RED ARMYಗೆ ರಣಬೇಟೆಗಾರರು – ಡಫಿ.. ಮಂಗೇಶ್.. ವೆಂಕಿ ಯಾರು ಬೆಸ್ಟ್ ?
10 ಟೀಂಗಳಲ್ಲಿ ಹೇಗಿದೆ RCB ಪವರ್?

RED ARMYಗೆ ರಣಬೇಟೆಗಾರರು – ಡಫಿ.. ಮಂಗೇಶ್.. ವೆಂಕಿ ಯಾರು ಬೆಸ್ಟ್ ?10 ಟೀಂಗಳಲ್ಲಿ ಹೇಗಿದೆ RCB ಪವರ್?

2025ರ ಐಪಿಎಲ್​ಗೂ ಮುನ್ನ ಆರ್​ಸಿಬಿಯ ಆಕ್ಷನ್ ನೋಡಿ ಎಲ್ರೂ ಟ್ರೋಲ್ ಮಾಡಿದ್ರು. ಬಟ್ ಪರ್ಫಾಮೆನ್ಸ್ ನೋಡಿ ಎಲ್ರೂ ಸ್ಟನ್ ಆಗಿದ್ರು. ಌಂಡ್ ಈ ಸಲ ಮಿನಿ ಆಕ್ಷನ್ ನಲ್ಲೂ ಆರ್​ಸಿಬಿ ನೆಕ್ಸ್​ಟ್ ಲೆವೆಲ್ ಸೆಲೆಕ್ಷನ್ ಮಾಡಿದೆ. ಅದ್ರಲ್ಲೂ ಮೂವರು ಆಟಗಾರರ ಬಿಡ್ಡಿಂಗ್ ಹಲ್​ಚಲ್ ಎಬ್ಬಿಸಿದೆ.  ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಿನಿ ಆಕ್ಷನ್​ಗೂ ಮುನ್ನ 17 ಆಟಗಾರರನ್ನ ರಿಟೇನ್ ಮಾಡಿಕೊಂಡು 8 ಆಟಗಾರರನ್ನ ರಿಲೀಸ್ ಮಾಡಿತ್ತು. ಈಗ ಮಿನಿ ಆಕ್ಷನ್​ನಲ್ಲಿ ಮತ್ತೆ ಅಷ್ಟೇ ಪ್ಲೇಯರ್ಸ್​ ಮೇಲೆ ಬಿಡ್ ಮಾಡಿ ನೆಕ್ಸ್​ಟ್ ಸೀಸನ್​ಗೆ ಔಟ್ ಆಫ್ ಔಟ್ ಸ್ಲಾಟ್​ಗಳನ್ನ ಭರ್ತಿ ಮಾಡ್ಕೊಂಡಿದೆ. 25 ಸದಸ್ಯರ ರೆಡ್ ಆರ್ಮಿ ರಣಬೇಟೆಗೆ ರೆಡಿಯಾಗಿದೆ.

ಆರ್ ಸಿಬಿಗೆ 8 ಬೇಟೆಗಾರರು!

