ಕಾಲೆಳೆದ ಕಮಿನ್ಸ್ ಗೆ ಪಾಠ ಕಲಿಸಿದ ಕೊಹ್ಲಿ – ಕಾವ್ಯಾ ಟ್ರೋಲ್

ಕಾಲೆಳೆದ ಕಮಿನ್ಸ್ ಗೆ ಪಾಠ ಕಲಿಸಿದ ಕೊಹ್ಲಿ – ಕಾವ್ಯಾ ಟ್ರೋಲ್

ಫೈನಲಿ ಆರ್​ಸಿಬಿ ಫ್ಯಾನ್ಸ್ ಹ್ಯಾಪಿಯಾಗಿದ್ದಾರೆ. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದೇವೆ ಎನ್ನುತ್ತಿದ್ದ ಹೈದ್ರಾಬಾದ್ ಆಟಗಾರರನ್ನ ಅವರದ್ದೇ ನೆಲದಲ್ಲಿ ಬೆಂಗಳೂರು ಬೌಲರ್ಸ್ ಬಗ್ಗು ಬಡಿದಿದ್ದಾರೆ. ಅದ್ರಲ್ಲೂ ಆರ್​ಸಿಬಿ ವಿರುದ್ಧದ ಕಳೆದ ಮ್ಯಾಚ್​ನಲ್ಲಿ ಐತಿಹಾಸಿಕ ರನ್ ಹೊಡೆದಾಗ ನಾನೂ ಬಾಟರ್ ಆಗ್ಬೇಕಿತ್ತು ಎಂದು ಕಿಚಾಯಿಸಿದ್ದ ಪ್ಯಾಟ್ ಕಮಿನ್ಸ್​ಗೆ ಸೋಲಿನ ಆಘಾತ ನೀಡಿ ಸೇಡು ತೀರಿಸಿಕೊಂಡಿದ್ದಾರೆ. ಮತ್ತೊಂದೆಡೆ ಗ್ರೌಂಡ್​ನಲ್ಲಿ ಇಷ್ಟು ದಿನ ಸಿಟ್ಟು, ಬೇಸರ, ಹತಾಶೆಯಿಂದಲೇ ಕಾಣಿಸಿಕೊಳ್ತಿದ್ದ ವಿರಾಟ್ ಕೊಹ್ಲಿ ಮನ ಬಿಚ್ಚಿ ನಕ್ಕಿದ್ದಾರೆ. ಎಸ್​ಆರ್​ಹೆಚ್ ಮತ್ತು ಆರ್​ಸಿಬಿ ನಡುವಿನ ಗುರುವಾರದ ಪಂದ್ಯದ ಬಗೆಗಿನ ರೋಚಕ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಗುರುವಾರದ ಮ್ಯಾಚ್​​ ಭಾರೀ  ಕುತೂಹಲ ಮೂಡಿಸಿತ್ತು. ಟೂರ್ನಿಯಲ್ಲಿ 3 ಬಾರಿ 250 ಪ್ಲಸ್ ರನ್ ಹೊಡೆದಿದ್ದ ಹೈದ್ರಾಬಾದ್ ಆಟಗಾರರು ನಾವು ಆರ್​ಸಿಬಿ ವಿರುದ್ಧ 300 ರನ್ ಹೊಡೆಯುತ್ತೇವೆ ಅಂತಾ ಬಿಲ್ಡಪ್ ಕೊಟ್ಟಿದ್ರು. ಅದ್ರಲ್ಲೂ ಕಳೆದ ಬಾರಿ ಆರ್​ಸಿಬಿ ವಿರುದ್ಧ 287 ರನ್ ಸಿಡಿಸಿ ದಾಖಲೆ ಬರೆದಿದ್ದ ಹೈದ್ರಾಬಾದ್ ಈ ಸಲ ಅದನ್ನೂ ಬ್ರೇಕ್ ಮಾಡ್ತೇವೆ ಅನ್ನೋ ಓವರ್ ಕಾನ್ಫಿಡೆನ್ಸ್​​ನಲ್ಲಿದ್ರು. ಆದ್ರೆ ಪ್ರತಿಷ್ಠೆಯ ಕದನದಲ್ಲಿ ಆರ್​ಸಿಬಿ ಪ್ಲೇಯರ್ಸ್ ಬಲಿಷ್ಠ ಹೈದ್ರಾಬಾದ್ ಆಟಗಾರರ ಸದ್ದಡಗಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ 