RCB ವಿಕ್ನೇಸ್ ಗೊತ್ತಾಯ್ತಾ? – ಪಾಟಿದಾರ್ ಪಡೆಗೆ 5 ಚಾಲೆಂಜ್!
ರಿವೇಂಜ್ ಮ್ಯಾಚ್ ಶಾಪವಾಗುತ್ತಾ!

RCB ವಿಕ್ನೇಸ್ ಗೊತ್ತಾಯ್ತಾ? –   ಪಾಟಿದಾರ್ ಪಡೆಗೆ 5 ಚಾಲೆಂಜ್!ರಿವೇಂಜ್ ಮ್ಯಾಚ್ ಶಾಪವಾಗುತ್ತಾ!

ಐಪಿಎಲ್‌ನಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ.. ಆದ್ರೆ ಕೆಲವೊಂದು ಸಾಲುಗಳು ಮುಂದಿನ ಪಂದ್ಯದ ಮೇಲೆ ಎಫೆಕ್ಟ್ ಬೀಳುವ ಹಾಗೇ ಆಗುತ್ತೆ.. ಆರ್‌ಸಿಬಿ ಕೂಡ ಇಲ್ಲಿ ತನಕ ಚೆನ್ನಾಗಿಯೇ ಆಡಿಕೊಂಡು ಬಂದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಸೋತ ನಂತ್ರ ಮುಂದಿನ 5 ಪಂದ್ಯದಲ್ಲಿ ಹೇಗೆ ಆಡುತ್ತೆ ಅನ್ನೋ ಭಯ ಶುರುವಾಗಿದೆ.  ಆರ್‌ಸಿಬಿ ಹಾಲಿ ಚಾಂಪಿಯನ್‌.. ಈಸಲ ಕೂಡ ಕಪ್ ಗೆಲ್ಲಬೇಕು ಅನ್ನೋದು ಕೋಟಿ ಕೋಟಿ ಫ್ಯಾನ್ಸ್ ಪ್ರಾರ್ಥನೆ.. ಕಪ್ ಗೆಲ್ಲೋ ತರನೇ  ಇಲ್ಲಿ ತನಕ ಆಡುತ್ತಾ ಬರ್ತಿದ್ದಾರೆ.. ಆಡಿರೋ 9 ಪಂದ್ಯದಲ್ಲಿ 6 ಪಂದ್ಯ ಗೆದ್ರೆ 3 ಪಂದ್ಯ ಸೋತಿದೆ.. ಇನ್ನು ಜಸ್ಟ್ 2 ಮ್ಯಾಚ್ ಗೆದ್ರೆ ಪ್ಲೇ ಆಫ್‌ಗೆ ಆರ್‌ಸಿಬಿ ಹೋಗುತ್ತೆ.. ಆದ್ರೆ ಮುಂದಿನ 5 ಪಂದ್ಯ ಕೂಡ ಈಸಿ ಇಲ್ಲ..

ಪಾಟಿದಾರ್ ಪಡೆಗೆ 5 ಚಾಲೆಂಜ್!

