RCBಯಲ್ಲಿ ಯಾರಿಗೆಲ್ಲಾ ಗೇಟ್ ಪಾಸ್? – ನಾಲ್ವರ ಮೇಲಷ್ಟೇ ಫ್ರಾಂಚೈಸಿಗೆ ಒಲವು?
2025ಕ್ಕೆ ಕಪ್ ನಮ್ದೇ.. ಸ್ಟ್ರಾಟಜಿ ಏನು? 

RCBಯಲ್ಲಿ ಯಾರಿಗೆಲ್ಲಾ ಗೇಟ್ ಪಾಸ್? – ನಾಲ್ವರ ಮೇಲಷ್ಟೇ ಫ್ರಾಂಚೈಸಿಗೆ ಒಲವು?2025ಕ್ಕೆ ಕಪ್ ನಮ್ದೇ.. ಸ್ಟ್ರಾಟಜಿ ಏನು? 

ಲೈಫಲ್ಲಿ 1 ಪರ್ಸೆಂಟ್ ಚಾನ್ಸ್ ಇದ್ರೂ ಮಿಸ್ ಮಾಡಿಕೊಳ್ಳಬಾರ್ದು ಅನ್ನೋದನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರೂವ್ ಮಾಡಿದೆ. ಟಾಪ್ 10 ಪ್ಲೇಸ್​ನಿಂದ ಟಾಪ್ 4ಗೆ ಬಂದ ಆಟಗಾರರ ಅದ್ಬುತ ಪ್ರದರ್ಶನ ಎಷ್ಟೋ ಜನ್ರಿಗೆ ಸ್ಪೂರ್ತಿಯಾಗಿದೆ. ಈ ಸಲ ಅಂತೂ ಕಪ್ ಗೆಲ್ಲೋಕೆ ಆಗ್ಲಿಲ್ಲ. ಸೋ ಮುಂದಿನ ವರ್ಷನಾದ್ರೂ ಟ್ರೋಫಿ ಎತ್ತಿ ಹಿಡಿಯಬೇಕು ಅನ್ನೋ ಗುರಿಯೊಂದಿಗೆ ಬೆಂಗಳೂರು ಫ್ರಾಂಚೈಸಿ ಹೊಸ ಹೆಜ್ಜೆ ಇಟ್ಟಿದೆ. ತಂಡವನ್ನ ಮತ್ತಷ್ಟು ಬಲಿಷ್ಠಗೊಳಿಸೋ ಯೋಜನೆ ರೂಪಿಸಿದೆ. ಹೀಗಾಗಿ ನಾಲ್ಕು ಜನರನ್ನಷ್ಟೇ ತಂಡದಲ್ಲಿ ಉಳಿಸಿಕೊಂಡು ಉಳಿದ ಆಟಗಾರರನ್ನು ಕೈ ಬಿಡಲು ಪ್ಲ್ಯಾನ್ ಮಾಡಿದೆ. ಹಾಗಾದ್ರೆ ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಳ್ಳೋ ಆ ನಾಲ್ವರು ಆಟಗಾರರು ಯಾರು? ಈ ಸಲ ಬೆಂಗಳೂರು ಆಟಗಾರರ ಪ್ರದರ್ಶನ ಹೇಗಿತ್ತು? ಬರೀ ಬೆಂಚ್​ಗೆ ಸೀಮಿತವಾಗಿದ್ದ ಪ್ಲೇಯರ್ಡ್ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPL 2025ಕ್ಕೆ 10 ಜನ ನಿವೃತ್ತಿ? – ಧೋನಿ, ಡಿಕೆ, ಧವನ್.. ಮತ್ಯಾರು?

