4 ಓವರ್.. 14 ಡಾಟ್ಸ್.. 4 ವಿಕೆಟ್.. ಹಳಿ ತಪ್ಪಿದ್ದ RCB ಗೆಲ್ಲಿಸಿದ್ದೇ JOSH – ಗೇಮ್ ಚೇಂಜರ್ ಹೇಜಲ್ ವುಡ್

4 ಓವರ್.. 14 ಡಾಟ್ಸ್.. 4 ವಿಕೆಟ್.. ಹಳಿ ತಪ್ಪಿದ್ದ RCB ಗೆಲ್ಲಿಸಿದ್ದೇ JOSH – ಗೇಮ್ ಚೇಂಜರ್ ಹೇಜಲ್ ವುಡ್

ಫೈನಲಿ ಬೆಂಗಳೂರಿನಲ್ಲಿ ಆರ್​ಸಿಬಿ ಗೆಲುವಿನ ಖಾತೆ ಓಪನ್ ಮಾಡಿದೆ. ಮೂರು ಮ್ಯಾಚ್ ಸೋತಿದ್ದ ಬೆಂಗಳೂರು ಬಾಯ್ಸ್ ಈಗ ನಾಲ್ಕನೇ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ. ಈ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲೂ ಮತ್ತೆ ಮೂರನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ಇವತ್ತು ಬೆಂಗಳೂರಿನ ಗೆಲುವನ್ನ ಕನ್ನಡಿಗರೆಲ್ಲಾ ಸೆಲೆಬ್ರೇಟ್ ಮಾಡ್ತಾ ಇದ್ದಾರೆ ಅಂದ್ರೆ ಅದಕ್ಕೆ ಮೇನ್ ರೀಸನ್ ಜೋಶ್ ಹೇಜಲ್ ವುಡ್.

ಇದನ್ನೂ ಓದಿ: ಸದ್ದಿಲ್ಲದೇ ಟಾಲಿವುಡ್‌ಗೆ ಕಾಲಿಟ್ಟ ಕಿಚ್ಚನ ಪುತ್ರಿ! – ಮುಂದಿನ ವಾರವೇ ಸಿನಿಮಾ ರಿಲೀಸ್‌

ಬೇರೆ ಬೇರೆ ಪಿಚ್​ಗಳಲ್ಲೆಲ್ಲಾ ಗೆದ್ದು ಬರ್ತಿದ್ದ ರಾಯಲ್ ಚಾಲೆಂಜರ್ಸ್ ತಂಡ ತವರು ಮೈದಾನದಲ್ಲಿ ಮಾತ್ರ ಸೋಲುತ್ತಿದ್ದುದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಹರ್ಟ್ ಆಗುವಂತೆ ಮಾಡ್ತಿತ್ತು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ 3 ಸೋಲುಗಳ ಬಳಿಕ ರಜತ್ ಪಾಟೀದಾರ್ ಬಳಗ ಗೆಲುವು ಕಂಡಿದೆಕೊನೇ ಓವರ್​ವರೆಗೂ ನಡೆದ ರೋಚಕ ಪಂದ್ಯದಲ್ಲಿ 11 ರನ್ ಗಳ ಗೆಲುವು ಸಾಧಿಸಿದೆ. ಜೊತೆಗೆ ಅಂಕಪಟ್ಟಿಯಲ್ಲೂ ಮುಂಬೈ ಇಂಡಿಯನ್ಸ್ ಅನ್ನು ಕೆಳಕ್ಕೆ ತಳ್ಳಿ ಮತ್ತೆ 3ನೇ ಸ್ಥಾನಕ್ಕೇರಿದೆ.

ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋತ ಆರ್ ಸಿಬಿ!

ಒನ್ಸ್ ಅಗೇನ್ ನಾಲ್ಕನೇ ಪಂದ್ಯದಲ್ಲೂ ಟಾಸ್ ಸೋತ ಆರ್ ಸಿಬಿ ಫಸ್ಟ್ ಬ್ಯಾಟಿಂಗ್ ಮಾಡ್ತು. ಈ ವೇಳೆ 205 ರನ್ ಗಳನ್ನ ಕಲೆ ಹಾಕಿದ್ರು. ಕಿಂಗ್ ವಿರಾಟ್ ಮತ್ತು ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿದ್ರು. ಸೋ  206 ರನ್ ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಸ್ಫೋಟಕ ಓಪನಿಂಗ್ ಪಡ್ಕೊಂಡಿತ್ತು. ಒಂದ್ಕಡೆ ಯಶಸ್ವಿ ಜೈಸ್ವಾಲ್ ಮತ್ತೊಂದ್ಕಡೆ ವೈಭವ್ ಸೂರ್ಯವಂಶಿ ಅಬ್ಬರಿಸ್ತಾ ಇದ್ರು. ಆರಂಭದಿಂದ್ಲೂ ಗೆಲುವು ಆರ್ ಆರ್ ಕಡೆಗೇ ಇತ್ತು. ಅದ್ರಲ್ಲೂ ಭುಮನೇಶ್ವರ್ ಕುಮಾರ್ 18ನೇ ಓವರ್​ನಲ್ಲಿ 22 ರನ್ ಬಿಟ್ಟುಕೊಟ್ರೋ ಇಡೀ ಮ್ಯಾಚ್ ರಾಜಸ್ತಾನ ಕಡೆ ಸೇರಿತ್ತು. ಬಟ್ ಅಲ್ಲಿ ಮ್ಯಾಜಿಕ್ ಮಾಡಿದ್ದೇ ಹೇಜಲ್ ವುಡ್.