ಹೌದು.. ರಜತ್ ಪಾಟಿದಾರ್‌ಗೆ ರಿವೇಂಜ್‌ ಮ್ಯಾಚ್‌ಗಳು ಶಾಪವಾಗಿ ಕಾಣ್ತಿದೆ.. ಈ ಹಿಂದೆ ಗೆದ್ದ ಟೀಂಗಳ ಜೊತೆ ಆರ್‌ಸಿಬಿಗೆ ಸೋಲಿನ ಭಯ ಕಾಡ್ತಿದೆ.. GT ವಿರುದ್ಧ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆದ್ದಿತ್ತು, ಆದ್ರೆ ಸೋಲಿಗೆ ರಿವೇಂಜ್ ತಗೋ ಬೇಕೆಂದು ಕಣಕ್ಕಿಳಿದಿದ್ದ ಗುಜರಾತ್‌ ಆರ್‌ಸಿಬಿ ವಿಕ್ನೇಸ್ ತಿಳಿದುಕೊಂಡು ಅಖಾಡಕ್ಕಿಳಿದು ಸಕ್ಸಸ್ ಆಗಿದೆ.. ಬೌಲಿಂಗ್‌ನಲ್ಲಿ ತನ್ನ ಶಕ್ತಿ ಪ್ರದರ್ಶನ ತೋರಿಸಿ ಆರ್‌ಸಿಬಿ ಬ್ಯಾಟರ್‌ಗಳನ್ನ ಕಟ್ಟಿ ಹಾಕುವಲ್ಲಿ ಸಕ್ಸಸ್ ಆಗಿದ್ದಾರೆ. ಅದೇ ತರ ಮುಂದಿನ ಪಂದ್ಯ ಕೂಡ ಆರ್‌ಸಿಬಿಗೆ ವಿಘ್ನ ಆಗೋ ಆತಂಕ ಎದುರಾಗಿದೆ.  ಕೆೆಕೆಆರ್ ಮತ್ತು ಪಂಜಾಬ್ ವಿರುದ್ಧ ಬಿಟ್ರೆ, ಮತ್ತೆಲ್ಲಾ ರಿವೇಂಜ್ ಮ್ಯಾಚ್‌.. ಇಲ್ಲಿ ಬಿಗ್ ಚಾಲೆಂಜ್ ಇದೆ. ಆರ್‌ಸಿಬಿ ವಿರುದ್ಧ ಯಾಕೆ ಸೋತಿದ್ದೇವೆ ಅಂತ ತಿಳಿದುಕೊಂಡು MI, SRH, LSG ರಿವೇಂಜ್ ಮ್ಯಾಚ್‌ಗೆ ಪ್ಲಾನ್ ಮಾಡಿಯೇ ಕಣಕ್ಕಿಳಿಯುತ್ತೆ..  ಈ 3 ಟೀಂ ಮತ್ತು ಇದ್ರ ಜೊತೆ ಕೆಕೆಆರ್‌ಗೆ ಪಾಯಿಂಟ್ಸ್ ಟೇಬಲ್‌ನಲ್ಲ ಲಾಸ್ಟ್‌ನಲ್ಲಿ ಇರೋದ್ರಿಂದ ನಾವು ಪ್ಲೇ ಆಫ್‌ಗೆ ಹೋಗುವುದು ಕಷ್ಟ ಕೊನೆ ಪಂದ್ಯಗಳನ್ನ ಗೆದ್ದು ಮಾನ ಉಳಿಸಿಕೊಳ್ಳೋಣ ಅಂತ ಫೈಟ್ ಕೊಡುವುದ್ದಕ್ಕೆ ರೆಡಿಯಾಗಿವೆ.. ಇನ್ನು ಪಂಜಾಬ್ ವಿಷ್ಯಕ್ಕೆ ಬಂದ್ರೆ ಒಂದೇ ಒಂದು ಪಂದ್ಯ ಸೋತು ಪಾಯಿಂಟ್ಸ್ ಟೇಬಲ್‌ ಟಾಪನಲ್ಲಿದೆ. ಆರ್‌ಸಿಬಿ ಜೊತೆ ಒಂದೇ ಪಂದ್ಯ ಇರೋದ್ರಿಂದ ಬಿಗ್ ಚಾಲೆಂಜ್ ಆಗಿ ತೆಗೆದುಕೊಂಡಿರುತ್ತೆ.. ಅಯ್ಯರ್ ಬಳಗದಲ್ಲಿ ಬ್ಯಾಟಿಂಗ್ ಬೌಲಿಂಗ್ ಬೊಂಬಾಟ್ ಇದೆ.. ಹೀಗಾಗಿ 5 ಪಂದ್ಯ ಕೂಡ ಆರ್‌ಸಿಬಿಗೆ ಬಿಗ್ ಚಾಲೆಂಜ್ ಆಗಲಿದೆ..

RCB ವಿಕ್ನೇಸ್ ಗೊತ್ತಾಯ್ತಾ?