ಪಾಯಿಂಟ್ಸ್​ ಟೇಬಲ್​​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಆರ್​ಸಿಬಿ, ಎರಡನೇ ಹಂತದಲ್ಲಿ ರೋಚಕವಾಗಿ ಗೆದ್ದು ಪ್ಲೇ-ಆಫ್​​ಗೆ ರಾಯಲ್ ಎಂಟ್ರಿ ಕೊಟ್ಟಿತ್ತು. ಆದರೆ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಸೋಲುವ ಮೂಲಕ ಕಪ್ ಗೆಲ್ಲುವ ಕನಸನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಸೀಸನ್ 17ನಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿರುವ ಆರ್​ಸಿಬಿ 7 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಪ್ಲೇ-ಆಫ್ ಪ್ರವೇಶಿಸಿದ ತಂಡವಾಗಿ ಹೊರ ಹೊಮ್ಮಿದ ಆರ್​ಸಿಬಿಗೆ 6.5 ಕೋಟಿ ಬಹುಮಾನ ಕೂಡ ಸಿಕ್ಕಿದೆ. ಐಪಿಎಲ್ ಫೈನಲ್ ಮುಗಿತಾ ಇದ್ದಂತೆ ಸೋತಿರುವ ಫ್ರಾಂಚೈಸಿಗಳ ಚಿತ್ತ ಮೆಗಾ ಹರಾಜಿನತ್ತ ನೆಟ್ಟಿದೆ. ಐಪಿಎಲ್ 2025 ಸೀಸನ್​ಗೂ ಮೊದಲು ಫ್ರಾಂಚೈಸಿಗಳು ತಮ್ಮ ತಂಡವನ್ನು ಪುನರ್​​​ ರಚನೆ ಮಾಡಲಿವೆ. ಐಪಿಎಲ್ ನಿಯಮದ ಪ್ರಕಾರ ಒಂದು ಫ್ರಾಂಚೈಸಿ ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನು ಕೈಬಿಡಬೇಕು. ಮತ್ತೊಂದು ಕಡೆ ಗರಿಷ್ಠ 8 ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಫ್ರಾಂಚೈಸಿಗಳು ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿರುವುದರಿಂದ ಅದು ಇನ್ನೂ ದೃಢಪಟ್ಟಿಲ್ಲ. ಇದೀಗ ಆರ್​ಸಿಬಿ 2025ರ ಮೆಗಾ ಟೂರ್ನಿಗೆ ಈಗ್ಲಿಂದಲೇ ಸಿದ್ಧತೆ ಶುರು ಮಾಡಿದೆ. ಈ ವರ್ಷ ಪ್ಲೇ-ಆಫ್​​ಗೆ ಪ್ರವೇಶ ಮಾಡಿದ್ದರೂ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಹೀಗಾಗಿ ಮುಂದಿನ ವರ್ಷವಾದ್ರೂ ಟ್ರೋಫಿ ನಮ್ಮದಾಗ್ಬೇಕು ಅನ್ನೋ ಲೆಕ್ಕಾಚಾರದೊಂದಿಗೆ ಯೋಜನೆ ರೂಪಿಸುತ್ತಿದೆ. ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಳ್ಳುವ ಮೊದಲ ಪ್ಲೇಯರ್ ಅಂದ್ರೆ ಅದು ಕಿಂಗ್ ವಿರಾಟ್ ಕೊಹ್ಲಿ.

  • ರನ್ ಮಷಿನ್ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಕ್ ಬೋನೇ ಕಿಂಗ್ ವಿರಾಟ್ ಕೊಹ್ಲಿ. ಅವ್ರನ್ನಂತೂ ಯಾವ್ದೇ ಕಾರಣಕ್ಕೂ ಬೆಂಗಳೂರು ತಂಡದಿಂದ ಬಿಟ್ಟು ಕೊಡೋ ಮಾತೇ ಇಲ್ಲ. ಆಟ, ಗೇಮ್ ಪ್ಲ್ಯಾನ್, ವರ್ಚಸ್ಸು ಹೀಗೆ ಕೊಹ್ಲಿಯನ್ನ ಮೀರಿಸೋಕೆ ಯಾರಿಂದಲೂ ಸಾಧ್ಯನೇ ಇಲ್ಲ. ಅಲ್ದೇ ಈ ವರ್ಷ ಕೂಡ ಕಿಂಗ್ ಪ್ರದರ್ಶನ ಸೂಪರ್ ಡೂಪರ್ ಆಗಿದೆ.

