ಬೆಂಗಳೂರು ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಹೊಸ ಓನರ್ – ಆರ್ಸಿಬಿ ಹೆಸರು ಚೇಂಜ್ ಬಗ್ಗೆ ಅಪ್ಡೇಟ್

ಆರ್ಸಿಬಿ ಸೇಲ್ ಆದ ಮೇಲೆ ಹೆಸರು ಚೇಂಜ್ ಆಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ವದಂತಿಗಳಿಗೆ ತೆರೆ ಎಳೆದಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ, ಐಪಿಎಲ್ ಅಥವಾ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಹೆಸರನ್ನು ಬದಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ. ಇನ್ನು ಮುಂದೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರೇ ಉಳಿಯುತ್ತದೆ.
ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಈ ಮೂಲಕ ಫ್ರಾಂಚೈಸಿಗೆ ಹೊಸ ಮಾಲೀಕರು ಬಂದಿದ್ದಾರೆ. ಕುಮಾರ್ ಮಂಗಲಂ ಅವರ ಆದಿತ್ಯ ಬಿರ್ಲಾ ಗ್ರೂಪ್, ಬ್ಲಾಕ್ಸ್ಟೋನ್ ಮತ್ತು ಡೇವಿಡ್ ಬ್ಲಿಟ್ಜರ್ ಅವರ ಬೋಲ್ಟ್ ವೆಂಚರ್ಸ್ನ ಒಕ್ಕೂಟವು ಡಿಯಾಜಿಯೊದಿಂದ $1.78 ಬಿಲಿಯನ್ (ಸುಮಾರು ₹16,705 ಕೋಟಿ) ಗೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿತು.
ಮಾರಾಟ ನಡೆದ ನಂತರ ಹೊಸ ಮಾಲೀಕತ್ವವು ಫ್ರಾಂಚೈಸಿಯ ಹೆಸರನ್ನು ಬದಲಾಯಿಸುವುದಿಲ್ಲ ಎಂಬ ವರದಿಗಳು ಹೊರಬಂದಿದ್ದವು. ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಮತ್ತು ಡೆಲ್ಲಿ ಡೇರ್ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡಗಳು ಹೆಸರು ಬದಲಿಸಿದ್ದವು. ಈ ವದಂತಿಗಳಿಗೆ ತೆರೆ ಎಳೆದಿರುವ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ, ಐಪಿಎಲ್ ಅಥವಾ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಹೆಸರನ್ನು ಬದಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ. ಇನ್ನು ಮುಂದೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರೇ ಉಳಿಯುತ್ತದೆ.
ಇದನ್ನೂ ಓದಿ: ಟಿಪ್ಪರ್ ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಖಾಸಗಿ ಬಸ್! – 12 ಮಂದಿ ಸಜೀವ ದಹನ!
ಆರ್ಸಿಬಿ ₹16,705 ಕೋಟಿಗೆ ಮಾರಾಟವಾಗಿದೆ! ಆದಿತ್ಯ ಬಿರ್ಲಾ ಗ್ರೂಪ್, ಡೇವಿಡ್ ಬ್ಲಿಟ್ಜರ್, ಬ್ಲಾಕ್ಸ್ಟೋನ್ ಒಕ್ಕೂಟವು ಆರ್ಸಿಬಿಯನ್ನು ಸ್ವಾಧೀನಪಡಿಸಿಕೊಂಡಿದೆ. ಒಳ್ಳೆಯ ಸುದ್ದಿ ಏನೆಂದರೆ, ಆದಿತ್ಯ ಬಿರ್ಲಾ ಗ್ರೂಪ್ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರನ್ನು ಹಾಗೆಯೇ ಮುಂದುವರಿಸುತ್ತದೆ ಎಂದು ದೃಢಪಡಿಸಿದೆ’ ಎಂದು ಅನನ್ಯಾ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಆರ್ಸಿಬಿ ಮಾರ್ಚ್ 31 ಅನ್ನು ಸ್ವಾಧೀನಕ್ಕೆ ಅಂತಿಮ ದಿನಾಂಕವಾಗಿ ನಿಗದಿಪಡಿಸಿತ್ತು. ಆದಾಗ್ಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರಾಟವನ್ನು ಅನುಮೋದಿಸುವವರೆಗೆ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಮುಂದಿನ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಯುವವರೆಗೆ ಇದನ್ನು ಪೂರ್ಣಗೊಳಿಸಲಾಗುವುದಿಲ್ಲ. ಕಳೆದ ವರ್ಷ, ಬಿಸಿಸಿಐನ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 28ರಂದು ಮುಂಬೈನಲ್ಲಿ ನಡೆಯಿತು. ಬಿಸಿಸಿಐ ವಿಂಡೋವನ್ನು ಬದಲಾಯಿಸದ ಕಾರಣ, ಆದಿತ್ಯ ಬಿರ್ಲಾ ಗ್ರೂಪ್, ಬ್ಲಾಕ್ಸ್ಟೋನ್ ಮತ್ತು ಡೇವಿಡ್ ಬ್ಲಿಟ್ಜರ್ಗಳ ಒಕ್ಕೂಟವು ಡಿಯಾಜಿಯೊದಿಂದ ಅಧಿಕಾರ ವಹಿಸಿಕೊಳ್ಳಲು ಅಕ್ಟೋಬರ್ 2026 ರವರೆಗೆ ಕಾಯಬೇಕಾಗುತ್ತದೆ.

ನೋಡಿರಿ