ಇನ್ನು ಆರ್‌ಸಿಬಿ ವಿಕ್ನೇಸ್ ಉಳಿದ ಟೀಂಗಳಿಗೆ ಗೊತ್ತಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ.. ನಮ್ಮಲ್ಲಿ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಬೌಲಿಂಗ್‌ ಕೂಡ ಚೆನ್ನಾಗಿದೆ.. ಆದ್ರೂ ಕೂಡ ಕೆಲ ಆಟಗಾರರು ಇಲ್ಲಿ ಫೆಲ್ಯೂರ್ ಆಗ್ತಿದ್ದಾರೆ. ತಮ್ಮ ವಿಕ್ನೇಸ್‌ಗಳನ್ನ ಬಿಟ್ಟು ಕೊಡ್ತಿದ್ದಾರೆ..

  ಹ್ಯಾಜಲ್​ವುಡ್ 

GT ವಿರುದ್ಧದ ಪಂದ್ಯದಲ್ಲಿ ಜೋಶ್ ಹ್ಯಾಜಲ್​ವುಡ್ ತುಂಬಾ ರನ್ ಬಿಟ್ಟುಕೊಟ್ರು.. ನಾಲ್ಕು ಓವರ್​​ಗಳಲ್ಲಿ ಒಂದೇ ಒಂದು ವಿಕೆಟ್ ತೆಗೆದುಕೊಂಡಿಲ್ಲ..  ಬರೋಬ್ಬರಿ 56 ರನ್ ನೀಡಿದ್ರು.. ಒಬ್ಬ ಒಳ್ಳೆಯ ಬೌಲರ್ ಹ್ಯಾಜಲ್​ವುಡ್ ವಿಕ್ನೇಸ್‌ಗಳನ್ನ ಬ್ಯಾಟರ್ ತಿಳಿದುಕೊಂಡು, ರನ್ ಮಳೆಯನ್ನ ಹರಿಸುತ್ತಿದ್ದಾರಾ ಅಂತ ಅನ್ಸುತ್ತೆ.. )

ವೆಂಕಟೇಶ್ ಅಯ್ಯರ್

GT ವಿರುದ್ಧ  ವೆಂಕಟೇಶ್ ಅಯ್ಯರ್ ಮೇಲೆ  ನಿರೀಕ್ಷಿತ ಇತ್ತು. ಇದ್ದಕ್ಕೆ ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಕಣಕ್ಕಿಳಿಸಲಾಗಿತ್ತು.. ವೆಂಕಟೇಶ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್​ ಮಾಡುವಲ್ಲಿ ಫೆಲ್ಯೂರ್ ಆದ್ರು. ಮುಂದಿನ ಪಂದ್ಯದಲ್ಲಿ ಇವರನ್ನ ನಂಬಿ ಕಣಕ್ಕಿಳಿಸುವುದು ಕಷ್ಟ

ಬೆಥಲ್ 

3 ಪಂದ್ಯದಲ್ಲಿ ಗಾಯಗೊಂಡ ಸಾಲ್ಟ್‌ ಬದಲು ಬೆಥಲ್‌ರನ್ನ ಕಣಕ್ಕಿಳಿಸಲಾಗಿತ್ತು.   ಆದ್ರೆ 3 ಪಂದ್ಯದಿಂದಲೂ ಬೆಥಲ್ ಬ್ಯಾಟ್‌ನಿಂದ ರನ್ ಬಂದಿಲ್ಲ.. ಸಾಕಷ್ಟು ನಿರೀಕ್ಷೆ ಇತ್ತು . ಇವರು ಮೇಲೆ ಓಪನರ್ ಆಗಿ, ತಂಡಕ್ಕೆ ಪ್ಲಸ್ ಆಗ್ತಾರೆ ಅಂತ. ಆದ್ರೆ ಅದು ಸುಳ್ಳಾಗಿದೆ. ಒಂದು ವೇಳೆ ಮುಂದಿನ ಪಂದ್ಯಕ್ಕೆ ಇಂಜುರಿಯಿಂದ ಚೇತರಿಸಿಕೊಂಡು ಸಾಲ್ಟ್ ಬಂದ್ರೆ ಆರ್‌ಸಿಬಿಗೆ ಆನೆ ಬಲ ಬರುತ್ತೆ.. ಒಂದು ವೇಳೆ ಬಂದಿಲ್ಲ ಬೆಥಲ್‌ರನ್ನೇ ಓಪನರ್‌ ಆಡಿ ಆಡಿಸಬೇಕಾಗುತ್ತೆ.

