ರಜತ್ ಪಾಟೀದಾರ್ ಗೆ RCB ಪಟ್ಟಾಭಿಷೇಕ – ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಕಟ್ಟಿದ್ದೇಕೆ?  

 ರಜತ್ ಪಾಟೀದಾರ್ ಗೆ RCB ಪಟ್ಟಾಭಿಷೇಕ – ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಕಟ್ಟಿದ್ದೇಕೆ?  

18ನೇ ಸೀಸನ್ ಐಪಿಎಲ್ ಹಬ್ಬಕ್ಕೆ ಇನ್ನೊಂದೇ ತಿಂಗಳು ಬಾಕಿ. ನಾಳೆಯಿಂದ ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಅದ್ಧೂರಿ ಚಾಲನೆ ಸಿಗಲಿದ್ದು ಮಹಿಳಾ ಟೂರ್ನಿ ಮುಗಿದ ಬೆನ್ನಲ್ಲೇ ಹುಡುಗರ ಟೀಂ ನಡುವೆ ಮಹಾಕದನ ನಡೆಯಲಿದೆ. ಅಲ್ದೇ ಈ ಸೀಸನ್​ಗೂ ಮುನ್ನ ಮೆಗಾ ಹರಾಜು ನಡೆದಿದ್ದರಿಂದ ಸ್ಟಾರ್ ಪ್ಲೇಯರ್​ಗಳೆಲ್ಲಾ ಅದಲು ಬದಲಾಗಿದ್ದಾರೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹೊರತಾಗಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಸೀಸನ್​ನಲ್ಲಿ ಬೆಂಗಳೂರು ತಂಡ ಹೊಸ ನಾಯಕನ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಆತ ಮತ್ತಿನ್ಯಾರು ಅಲ್ಲ. ಬೆಂಗಳೂರು ತಂಡದ ಮಿಡಲ್ ಆರ್ಡರ್ ಬ್ಯಾಟರ್, ಆಪತ್ಬಾಂಧವ ರಜತ್ ಪಾಟಿದಾರ್.

ಇದನ್ನೂ ಓದಿ : ರೋಹಿತ್ ಠುಸ್.. ಗಿಲ್ ಕಮಾಲ್ – 451 ದಿನಗಳ ನಂತ್ರ ಕೊಹ್ಲಿ ಫಿಫ್ಟಿ

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಕ್ರಿಕೆಟ್ ಫ್ಯಾನ್ಸ್ ಅಂತೂ ಕಾಯ್ತಿದ್ದಾರೆ. ಅದ್ರಲ್ಲೂ ಆರ್​ಸಿಬಿ ಅಭಿಮಾನಿಗಳಂತೂ ಫುಲ್ ಜೋಶ್​ನಲ್ಲಿದ್ದಾರೆ. ಈ ಜೋಶ್ ಮತ್ತಷ್ಟು ಹೆಚ್ಚಿಸುವಂತೆ ಈಗ ಫ್ರಾಂಚೈಸಿಯು ರಜತ್ ಪಾಟಿದಾರ್ ಅವ್ರನ್ನ ಕ್ಯಾಪ್ಟನ್ ಎಂದು ಘೋಷಣೆ ಮಾಡಿದೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 8ನೇ ಹೊಸ ನಾಯಕನ ಅಧಿಕೃತ ಘೋಷಣೆ ಆಗಿದೆ. ಫಾಫ್ ಡು ಪ್ಲೆಸಿಸ್ ಬಿಡುಗಡೆಯಾದ ನಂತರ ಆರ್‌ಸಿಬಿಗೆ ಯಾರು ಕ್ಯಾಪ್ಟನ್ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿತ್ತು. ಇದೀಗ ಆರ್‌ಸಿಬಿ ತಂಡಕ್ಕೆ ರಜತ್ ಪಾಟಿದಾರ್ ಹೊಸ ನಾಯಕನ್ನಾಗಿ ನೇಮಕಗೊಂಡಿದ್ದಾರೆ.

