ಆರ್‌ಸಿಬಿ ತಂಡದ ಪಾಲಾದ ಸ್ಫೋಟಕ ಓಪನರ್ – 3.40 ಕೋಟಿ ರೂಪಾಯಿಗೆ ತಂಡ ಸೇರಿದ ಸ್ಮೃತಿ ಮಂಧಾನ
ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ಇಂದು ನಡೆಯಿತು. ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮೇಲೆ ಕೋಟಿ ಕೋಟಿ ರೂಪಾಯಿಗಳ ಸುರಿ ಮಳೆಯಾಗಿದೆ. ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಮತ್ತು ಆರ್‌ಸಿಬಿ ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು. ಅತ್ಯಂತ ದುಬಾರಿ ಆಟಗಾರ್ತಿಯಾಗಿ ಆರ್ಸಿಬಿ ತಂಡಕ್ಕೆ ಸೇರಿಕೊಂಡಿರುವ ಸ್ಮೃತಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ – ಧರ್ಮಶಾಲಾದಿಂದ ಇಂದೋರ್‌ಗೆ ಮ್ಯಾಚ್ ಶಿಫ್ಟ್..!
ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ದಾಖಲೆ ಅತ್ಯುತ್ತಮವಾಗಿದೆ. ಇದುವರೆಗು ಆಡಿರುವ 112 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಸೇರಿದ್ದು, ಅಂತಾರಾಷ್ಟ್ರೀಯ ಟಿ20ಯಲ್ಲಿ ಮಂಧಾನ ಸ್ಟ್ರೈಕ್ ರೇಟ್ 123ಕ್ಕಿಂತ ಹೆಚ್ಚಿದೆ.
ಸದ್ಯ ಆರ್‌ಸಿಬಿ ತಂಡ, ಸ್ಮೃತಿ ಮಂಧಾನ , ರೇಣುಕಾ ಸಿಂಗ್, ಆಸ್ಟ್ರೇಲಿಯಾ ಆಟಗಾರ್ತಿ–ಎಲ್ಲಿಸ್ ಪೆರ್ರಿ ಹಾಗೂ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಖರೀದಿಸಿದೆ.