ಮೂರನೇ ಗೆಲುವಿನ ಸಂಭ್ರಮದಲ್ಲಿ ಆರ್‌ಸಿಬಿ – ಬಲಿಷ್ಠ ಮುಂಬೈಗೆ ಹ್ಯಾಟ್ರಿಕ್ ಸೋಲು

ಮೂರನೇ ಗೆಲುವಿನ ಸಂಭ್ರಮದಲ್ಲಿ ಆರ್‌ಸಿಬಿ – ಬಲಿಷ್ಠ ಮುಂಬೈಗೆ ಹ್ಯಾಟ್ರಿಕ್ ಸೋಲು

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿದೆ. ತವರಿನಲ್ಲಿ ಬಲಿಷ್ಠ ಮುಂಬೈ ಸೋತು ಸುಣ್ಣವಾಗಿದೆ. ಜೊತೆಗೆ ಮುಂಬೈಗೆ ಇದು ಹ್ಯಾಟ್ರಿಕ್ ಸೋಲು.

ಇದನ್ನೂ ಓದಿ:ಪಡಿಕ್ಕಲ್ ಫೈಯರ್.. ಡೇವಿಡ್ ಡೇಂಜರ್ – ₹11 ಕೋಟಿ ವೀರರೇ ಮ್ಯಾಚ್ ವಿನ್ನರ್ಸ್

ವಾಂಖೆಡೆ ಮೈದಾನದಲ್ಲಿ, ತನ್ನ ತವರು ನೆಲದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌  ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಸೋತು ಮಂಡಿಯೂರಿತು. ಮುಂಬೈ ವಿರುದ್ಧ ಮೊದಲ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದಾಂಡಿಗರು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ ಸೇರಿ 78 ರನ್ ಗಳಿಸಿದರು. ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿದರು. ನಾಯಕ ರಜತ್ ಪಾಟಿದಾರ್ ಕೇವಲ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ ಸಿಡಿಸಿ 53 ರನ್ ಬಾರಿಸಿದರು. ನಂತರ ಟಿಮ್ ಡೇವಿಡ್ ಕೂಡ ಅಜೇಯ 34 ರನ್ ಗಳಿಸಿ ತಂಡ ಗಳಿಸಿದರು. ಆರ್​ಸಿಬಿ ಮೂವರ ಅರ್ಧಶತಕದ ನೆರವಿನಿಂದ 241 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 222 ರನ್ ಕಲೆಹಾಕಲಷ್ಟೇ ಶಕ್ತವಾಗಿ 18 ರನ್​ಗಳಿಂದ ಸೋಲೊಪ್ಪಿಕೊಂಡಿತು.

242 ರನ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಉತ್ತಮವಾಗಿ ಆರಂಭವಾಯಿತು, ಆದರೆ ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ ಗಾಯಗೊಂಡು ನಿವೃತ್ತರಾದರು. ಇತ್ತ ರಯಾನ್ ರಿಕಲ್ಟನ್ 22 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ಔಟಾದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡಲು ತುಂಬಾ ಕಷ್ಟಪಡುತ್ತಿರುವುದು ಕಂಡು ಬಂದಿತ್ತು. ಅಂತೂ ಇಂತೂ 22 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರೆ ಸಾಕಪ್ಪ ಅನ್ನೋ ರೀತಿ ಪೆವಿಲಿಯನ್‌ಗೆ ತೆರಳಿದರು.  ಬ್ಯಾಟ್ ಬೀಸಲು ಮರೆತುಹೋಗಿರುವ ತಿಲಕ್ ವರ್ಮಾ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಆದರೆ ಶೆರ್ಫೇನ್ ರುದರ್ಫೋರ್ಡ್ ಕೊನೆಯವರೆಗೂ ಹೋರಾಡಿ 31 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

Sulekha