ಬಿರ್ಲಾ ತೆಕ್ಕೆಗೆ ಜಾರಿದ RCB – ರಾಯಲ್ ಚಾಲೆಂಜ್ ಹೆಸರು ಚೇಂಜ್
ಅಭಿಮಾನಿಗಳ ಕ್ರೇಜ್ ಕಮ್ಮಿಯಾಗುತ್ತಾ?

ಆರ್‌ಸಿಬಿ ಅಂದ್ಮೇಲೆ ಅವ್ರ ಲೆವೆಲ್ಲೇ ಬೇರೆ. ಆನ್ಫೀಲ್ಡ್, ಆಫ್ ದಿ ಫೀಲ್ಡ್ನಲ್ಲೂ ಬೆಂಗಳೂರು ಫ್ರಾಂಚೈಸಿ ವ್ಯಾಲ್ಯೂನೇ ಬೇರೆ. ಈಗ ಖರೀದಿಯಲ್ಲೂ ದಾಖಲೆಯನ್ನೇ ಬರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ದೊಡ್ಡ ಹಾಗೂ ಐತಿಹಾಸಿಕ ಮೊತ್ತಕ್ಕೆ ಸೇಲ್ ಆಗಿದೆ. ಜಗತ್ತಿನಾದ್ಯಂತ ಕೋಟ್ಯಂತರ ಫ್ಯಾನ್ಸ್ ಹೊಂದಿರೋ ಆರ್‌ಸಿಬಿ ಫ್ರಾಂಚೈಸಿಯ ಒಡೆತನ ಅಧಿಕೃತವಾಗಿ ಬದಲಾಗಿದೆ.
ಇದನ್ನೂ ಓದಿ : RCB ವಿರುದ್ಧ 300 ರನ್ಸ್ ಟಾರ್ಗೆಟ್ – ಹೆಡ್ ಗೆ ಚಿನ್ನಸ್ವಾಮಿ ಅಂದ್ರೆ ಇಷ್ಟನಾ?
ಮೆನ್ಸ್ ಹಾಗೇ ವುಮೆನ್ಸ್ ಎರಡೂ ಲೀಗ್ಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಈಗ ಹಾಲಿ ಚಾಂಪಿಯನ್ಸ್. ಮಾರ್ಚ್ 28ರಂದು 19ನೇ ಸೀಸನ್ ಐಪಿಎಲ್ ಸ್ಟಾರ್ಟ್ ಆಗ್ತಿದ್ದು ಮೆನ್ಸ್ ಟೀಂ ಟ್ರೋಫಿ ಡಿಫೆಂಡರ್ಸ್ ಆಗಿ ಕಣಕ್ಕಿಳೀತಾರೆ. ಐಪಿಎಲ್ ಕಿಕ್ ಸ್ಟಾರ್ಟ್ ಹೊತ್ತಲ್ಲೇ ಬೆಂಗಳೂರು ಫ್ರಾಂಚೈಸಿ ಸೇಲ್ ಆಗಿದೆ.
ಐಪಿಎಲ್ ಹಿಸ್ಟರಿಯಲ್ಲೇ ದಾಖಲೆ ಮೊತ್ತಕ್ಕೆ ಆರ್ ಸಿಬಿ ಸೇಲ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೆನ್ಸ್ ಌಂಡ್ ವುಮೆನ್ಸ್ ಎರಡೂ ತಂಡಗಳನ್ನ ಆದಿತ್ಯ ಬಿರ್ಲಾ ಗ್ರೂಪ್ ಬರೋಬ್ಬರಿ 16,706 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಂಡಿದೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ದಾಖಲೆ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆ ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ಕಂಪನಿಗಳನ್ನೊಳಗೊಂಡ ಜಂಟಿ ಒಕ್ಕೂಟವು ಒಟ್ಟು 1.78 ಬಿಲಿಯನ್ ಡಾಲರ್ ಅಂದ್ರೆ ಇಂಡಿಯನ್ ಕರೆನ್ಸಿ ಪ್ರಕಾರ 16,706 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಬ್ರಿಟನ್ ಮೂಲದ ಡಿಯಾಜಿಯೊ ಕಂಪನಿಯ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಶೇ.100ರಷ್ಟು ಷೇರುಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿ ಫ್ರಾಂಚೈಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ಮಾಲೀಕತ್ವದ ಬೆನ್ನಲ್ಲೇ ಆರ್‌ಸಿಬಿ ಫ್ಯಾನ್ಸ್ಗೆ ಆತಂಕ ಶುರುವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗುತ್ತಾ?