  • ಸೆಂಚುರಿ ಸ್ಟಾರ್ ವಿಲ್ ಜಾಕ್ಸ್

ಆರ್​ಸಿಬಿ ಅಭಿಮಾನಿಗಳಿಗೆ ವಿಲ್ ಜಾಕ್ಸ್ ಹೆಸ್ರು ಕೇಳಿದ್ರೆ ಥಟ್ ಅಂತಾ ನೆನಪಾಗೋದೇ ಅವ್ರ ಪವರ್​ಫುಲ್ ಸೆಂಚುರಿ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇಂಗ್ಲೆಂಡ್ ನ ಈ ಸ್ಟಾರ್ ಬ್ಯಾಟರ್ ಆರ್​ಸಿಬಿಯ ಉದಯೋನ್ಮುಕ ತಾರೆ. ಹೀಗಾಗಿ ಇವ್ರನ್ನ ಮುಂದಿನ ಸೀಸನ್​ಗೆ ಮತ್ತೆ ರಿಟೈನ್ ಮಾಡಿಕೊಳ್ಳುವ ಪ್ಲಾನ್​ನಲ್ಲಿ ಆರ್​ಸಿಬಿ ಇದೆ.

  • ವೇಗದ ಬೌಲರ್ ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್ RCBಯ ಅನುಭವಿ ಆಟಗಾರ. ಭಾರತ ತಂಡದ ವೇಗಿಯೂ ಆಗಿರುವ ಸಿರಾಜ್​​, ಈ ಸೀಸನ್​ನಲ್ಲಿ ಅವ್ರ ಪ್ರದರ್ಶನ ಅಷ್ಟಕಷ್ಟೇ. ಆದರೆ ಸಿರಾಜ್ ಉತ್ತಮ ಬೌಲರ್ ಅನ್ನೋದ್ರಲ್ಲಿ ಯಾವ್ದೇ ಡೌಟ್ ಇಲ್ಲ. ಅಲ್ದೇ ಈ ಹಿಂದೆ ಚಹಾಲ್ ಮತ್ತು ಹರ್ಷಲ್ ಪಟೇಲ್​ ವಿಚಾರದಲ್ಲಿ ಅವ್ರನ್ನ ಬಿಟ್ಟು ಆರ್​ಸಿಬಿ ತಪ್ಪು ಮಾಡಿದೆ. ಬಟ್ ಈ ಸಲ ಮತ್ತೆ ಸಿರಾಜ್ ವಿಚಾರದಲ್ಲಿ ಆ ಥರ ಆಗದಂತೆ ನೋಡಿಕೊಳ್ಳೋ ಯತ್ನದಲ್ಲಿದೆ.

  • ಆರ್​ ಸಿಬಿ ವೇಗಿ ಯಶ್ ದಯಾಳ್

ಇನ್ನು ಐಪಿಎಲ್ 2024 ರ ಹರಾಜಿನಲ್ಲಿ ಯಶ್ ದಯಾಳ್ ಅವರನ್ನು RCB ಆಯ್ಕೆ ಮಾಡಿತ್ತು. ಕಳೆದ ವರ್ಷ ಗುಜರಾತ್ ತಂಡ ಅವರನ್ನು ಕೈಬಿಟ್ಟಿತ್ತು. ಆರ್​ಸಿಬಿಗೆ ಬಂದ ಬಳಿಕ ದಯಾಳ್​​ ಮತ್ತೆ ಲಯಕ್ಕೆ ಮರಳಿದ್ದಾರೆ. ಹೀಗಾಗಿ ಅವ್ರನ್ನ ಮುಂದಿನ ಸೀಸನ್​​ಗೆ ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 25 ಆಟಗಾರರ ಬಳಗದೊಂದಿಗೆ ಕಾಣಿಸಿಕೊಂಡಿತ್ತು. ಈ ಇಪ್ಪತ್ತೈದು ಆಟಗಾರರಲ್ಲಿ 22 ಆಟಗಾರರು ಮಾತ್ರ ಕಣಕ್ಕಿಳಿದಿದ್ದಾರೆ. ಆದರೆ ಮೂವರು ಆಟಗಾರರಿಗೆ ಒಂದೇ ಒಂದು ಪಂದ್ಯವನ್ನೂ ಆಡಲು ಚಾನ್ಸ್ ಸಿಕ್ಕಿಲ್ಲ.  ಐಪಿಎಲ್ 2023 ರಲ್ಲಿ ಆರ್​ಸಿಬಿ 70 ಲಕ್ಷ ರೂಪಾಯಿಗೆ ಖರೀದಿಸಿದ್ದ ರಜನ್ ಕುಮಾರ್ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವಾಡಿರಲಿಲ್ಲ. ಆದ್ರೂ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು. ಅಚ್ಚರಿ ಎಂದರೆ ಈ ಬಾರಿ ಕೂಡ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ನೀಡಿಲ್ಲ.  ಹಾಗೇ ಇಂಗ್ಲೆಂಡ್​ನ ಆಲ್​ರೌಂಡರ್ ಟಾಮ್ ಕರನ್ ಅವರನ್ನು ಈ ಬಾರಿಯ ಹರಾಜಿನಲ್ಲಿ ಆರ್​ಸಿಬಿ ಬರೋಬ್ಬರಿ 1.5 ಕೋಟಿ ನೀಡಿ ಖರೀದಿಸಿತ್ತು. ಆದರೆ 15 ಪಂದ್ಯಗಳಲ್ಲಿ ಒಮ್ಮೆಯೂ ಕರನ್ ಅವರನ್ನು ಕಣಕ್ಕಿಳಿಸಿರಲಿಲ್ಲ. ಐಪಿಎಲ್ 2023 ರಿಂದ ಆರ್​ಸಿಬಿ ತಂಡದಲ್ಲಿರುವ ಕನ್ನಡಿಗ ಆಲ್​ರೌಂಡರ್ ಮನೋಜ್ ಭಾಂಡಗೆಗೆ ಕಳೆದ ಸೀಸನ್​ನಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ನೀಡಿರಲಿಲ್ಲ. ಈ ಸಲವೂ ಒಂದೇ ಒಂದು ಚಾನ್ಸ್ ನೀಡಿಲ್ಲ.