20 ಓವರ್‌ಗಳಲ್ಲಿ 206 ರನ್ ಗಳಿಸಿತು. ಆರ್​ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಜೋಡಿ ಒಳ್ಳೆಯ ಇನ್ನಿಂಗ್ ಶುರು ಮಾಡಿದ್ರು. ಆದ್ರೆ  ಫಾಫ್ 12 ಬಾಲ್​ಗಳಲ್ಲಿ 25 ರನ್ ಗಳಿಸಿದ್ದಾಗಲೇ ನಟರಾಜನ್​ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಬಂದ ವಿಲ್ ಜಾಕ್ಸ್ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲೇ ಇಲ್ಲ. 9 ಬಾಲ್​ಗೆ 6 ರನ್ ಗಳಿಸಿದ್ದಾಗಲೇ ಮಾರ್ಕಂಡೆ ಕ್ಲೀನ್ ಬೌಲ್ಡ್ ಮಾಡಿದ್ರು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಆರ್​ಸಿಬಿಗೆ ರಜತ್ ಪಟೀದಾರ್ ಆಸರೆಯಾದ್ರು. ಬಳಿಕ ಕೊಹ್ಲಿ ಹಾಗೂ ಪಟೀದಾರ್ ಅರ್ಧ ಶತಕದ ಮೂಲಕ ತಂಡಕ್ಕೆ ನೆರವಾದ್ರು. ಕೊಹ್ಲಿ 43 ಎಸೆತಗಳಲ್ಲಿ 51 ರನ್ ಗಳಿಸಿದ್ರೆ ಪಟೀದಾರ್ ಕೇವಲ 20 ಎಸೆತಗಳಲ್ಲಿ ಭರ್ಜರಿ 5 ಸಿಕ್ಸ್ ಮತ್ತು 2 ಫೋರ್​ಗಳ ಮೂಲಕ 50 ರನ್ ಸಿಡಿಸಿದ್ರು. ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ 37 ರನ್ ಬಾರಿಸಿದ್ರೆ ಲೊಮ್ರೊರ್ 7, ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ ಸಿಂಗ್ 12 ರನ್ ಗಳಿಸಿದ್ರು. ಒಟ್ಟಾರೆ 7 ವಿಕೆಟ್ ನಷ್ಟಕ್ಕೆ 206 ರನ್​ಗಳನ್ನ ಕಲೆ ಹಾಕಿದ್ರು.  206 ರನ್ ಸ್ಪರ್ಧಾತ್ಮಕ ಸ್ಕೋರ್ ಆಗಿದ್ರೂ ಹೈದ್ರಾಬಾದ್​ನಂಥ ತಂಡಕ್ಕೆ ಆರ್​ಸಿಬಿ ಕೊಟ್ಟಿರೋ 207 ರನ್​ಗಳ ಟಾರ್ಗೆಟ್ ಅದ್ಯಾವ ಲೆಕ್ಕ.. ಟ್ರಾವಿಸ್ ಹೆಡ್  ಮತ್ತೆ ಅಭಿಷೇಕ್ ಇಬ್ರೇ 15 ಓವರ್​ಗಳಲ್ಲಿ ಅಷ್ಟೂ ರನ್ ಹೊಡೀತಾರೆ ಅಂತಾನೇ ಎಲ್ರೂ ಅನ್ಕೊಂಡಿದ್ರು. ಆದ್ರೆ ಫಾರ್ ದಿ ಫಸ್ಟ್ ಟೈಂ ಆರ್​ಸಿಬಿ ಬೌಲರ್ಸ್ ಹೈದ್ರಾಬಾದಿಗಳನ್ನ ಬೆಂಡೆತ್ತಿದ್ರು.