ಆಟಗಾರ                                           ಮೊತ್ತ

ವೆಂಕಟೇಶ್ ಅಯ್ಯರ್                      ₹7 ಕೋಟಿ

ಮಂಗೇಶ್ ಯಾದವ್                     ₹5.20 ಕೋಟಿ

ಜೇಕಬ್ ಡಫಿ                              ₹2 ಕೋಟಿ

ಜೋರ್ಡನ್ ಕಾಕ್ಸ್                         ₹75 ಲಕ್ಷ

ಸತ್ವಿಕ್ ದೇಸ್ವಾಲ್                          ₹30 ಲಕ್ಷ

ವಿಕ್ಕಿ ಒಸ್ತ್ವಾಲ್                              ₹30 ಲಕ್ಷ

ಕಾನಿಷ್ಕ್ ಚೌಹಾನ್                        ₹30 ಲಕ್ಷ

ವಿಹಾನ್ ಮಲ್ಹೋತ್ರ                        ₹30 ಲಕ್ಷ

ಸೋ ಇಲ್ಲಿ 8 ಪ್ಲೇಯರ್ಸ್ ಇದ್ರೂ ಆರ್​ಸಿಬಿ 6 ಆಟಗಾರರನ್ನ ಬೇಸ್ ಪ್ರೈಸ್​ಗೆ ಬಿಡ್ ಮಾಡಿದೆ. ಮಿನಿ ಆಕ್ಷನ್​ನಲ್ಲಿ ಅವ್ರು ಎಷ್ಟು ಹಣಕ್ಕೆ ತಮ್ಮ ಹೆಸ್ರನ್ನ ನೋಂದಾಯಿಸಿಕೊಂಡಿದ್ರೂ ಅಷ್ಟೇ ಹಣ ಕೊಟ್ಟು ಖರೀದಿ ಮಾಡಿದೆ. ಉಳಿದಂತೆ ವೆಂಕಟೇಶ್ ಅಯ್ಯರ್ ಮತ್ತು ಮಂಗೇಶ್ ಯಾದವ್ ಸ್ವಲ್ಪ ಕಾಸ್ಟ್ಲಿ ಪ್ಲೇಯರ್ಸ್ ಆದ್ರು. ಸೋ ಇವ್ರಿಬ್ರಿಗೆ ಯಾಕೆ ಅಷ್ಟು ಹಣ ಕೊಟ್ರು ಅನ್ನೋದು ಇಲ್ಲಿ ಮ್ಯಾಟ್ರ್ ಆಗುತ್ತೆ.

ಕಳೆದ ಸಲ ಮಿಸ್ ಆಗಿದ್ದಕ್ಕೆ ಈ ಸಲ ವೆಂಕಿನ ತಗೊಂಡ್ರಾ?

ವೆಂಕಟೇಶ್ ಅಯ್ಯರ್ ಮೈದಾನದಲ್ಲಿ ಸದ್ದು ಮಾಡಿದ್ದಕ್ಕಿಂತ ಬಿಡ್ಡಿಂಗ್​ನಿಂದ ಸೌಂಡ್ ಮಾಡಿದ್ದೇ ಜಾಸ್ತಿ. ಲಾಸ್ಟ್ ಇಯರ್ ಅಂತೂ ಒನ್ ಆಫ್ ದಿ ಕಾಸ್ಟ್ಲಿಯೆಸ್ಟ್ ಪ್ಲೇಯರ್ ಆಗಿದ್ರು. ಹೈಯೆಸ್ಟ್ ಪೇಯ್ಡ್ ಪ್ಲೇಯರ್​ಗಳಲ್ಲಿ ಟಾಪ್ 3 ನಲ್ಲಿದ್ರು. ಬಟ್ ಆನ್ ಫೀಲ್ಡ್​ನಲ್ಲಿ ಕಂಪ್ಲೀಟ್ ಡಮ್ಮಿ ಆಗಿದ್ರು. ಹೀಗಾಗೇ ಕೆಕೆಆರ್​ನಿಂದ ಹೊರ ಬಿದ್ದಿದ್ದ ಲೆಫ್ಟ್ ಹ್ಯಾಂಡ್ ಬ್ಯಾಟರ್ ವೆಂಕಟೇಶ್ ಅಯ್ಯರ್​ರನ್ನ ಈ ಸಲ ಆಕ್ಷನ್​ನಲ್ಲಿ ಆರ್​ಸಿಬಿ 7 ಕೋಟಿ ಬಿಡ್ ಮಾಡಿ ಖರೀದಿ ಮಾಡಿದೆ. ಌಕ್ಚುಲಿ ಕಳೆದ ಬಾರಿಯೇ ಆರ್​ಸಿಬಿ ಮತ್ತು ಕೆಕೆಆರ್ ನಡುವೆ ಬಿಡ್ ಫೈಟಿಂಗ್ ನಡೆದು ಕೊನೆಗೆ 23 ಕೋಟಿವರೆಗೂ ಹೋಗಿ ಆರ್​ಸಿಬಿ ಹಿಂದೆ ಬಂದಿತ್ತು. ಆ ನಂತ್ರ ವೆಂಕಿ 23.75ಕೋಟಿಗೆ ಕೆಕೆಆರ್​ಗೆ ಹೋಗಿದ್ರು. ಈ ಸಲ ಮಿನಿ ಆಕ್ಷನ್​ನಲ್ಲೂ ಒನ್ಸ್ ಅಗೇನ್ ಕೆಕೆಆರ್ ಮತ್ತು ಆರ್​ಸಿಬಿ ಫೈಟ್ ನಡೆದು ಕೊನೆಗೆ ಬೆಂಗಳೂರೇ ಗೆದ್ದಿದೆ. ಬಟ್ ಕಳೆದ ಸಲ ಆಕ್ಷನ್​ನಲ್ಲಿ ಮಿಸ್ ಆಗಿದ್ದಕ್ಕೆ ಜಿದ್ದಿಗೆ ಬಿದ್ದು ಈ ಸಲ ತಗೊಂಡ್ರಾ ಅಂತಾ ಒಂದಷ್ಟು ಚರ್ಚೆಗಳು ಆಗ್ತಿವೆ. ಌಂಡ್ 7 ಕೋಟಿಗೂ ವರ್ತ್ ಇಲ್ಲ ಅನ್ನೋದು ಇನ್ನೊಂದಷ್ಟು ಎಕ್ಸ್​ಪರ್ಟ್​​ಗಳ ವಾದ. ಯಾಕಂದ್ರೆ ವೆಂಕಿ ಪರ್ಫಾಮೆನ್ಸ್ ಎಕ್ಸ್​ಟ್ರಾರ್ಡಿನರಿ ಅನ್ನೋ ಥರ ಏನಿಲ್ಲ.