ಇನ್ನು ಕೆಲ ಆಟಗಾರರಿಗೆ ಜಸ್ಟ್ ಒಂದು ಮ್ಯಾಚ್​ನಲ್ಲಷ್ಟೇ ಅವಕಾಶ ನೀಡ್ಲಾಗಿತ್ತು. ಬ್ಯಾಟರ್ ಸುಯಶ್ ಪ್ರಭುದೇಸಾಯಿ ಕೇವಲ ಒಂದು ಪಂದ್ಯವಾಡಿದ್ದು, 24 ರನ್ ಬಾರಿಸಿದ್ದರು. ಬೌಲರ್ ಹಿಮಾಂಶು ಶರ್ಮಾ ಈ ವರ್ಷ ಆರ್​ಸಿಬಿ ಪರ 1 ಮ್ಯಾಚ್ ಮಾತ್ರ ಆಡಿದ್ರು. 2 ಓವರ್​ಗಳನ್ನು ಎಸೆದಿದ್ದ ಅವರು 29 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆದಿಲ್ಲ. ಹಾಗೇ ಮತ್ತೊಮ್ಮ ಬೌಲರ್ ಆಕಾಶ್ ದೀಪ್ ಈ ಬಾರಿಯ ಐಪಿಎಲ್​ನಲ್ಲಿ ಆಡಿದ್ದು ಒಂದೇ ಪಂದ್ಯ. 21 ಎಸೆತಗಳಲ್ಲಿ 55 ರನ್ ನೀಡುವ ಮೂಲಕ ದುಬಾರಿಯಾಗಿ ಪರಿಣಮಿಸಿದ್ದರು. ಹೀಗಾಗಿ ಆ ಬಳಿಕ ಅವರಿಗೆ ಚಾನ್ಸ್ ನೀಡಲಾಗಿಲ್ಲ. ಇನ್ನು ಈ ಸಲ ಹೆಚ್ಚು ಪಂದ್ಯಗಳನ್ನ ಆಡಿರುವ ಆರ್​ಸಿಬಿ ಆಟಗಾರರ ಪ್ರದರ್ಶನ ಹೇಗಿತ್ತು ಅನ್ನೋದನ್ನೂ ಹೇಳ್ತೇನೆ ನೋಡಿ.