31 ವರ್ಷದ ರಜತ್ ಪಾಟಿದಾರ್​ಗೆ ಕ್ಯಾಪ್ಟನ್ ಪಟ್ಟ ಕಟ್ಟಿರುವ ಹಿಂದೆ ಹಲವು ಕಾರಣಗಳಿವೆ. ಪಾಟಿದಾರ್ ದೇಶೀಯ ಅಂಗಳದಲ್ಲಿ ಮಧ್ಯ ಪ್ರದೇಶ್ ತಂಡವನ್ನು ಮುನ್ನಡೆಸಿ ಅನುಭವ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕನಾಗಿ ಸಕ್ಸಸ್ ಕಂಡಿದ್ದಾರೆ. ಹಾಗೇ  ರಜತ್​ ನಾಯಕತ್ವದಲ್ಲಿ 10 ಪಂದ್ಯಗಳಲ್ಲಿ ಮಧ್ಯ ಪ್ರದೇಶ 8 ಪಂದ್ಯ ಗೆಲುವು ಕಂಡಿತ್ತು. ಅಲ್ದೇ ಹೈ-ಫ್ರೆಷರ್ ಗೇಮ್​ಗಳಲ್ಲಿ ರಜತ್​ಗಿದೆ ಬಿಗ್ ಇನ್ನಿಂಗ್ಸ್​ ಕಟ್ಟಬಲ್ಲ ಸಾಮರ್ಥ್ಯವೂ ಇದೆ.  ಬೌಲಿಂಗ್ ಚೇಂಜ್‌, ಫೀಲ್ಡಿಂಗ್‌ ಅಡ್ಜಸ್ಟ್​ಮೆಂಟ್​ನಲ್ಲಿ ನಾಯಕತ್ವದ ಗುಣ ಇದೆ.  ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಪಾಟಿದಾರ್​ ಮ್ಯಾಚ್ ವಿನ್ನಿಂಗ್ ಆಟವನ್ನೂ ಆಡಿದ್ರು. ಇದೆಲ್ಲಕ್ಕಿಂತ ಮಿಗಿಲಾಗಿ  ಕೂಲ್ ಅಂಡ್ ಕಾಮ್, ಎಲ್ಲರೊಂದಿಗೆ ಬೆರೆಯುವ ಗುಣ ರಜತ್​ಗೆ ಇದೆ. ಹಾಗೂ 2021 ರಿಂದ ಆರ್​ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 24 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಆದರೆ ಈ ಬಾರಿ ನಾಯಕತ್ವದೊಂದಿಗೆ ರಜತ್ ಪಾಟಿದಾರ್ ಆರ್​ಸಿಬಿ ಪರ ಕಣಕ್ಕಿಳಿಯಲಿರುವುದು ವಿಶೇಷ. 31 ವರ್ಷದ ರಜತ್ ಪಾಟಿದಾರ್​, ದೇಶಿ ಕ್ರಿಕೆಟ್ ಹಾಗೂ ಆರ್​ಸಿಬಿ ಪರವೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಿದ್ದಾರೆ. ಇದಲ್ಲಕ್ಕಿಂತ ಮಿಗಿಲಾಗಿ ಆರ್​ಸಿಬಿ ಪರ ಮಿಡಲ್ ಆರ್ಡರ್​ನ ಸ್ಟ್ರೆಂಥ್ ಆಗಿದ್ದಾರೆ. ರಜತ್​ ಪಾಟಿದಾರ್​ ಮೇಲೆ ಭರವಸೆ ಹೊಂದಿರುವ ಮ್ಯಾನೇಜ್​ಮೆಂಟ್, ಎರಡ್ಮೂರು ವರ್ಷಗಳ ಕಾಲ ನಾಯಕತ್ವದ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ. ಈ ಅನುಭವವನ್ನು ಪರಿಗಣಿಸಿ ರಜತ್​ಗೆ ನಾಯಕತ್ವ ನೀಡಲು ಆರ್​ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.

Shantha Kumari

Leave a Reply

Your email address will not be published. Required fields are marked *