ಸ್ಫೋಟಕ ಆರಂಭಿಕ ಬ್ಯಾಟ್ಸ್​​ಮನ್ ಟ್ರಾವಿಸ್ ಹೆಡ್ ಜಸ್ಟ್ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ವಿಲ್ ಜಾಕ್ಸ್ ಬೌಲಿಂಗ್​ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದ್ರು. ಬಳಿಕ ಬಂದ ಏಡೆನ್ ಮಾರ್ಕ್ರಾಮ್ ಕೂಡ 7 ರನ್‌ಗಳಿಸಿ ಸ್ವಪ್ನಿಲ್ ಸಿಂಗ್ ಎಲ್​ಬಿಡಬ್ಲ್ಯೂ ದಾಳಿಗೆ ಔಟಾದ್ರು. ಅಭಿಷೇಕ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ತಲಾ 31 ಮತ್ತು ಶಹಬಾಜ್ ಅಹ್ಮದ್ ಔಟಾಗದೆ 40 ರನ್ ಗಳಿಸುವ ಮೂಲಕ ಗೆಲುವಿಗಾಗಿ ಹೋರಾಟ ನೀಡಿದರು.  ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್​ 7 ರನ್, ಅಬ್ದುಲ್​ ಸಮೀದ್ 10 ರನ್, ಭುವನೇಶ್ವರ್​ ಕುಮಾರ್ 13 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ ಆರ್​ಸಿಬಿ ಬೌಲರ್​ಗಳ ದಾಳಿಗೆ ತುತ್ತಾದ ಎಸ್​ಆರ್​ಹೆಚ್​ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟದೊಂದಿದೆ 171 ರನ್​ ಕಲೆ ಹಾಕಿ ಪಂದ್ಯವನ್ನ ಕೈ ಚೆಲ್ಲಿತು.    ಬೆಂಗಳೂರು ಪಂದ್ಯವನ್ನು 35 ರನ್‌ಗಳಿಂದ ಆರ್​ಸಿಬಿ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಹಿಂದಿನ ಪಂದ್ಯದ ಸೋಲಿಗೆ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.  ಆರ್​​ಸಿಬಿ ಪರ ವಿಲ್​ ಜ್ಯಾಕ್ಸ್​ 1 ವಿಕೆಟ್, ಯಶ್ ದಯಾಳ್ 1 ವಿಕೆಟ್, ಸ್ವಪ್ನಿಲ್​ ಸಿಂಗ್​ 2 ವಿಕೆಟ್, ಕರ್ಣ್ ಶರ್ಮಾ 2 ವಿಕೆಟ್, ಕ್ಯಾಮರೂನ್​ ಗ್ರೀನ್​ 2 ವಿಕೆಟ್ ಪಡೆಯುವ ಮೂಲಕ ಭರ್ಜರಿ​​ ಕಂಬ್ಯಾಕ್​ ಮಾಡಿದರು.

ಅಸಲಿಗೆ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲುವಿಗೆ ಬೌಲರ್​ಗಳೇ ಮೇನ್ ರೀಸನ್. ಇಷ್ಟು ದಿನ ಆರ್​​ಸಿಬಿ ಬೌಲಿಂಗ್​ ಕಳಪೆ ಎಂದೇ ಎಲ್ಲರೂ ದೂರುತ್ತಿದ್ದರು. ಆದರೆ ನಿನ್ನೆ ಅದೇ ಬೌಲಿಂಗ್ ಯುನಿಟ್​ ತಂಡಕ್ಕೆ ಗೆಲುವು