  • ವಿರಾಟ್ ಕೊಹ್ಲಿ

ರನ್ ಮಷಿನ್ ವಿರಾಟ್ ಕೊಹ್ಲಿ ಈ ವರ್ಷ 15 ಇನ್ನಿಂಗ್ಸ್​ಗಳನ್ನು ಆಡಿದ್ದು, ಒಟ್ಟು 741 ರನ್​ಗಳಿಸಿದ್ದಾರೆ. 154.69 ಸ್ಟ್ರೈಕ್​ ರೇಟ್​ನಲ್ಲಿ 61.75 ಸರಾಸರಿ ರನ್​​ಗಳಿಸಿದ್ದಾರೆ. ಅತೀ ಹೆಚ್ಚು ರನ್ ಕಲೆ ಹಾಕುವ ಮೂಲಕ ಫೈನಲಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಆರೆಂಜ್ ಕ್ಯಾಪ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ಫಾಫ್ ಡುಪ್ಲೆಸಿಸ್

ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ 15 ಇನ್ನಿಂಗ್ಸ್ ಆಡಿದ್ದು, 4 ಅರ್ಧಶತಕಗಳೊಂದಿಗೆ 438 ರನ್ ​ಗಳಿಸಿದ್ದಾರೆ. 29.20 ಸರಾಸರಿ ರನ್​ಗಳನ್ನು ಹೊಂದಿದ್ದಾರೆ. 161.62 ಅವ್ರ ಸ್ಟ್ರೈಕ್ ರೇಟ್ ಆಗಿದೆ.

  • ರಜತ್ ಪಾಟೀದಾರ್

ಆರ್​ಸಿಬಿಯ ಗೇಮ್ ಚೇಂಜರ್ ಅಂತಾನೇ ಕರೆಸಿಕೊಳ್ಳೋ ರಜತ್ ಪಟೀದಾರ್ ಮಿಡಲ್ ಓವರ್​ನಲ್ಲಿ ತಂಡದ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್​​ಗಳ ಬೌಲಿಂಗ್​​ಗೆ ಲೀಲಾಜಾಲವಾಗಿ ಬೌಂಡರಿ ಬಾರಿಸುವ ಪಟೀದಾರ್ 15 ಇನ್ನಿಂಗ್ಸ್​ನಲ್ಲಿ 395 ರನ್​ಗಳಿಸಿದ್ದಾರೆ. 177.13 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದು ವಿಶೇಷವಾಗಿದೆ.

  • ಕೆಮರೊನ್ ಗ್ರೀನ್

ಐಪಿಎಲ್​ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಮರೊನ್ ಗ್ರೀನ್ ಸೆಕೆಂಡ್ ಹಾಫ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಲ್​ರೌಂಡರ್ ಆಗಿರುವ ಗ್ರೀನ್ 255 ರನ್​ ಹಾಗೂ 10 ವಿಕೆಟ್ ಪಡೆದುಕೊಂಡಿದ್ದಾರೆ. ಆರ್​ಸಿಬಿ ಪರ 13 ಪಂದ್ಯಗಳನ್ನು ಆಡಿದ್ದಾರೆ.

  • ಗ್ಲೇನ್ ಮ್ಯಾಕ್ಸ್​ ವೆಲ್

ಸ್ಟಾರ್ ಆಲೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಪ್ರದರ್ಶನ ಈ ಸಲ ಅಟ್ಟರ್ ಫ್ಲಾಪ್ ಆಗಿತ್ತು. 2024ರ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿಗೆ ಒಂಥರಾ ದುಸ್ವಪ್ನವಾಗಿ ಕಾಡಿದ್ರು ಅಂತಾನೇ ಹೇಳ್ಬೋದು. 10 ಇನ್ನಿಂಗ್ಸ್​ ಆಡಿರುವ ಮ್ಯಾಕ್ಸಿ 5.77 ಸರಾಸರಿಯಲ್ಲಿ ಕೇವಲ 52 ರನ್​ಗಳಿಸಿದ್ದಾರೆ. 6 ವಿಕೆಟ್ ಪಡೆದುಕೊಂಡು ಭಾರೀ ಕಳಪೆ ಪ್ರದರ್ಶನ ನೀಡಿದ್ದಾರೆ.