ಓನರ್ಶಿಪ್ ಚೇಂಜ್ ಆಯ್ತು ಇದೆಲ್ಲಾ ಕಾಮನ್. ಬಟ್ ಆರ್‌ಸಿಬಿ ಅಭಿಮಾನಿಗಳನ್ನ ಕಾಡ್ತಾ ಇರೋ ಆತಂಕ ಅಂದ್ರೆ ತಂಡದ ಹೆಸರು ಬದಲಾವಣೆ ಆಗುತ್ತಾ ಅನ್ನೋದು. ಯಾಕಂದ್ರೆ ಆರ್‌ಸಿಬಿ ಅನ್ನೋದು ಬರೀ ಹೆಸರಲ್ಲ ಅದೊಂದು ಎಮೋಷನ್. ಐಪಿಎಲ್ನಲ್ಲೇ ಅತ್ಯಂತ ಜನಪ್ರಿಯ ಬ್ರಾಂಡ್. ಆ ಹೆಸರಿಗೇ ಇರೋ ಗತ್ತು ಗಮ್ಮತ್ತು ಲೆವೆಲ್ಲೇ ಬೇರೆ. ಬೆಂಗಳೂರು ಮತ್ತು ಕರ್ನಾಟಕದ ನೆಲ ಹಾಗೂ ಇಲ್ಲಿನ ಲಾಯಲ್ ಫ್ಯಾನ್ಸ್ ಈ ತಂಡದ ಅತಿದೊಡ್ಡ ಶಕ್ತಿ. ಈಗ ಅದೇ ಜನ ಮೆಚ್ಚಿಕೊಂಡಿರೋ ಹೆಸರನ್ನ ಚೇಂಜ್ ಮಾಡ್ತಾರಾ ಅನ್ನೋ ಭೀತಿಯೂ ಇದೆ. ಯಾಕಂದ್ರೆ ಆರ್‌ಸಿಬಿ ಒಡೆತನ ಈ ಮೊದಲು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಬಳಿ ಇತ್ತು. ಈ ಕಂಪನಿಯು ಡನ್ ಮೂಲದ ಯುಕೆ-ಡಿಯಾಜಿಯೊದ ಅಂಗಸಂಸ್ಥೆ. ಯುಎಸ್‌ಎಲ್ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ. ಈಗ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಅದೇ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಸೋ ಈಗ ಹೊಸ ಮಾಲೀಕರು ಹೆಸರು ಬದಲಾವಣೆಗೆ ಪ್ಲ್ಯಾನ್ ಮಾಡಬಹುದು. ಹಾಗಂತ ಈ ಸೀಸನ್ನಲ್ಲಿ ಯಾವುದೇ ಬದಲಾವಣೆ ಅಂತೂ ಇರೋದಿಲ್ಲ. ಯಾಕಂದ್ರೆ ಐಪಿಎಲ್ 2026ರ ಸೀಸನ್ ಮುಗಿದ ನಂತರ ಈ ಹೊಸ ಮಾಲೀಕತ್ವವು ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲಿಯವರೆಗೆ ಡಿಯಾಜಿಯೊ ಸಂಸ್ಥೆಯೇ ತಂಡದ ಜವಾಬ್ದಾರಿಯನ್ನು ಮುಂದುವರಿಸಲಿದೆ. ಸೋ ಈ ಸೀಸನ್ನಲ್ಲಿ ಯಾವುದೇ ಚೇಂಜಸ್ ಇರಲ್ಲ. ಹಾಗಂತ ಐಪಿಎಲ್ನಲ್ಲಿ ಫ್ರಾಮಚೈಸಿಗಳ ಹೆಸರು ಬದಲಾವಣೆ ಹೊಸದೇನಲ್ಲ.
ಮಾಲೀಕತ್ವ ಬದಲಾದ ಮೇಲೆ ಹೆಸರೂ ಬದಲಾವಣೆ!
ಐಪಿಎಲ್ನಲ್ಲಿ ಓನರ್ಶಿಪ್ ಚೇಂಜ್ ಆದಾಗ ತಂಡಗಳ ಹೆಸರೂ ಚೇಂಜ್ ಆಗಿದ್ದೂ ಇದೆ. ಐಪಿಎಲ್ ಆರಂಭದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಅಂತಾ ಇದ್ದ ತಂಡವನ್ನ ಕ್ಯಾಪಿಟಲ್ಸ್ ಗ್ರೂಪ್ ಖರೀದಿ ಬಳಿಕ 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಂತಾ ಮಾಡಿದ್ರು. ಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ 2021ರಲ್ಲಿ ಪಂಜಾಬ್ ಕಿಂಗ್ಸ್ ಅಂತಾ ಮಾಡಿದ್ರು. ಇನ್ನು ಡೆಕ್ಕನ್ ಚಾರ್ಜರ್ಸ್ ಅಂತಾ ಇದ್ದ ಗ್ರೂಪ್ ಕಾವ್ಯಾ ಮಾರನ್ ಒಡೆತನದ ಬಳಿಕ ಸನ್ ರೈಸರ್ಸ್ ಹೈದ್ರಾಬಾದ್ ಆಗಿದೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರ್ ತಂಡವೇ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿದೆ. ಬ್ಯಾಂಗಳೂರು ತೆಗೆದು ಬೆಂಗಳೂರು ಮಾಡಿದ್ರು. ಹೀಗಾಗಿ ಈ ಸಲ ಬೆಂಗಳೂರು ತಂಡದ ಹೆಸರು ಮತ್ತೆ ಬದಲಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಕೂಡ ಮಾರಾಟವಾಗಿದೆ. ಅಮೆರಿಕ ಮೂಲದ ಕಲ್ ಸೋಮಾನಿ ನೇತೃತ್ವದ ಒಕ್ಕೂಟ ಸುಮಾರು 15,290 ಕೋಟಿ ರೂ.ಗೆ ಖರೀದಿ ಮಾಡಿದೆ.

ನೋಡಿರಿ

