175+ ರನ್ಸ್ ಮೇಲೆ ಕಣ್ಣಿಟ್ಟ ವೈಭವ್ – ಗೇಲ್ ದಾಖಲೆ ಧೂಳೀಪಟ ಮಾಡ್ತಾರಾ?
IPLಗೂ ಮೊದ್ಲೇ ಸಿಡಿದ ಸೂರ್ಯವಂಶಿ

175+ ರನ್ಸ್ ಮೇಲೆ ಕಣ್ಣಿಟ್ಟ ವೈಭವ್ – ಗೇಲ್ ದಾಖಲೆ ಧೂಳೀಪಟ ಮಾಡ್ತಾರಾ?IPLಗೂ ಮೊದ್ಲೇ ಸಿಡಿದ ಸೂರ್ಯವಂಶಿ

ವೈಭವ್ ಸೂರ್ಯವಂಶಿ. ಆತನ ವಯಸ್ಸಿಗೂ ಪರ್ಫಾಮೆನ್ಸ್​ಗೂ ಸಂಬಂಧನೇ ಇಲ್ಲ. ಎದುರಾಳಿ ಯಾರೇ ಆಗಿರ್ಲಿ ಎಂಥಾ ಬಿಗ್ ಈವೆಂಟ್​ಗಳೇ ಇರ್ಲಿ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸೋ ಯಂಗ್ ಡೈನಮೈಟ್. ಕಳೆದ ವರ್ಷವಷ್ಟೇ ಐಪಿಎಲ್​ಗೆ ಡೆಬ್ಯೂ ಮಾಡಿದ್ರೂ ತಮ್ಮ ಪವರ್ ತೋರಿಸಿದ್ರು. ಌಂಡ್ ಈ ಸಲ ಅಂತೂ ಬಿಗ್ ಟಾರ್ಗೆಟ್ ಇಟ್ಕೊಂಡೇ ಬರ್ತಿದ್ದಾರೆ.

ಇದನ್ನೂ ಓದಿ : IPL ಉದ್ಘಾಟನಾ ಪಂದ್ಯಕ್ಕೆ ಮಳೆಯ ಶಾಕ್ !- ಚಿನ್ನಸ್ವಾಮಿಯಲ್ಲಿ ನಡೆಯಲ್ವಾ RCB- SRH ಮ್ಯಾಚ್?

ಜಗತ್ತಿನ ಮೋಸ್ಟ್ ಡೇಂಜರಸ್ ಪ್ಲೇಯರ್​ಗಳೆಲ್ಲಾ ಒಂದೇ ಕಡೆ ಆಡೋ ಶ್ರೀಮಂತ ಲೀಗ್ ಐಪಿಎಲ್ ಯಾವ ಐಸಿಸಿ ಟೂರ್ನಮೆಂಟ್​ಗಳಿಗೂ ಕಮ್ಮಿ ಇಲ್ಲ. ವರ್ಷದಿಂದ ವರ್ಷಕ್ಕೆ ವೇಯ್ಟೇಜ್ ಌಂಡ್ ವ್ಯಾಲ್ಯೂ ಜಾಸ್ತಿ ಆಗ್ತಾನೇ ಹೋಗ್ತಿದೆ. ಅದೆಷ್ಟೋ ಯಂಗ್ ಕ್ರಿಕೆಟರ್ಸ್​ಗೆ ಲೈಫ್ ಕೊಟ್ಟಿದೆ. ಅಂತಾರಾಷ್ಟ್ರೀಯ ಪಂದ್ಯಗಳ ಬಾಗಿಲು ತೆರೆದಿದೆ. ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿಕೊಳ್ಳೋಕೆ ವೇದಿಕೆ ಕೊಟ್ಟಿದೆ. ಇದೇ ಐಪಿಎಲ್​ನಲ್ಲಿ ಕಳೆದ ವರ್ಷ ಹಲ್​ಚಲ್ ಎಬ್ಬಿಸಿದ್ದ ವೈಭವ್ ಸೂರ್ಯವಂಶಿ ಈ ವರ್ಷ ಅತಿದೊಡ್ಡ ದಾಖಲೆ ಮೇಲೆಯೇ ಕಣ್ಣಿಟ್ಟಿದ್ದಾರೆ.

ಕ್ರಿಸ್ ಗೇಲ್ ಹೆಸರಲ್ಲಿರೋ ದಾಖಲೆ ಬ್ರೇಕ್ ಮಾಡ್ತಾರಾ ವೈಭವ್?

ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಏಜ್ ಬಗ್ಗೆ ಡೌಟ್ ಪಡುವಂತೆ ಮಾಡಿರೋ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್​ನಲ್ಲಿ ಎರಡು ಬಿಗ್ ಟಾರ್ಗೆಟ್​ಗಳೊಂದಿಗೆ ಕಣಕ್ಕಿಳೀತಿದ್ದಾರೆ. ಅದ್ರಲ್ಲೂ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿರುವ ಭರ್ಜರಿ ದಾಖಲೆಯನ್ನು ಬ್ರೇಕ್ ಮಾಡ್ಬೇಕು ಎಂದಿದ್ದಾರೆ. 14 ವರ್ಷದ ವೈಭವ್ ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಅವರ 175 ರನ್‌ಗಳ ಇಂಡಿವಿಶ್ಯುಯಲ್ ಹೈಯೆಸ್ಟ್ ಸ್ಕೋರ್ ದಾಖಲೆಯನ್ನ ಮುರಿಯೋ ಟಾರ್ಗೆಟ್ ಇದೆ ಎಂದಿದ್ದಾರೆ. 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಷ್ಟೇ ಅಲ್ಲದೆ 66 ಎಸೆತಗಳಲ್ಲಿ 175 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಈ ದಾಖಲೆಯನ್ನ ಮುರಿಯೋದೇ ನನ್ನ ದೊಡ್ಡ ಗುರಿ ಅಂತಾ ವೈಭವ್ ಹೇಳಿದ್ದಾರೆ.  ಆತನ  ಆಟ ನೋಡಿದ್ರೆ ಐಪಿಎಲ್​ನಲ್ಲಿ ಈ ರೆಕಾರ್ಡ್ ಬ್ರೇಕ್ ಮಾಡೋ ಎಲ್ಲಾ ಚಾನ್ಸಸ್ ಕೂಡ ಇದೆ. ಕಳೆದ ಬಾರಿಯ ಐಪಿಎಲ್​ನಲ್ಲಿ ವೈಭವ್ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಅಷ್ಟೇ ಅಲ್ಲದೆ 2026ರ ಫೆಬ್ರವರಿಯಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಕಡೆಯಿಂದ ಪ್ರಚಂಡ ಬ್ಯಾಟಿಂಗ್ ಅಂತೂ ಎಕ್ಸ್​ಪೆಕ್ಟ್ ಮಾಡ್ಬೋದು.

ರಾಜಸ್ಥಾನ ತಂಡಕ್ಕೆ ಕಪ್ ಗೆಲ್ಲಿಸೋದು ಮತ್ತೊಂದು ಗುರಿ!

ಇನ್ನು ವೈಭವ್ ಸೂರ್ಯವಂಶಿಗೆ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನ ಚಾಂಪಿಯನ್ ಮಾಡ್ಬೇಕು ಅನ್ನೋ ಮತ್ತೊಂದು ಆಸೆಯೂ ಇದೆ. 2024 ರಲ್ಲಿ ವೈಭವ್​ ಕೇವಲ 13 ವರ್ಷದವರಾಗಿದ್ದಾಗ ರಾಜಸ್ಥಾನ ರಾಯಲ್ಸ್ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿತು. ವೈಭವ್ ಸೂರ್ಯವಂಶಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತನಗೆ ಐಪಿಎಲ್​ನಲ್ಲಿ ಅವಕಾಶ ಕೊಟ್ಟಿರೋ ಮೊದಲ ತಂಡ ರಾಜಸ್ಥಾನ. ಹೀಗಾಗಿ ಈ ಬಾರಿ ಆರ್​ಆರ್ ತಂಡವನ್ನ ಚಾಂಪಿಯನ್ಸ್ ಮಾಡೋದು ನನ್ನ ಮತ್ತೊಂದು ಗುರಿ ಎಂದಿದ್ದಾರೆ. ಬಿಹಾರ ಮೂಲದ ವೈಭವ್, ರಾಜಸ್ಥಾನ್ ರಾಯಲ್ಸ್ ಪರ ಆಡುವುದರಲ್ಲಿ ನನಗೆ ಸಂತೋಷವಿದೆ ಏಕೆಂದರೆ ಇಲ್ಲಿ ಆಡುವುದರಿಂದ ನನ್ನ ಜೀವನದಲ್ಲೂ ಸಾಕಷ್ಟು ಸುಧಾರಣೆಯಾಗಿದೆ.  ಯಾವುದೇ ಯುವ ಆಟಗಾರನಿಗೆ, ಮೊದಲ ಐಪಿಎಲ್ ಶಿಬಿರ ಯಾವಾಗಲೂ ರೋಮಾಂಚನಕಾರಿಯಾಗಿದೆ,  ನನಗೂ ಹಾಗೆಯೇ ಆಗಿತ್ತು ಎಂದಿದ್ದಾರೆ. ಒಟ್ನಲ್ಲಿ ವೈಭವ್​ಗೆ ಇರೋ ಅಗ್ರೆಶನ್, ಫಿಯರ್​ನೆಸ್ ಎಲ್ಲಾ ನೋಡ್ತಿದ್ರೆ ಈ ಬಾರಿಯೂ ಆತನಿಂದ ಬಿಗ್ ಸ್ಕೋರ್ ನಿರೀಕ್ಷೆ ಮಾಡ್ಬೋದು. ಈ ಸೀಸನ್ ಅಲ್ದಿದ್ರೂ ಮುಂದಿನ ಆವೃತ್ತಿಗಳಲ್ಲಾದ್ರೂ ಗೇಲ್ ದಾಖಲೆ ಬ್ರೇಕ್ ಮಾಡೋ ಎಲ್ಲಾ ಸಾಮರ್ಥ್ಯ ವೈಭವ್​ಗಂತೂ ಇದೆ.

Shantha Kumari

Leave a Reply

Your email address will not be published. Required fields are marked *