  • ವಿಲ್ ಜಾಕ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದ್ಬುತ ಪ್ರದರ್ಶನದಲ್ಲಿ ವಿಲ್ ಜಾಕ್ಸ್ ಶ್ರಮ ಕೂಡ ಒಂದು.  ಕೇವಲ 8 ಇನ್ನಿಂಗ್ಸ್​ ಆಡಿ 230 ರನ್​ಗಳಿಸಿ ಗಮನ ಸೆಳೆದಿದ್ದಾರೆ. ಅದ್ರಲ್ಲೂ  ಗುಜರಾತ್ ಟೈಟನ್ಸ್ ವಿರುದ್ಧ ಅದ್ಭುತ ಶತಕ ಬಾರಿಸಿದ್ದನ್ನ ಅಭಿಮಾನಿಗಳು ಮರೆಯೋಕೆ ಸಾಧ್ಯನೇ ಇಲ್ಲ.

  • ದಿನೇಶ್ ಕಾರ್ತಿಕ್​

ಬೆಂಗಳೂರು ತಂಡದ ಬೆಸ್ಟ್ ಫಿನಿಶರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಸಲ ಡಿಕೆ ಬಾಸ್ ಆಗಿ ತಂಡಕ್ಕೆ ಆಸೆಯಾಗಿದ್ರು. ಈ ಬಾರಿಯ ಐಪಿಎಲ್​ ಡಿಕೆಗೆ ಕೊನೇ ಸೀಶನ್ ಆಗಿತ್ತು. ಅದ್ಭುತ ಇನ್ನಿಂಗ್ಸ್​ ಆಡಿರುವ ಡಿ.ಕೆ. 326 ರನ್​ಗಳ ಕಾಣಿಕೆ ನೀಡಿದ್ದಾರೆ. 15 ಇನ್ನಿಂಗ್ಸ್​ನಲ್ಲಿ ಡಿಕೆ 187.35 ಸ್ಟ್ರೈಕ್​​​ ರೇಟ್​ನೊಂದಿಗೆ ಆಡಿದ್ದಾರೆ. ತಮ್ಮ ವೃತ್ತಿ ಜೀವನದ ಕೊನೆಯ ಐಪಿಎಲ್​ ಅನ್ನು ಸ್ಮರಣೀಯವಾಗಿ ಉಳಿಸಿಕೊಂಡಿದ್ದಾರೆ.

  • ಮಹಿಪಾಲ್ ಲೋಮ್ರರ್

ಆರ್​ಸಿಬಿ ಗೆಲುವಿಗೆ ಮಹಿಪಾಲ್ ಲೊಮ್ರೊರ್ ಕೊಡುಗೆ ಕೂಡ ಇದೆ. ಡೆತ್​ ಓವರ್​ಗಳ ಸಮಯದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದ ಲೋಮ್ರರ್​ ಕ್ರೂಷಿಯಲ್ ರನ್​ಗಳನ್ನು ಬಾರಿಸಿದ್ದಾರೆ. 10 ಇನ್ನಿಂಗ್ಸ್ ಆಡಿ 125 ರನ್​ ಬಾರಿಸಿದ್ದಾರೆ. 185 ಸ್ಟ್ರೈಕ್​ ರೇಟ್​ನಲ್ಲಿ ಆಡಿರುವ ಅವರು 15.63 ಸರಾಸರಿ ರನ್ ಹೊಂದಿದ್ದಾರೆ.

  • ಸ್ವಪ್ನಿಲ್ ಸಿಂಗ್

ಬೆಂಗಳೂರು ತಂಡದ ಲಕ್ಕಿ ಚಾರ್ಮ್ ಅಂತಾನೇ ಸ್ವಪ್ನಿಲ್ ಸಿಂಗ್​ರನ್ನ ಕರೆಯಲಾಗುತ್ತೆ. ಒಟ್ಟು 6 ಇನ್ನಿಂಗ್ಸ್ ಆಡಿರುವ ಇವರು 7 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಆಲ್​ರೌಂಡರ್ ಆಗಿರುವ ಸ್ವಪ್ನಿಲ್ ಬ್ಯಾಟ್ ಕೂಡ ಸದ್ದು ಮಾಡಿದೆ.