2025ರಲ್ಲಿ ದುಬಾರಿ ಸಂಭಾವನೆ ಪಡೆದ್ರೂ ಪ್ರದರ್ಶನ ಅಷ್ಟಕ್ಕಷ್ಟೇ!

ಕಳೆದ ಆವೃತ್ತಿಯಲ್ಲಿ ವೆಂಕಟೇಶ್ ಅಯ್ಯರ್ ಪರ್ಫಾಮೆನ್ಸ್ ತೀರ ಕಳಪೆಯಾಗಿತ್ತು. ವೆಂಕಿನ ಕೆಕೆಆರ್ ಕೈಬಿಟ್ಟಿತು. ವೆಂಕಟೇಶ್ ಅಯ್ಯರ್ 2021 ರಿಂದ ಕೆಕೆಆರ್​ನಲ್ಲಿ ಐಪಿಎಲ್‌ನಲ್ಲಿ ಆಡುತ್ತಿದ್ದು, ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 62 ಪಂದ್ಯಗಳನ್ನು ಆಡಿದ್ದಾರೆ. 29.95 ರ ಸರಾಸರಿಯಲ್ಲಿ 1,468 ರನ್ ಗಳಿಸಿದ್ದಾರೆ. 2024 ರಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವೆಂಕಟೇಶ್, 370 ರನ್ ಬಾರಿಸಿದ್ದರು. ಆದ್ರೆ ಕಳೆದ ಆವೃತ್ತಿಯಲ್ಲಿ 11 ಪಂದ್ಯಗಳನ್ನಾಡಿದ ಅವರು ಕೇವಲ 142 ರನ್‌ ಗಳಿಸಿದರು. ಕೆಲ ಪಂದ್ಯಗಳಿಂದ ಅವ್ರನ್ನ ಪ್ಲೇಯಿಂಗ್ 11 ನಿಂದ ಕೈಬಿಡಲಾಗಿತ್ತು. ಅಲ್ದೇ ಆಲ್​ರೌಂಡರ್ ಆಗಿದ್ರೂ ವೆಂಕಿ ಕಡೆಯಿಂದ ಯಾವುದೇ ಬೌಲಿಂಗ್ ಮಾಡಿಸಿಲ್ಲ ಅನ್ನೋದನ್ನೂ ಗಮನಿಸಬೇಕಾಗುತ್ತೆ. ಌಂಡ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬಂದಿಲ್ಲ. 2025ರಲ್ಲಿ 10 ಇನ್ನಿಂಗ್ಸ್​ಗಳಿಂದ 26.37ರ ಆವರೇಜ್​ನಲ್ಲಿ ಅದೂ ಕೂಡ 119ರ ಸ್ಟ್ರೈಕ್​ರೇಟ್​ನಲ್ಲಿ 211 ರನ್ಸ್ ಅಷ್ಟೇ ಬಂದಿದೆ. 2 ಅರ್ಧಶತಕಗಳನ್ನ ಬಾರಿಸಿದ್ದಾರೆ. ಹೀಗಾಗಿ ವೆಂಕಿಗೆ 7 ಕೋಟಿ ಕೊಟ್ಟಿದ್ದೂ ವೇಸ್ಟೇ ಅನ್ನೋದು ಒಂದಷ್ಟು ಜನರ ಒಪೀನಿಯನ್. ಇನ್ನು ವೆಂಕಿ ಬಿಟ್ರೆ ಆರ್ಸಿಬಿ ಆಖ್ಷನ್​ನಲ್ಲಿ ಸದ್ದು ಮಾಡ್ತಿರೋ ಮತ್ತೊಂದು ಹೆಸ್ರು ಮಂಗೇಶ್ ಯಾದವ್. ತುಂಬಾ ಜನ ಈತನ ಹೆಸ್ರೇ ಕೇಳಿಲ್ಲ. ಹೀಗಿದ್ರೂ 5.20 ಕೋಟಿ ಹೇಗೆ ಕೊಟ್ರೂ ಅನ್ನಿಸ್ಬೋದು. ಬಟ್ ಅಲ್ಲೇ ಇರೋದು ಮ್ಯಾನೇಜ್​ಮೆಂಟ್ ಲಾಜಿಕ್.

