ಹೇಜಲ್ ವುಡ್ ಕಮ್ ಬ್ಯಾಕ್.. ಟಿಮ್ ಡೇವಿಡ್ ಡೌಟ್ -ರಜತ್ & ಜಿತೇಶ್ ಗೆ ಟೆನ್ಷನ್!

ಪ್ಲೇಆಫ್ಸ್ ಹೊಸ್ತಿಲಲ್ಲಿರೋ ಆರ್ ಸಿಬಿಗೆ ಜೋಶ್ ಹೇಜಲ್ ವುಡ್ ಕಮ್ ಬ್ಯಾಕ್ ಮಾಡಿರೋದು ಹೊಸ ಬೂಸ್ಟ್ ಕೊಟ್ಟಂತಾಗಿದೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಭುಜದ ನೋವಿನಿಂದ ಪ್ಲೇಯಿಂಗ್ 11ನಿಂದ ಹೊರಗುಳಿದಿದ್ದ ಜೋಶ್ ಹೇಜಲ್‌ವುಡ್, ಐಪಿಎಲ್ ಸ್ಥಗಿತದ ಬೆನ್ನಲ್ಲೇ ಆಸ್ಟ್ರೇಲಿಯಾಗೆ ವಾಪಸ್ ಹೋಗಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇರುವ ಕಾರಣ ಅವರು ವಾಪಸ್ ಬರುವ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಆದರೆ ಫಿಟ್ ಆಗಿರುವ ಹೇಜಲ್‌ವುಡ್ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಅಲ್ದೇ ಶನಿವಾರವೇ ತಂಡವನ್ನು ಸೇರಿಕೊಂಡಿದ್ದು ಪ್ರಾಕ್ಟೀಸ್ ಕೂಡ ಆರಂಭಿಸಿದ್ದಾರೆ. ಸೋ ಕಂಪ್ಲೀಟ್ ಫಿಟ್ ಆಗಿರೋದ್ರಿಂದ ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: CSK ಗೆದ್ದಿದ್ದು RCBಗೆ ಲಾಭ.. LSG ಸೋತ್ರೆ ಟಾಪ್-2 ಫಿಕ್ಸ್!
ಹೇಜಲ್‌ವುಡ್ ಪ್ರಸೆನ್ಸ್ ಎಷ್ಟು ಇಂಪಾರ್ಟೆಂಟ್ ಅನ್ನೋದು ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲೇ ಗೊತ್ತಾಗಿತ್ತು. ಆರ್‌ಸಿಬಿ 231 ರನ್ಗಳನ್ನ ಬಿಟ್ಟುಕೊಟ್ಟಿತ್ತು. ಬಟ್ ಹೇಜಲ್‌ವುಡ್ ಇದ್ದದ್ರೆ ಹತ್ತರಿಂದ 20 ರನ್ಸ್ ಕಡಿಮೆ ಆಗ್ತಿತ್ತೋ ಏನೋ. ಈ ಸೀಸನ್ನಲ್ಲಿ ಹ್ಯಾಜಲ್‌ವುಡ್ 10 ಪಂದ್ಯಗಳನ್ನು ಆಡಿದ್ದು ಈ ಅವಧಿಯಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಇವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಹ್ಯಾಜಲ್‌ವುಡ್ ಕೊರತೆ ಕಾಡಿದ್ದು ಇದೀಗ ಉಳಿದ ಪಂದ್ಯಗಳಲ್ಲಿ ಲಭ್ಯವಾಗಿರುವುದು ಆರ್‌ಸಿಬಿ ಬೌಲಿಂಗ್ ಪಡೆಗೆ ದೊಡ್ಡ ಬಲ ಬಂದಂತಾಗಿದೆ.
ಟಿಮ್ ಡೇವಿಡ್ ಡೌಟ್.. ರಜತ್ & ಜಿತೇಶ್ ಗೆ ಟೆನ್ಷನ್!
ಇನ್ನು ಇದೆಲ್ಲದ್ರ ನಡುವೆ ಆರ್ ಸಿಬಿಯ ಆಪತ್ಬಾಂಧವನಾಗಿರೋ ಟಿಮ್ ಡೇವಿಡ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ರು. ಇದೀಗ ಮಂಗಳವಾರದ ವೇಳೆಗೆ ಫಿಟ್ ಆಗುವುದು ಅನುಮಾನವಾಗಿದೆ. ಹೀಗಾಗಿ ಬದಲಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಆಡುವ ಸಾಧ್ಯತೆ ಇದೆ. ಬಟ್ ಲಿವಿಂಗ್‌ಸ್ಟೋನ್ ಕಳೆದ ಕೆಲ ಪಂದ್ಯಗಳಲ್ಲಿ ಫಾರ್ಮ್ ಕಳ್ಕೊಂಡಿದ್ದರಿಂದ ಪ್ಲೇಯಿಂಗ್ 11ನಿಂದ ಕೈಬಿಡಲಾಗಿತ್ತು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದರೂ ಕೂಡ ಹೇಗೆ ಆಡ್ತಾರೆ ಅನ್ನೂ ಅನುಮಾನಗಳಿವೆ. ಹಾಗೇ ನಾಯಕ ರಜತ್ ಪಟಿದಾರ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಫಾರ್ಮ್ ಕಂಡುಕೊಳ್ಬೇಕಿದೆ. ಇಲ್ಲವಾದಲ್ಲಿ ಆರ್ ಸಿಬಿ ಮಧ್ಯಮ ಕ್ರಮಾಂಕದಲ್ಲಿ ಕಷ್ಟಪಡಬೇಕಾಗುತ್ತದೆ. ಜೇಕಬ್ ಬೆಥೆಲ್, ಲುಂಗಿ ಎನ್ಗಿಡಿ ಈಗಾಗ್ಲೇ ನ್ಯಾಷನಲ್ ಡ್ಯೂಟಿಗಾಗಿ ವಾಪಸ್ ಹೋಗಿರೋದ್ರಿಂದ ಮುಂದಿನ ಪಂದ್ಯಗಳಿಗೆ ಪ್ಳೇಯಿಂಗ್ 11ನಲ್ಲಿ ಒಂದಷ್ಟು ಬದಲಾವಣೆಗೂ ಆಗಲಿವೆ.
ಒಟ್ನಲ್ಲಿ ಕೆಕೆಆರ್ ವಿರುದ್ಧದ ಮ್ಯಾಚ್ ರದ್ದಾಗಿ ಹೈದ್ರಾಬಾದ್ ವಿರುದ್ಧ ಸೋತಿರೋ ಆರ್‌ಸಿಬಿ ಲೀಗ್ ಹಂತದ ಕೊನೇ ಪಂದ್ಯ ಆಡೋಕೆ ರೆಡಿಯಾಗಿದೆ. ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಗೆದ್ರೆ ಪ್ಲೇಆಫ್ ಪಂದ್ಯಗಳಿಗೆ ಮತ್ತಷ್ಟು ಜೋಶ್ ಬಂದಂತಾಗುತ್ತೆ. ಅದೂ ಅಲ್ದೇ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗ್ಬೋದು. ಅಲ್ಲೂ ಗೆದ್ರೆ ಸೀದಾ ಫಿನಾಲೆಗೆ ಲಗ್ಗೆ ಇಡ್ಬೋದು. 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್ ಪ್ರವೇಶ ಪಡೆದಂತಾಗುತ್ತೆ.

ನೋಡಿರಿ