  • ಮಯಾಂಕ್ ಡಗರ್

ಇನ್ನು ಮಯಾಂಕ್ ಡಗರ್ ಅವ್ರನ್ನ ಶಹಬಾಜ್ ಅಹ್ಮದ್ ಸ್ಥಾನಕ್ಕೆ ತೆಗೆದುಕೊಳ್ಳಲಾಗಿತ್ತು. ಬೆಂಗಳೂರು ಮತ್ತು ಹೈದ್ರಾಬಾದ್ ಫ್ರಾಂಚೈಸಿಗಳ ನಡುವೆ ಈ ಸ್ಥಾನದ ಬದಲಾವಣೆ ನಡೆದಿತ್ತು. ಆದ್ರೆ ಡಗರ್ ಯಾವುದೇ ಇಂಪ್ರೆಸಿವ್ ಆಟವಾಡಿಲ್ಲ. ಐದು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ.

  • ಕರ್ಣ್ ಶರ್ಮಾ

ಕರ್ಣ್ ಶರ್ಮಾ ಬೆಂಗಳೂರು ತಂಡದ ಕೆಲ ಪಂದ್ಯಗಳಲ್ಲಿ ಬೆಂಚ್​ಗೆ ಸೀಮಿತರಾಗಿದ್ದರು. ಒಟ್ಟು 9 ಇನ್ನಿಂಗ್ಸ್​ ಆಡಿ 7 ವಿಕೆಟ್ ಪಡೆದುಕೊಂಡಿದ್ದಾರೆ.

  • ಮೊಹ್ಮದ್ ಸಿರಾಜ್

ಆರ್​ಸಿಬಿಯ ಸ್ಟಾರ್ ಬೌಲರ್ ಅಂತಾ ಕರೆಸಿಕೊಳ್ತಿದ್ದ ಮೊಹಮ್ಮದ್ ಸಿರಾಜ್ ಬೆಂಗಳೂರು ತಂಡಕ್ಕೆ ಆರಂಭದಲ್ಲಿ ವಿಲನ್ ಆಗಿ ಕಾಡಿದ್ರು. ಯಾವ್ದೇ ವಿಕೆಟ್ ಕೀಳದೇ ರನ್ ನೀಡುವಲ್ಲೂ ದುಬಾರಿಯಾಗಿದ್ರು. ಸೆಕೆಂಡ್ ಆಫ್​​ನಲ್ಲಿ ಕಮ್​ಬ್ಯಾಕ್ ಮಾಡಿದ ಸಿರಾಜ್ 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನು ಯಶ್ ದಯಾಳ್ 2023ರಲ್ಲಿ ಭಾರೀ ಟೀಕೆಗೆ ಒಳಗಾಗಿದ್ದರು. ಆರ್​ಸಿಬಿಗೆ ಬಂದ ಮೇಲೆ ಅವರ ಲಕ್ ಬದಲಾಗಿದ್ದು, 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಟೋಪ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದು ನಾಲ್ಕು ವಿಕೆಟ್ ಪಡೆದಿದ್ದಾರೆ. ಲಾಕಿ ಫರ್ಗ್ಯುಸನ್ 7 ಪಂದ್ಯಗಳಲ್ಲಿ 9 ವಿಕೆಟ್ ಪಡೆದುಕೊಂಡಿದ್ದಾರೆ. ಆದ್ರೆ ಭಾರೀ ನಿರೀಕ್ಷೆ ಇಟ್ಟು ಖರೀದಿ ಮಾಡಿದ್ದ ಅಲ್ಜರಿ ಜೋಸೆಫ್ ಮಾತ್ರ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದ್ರು. ಹನ್ನೊಂದೂವರೆ ಕೋಟಿ ನೀಡಿದ್ದ ಜೋಸೆಫ್ ಒಂದೇ ಒಂದು ವಿಕೆಟ್ ಪಡೆದಿದ್ದಾರೆ. ಹೀಗಾಗಿ ಈ ಸಲ ದುಬಾರಿ ಎನಿಸಿಕೊಂಡ ಆಟಗಾರರನ್ನ ಕೈಬಿಟ್ಟು ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನಷ್ಟೇ ಉಳಿಸಿಕೊಳ್ಳಲು ಬೆಂಗಳೂರು ಫ್ರಾಂಚೈಸಿ ಪ್ಲ್ತಾನ್ ಮಾಡಿದೆ. ಅಲ್ದೇ ಮುಂದಿನ ಸೀಸನ್​ಗೆ ಉತ್ತಮ ಬೌಲರ್​ಗಳನ್ನ ಖರೀದಿ ಮಾಡಲು ನಿರ್ಧಾರ ಮಾಡಿದೆ.

Shwetha M