RCBಯಲ್ಲಿ ಬೆಸ್ಟ್ ಫಿನಿಶರ್ಸ್ – ಜಿತೇಶ್, ಡೇವಿಡ್ & ಶೆಫರ್ಡ್ ಶಕ್ತಿ!
ಅಶ್ವಿನ್ ಹೇಳಿದ ಭವಿಷ್ಯ ನಿಜವಾಗುತ್ತಾ?

2026ರ ಐಪಿಎಲ್ ಮಿನಿ ಆಕ್ಷನ್ಗೂ ಮುನ್ನ ಎಲ್ಲಾ ಫ್ರಾಂಚೈಸಿಗಳ ನಿದ್ದೆಗೆಡಿಸಿರೋ ಟೀಂ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಮುಂದಿನ ವರ್ಷವೂ ಟ್ರೋಫಿ ಗೆಲ್ಲೋಕೆ ಬೇಕಿರೋ ಎಲ್ಲಾ ಸೂಪರ್ ಸ್ಟಾರ್ಸ್ ಇಲ್ಲೇ ಇದ್ದಾರೆ. ಮಿಡಲ್ ಆರ್ಡರ್ನಲ್ಲಂತೂ ಬೆಸ್ಟ್ ಫಿನಿಶರ್ಗಳೇ ಇದ್ದಾರೆ. ಆರ್.ಅಶ್ವಿನ್ ಕೂಡ ಇದನ್ನೇ ಹೇಳಿದ್ದಾರೆ. ಪ್ರಸ್ತುತ 10 ತಂಡಗಳ ಪೈಕಿ ಮೋಸ್ಟ್ ಡೇಂಜರಸ್ ಪವರ್ ಹಿಟ್ಟರ್ಗಳು ಇರೋದು ಬೆಂಗಳೂರು ತಂಡದಲ್ಲೇ ಎಂದಿದ್ದಾರೆ.
ಇದನ್ನೂ ಓದಿ : SA ಸರಣಿ RO-KOಗೆ ಪ್ರತಿಷ್ಠೆ – 6 ಟಾಸ್ಕ್.. 2027ರ ವಿಶ್ವಕಪ್ ಫಿಕ್ಸ್?
18ನೇ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಟ್ರೋಫಿ ಗೆಲ್ಲೋಕೆ ಮುಖ್ಯ ಕಾರಣನೇ ತಂಡದಲ್ಲಿದ್ದ ಬೆಸ್ಟ್ ಪ್ಲೇಯರ್ಸ್. ಬ್ಯಾಟಿಂಗ್ ಅಂತಾ ಬಂದ್ರೆ ಪವರ್ ಹಿಟ್ಟರ್ಸ್ ಇದ್ದಾರೆ.. ಬೌಲಿಂಗ್ನಲ್ಲಿ ಅಟ್ಯಾಕಿಂಗ್ ಸ್ಟಾರ್ಸ್ ಇದ್ದಾರೆ. ಮಿಡಲ್ ಆರ್ಡರ್ ನಲ್ಲಂತೂ ಪವರ್ಫುಲ್ ಫಿನಿಶರ್ಸ್ ಇದ್ದಾರೆ. ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆಲ್ಲೋಕೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಪಾತ್ರವೂ ತುಂಬಾನೇ ದೊಡ್ಡದಿತ್ತು. ಹೀಗಾಗಿ ಬಿಗ್ ಹಿಟ್ಟರ್ಗಳನ್ನ ರಿಟೇನ್ ಮಾಡ್ಕೊಂಡಿರೋ ಫ್ರಾಂಚೈಸಿ ಮುಂದಿನ ವರ್ಷವೂ ಕಪ್ ಮೇಲೆ ಕಣ್ಣಿಟ್ಟಿದೆ.
ವಿಕೆಟ್ ಕೀಪಿಂಗ್, ಪವರ್ ಹಿಟ್ ಗೂ ಜೈ ಜಿತೇಶ್ ಶರ್ಮಾ!