ಆಡಿದ್ದೇ 2 ಟಿ-20 ಮ್ಯಾಚ್.. ಮಂಗೇಶ್ ಗೆ ಇಷ್ಟು ಡಿಮ್ಯಾಂಡ್!

ಮಿನಿ ಆಕ್ಷನ್​ನಲ್ಲಿ ಆರ್​ಸಿಬಿ ಮಂಗೇಶ್ ಯಾದವ್ ಮೇಲೆ 5.20 ಕೋಟಿ ಸುರಿದು ಖರೀದಿ ಮಾಡಿದ್ಮೇಲೆ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ರು. ಇವ್ನ ಹೆಸ್ರೇ ಕೇಳಿಲ್ವಲ್ಲ ಅಂಥಾ ಸರ್ಚ್ ಮಾಡ್ದಾಗ ಗೊತ್ತಾಗಿತ್ತು ಈತನ ಹಿನ್ನೆಲೆ. ಕ್ರಿಕೆಟ್ ಲೋಕಕ್ಕೆ ಹೆಚ್ಚು ಈತನ ಪರಿಚಯ ಇಲ್ಲ. ಮಧ್ಯಪ್ರದೇಶದ ಮಂಗೇಶ್ ಯಾದವ್ ಯುವ ಆಲ್‌ರೌಂಡರ್. ಕೇವಲ ಎರಡು ಟಿ20 ಪಂದ್ಯಗಳನ್ನ ಆಡಿದ್ರೂ ದೊಡ್ಡ ಮೊತ್ತದ ಬಿಡ್ ಮಾಡಿದ್ದು ಅಚ್ಚರಿ ಮೂಡಿಸಿದೆ.  ಆಡಿರೋದು ಕೇವಲ 2 ಇನ್ನಿಂಗ್ಸ್ ನಲ್ಲೇ 28 ರನ್ ಗಳಿಸಿದ್ದಾರೆ. ಬಟ್ ಸ್ಟ್ರೈಕ್ ರೇಟ್  233.3 ಇದೆ. ಸೋ ಫ್ಯೂಚರ್ ನಲ್ಲಿ ಬೆಸ್ಟ್ ಫಿನಿಶರ್ ಆಗ್ಬೋದು ಅನ್ನೋ ನಿಟ್ಟಿನಲ್ಲಿ ಖರೀದಿ ಮಾಡಿರಬಹುದು. ಹಾಗೇ ಮಂಗೇಶ್  ಬಲಗೈ ಬ್ಯಾಟ್ಸ್‌ಮನ್ ಆದ್ರೂ, ಬೌಲಿಂಗ್ ಮಾಡೋದು ಎಡಗೈನಲ್ಲಿ. ಲೆಫ್ಟ್ ಆರ್ಮ್ ವೇಗಿಗಳಿಗೆ ಯಾವತ್ತೂ ಡಿಮ್ಯಾಂಡ್ ಇದ್ದೇ ಇರುತ್ತೆ. ಆಡಿರೋ 2 ಪಂದ್ಯಗಳಲ್ಲಿ ಒಟ್ಟು 3 ವಿಕೆಟ್ ತೆಗೆದಿದ್ದಾರೆ. ಇದೇ ನಂಬರ್ಸ್ ನೋಡಿಯೇ ಆರ್​ಸಿಬಿ ಇಷ್ಟು ದೊಡ್ಡ ಅಮೌಂಟ್ ಕೊಟ್ಟಿದೆ.

