ಆರ್ ಸಿಬಿ ತಂಡಕ್ಕೆ ಚಿನ್ನಸ್ವಾಮಿ ಮೈದಾನವೇ ಚಾಲೆಂಜ್ – ಹೋಂ ಗ್ರೌಂಡ್ ನಲ್ಲಿ ಏನೆಲ್ಲಾ ಸವಾಲ್?

ಆರ್ ಸಿಬಿ ತಂಡಕ್ಕೆ ಚಿನ್ನಸ್ವಾಮಿ ಮೈದಾನವೇ ಚಾಲೆಂಜ್ – ಹೋಂ ಗ್ರೌಂಡ್ ನಲ್ಲಿ ಏನೆಲ್ಲಾ ಸವಾಲ್?

ಯಾವುದೇ ತಂಡಕ್ಕಾದ್ರೂ ಹೋಂ ಗ್ರೌಂಡ್​ನಲ್ಲಿ ಪಂದ್ಯ ಆಡೋದಂದ್ರೆ ಹಲವು ಅಡ್ವಾಂಟೇಜಸ್ ಇರುತ್ವೆ. ಹಾಗೇ ತವರಿನ ಅಭಿಮಾನಿಗಳ ಮುಂದೆ ಪೈಪೋಟಿ ನಡೆಸೋದೂ ಕೂಡ ಥ್ರಿಲ್. ಬಟ್ ಅದೆಲ್ಲಕ್ಕಿಂತ ಹೆಚ್ಚಾಗಿ ಗೆಲ್ಲಲೇಬೇಕಾದ ಪ್ರೆಶರ್​ನಲ್ಲೂ ಇರ್ತಾರೆ. ಫ್ಯಾನ್ಸ್​ನ ಡಿಸಪಾಯಿಂಟ್ ಮಾಡಬಾರದು ಅಂತಾ ಆಡ್ತಾರೆ. ಸೋ ಬೆಂಗಳೂರು ಟೀಮ್​ಗೂ ಕೂಡ ಮೊದಲ ಎರಡು ಗೆಲುವುಗಳಿಗಿಂತ ಜಿಟಿ ವಿರುದ್ಧದ ಗೆಲುವು ತುಂಬಾನೇ ಸ್ಪೆಷಲ್ ಆಗಿರುತ್ತೆ.

ಇದನ್ನೂ ಓದಿ : ರಾಜಸ್ಥಾನಕ್ಕೆ ಮೊದಲ ಜಯ- ಸಿಎಸ್‌ಕೆಗೆ 2ನೇ ಸೋಲು

ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದು ಟೇಬಲ್ ಟಾಪರ್ ಆಗಿರುವ ಬೆಂಗಳೂರು ಟೀಂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ತಂಡವನ್ನು ಸೋಲಿಸಿರುವ ಆರ್​ಸಿಬಿ, ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಸಿಎಸ್​ಕೆ ತಂಡವನ್ನು ಬಗ್ಗು ಬಡಿದಿದೆ. ಇದೀಗ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿದೆ. ಹೋಂ ಗ್ರೌಂಡ್​ನಲ್ಲೂ ಗೆಲ್ಲುವ ಟಾರ್ಗೆಟ್​ನೊಂದಿಗೆ ಗುಜರಾತ್​ ಟೈಟಾನ್ಸ್​ ವಿರುದ್ಧ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಲಿದೆ. ಅಲ್ಲದೆ ಆರಂಭಿಕ ಎರಡೂ ಪಂದ್ಯಗಳಿಂದ ಹೊರಗುಳಿದಿದ್ದ ಸ್ಫೋಟಕ ಹಿಟ್ಟರ್​ ಜೇಕಬ್ ಬೆಥೆಲ್ ನಾಳಿನ ಪಂದ್ಯಕ್ಕೆ ಕಣಕ್ಕಿಳಿಯೋ ಸಾಧ್ಯತೆ ಇದೆ. ಮೊದಲ ಎರಡು ಪಂದ್ಯಗಳಲ್ಲಿ ಚಾನ್ಸ್  ಪಡೆದಿದ್ದ ಆಲ್​ರೌಂಡರ್​ ಲಿಯಾಮ್ ಲಿವಿಂಗ್​ಸ್ಟೋನ್ ಮುಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಒಂದು ವೇಳೆ ಲಿವಿಂಗ್​ಸ್ಟೋನ್​ ಹೊರಗುಳಿದರೆ ಇವರ ಸ್ಥಾನಕ್ಕೆ ಜೇಕಬ್​ ಬೆಥೆಲ್​ ಕಣಕ್ಕಿಳಿಯಲಿದ್ದಾರೆ. ಬೆಥೆಲ್ ಅವರಿಗೆ ಇದು ಚೊಚ್ಚಲ ಐಪಿಎಲ್​ ಆಗಿದೆ. ​

ಕೊಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದು ಬೆಂಗಳೂರಿಗೆ ಕಾಲಿಟ್ಟಿರೋ ರಜತ್ ಟೀಂ ಬಾಯ್ಸ್ ಭರ್ಜರಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಬಟ್ ಹೋಮ್​ಗ್ರೌಂಡ್​​ಗೆ ಬಂದ ಬೆಂಗಳೂರು ಬಾಯ್ಸ್​​ಗೆ ಇದೀಗ ಬಿಗ್ಗೆಸ್ಟ್​ ಚಾಲೆಂಜ್​ ಎದುರಾಗಿದೆ. ಹೋಮ್​ಗ್ರೌಂಡ್​ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಬಟ್ ಆರ್​ಸಿಬಿ ವಿಚಾರದಲ್ಲಿ ಮಾತ್ರ ಇದು ಉಲ್ಟಾ.. ಹೋಮ್​​ಗ್ರೌಂಡ್​ನಲ್ಲಿ ಆರ್​ಸಿಬಿ ಗೆದ್ದಿದ್ದಕ್ಕಿಂತ ಸೋತಿದ್ದೇ ಜಾಸ್ತಿ ಇದೆ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿ, ಇದುವರೆಗೆ 91 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್​ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಇದೇ ವೇಳೆ 43 ಮ್ಯಾಚ್ ಗಳಲ್ಲಿ ಸೋಲು ಕಂಡಿದೆ. 1 ಮ್ಯಾಚ್ ಟೈ ಆಗಿದ್ರೆ 3 ಪಂದ್ಯಗಳ ರಿಸಲ್ಟ್ ಬಂದಿಲ್ಲ. ಬ್ಯಾಟಿಂಗ್ ಸರಾಸರಿ 28.42 ಇದ್ರೆ ರನ್ ರೇಟ್ 8.94 ಇದೆ. ಇನ್ನು ಬೌಲಿಂಗ್ ಆವರೇಜ್ 27.92 ಇದ್ರೆ ಬೌಲಿಂಗ್ ಎಕಾನಮಿ 8.70 ಇದೆ. ಹೋಂ ಗ್ರೌಂಡ್ ನಲ್ಲಿ ಬೆಂಗಳೂರು ಟೀಂ ಒಟ್ಟಾರೆಯಾಗಿ 7 ಮ್ಯಾಚ್ ಗಳನ್ನ ಆಡಲಿದ್ದು, ಇಲ್ಲಿ ಕನಿಷ್ಠ 5 ಪಂದ್ಯಗಳನ್ನಾದ್ರೂ ಗೆದ್ರೆ ಪ್ಲೇಆಫ್ ಎಂಟ್ರಿ ಈಸಿಯಾಗಲಿದೆ.

ವಿರಾಟ್ ಕೊಹ್ಲಿಯೇ ಹೇಳಿಕೊಂಡಂತೆ ಬೆಂಗಳೂರು ಹಾಗೇ ಚಿನ್ನಸ್ವಾಮಿ ಸ್ಟೇಡಿಯಂ ಸೆಕೆಂಡ್ ಹೋಂ ಇದ್ದಂತೆ.  ಹೀಗಾಗಿ ಇಲ್ಲಿ ನಡೆಯೋ ಪಂದ್ಯಗಳಲ್ಲಿ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗುತ್ತೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಹೆಚ್ಚು ಸ್ಕೋರ್ ಗಳಿಸುವ ಮೈದಾನವಾಗಿದ್ದು, ಸಣ್ಣ ಬೌಂಡರಿಗಳು ನೆರವಾಗುತ್ತೆ. ಸಾಮಾನ್ಯವಾಗಿ 65 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಇರುತ್ತವೆ. ಹಿಂದಿನ ಪಂದ್ಯಗಳ ರಿಸಲ್ಟ್ ನೋಡ್ತಾ ಬಂದ್ರೆ ಎರಡನೇ ಇನ್ನಿಂಗ್ಸ್‌ನಲ್ಲಿ ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಸೋ ಇಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ 52.12% ರಷ್ಟು ಚೇಸಿಂಗ್ ತಂಡಗಳು ಗೆಲ್ಲುತ್ತವೆ. ಅಂದ್ರೆ ಇಲ್ಲಿ ಟಾಸ್ ಗೆದ್ದವ್ರು ಫಸ್ಟ್ ಬೌಲಿಂಗ್ ನ ಸೆಲೆಕ್ಟ್ ಮಾಡಿಕೊಳ್ತಾರೆ. ಚಿನ್ನಸ್ವಾಮಿಯಲ್ಲಿ ಒಟ್ಟಾರೆಯಾಗಿ 94 ಪಂದ್ಯಗಳು ನಡೆದಿದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ 41 ಬಾರಿ ಗೆದ್ದಿದ್ರೆ ಚೇಸಿಂಗ್ ಮಾಡಿದ ಟೀಂಗಳು 49 ಸಲ ವಿನ್ ಆಗಿವೆ. 1 ಮ್ಯಾಚ್ ಟೈಂ ಆಗಿದ್ರೆ 3 ಮ್ಯಾಚ್​ಗಳು ರಿಸಲ್ಟ್ ಕಂಡಿಲ್ಲ. ಇನ್ನು ಚಿನ್ನಸ್ವಾಮಿ ಅಂಗಳದ ಕೆಲ ಇಂಟ್ರೆಸ್ಟಿಂಗ್ ಅಂಕಿ ಅಂಶಗಳನ್ನ ಹೇಳ್ತೇನೆ ನೋಡಿ.

