನುವಾರದ ಪಂದ್ಯವಂತೂ ಸಿಕ್ಕಾಪಟ್ಟೆ ಶಾಕಿಂಗ್ ಆಗಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ 6.4ನೇ ಓವರ್ ವೇಳೆಗೆ ಭಾರತದ ಟಾಪ್ ಆರ್ಡರ್ನ ಮೂವರು ಬ್ಯಾಟರ್ಸ್ ವಿಕೆಟ್ ಒಪ್ಪಿಸಿದ್ರು. 30 ರನ್ ಗಳಿಸುವಷ್ಟ್ರಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮೂರು ವಿಕೆಟ್ ಉರುಳಿತ್ತು. ಬಟ್ ಈ ಟೈಮಲ್ಲಿ ಜವಾಬ್ದಾರಿಯುತ ಆಟವಾಡಿದ ಶ್ರೇಯಸ್ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಅಕ್ಷರ್ ಪಟೇಲ್ ಜೊತೆಗೂಡಿ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟ್ ಬೀಸಿದ್ರು. 79 ರನ್ ಸಿಡಿಸಿ ಭಾರತಕ್ಕೆ ಆಧಾರವಾದ್ರು. ಅಲ್ದೇ ಕಳೆದ ಆರು ಪಂದ್ಯಗಳಲ್ಲಿ ನಾಲ್ಕು ಬಾರಿ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ನಂಬರ್ 4 ಸ್ಲಾಟ್ಗೆ ಬೆಸ್ಟ್ ಬ್ಯಾಟರ್ ಆಗಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಕಳೆದ ವರ್ಷ ಶ್ರೇಯಸ್ ಪರಿಸ್ಥಿತಿ ಹೀಗಿರಲಿಲ್ಲ.
2025ರ ಆರಂಭದಲ್ಲೇ ಶ್ರೇಯಸ್ಗೆ ಲಕ್ ಖುಲಾಯಿಸಿದೆ ನಿಜ. ಬಟ್ 2023, 24ರಲ್ಲಿ ಈ ರೀತಿ ಇರ್ಲಿಲ್ಲ. ಕಂಪ್ಲೀಟ್ ಫಿಟ್ನೆಸ್ ಹೊಂದಿದ್ದರೂ ಕೂಡ ಅನಗತ್ಯ ಕಾರಣಗಳನ್ನು ಕೊಟ್ಟು ಪ್ರತಿಷ್ಠಿತ ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ನಿರಾಕರಿಸಿದ್ರು. ಈ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂದ್ರೆ ಬಿಸಿಸಿಐ ಕೇಂದ್ರ ಒಪ್ಪಂದದಿಂದ ತೆಗೆದು ಹಾಕಿತ್ತು. ವೈಟ್ ಬಾಲ್ ಕ್ರಿಕೆಟ್ ಮತ್ತು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಆಡುತ್ತಾ ಬಂದಿದ್ದ ಶ್ರೇಯಸ್ಗೆ ಇದು ದೊಡ್ಡ ಹಿನ್ನಡೆಯಾಗಿತ್ತು. ಹೀಗಾಗಿ ಇನ್ಮುಂದೆ ಟೀಂ ಇಂಡಿಯಾ ಬಾಗಿಲು ಕಂಪ್ಲೀಟ್ ಆಗಿ ಮುಚ್ಚಿತು ಎಂದೇ ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ವಿಶ್ಲೇಷಣೆ ಮಾಡಿದ್ರು. ಬಟ್ ಬ್ಯಾಡ್ ಟೈಂ ಎಲ್ರಿಗೂ ಬಂದೇ ಬರುತ್ತೆ. ಅದ್ರಿಂದ ಹೊರಗೆ ಬರೋದು ನಮ್ಮ ಮೇಲೆಯೇ ಇರುತ್ತೆ ಅನ್ನೋದನ್ನ ಸಾಧಿಸಿ ತೋರಿಸಿದ್ದು ಶ್ರೇಯಸ್!
ಹೀಗೆ ಭಾರತ ತಂಡದಿಂದ ಹೊರಬಿದ್ದ ಮೇಲೆ ಸ್ವಲ್ಪ ಅಲರ್ಟ್ ಆದ ಶ್ರೇಯಸ್ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಹಾಗೇ 2024ರ ಐಪಿಎಲ್ನಲ್ಲಿ ಕೆಕೆಆರ್ ನಾಯಕನಾಗಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಅಲ್ದೇ ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶಗಳಲ್ಲಿ ಬೆಟರ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಇದೇ ಕಾರಣಕ್ಕೆ ಶ್ರೇಯಸ್ಗೆ ಮತ್ತೆ ಕೇಂದ್ರದ ಗುತ್ತಿಗೆಯಲ್ಲಿ ಅವಕಾಶ ಪಡೆಯೋ ಸಾಧ್ಯತೆ ಇದೆ. ಅಲ್ದೇ 2023-24ರ ಸಾಲಿನಲ್ಲಿ ಬಿಸಿಸಿಐ ರಿಲೀಸ್ ಮಾಡಿರೋ ರೂಲ್ಸ್ ಪಟ್ಟಿಯಲ್ಲೂ ಇದನ್ನೇ ಹೇಳಿದೆ. ಕೇಂದ್ರ ಒಪ್ಪಂದದಿಂದ ಹೊರ ಬಿದ್ದಿರೋ ಆಟಗಾರ ಕಂಟಿನ್ಯೂಯಸ್ ಆಗಿ 3 ಟೆಸ್ಟ್‌ಗಳು ಅಥವಾ 8 ಏಕದಿನಗಳು ಪಂದ್ಯಗಳು ಅಥವಾ 10 ಟಿ20ಐಗಳನ್ನು ಆಡಿದರೆ ಆತ ಮರಳಿ ಕೇಂದ್ರ ಒಪ್ಪಂದವನ್ನು ಪಡೆಯಬಹುದು.
ಶ್ರೇಯಸ್ ಅಯ್ಯರ್ ಅವ್ರನ್ನ ಕೇಂದ್ರ ಒಪ್ಪಂದ ಪಟ್ಟಿಯಿಂದ ಹೊರಗಿಟ್ಟ ನಂತರ ಟೀಂ ಇಂಡಿಯಾ ಪರ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2024 ರಲ್ಲಿ ಶ್ರೀಲಂಕಾ ವಿರುದ್ಧ 3 ಏಕದಿನ ಪಂದ್ಯಗಳು, ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳು ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ 3 ಪಂದ್ಯಗಳನ್ನು ಆಡಿದ್ದಾರೆ. ಸೆಮಿಫೈನಲ್ನಲ್ಲೂ ಕಣಕ್ಕಿಳಿಯಲಿದ್ದಾರೆ. ಫಿನಾಲೆ ತಲುಪಿದ್ರೆ ಅಲ್ಲೂ ಒಂದು ಮ್ಯಾಚ್ ಆಡ್ತಾರೆ. ಹೀಗಾಗಿ 2024-25ರ ಸೀಸನ್ನ ಕೇಂದ್ರ ಒಪ್ಪಂದವನ್ನು ಪಡೆಯಲು ಶ್ರೇಯಸ್ ವಾದ ಮಂಡಿಸಬಹುದು. ಅಥವಾ ಬಿಸಿಸಿಐ ಮ್ಯಾನೇಜ್ಮೆಂಟೇ ಒಪ್ಪಂದ ಮಾಡಿಕೊಳ್ಬೋದು.