ಬೆಂಗಳೂರು ತಂಡದಲ್ಲಿ ಮಿಡಲ್ ಆರ್ಡರ್ ನಲ್ಲಿ ಒನ್ ಆಫ್ ದಿ ಬೆಸ್ಟ್ ಪ್ಲೇಯರ್ ಅಂದ್ರೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ. ಸ್ಟಂಪ್ಸ್ ಹಿಂದೆ ನಿಂತು ಚಾಣಾಕ್ಷತನದಿಂದ ವಿಕೆಟ್ ಕೀಪಿಂಗ್ ಮಾಡೋ ಜಿತೇಶ್ ಬ್ಯಾಟಿಂಗ್ನಲ್ಲೂ ಬಿಗ್ ಸ್ಕೋರ್ ಗಳಿಸೋ ತಾಕತ್ತು ಅವ್ರಲ್ಲಿದೆ. 2025ರಲ್ಲಿ ಆರ್ ಸಿಬಿ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಗಳನ್ನ ಕೊಟ್ಟಿದ್ದಾರೆ. 11 ಇನ್ನಿಂಗ್ಸ್ಗಳಲ್ಲಿ 37.28 ಸರಾಸರಿಯಲ್ಲಿ ಮತ್ತು 176.35 ಸ್ಟ್ರೈಕ್ ರೇಟ್ನಲ್ಲಿ 261 ರನ್ ಗಳಿಸಿದರು. ಅಲ್ದೇ ಲಕ್ನೋ ವಿರುದ್ಧದ ಅಜೇಯ ಅರ್ಧಶತಕದ ಆಟವನ್ನ ಮರೆಯೋಕೆ ಚಾನ್ಸೇ ಇಲ್ಲ. ಇದಾದ ಮೇಲೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಅವಕಾಶ ಸಿಕ್ತು. ಆನಂತ್ರ ಏಷ್ಯಾಕಪ್ಗೆ ಸೆಲೆಕ್ಟ್ ಆದ್ರು. ಪ್ರಸ್ತುತ ಭಾರತ ಟಿ-20ಐ ತಂಡದಲ್ಲಿ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ರನ್ನ ಬೀಟ್ ಮಾಡಿ ಪ್ಲೇಯಿಂಗ್ 11ನಲ್ಲಿ ಅವಕಾಶ ಕೂಡ ಪಡ್ತಿದ್ದಾರೆ. ಌಂಡ್ ರೈಸಿಂಗ್ ಏಷ್ಯಾಕಪ್ ಸ್ಟಾರ್ ಟೂರ್ನಿಯಲ್ಲಿ ಕ್ಯಾಪ್ಟನ್ ಆಗಿಯೂ ತಂಡವನ್ನ ಲೀಡ್ ಮಾಡಿದ್ರು. ಸೋ ಇದೇ ಜಿತೇಶ್ ಮುಂದಿನ ಆವೃತ್ತಿಗೂ ದಿ ಬೆಸ್ಟ್ ಫಿನಿಶರ್ ರೋಲ್ ಪ್ಲೇ ಮಾಡ್ತಾರೆ.
ಕ್ರೀಸ್ ಕಚ್ಚಿ ನಿಂತ್ರೆ ಟಿಮ್ ಡೇವಿಡ್ ತಡೆಯೋರು ಯಾರಿಲ್ಲ!
ಇನ್ನು ದೈತ್ಯ ದಾಂಡಿಗ ಟಿಮ್ ಡೇವಿಡ್ ಬಗ್ಗೆ ಹೇಳೋದೇ ಬೇಡ. ಆಲ್ರೆಡಿ ಆರ್ಸಿಬಿ ಫ್ಯಾನ್ಸ್ ನಮ್ಮ ಮನೆ ಹುಡ್ಗ ಅನ್ನೋ ರೇಂಜ್ಗೆ ಇವ್ರಿಗೆ ತಮ್ಮ ಮನೆ ಮನದಲ್ಲಿ ಸ್ಥಾನ ಕೊಟ್ಟಾಗಿದೆ. ಯಾಕಂದ್ರೆ ಲಾಸ್ಟ್ ಸೀಸನ್ನಲ್ಲಿ ಇವ್ರ ಪರ್ಫಾಮೆನ್ಸ್ ಆ ಮಟ್ಟಿಗಿತ್ತು. ಟಿಮ್ ಡೇವಿಡ್ ಕ್ರಿಸ್ಗೆ ಬಂದ್ರೆ ಸಿಕ್ಸ್, ಫೋರ್ಗಳಲ್ಲೇ ಡೀಲ್ ಮಾಡ್ತಾರೆ. ಗೇಮ್ ಟರ್ನ್ ಮೂಮೆಂಟ್ ಕ್ರಿಯೇಟ್ ಮಾಡ್ತಾರೆ. ಕಳೆದ ಸೀಸನ್ನಲ್ಲಿ 10 ಪಂದ್ಯಗಳಿಂದ 184 ರನ್ಸ್ ಕಲೆ ಹಾಕಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಅದೂ ಕೂಡ 197.84ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದು. ಪಂಜಾಬ್ ವಿರುದ್ಧ ಅಜೇಯ 50 ರನ್ ಸಿಡಿಸಿ ಮಿಂಚಿದ್ರು. ಇದಾದ ಮೇಲೆ ಆಸೀಸ್ ಪರ ಟಿ-20ಐನಲ್ಲಿ ಕಂಟಿನ್ಯೂಯಸ್ ಆಗಿ ಸೆಲೆಕ್ಟ್ ಆಗ್ತಿದ್ದು ಪವರ್ಶೋ ಕಂಟಿನ್ಯೂ ಆಗಿದೆ. ಹಾಗೇ ಬೇರೆ ಬೇರೆ ಲೀಗ್ಗಳಲ್ಲೂ ಫುಲ್ ಡಿಮ್ಯಾಂಡ್ನಲ್ಲಿದ್ದಾರೆ. ಟಿ-20ಐನಲ್ಲಿ ಅದ್ಭುತ ಸ್ಟ್ರೈಕ್ರೇಟ್ ಲಿಸ್ಟ್ನಲ್ಲಿ ಟಾಪ್-2ನಲ್ಲಿದ್ದಾರೆ.