19ನೇ ಓವರ್.. 6 ಬಾಲ್.. 1ರನ್.. 2 ವಿಕೆಟ್!

17ನೇ ಓವರ್​ವರೆಗೂ ಮ್ಯಾಚ್ ಇಬ್ಬರ ಕಡೆಗೂ ಫಿಫ್ಟಿ ಫಿಫ್ಟಿ ಇತ್ತು. ಆದ್ರೆ 18 ನೇ ಓವರ್‌ ಎಸೆದ ಭುವನೇಶ್ವರ ಕುಮಾರ್ ಅವರ ಓವರ್‌ನಲ್ಲಿ ಜುರೆಲ್ 22 ರನ್ ಗಳಿಸುವ ಮೂಲಕ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ಮರಳಿ ತಂದರು. ಆದರೆ ನೆಕ್ಸ್​ಟ್​ ಓವರ್​ನಲ್ಲೇ ಬಾಲ್ ಕೈಗೆ ಹಿಡಿದ ಜೋಶ್ ಹೇಜಲ್​ವುಡ್ ರಿಯಲ್ ಗೇಮ್ ಚೇಂಜರ್ ಆದ್ರು.  ಆಸ್ಟ್ರೇಲಿಯಾದ ಅನುಭವಿ ವೇಗಿ ಹೇಜಲ್​ವುಡ್ ಮೊದಲು ಜುರೆಲ್ ಮತ್ತು ನಂತರ ಜೋಫ್ರಾ ಆರ್ಚರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಕೇವಲ 1 ರನ್ ನೀಡಿದರು. ಹೀಗಾಗಿ 20 ನೇ ಓವರ್‌ನಲ್ಲಿ ರಾಜಸ್ಥಾನ್ ಗೆಲುವಿಗೆ 17 ರನ್‌ ಬೇಕಾಗಿದ್ದವು. ಈ ವೇಳೆ ದಾಳಿಗಿಳಿದ ಯಶ್ ದಯಾಳ್ ರಾಜಸ್ಥಾನವನ್ನು 194 ಕ್ಕೆ ಸೀಮಿತಗೊಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

4 ಓವರ್..14 ಡಾಟ್ ಬಾಲ್ಸ್.. 4 ವಿಕೆಟ್ ಕಿತ್ತ ಜೋಶ್!

ಆರ್ ಆರ್ ವಿರುದ್ಧ ಜೋಶ್ ಹೇಜಲ್ ವುಡ್ 4 ಓವರ್​ಗಳನ್ನ ಬೌಲ್ ಮಾಡಿ 14 ಡಾಟ್ ಬಾಲ್ಸ್ ಹಾಕಿದ್ರು. ಹಾಗೇ 33 ರನ್ ಗಳನ್ನ ನೀಡಿ ನಾಲ್ಕು ಪ್ರಮುಖ ವಿಕೆಟ್ ಗಳನ್ನ ಬೇಟೆಯಾಡಿದ್ರು. 19 ಎಸೆತಗಳನ್ನ 49 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ದ ಜೈಸ್ವಾಲ್​ಗೆ ಫಸ್ಟ್ ಪೆವಿಲಿಯನ್ ಸೇರಿಸಿದ್ರು. ಆ ಬಳಿಕ ಮಿಡಲ್ ಓವರ್​ಗಳಲ್ಲಿ ಅದ್ಭುತ ಆಟವಾಡುತ್ತಾ 47 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸ್ತಿದ್ದ ಧ್ರುವ್ ಜುರೇಲ್​ ಔಟ್ ಮಾಡಿದ್ರು. ಇನ್ನು ಫಿನಿಶರ್ ರೋಲ್ ಪ್ಲೇ ಮಾಡುವ ಪವರ್ ಹಿಟ್ಟರ್ ಹೆಟ್ಮೆಯರ್​ಗೂ ಪೆವಿಲಿಯನ್​ಗೆ ಅಟ್ಟಿದ್ರು. ಹಾಗೇ ಜೋಫ್ರಾ ಆರ್ಡರ್ ವಿಕೆಟ್ ಬೇಟೆಯಾಡಿ ರಾಜಸ್ಥಾನ ಕೈಸೇರಿದ್ದ ಗೆಲುವನ್ನ ಮರಳಿ ಆರ್​ಸಿಬಿಗೆ ತಂದುಕೊಟ್ರು. ಈ ಮೂಲಕ ಬೆಂಗಳೂರಲ್ಲಿ ಮೊದಲ ಗೆಲುವಿಗೆ ಕಾರಣರಾದ್ರು. ಜೋಶ್ ಹೇಜಲ್​ವುಡ್ ರ ಇದೇ ಪರ್ಫಾಮೆನ್ಸ್​ಗೆ ಈಗ ಆರ್ ಸಿಬಿ ಫ್ಯಾನ್ಸ್ ಎಲ್ರೂ ಹೌ ಈಸ್ ದಿ ಜೋಶ್ ಅಂತಿದ್ದಾರೆ.

Shwetha M