ರಜತ್‌ ಪಟಿದಾರ್

ನಾಯಕ ರಜತ್ ಪಟಿದಾರ್ ವಿಕ್ನೇಸ್ ಎದುರಾಳಿ ತಂಡಕ್ಕೆ ಬಟಾಬಯಲಾಗಿದೆ. ಎಡಗೈ ವೇಗದ ಬೌಲರ್‌ಗಳ ವಿರುದ್ಧ ಸಾಕಷ್ಟು ತೊಂದರೆಗೊಳಗಾಗುತ್ತಾರೆ ಅನ್ನೋದು ಅಂಕಿಅಂಶಗಳಿಂದ ಬಹಿರಂಗವಾಗಿದೆ.ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ಪಟಿದಾರ್ ಎಡಗೈ ವೇಗಿಗಳ ವಿರುದ್ಧ 113 ಎಸೆತಗಳನ್ನು ಎದುರಿಸಿದ್ದಾರೆ. ಈ ಅವಧಿಯಲ್ಲಿ ಅವರು ಒಂಬತ್ತು ಬಾರಿ ಔಟ್ ಆಗಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಇದೇ ರೀತಿಯ ಸನ್ನಿವೇಶ ಕಂಡುಬಂದಿದ್ದು, ಎಡಗೈ ವೇಗಿ ಅರ್ಷದ್ ಖಾನ್, ರಜತ್ ಪಟಿದಾರ್ ಅವರ ವಿಕೆಟ್ ಪಡೆದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ಇವರ ವಿರುದ್ದ ಎಡಗೈ ವೇಗಿಗಳನ್ನೇ ತಂಡಗಳು ಕಣಕ್ಕಿಳಿಸಿಸ ಔಟ್ ಮಾಡೋಕೆ ರಣತಂತ್ರ ಹೆಣೆಯುತ್ತೆ..

ಜಿತೇಶ್ ಶರ್ಮಾ 

ಸೀಸನ್‌ನಲ್ಲಿ ಜಿತೇಶ್ ಶರ್ಮಾ ಅವರ ಅಂಕಿ-ಅಂಶಗಳನ್ನು ನೋಡಿದರೆ, ಯಾಕೆ ಇವರು ಹೀಗಾದ್ರು ಅನ್ಸುತ್ತೆ.. ವಿಕೇಟ್ ಕೀಪರ್ ಅನ್ನೋ  ಒಂದೇ ಕಾರಣಕ್ಕೆ ತಂಡದಲ್ಲಿ ಇದ್ದಾರಾ ಅನ್ನೋ ಪ್ರಶ್ನೆ ಎಳುತ್ತೆ.. ಜಿತೇಶ್ ಶರ್ಮಾ  ಈ ಸಲ 9 ಪಂದ್ಯ ಆಡಿದ್ದಾರೆ, ಗಳಿಸಿದ್ದು ರನ್  ಮಾತ್ರ ಜಸ್ಟ್ 63 ರನ್ ಮಾತ್ರ. ಇದ್ದನ್ನ ನೋಡಿದ್ರೆ ಯಾಕೆ ಜಿತೇಶ್ ಸ್ಲೋ ಬ್ಯಾಟಿಂಗ್ ಜೊತೆ ರನ್‌ಗಳಿಸೋಕೆೆೆೆೆೆ ಪರದಾಡುತ್ತಿದ್ದಾರ ಅನ್ನೋ ಪ್ರಶ್ನೆ ಎಳುತ್ತೆ. ಹೀಗೆ ಆರ್‌ಸಿಬಿ ಕೆಲ ವಿಕ್ನೇಸ್‌ಗಳು ಎದುರಾಳಿ ತಂಡಕ್ಕೆ ಗೊತ್ತಾಗಿದ್ದು, ಅವರು ಪ್ಲ್ಯಾನ್ ಮಾಡಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ..

Kishor KV