ರೊಮ್ಯಾರಿಯೋ ಶೆಫರ್ಡ್ ಹೊಡೆತಕ್ಕೆ ಬೌಲರ್ ಗಳು ಶೇಕ್!
ಇನ್ನು ಕೆರೆಬಿಯನ್ ನಾಡಿನ ಪವರ್ ಹಿಟ್ಟರ್ ರೊಮ್ಯಾರಿಯೋ ಶೆಫರ್ಡ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಹ್ಮಾಸ್ತ್ರ. ಮಿಡಲ್ ಆರ್ಡರ್ನಲ್ಲಿ ಗೇಮ್ ಟರ್ನಿಂಗ್ ಪರ್ಫಾಮೆನ್ಸ್ ಕೊಡೋ ತಾಕಕ್ಕಿರೋ ಬೆಸ್ಟ್ ಆಲ್ರೌಂಡರ್. ಅದ್ರಲ್ಲೂ ಚೆನ್ನೈ ವಿರುದ್ಧ ಜಸ್ಟ್ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಹೀರೋ. ಬೌಲಿಂಗ್ನಲ್ಲೂ ಕೂಡ ಇಂಪ್ಯಾಕ್ಟ್ ಮಾಡೋ ಕೆಪಾಸಿಟಿ ಇದೆ. ಐಪಿಎಲ್ ಬಳಿಕವೂ ಸೌತ್ ಆಫ್ರಿಕಾ ಪರ ಹಾಗೇ ಬೇರೆ ಬೇರೆ ಲೀಗ್ಗಳಲ್ಲೂ ರೊಮ್ಯಾರಿಯೋ ಶೆಫರ್ಡ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅದ್ಭುತ ಫಾರ್ಮ್ನಲ್ಲಿರೋ ಶೆಫರ್ಡ್ ನೆಕ್ಸ್ಟ್ ಐಪಿಎಲ್ನಲ್ಲೂ ಆರ್ಸಿಬಿಗೆ ಬಿಗ್ ವೆಪೆನ್ ಆಗೋದು ಪಕ್ಕಾ ಇದೆ.
ಇನ್ನು ಇವ್ರಿಷ್ಟೇ ಅಲ್ಲದೆ ಜೇಕಬ್ ಬೆಥೆಲ್ರನ್ನ ಎಮರ್ಜಿಂಗ್ ಪ್ಲೇಯರ್ ಆಗಿ ಮಿಡಲ್ ಆರ್ಡರ್ನಲ್ಲಿ ಬಳಸಿಕೊಳ್ಬೋದು. ಹಾಗೇ ಅನುಭವಿ ಕೃನಾಲ್ ಪಾಂಡ್ಯ ಕೂಡ ಕ್ರೂಶಿಯಲ್ ಟೈಮ್ಗಳಲ್ಲಿ ಅದ್ಭುತ ಪ್ರದರ್ಶನ ನಿಡೋ ಸಾಮರ್ಥ್ಯ ಇದೆ. ಹೀಗಾಗಿಯೇ ಅಟ್ ಪ್ರಸೆಂಟ್ ಅಂದ್ರೆ ಮಿನಿ ಆಕ್ಷನ್ಗೂ ಮುನ್ನ ಆರ್ಸಿಬಿ ಟೀಮ್ನಲ್ಲಿ ಬೆಸ್ಟ್ ಫಿನಿಶರ್ಸ್ ಕಾಣ್ತಿದ್ದಾರೆ. ರವಿಚಚಂದ್ರನ್ ಅಶ್ವಿನ್ ಕೂಡ ಇದನ್ನೇ ಹೇಳಿದ್ದಾರೆ.

ನೋಡಿರಿ

