ಐಪಿಎಲ್ ಗಾಗಿ ಪ್ರಾಕ್ಟೀಸ್ ಶುರು ಮಾಡಿದ ಆರ್ ಸಿಬಿ ಬಾಯ್ಸ್ – ಈ ಸಲ ಕಪ್ ನಮ್ದೇ

ಐಪಿಎಲ್ ಅಂದ್ರೆ ಫಸ್ಟ್ ಟ್ರೆಂಡಿಂಗ್ಗೆ ಬರೋದೇ ಈ ಸಲ ಕಪ್ ನಮ್ದೇ ಅನ್ನೋ ಘೋಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚ್ ಇದೆ ಅಂದ್ರಂತೂ ಮುಗ್ದೇ ಹೋಯ್ತು. ಸ್ಟೇಡಿಯಮ್ ಯಾವ್ದೇ ಆದ್ರೂ ಅಲ್ಲಿ ಆರ್‌ಸಿಬಿ ಅಭಿಮಾನಿಗದ್ದೇ ಅಬ್ಬರ. ಟ್ರೋಫಿ ಗೀಫಿ ಎಲ್ಲಾ ಸೆಕೆಂಡ್ರಿ, ಸಾಯೋತನಕ ಜೈ ಆರ್‌ಸಿಬಿ ಅಂತಾ ಸಪೋರ್ಟ್ ಮಾಡ್ತಾರೆ. ಬಟ್ ಈ ಸೀಸನ್ ಫ್ಯಾನ್ಸ್ ಹಾಗೇ ಫ್ರಾಂಚೈಸಿಗೂ ಕೂಡ ತುಂಬಾನೇ ಸ್ಪೆಷಲ್. 18ನೇ ಆವೃತ್ತಿ.. 18ನೇ ನಂಬರ್ ಜೆರ್ಸಿ. ಯೆಸ್.. ನಂಬರ್ 18 ಜೆರ್ಸಿ ಅಂದ್ರೆ ಕಿಂಗ್ ವಿರಾಟ್ ಕೊಹ್ಲಿ ಅಂತಾ ಇಡೀ ಜಗತ್ತೇ ಹೇಳುತ್ತೆ. ಸೋ ಈ ಸಲ ಕಿಂಗ್ ಕೊಹ್ಲಿಗೋಸ್ಕರನಾದ್ರೂ ಕಪ್ ಗೆಲ್ಲಲೇಬೇಕು ಅನ್ನೋದು ಎಲ್ಲರ ಆಶಯವಾಗಿದೆ. ಹೊಸಬರೇ ತುಂಬಿರೋ ಆರ್‌ಸಿಬಿ ತಂಡ ಈಗಾಗ್ಲೇ ಮೈದಾನಕ್ಕಿಳಿದು ಪ್ರಾಕ್ಟೀಸ್ ಕೂಡ ಶುರು ಮಾಡಿದ್ದಾರೆ.
ಇದನ್ನೂ ಓದಿ : ಬ್ಯಾಟಿಂಗ್, ಬೌಲಿಂಗ್ನಲ್ಲೂ ಬಾಸ್ ಕ್ರಿಕೆಟ್‌ನಲ್ಲಿ ಶೈನ್ ಆಗಿದ್ದೇಗೆ ಶೇನ್?
2025 ರ ಐಪಿಎಲ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಮಾರ್ಚ್ 22 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಈಗಾಗಲೇ ತಯಾರಿ ಆರಂಭಿಸಿವೆ. ಇದೀಗ ಆರ್‌ಸಿಬಿ ತನ್ನ ಮೊದಲ ಅಭ್ಯಾಸದ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ಜೊತೆಗೆ, ತಂಡದ ಬಹುತೇಕ ಆಟಗಾರರು ಮೈದಾನದಲ್ಲಿ ಬೆವರಿಳಿಸಿದ್ದಾರೆ. ಹಾಗೇ ಒಂದಷ್ಟು ಫನ್ನಿ ಮೂಮೆಂಟ್ಸ್ನ ಎಂಜಾಯ್ ಮಾಡಿದ್ದಾರೆ. ಬಟ್ ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿ ಮುಗಿಸಿಕೊಂಡು ಬಂದಿರುವ ವಿರಾಟ್ ಕೊಹ್ಲಿ ಮಾತ್ರ ಇನ್ನೂ ಜಾಯ್ನ್ ಆಗಿಲ್ಲ.
ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಅನ್ಬಾಕ್ಸ್ ಈವೆಂಟ್ ನಡೆಸಲಾಗುತ್ತೆ. ಆರ್ಸಿಬಿಯ ಹೋಂ ಗ್ರೌಂಡ್ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 17 ರಂದು ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಮಾರ್ಚ್ 6ರಂದು ಟಿಕೆಟ್ಗಳನ್ನೂ ಮಾರಾಟ ಮಾಡಲಾಯ್ತು. ಟಿಕೆಟ್ ಮಾರಾಟ ಆರಂಭವಾದ ಒಂದು ಗಂಟೆಯೊಳಗೆ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಕಳೆದ ಬಾರಿ ನಡೆದಿದ್ದ ಅನ್ಬಾಕ್ಸ್ ಈವೆಂಟ್ಗೆ ಇಡೀ ಕ್ರೀಡಾಂಗಣವೇ ತುಂಬಿತ್ತು. ಈ ಬಾರಿಯೂ ಅದೇ ನಿರೀಕ್ಷೆ ಇದೆ.
ಕಳೆದ ನವೆಂಬರ್ ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಚ್ಚರಿಯ ಆಟಗಾರರನ್ನ ಖರೀದಿ ಮಾಡಿತ್ತು. ಈ ವೇಳೆ ಟೀಂ ಬಗ್ಗೆ ಟೀಕೆಗಳು ವ್ಯಕ್ತವಾದ್ರೂ ಕೂಡ ಆನಂತ್ರದಲ್ಲಿ ಬಲಿಷ್ಠ ತಂಡದಂತೆ ಕಂಡಿತ್ತು. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸಿದ್ದ ಇಂಗ್ಲೆಂಡ್ನ ಸ್ಟಾರ್ ವಿಕೆಟ್ಕೀಪರ್ ಪಿಲ್ ಸಾಲ್ಟ್, ಆರ್‌ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದು ಗ್ಯಾರಂಟಿ. ಇದರ ಜೊತೆಗೆ ಸಾಲ್ಟ್ ವಿಕೆಟ್ ಕೀಪರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ಕೂಡ ಈ ಬಾರಿಯ ಮತ್ತೊಬ್ಬ ಓಪನರ್ ಆಗಿರ್ತಾರೆ. ಕ್ಯಾಪ್ಟನ್ ರಜತ್ ಪಾಟೀದಾರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಇಂಗ್ಲೆಂಡ್ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಬೌಲಿಂಗ್ನಲ್ಲೂ ನೆರವಾಗ್ತಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಜಿತೇಶ್ ಶರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮತ್ತೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು, ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಆರನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಆಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅವರು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ 14 ವರ್ಷಗಳ ನಂತರ ಮತ್ತೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸುವುದರ ಜೊತೆಗೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಅವರು 9ನೇ ಕ್ರಮಾಂಕದಲ್ಲಿ ಆಡಬಹುದು. ಹಾಗೇ ಯಶ್ ದಯಾಳ್ ತಂಡದಲ್ಲಿ ಆಡುವುದು ಖಚಿತವಾಗಿದ್ದು, ಅವರು 10ನೇ ಕ್ರಮಾಂಕದಲ್ಲಿ ಆಡಬಹುದು. 11ನೇ ಆಟಗಾರನಾಗಿ ಸುಯೇಶ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಸುಯೇಶ್ ತಮ್ಮ ಗೂಗ್ಲಿ ಸ್ಪಿನ್ ದಾಳಿಯ ಮೂಲಕವೇ ಸದ್ದು ಮಾಡಿದ್ರು.