ಎಲ್ಲೆಂದರಲ್ಲಿ ಜಂಪ್ ಮಾಡಿದ ನಮ್ಮ ಮೆಟ್ರೋ ಪ್ರಯಾಣಿಕರು – ಕೊಂಚ ಯಾಮಾರಿದ್ರೂ ಮೆಟ್ರೋದಲ್ಲೂ ನಡೀತಿತ್ತು ಘೋರ ದುರಂತ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಐಪಿಎಲ್ ಟ್ರೋಫಿ ಗೆದ್ದಿದ್ದೇ ಗೆದ್ದಿದ್ದು ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆದ್ರೆ ಈ ಸಂಭ್ರಮ ಕೆಲವೇ ಗಂಟೆಗಳಿಗಷ್ಟೇ ಬಾಕಿ ಉಳಿದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಕ್ಟರಿ ಸೆಲೆಬ್ರೇಷನ್ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟಿದ್ದಾರೆ. ಆದ್ರೀಗ ಮೆಟ್ರೋದ ಭಯಾನಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸ್ಪಲ್ಪ ಮಿಸ್ ಆಗಿದ್ರೂ ಹಲವಾರು ಜನರ ಪ್ರಾಣಕ್ಕೆ ಕಂಟಕ ಆಗ್ತಿತ್ತು.
ಇದನ್ನೂ ಓದಿ: ದಾಖಲೆ ಬರೆದ ನಮ್ಮ ಮೆಟ್ರೋ – ನಿನ್ನೆ ಒಂದೇ ದಿನ 9,66,732 ಜನರ ಪ್ರಯಾಣ
ಹೌದು, ಯಾವಾಗ ಈ ವಿಚಾರ ಅಭಿಮಾನಿಗಳಿಗೆ ಗೊತ್ತಾಯ್ತೋ ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ನಿನ್ನೆ ಒಂದೇ ದಿನ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ. ಬರೋಬ್ಬರಿ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಅಲ್ಲದೇ ನಮ್ಮ ಮಟ್ರೋದಲ್ಲಿ ಪ್ರಯಾಣಿಕರು ಹೆಚ್ಚಾಗುತ್ತಿದ್ದಂತೆ. ಟಿಕೆಟ್ ಇಲ್ಲ, NCMC ಕಾರ್ಡ್ ಇಲ್ಲ, ಟೋಕನ್ ಇಲ್ಲ ಹೀಗೆ ಸಿಕ್ಕ ಸಿಕ್ಕಂತೆ ಜಂಪ್ ಮಾಡಿ ಹೋಗಿದ್ದಾರೆ. ಮೆಟ್ರೋ ಪ್ರಯಾಣಿಕರು ಓಡಿ ಹೋಗುತ್ತಿರೋ ವಿಡಿಯೋಗಳನ್ನು ನೋಡಿದ್ರೆ ನಿಜಕ್ಕೂ ಮೈ ಜುಮ್ ಎನ್ನುವಂತಿದೆ.
ಆದ್ರೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದ್ದರು ದುರಂತ ನಡೆದೆ ಹೋಗುತ್ತಿತ್ತು. ಪ್ರಯಾಣಿಕರ ಹುಚ್ಚಾಟ, ಅತಿರೇಕಕ್ಕೆ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ. ಮೆಟ್ರೋ ನಿಲ್ದಾಣದ ಒಳಗೆ ಹೋಗಲು ಜನ ನಾ ಮುಂದು ತಾ ಮುಂದು ಅಂತ ಸಿಕ್ಕ ಸಿಕ್ಕಂತೆ ಹಾರಿ ಹೋಗಿದ್ದಾರೆ. ಏಕಾಏಕಿ ಲಕ್ಷಾಂತರ ಪ್ರಯಾಣಿಕರನ್ನು ನಮ್ಮ ಮೆಟ್ರೋ ಸಿಬ್ಬಂದಿಯ ನಿಯಂತ್ರಣಕ್ಕೂ ಸಿಗಲಿಲ್ಲ. ಹೀಗಾಗಿ ನಿನ್ನೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಸಂಪೂರ್ಣ ಅದ್ವಾನವಾಗಿದೆ.