ಟಿ-20ಐ 2ನೇ ರ್ಯಾಂಕ್ ಬೌಲರ್ ಡಫಿ ಖರೀದಿ!

ಇನ್ನು ಆಕ್ಷನ್​ನಲ್ಲಿ ಆರ್​ಸಿಬಿಯ ಮತ್ತೊಂದು ಅದ್ಭುತ ಸೆಲೆಕ್ಷನ್ ಅಂದ್ರೆ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ. ಮೂಲಬೆಲೆ 2 ಕೋಟಿಗೆ ಖರೀದಿ ಮಾಡಲಾಗಿದೆ. ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡ್ತಿರೋ 31 ವರ್ಷದ ಬಲಗೈ ವೇಗಿ ಸದ್ಯ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ನಂಬರ್ 2 ಬೌಲರ್ ಆಗಿದ್ದಾರೆ. ಕೆಲ ತಿಂಗಳ ಹಿಂದೆ ನಂಬರ್ 1 ಬೌಲರ್ ಆಗಿದ್ದರು. ಡಫಿ ಅವರನ್ನು ಆರ್‌ಸಿಬಿ ಹೊರತುಪಡಿಸಿ ಯಾವ ತಂಡಗಳು ಕೂಡ ಖರೀದಿಸಲು ಮುಂದೆ ಬರಲಿಲ್ಲ. ಸೋ ಬೇಸ್​ ಪ್ರೈಸ್​ಗೆ ಬಂದಿದ್ದು ಆರ್​ಸಿಬಿಗೆ ಪ್ಲಸ್ ಆಗಿದೆ. ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ 38 ಪಂದ್ಯಗಳನ್ನು ಆಡಿರುವ ಢಪಿ, 36 ಇನಿಂಗ್ಸ್‌ನಲ್ಲಿ 53 ವಿಕೆಟ್ ಕಬಳಿಸಿದ್ದಾರೆ. 7.37 ಎಕಾನಮಿ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು ಪವರ್‌ಪ್ಲೇನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ವಿಕೆಟ್ ತಗೊಳ್ತಾರೆ. ಌಂಡ್ ಡೆತ್ ಬೌಲಿಂಗ್‌ನಲ್ಲಿ ಕೂಡ ರನ್ ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಇದೆ. ಹೀಗಾಗಿ ಡಫಿ ಸೆಲೆಕ್ಷನ್ ಸೂಪರ್ ಆಗಿದೆ. ಸದ್ಯ 8 ಆಟಗಾರರ ಖರೀದಿಯಲ್ಲಿ ಈ ಮೂವರು ಫುಲ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಮೊದ್ಲೇ ಸೂಪರ್ ಸ್ಟ್ರಾಂಗ್ ಇರೋ ಆರ್​ಸಿಬಿ ಮಿನಿ ಆಕ್ಷನ್ ಮೂಲಕ ಮತ್ತಷ್ಟು ಸ್ಟ್ರಾಂಗ್ ಆಗಿದೆ. ಮುಂದಿನ ಸಲವೂ ಕಪ್ ನಮ್ದೇ ಎನ್ನುವಂಥ ಪ್ಲೇಯರ್ಸ್ ತಂಡದಲ್ಲಿದ್ದು 10 ಫ್ರಾಂಚೈಸಿಗಳ ಪೈಕಿ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದ್ದಾರೆ.

Shantha Kumari