ಚಿನ್ನಸ್ವಾಮಿಯ ದಾಖಲೆಗಳು!

ತಂಡದ ಅತ್ಯಧಿಕ ಸ್ಕೋರ್ – ಸನ್‌ ರೈಸರ್ಸ್ ಹೈದರಾಬಾದ್ – ಆರ್‌ ಸಿಬಿ ವಿರುದ್ಧ  287/3 (2024)

ಕಡಿಮೆ ತಂಡದ ಸ್ಕೋರ್  – ಆರ್‌ಸಿಬಿ – ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 82 ಆಲ್-ಔಟ್ (2008)

ಅತ್ಯಧಿಕ ರನ್‌ ಗಳು – ವಿರಾಟ್ ಕೊಹ್ಲಿ – 86 ಇನ್ನಿಂಗ್ಸ್‌ ಗಳಲ್ಲಿ 3,040 ರನ್‌ಗಳು

ಅತ್ಯಧಿಕ ವಿಕೆಟ್‌ ಗಳು – ಯುಜ್ವೇಂದ್ರ ಚಾಹಲ್ – 41 ಇನ್ನಿಂಗ್ಸ್‌ಗಳಲ್ಲಿ 52 ವಿಕೆಟ್‌ಗಳು

ಅತ್ಯಧಿಕ ವೈಯಕ್ತಿಕ ಸ್ಕೋರ್ – ಕ್ರಿಸ್ ಗೇಲ್ (ಆರ್‌ಸಿಬಿ) – ಪುಣೆ ವಾರಿಯರ್ಸ್ ವಿರುದ್ಧ 175* (2013)

ಅತ್ಯುತ್ತಮ ಬೌಲಿಂಗ್ ಪ್ರದರ್ಶನ – ಸ್ಯಾಮ್ಯುಯೆಲ್ ಬದ್ರಿ (ಆರ್‌ಸಿಬಿ) – ಮುಂಬೈ ಇಂಡಿಯನ್ಸ್ ವಿರುದ್ಧ 4/9 (2017)

ಎರಡೂ ಪಂದ್ಯಗಳಲ್ಲೂ ಅನಾಯಾಸವಾಗಿ ಗೆದ್ದಿರೋ ಬೆಂಗಳೂರು ಟೀಂ ಒಳ್ಳೇ ಫಾರ್ಮ್​ನಲ್ಲಿದೆ. ಇದೀಗ ಮೂರನೇ ಪಂದ್ಯಕ್ಕೆ ರೆಡಿಯಾಗಿದ್ದು ಗುಜರಾತ್ ಪಡೆಯನ್ನ ಬಗ್ಗು ಬಡಿಯಬೇಕಿದೆ. ಐಪಿಎಲ್​ನಲ್ಲಿ ಬೆಂಗಳೂರು ಮತ್ತು ಗುಜರಾತ್​ ತಂಡಗಳು ಈ ವರೆಗೂ ಒಟ್ಟು 5 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್​ಸಿಬಿ ತಂಡ ಗುಜರಾತ್​ ವಿರುದ್ಧ 3 ಬಾರಿ ಗೆದ್ದರೆ ಗುಜರಾತ್​ ​ತಂಡ 2 ಬಾರಿ ಗೆಲುವು ಸಾಧಿಸಿದೆ. 206 ಗುಜರಾತ್​ ವಿರುದ್ಧ ಆರ್​ಸಿಬಿ ಗಳಿಸಿರುವ ಹೈಸ್ಕೋರ್​ ಆಗಿದೆ. 170 ಕಡಿಮೆ ಸ್ಕೋರ್​ ಆಗಿದೆ. ಆರ್​ಸಿಬಿ ವಿರುದ್ಧ ಗುಜರಾತ್​ ಕಲೆಹಾಕಿರುವ 200 ಹೈಸ್ಕೋರ್​ ಆಗಿದ್ದು 147 ಕನಿಷ್ಠ ಸ್ಕೋರ್​ ಆಗಿದೆ. ಬೊಂಬಾಟ್​ ಓಪನಿಂಗ್ ಪಡೆದಿರೋ ಬೆಂಗಳೂರು ಬಾಯ್ಸ್​ಗೆ ಇದೀಗ ಚಿನ್ನಸ್ವಾಮಿಯ ಚಾಲೆಂಜ್​ ಎದುರಾಗಿದೆ. ಈ ಚಾಲೆಂಜ್​​ನ ಚಾಲೆಂಜರ್ಸ್​ ಹೇಗೆ ಡೀಲ್​ ಮಾಡ್ತಾರೆ ಅನ್ನೋ ಕುತೂಹಲವೂ ಇದೆ.

Shantha Kumari

Leave a Reply

Your email address will not be published. Required fields are marked *