ತಂದುಕೊಟ್ಟಿದೆ. ಅದರಲ್ಲಿಯೂ ಪಂದ್ಯಕ್ಕೆ ರಿಯಲ್​ ಮ್ಯಾಚ್​​ ಟರ್ನಿಂಗ್​ ಪಾಯಿಂಟ್ ಎಂದರೆ ಅದು ಮೊದಲ ಓವರ್. SRH ತಂಡದ ಆಕ್ರಮಣಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಅವರು ವಿಲ್​ ಜ್ಯಾಕ್ಸ್​ ಓವರ್​ ನಲ್ಲಿ 1 ರನ್​ ಗಳಿಸಿ ಔಟ್ ಆದರು. ಇದು ಎಸ್​​ಆರ್​ಹೆಚ್​ಗೆ ಬಿದ್ದ ಬಹುದೊಡ್ಡ ಹೊಡೆತ.  ಅಲ್ಲದೇ ಮತ್ತೊಬ್ಬ ಆಕ್ರಮಣಕಾರಿ ಬ್ಯಾಟರ್​ ಆಗಿದ್ದ ಅಭಿಷೇಕ್​ ಶರ್ಮಾ ಅವರನ್ನು ಯಶ್​ ದಯಾಳ್​ 3.4ನೇ ಓವರ್​ಗೆ ಪೆವೆಲಿಯನ್​ ಸೇರಿಸಿದರು. ಅದ್ರಲ್ಲೂ ಹೈದರಾಬಾದ್​ ತಂಡದ ಟಾಪ್​ 4 ಡೇಂಜರಸ್​​ ಬ್ಯಾಟ್ಸ್​​​ಮನ್​ ಗಳನ್ನು ಪವರ್​ ಪ್ಲೇ ಅಲ್ಲಿಯೇ ಔಟ್ ಮಾಡುವ ಮೂಲಕ ಪಂದ್ಯವನ್ನ ಆರ್​ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ನಿನ್ನೆಯ ಮ್ಯಾಚ್​ನಲ್ಲಿ ಸ್ವಪ್ನಿಲ್ ಸಿಂಗ್ ಬಗ್ಗೆ ಹೇಳಲೇಬೇಕು. 4.2ನೇ ಓವರ್​ಗೆ ಮಾರ್ಕಮ್​ ಅವರನ್ನು ಹಾಗೂ ಹೆನ್ರಿಚ್​​ ಕ್ಲಾಸಿನ್​ ಅವರನ್ನು 4.6 ಓವರ್​ ನಲ್ಲಿ ಸ್ವಪ್ನಿಲ್​ ಸಿಂಗ್​ ಔಟ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.

ಹೈದ್ರಾಬಾದ್ ವಿರುದ್ಧದ ಗೆಲುವಿನ ಮೂಲಕ ಆರ್​​ಸಿಬಿ ಪ್ಲೇಆಫ್​ ಆಸೆ ಇನ್ನೂ ಜೀವಂತವಾಗಿ ಉಳಿದಿದೆ. ಆದರೆ ಈ ಆಸೆ ಜೀವಂತವಾಗಿರಬೇಕಾದರೆ ಆರ್​​ಸಿಬಿ ತಂಡಕ್ಕೆ ಕಠಿಣ ಸವಾಲುಗಳೂ ಇವೆ. ಈಗಾಗ್ಲೇ ನಡೆದಿರೋ 9 ಪಂದ್ಯಗಳ ಪೈಕಿ ಆರ್​ಸಿಬಿ 7 ಪಂದ್ಯ ಸೋತು 2ರಲ್ಲಿ ಮಾತ್ರ ಗೆದ್ದಿದೆ. ಮುಂದಿನ 5 ಪಂದ್ಯಗಳನ್ನು ಆರ್​​ಸಿಬಿ ಗೆಲ್ಲಲೇಬೇಕು. ಅದೂ ಕೂಡ ಉತ್ತಮ ರನ್​ರೇಟ್​​ ನಲ್ಲಿಯೂ ಗೆಲ್ಲಬೇಕಿದೆ. ಆಗ ಮಾತ್ರ ಪ್ಲೇಆಫ್​ ತಲುಪಬಹುದು. ಇದರ ಜೊತೆಗೆ ಬೇರೆ ತಂಡಗಳ ಗೆಲುವು ಸೋಲು ಪ್ರಮುಖವಾಗಿರುತ್ತದೆ. ಅಂಕಪಟ್ಟಿಯಲ್ಲಿ ಟಾಪ್​ 3 ತಂಡಗಳಾದ ರಾಜಸ್ಥಾನ್​, ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು ಕ್ರಮವಾಗಿ 22 ಅಂಕ, 20 ಅಂಕ ಮತ್ತು 20 ಅಂಕದೊಂದಿಗೆ ಪ್ಲೇಆಫ್​ ಪ್ರವೇಶಿಸಬೇಕು. ಅಂದರೆ ರಾಜಸ್ಥಾನ್​ ರಾಯಲ್ಸ್​ 22 ಅಂಕ ಸಂಪಾದಿಸಬೇಕು. ಅಂದರೆ ಮುಂದಿನ ಎಲ್ಲಾ ಪಂದ್ಯ ರಾಜಸ್ಥಾನ್​ ಗೆಲ್ಲಬೇಕು. ಹೈದರಾಬಾದ್ ಕೂಡ ಮುಂದಿನ ಎಲ್ಲಾ ಪಂದ್ಯ ಗೆದ್ದು 20 ಅಂಕ ಪಡೆಯಬೇಕು. ಕೋಲ್ಕತ್ತಾ ಸಹ 20 ಅಂಕ ಗಳಿಸಬೇಕು. ಈ ರೀತಿ ಆದ್ರೆ ಮಾತ್ರ ಉಳಿದ ತಂಡಗಳು 14 ಅಂಕ ಗಳಿಸುತ್ತವೆ. ಆರ್​​ಸಿಬಿ ಸಹ ಮುಂದಿನ ಎಲ್ಲಾ ಪಂದ್ಯ ಗೆದ್ದರೆ 14 ಅಂಕ ಇರುತ್ತದೆ. ಅದ್ರಲ್ಲೂ ಮುಖ್ಯವಾಗಿ ಲಕ್ನೋ ಸೂಪರ್​ ಜೈಂಟ್ಸ್​ ತನ್ನ ಮುಂದಿನ 6 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಗೆದ್ದು ಉಳಿದ 4 ಪಂದ್ಯ ಸೋಲಬೇಕು. ಚೆನ್ನೈ ಸೂಪರ್​ ಕಿಂಗ್ಸ್ ಸಹ ತನ್ನ ಮುಂದಿನ ಪಂದ್ಯಗಳಲ್ಲಿ ಸೋತರೆ, ಬೆಂಗಳೂರು ತಂಡ ಗೆದ್ದು ರನ್​ರೇಟ್ ಸುಧಾರಿಸಿಕೊಂಡರೆ 14 ಅಂಕಗಳ ಜೊತೆ ರನ್​ ರೇಟ್ ಆಧಾರದ ಮೇಲೆ ನೇರವಾಗಿ 4ನೇ ಸ್ಥಾನದಿಂದ ಪ್ಲೇಆಫ್​ ಪ್ರವೇಶಿಸುತ್ತದೆ. ಆದ್ರೆ ಇದು ಸಾಧ್ಯವಾಗಬೇಕಾದ್ರೆ ಪವಾಡ ನಡೀಬೇಕು ಅಷ್ಟೇ.. ಇನ್ನು ನಿನ್ನೆಯ ಪಂದ್ಯದಲ್ಲಿ ಮತ್ತೊಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ನಡೆದವು. ಬಲಿಷ್ಠ ತಂಡವಾಗಿದ್ದ ಹೈದರಾಬಾದ್ ತಂಡದ ಒಂದೊಂದೇ ವಿಕೆಟ್​ಗಳು ಬೀಳುತ್ತಾ ಹೋದಂತೆ ಇಡೀ ಮೈದಾನ ಸೈಲೆಂಟ್ ಆಗಿತ್ತು. ವಿರಾಟ್ ಕೊಹ್ಲಿ ಮುಖದಲ್ಲಿ ನಗು ರಾರಾಜಿಸುತ್ತಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೆಡ್, ಕ್ಲಾಸೆನ್​ರಂಥ ಸ್ಟಾರ್ ಆಟಗಾರರು ಔಟ್ ಆಗುತ್ತಿದ್ದಂತೆ ಎಸ್​ಆರ್​ಎಚ್​ನ ಸಿಇಒ ಕಾವ್ಯಾ ಮಾರನ್ ಮುಖ ಸಪ್ಪೆಯಾಗಿತ್ತು. ಈ ಫೋಟೋಗಳು ಸಹ ಸಾಕಷ್ಟು ವೈರಲ್ ಆಗಿವೆ. ಒಟ್ನಲ್ಲಿ ಕಳೆದ ಮ್ಯಾಚ್​ನಲ್ಲಿ ಬೆಂಗಳೂರಲ್ಲಿ ಸೋಲಿನ ಆಘಾತ ನೀಡಿದ್ದ ಹೈದ್ರಾಬಾದ್​ಗೆ ನಿನ್ನೆಯ ಪಂದ್ಯದಲ್ಲಿ ಗೆಲುವಿನ ಮೂಲಕ ಆರ್​ಸಿಬಿ ಸೇಡು ತೀರಿಸಿಕೊಂಡಿದೆ.

Shwetha M

Leave a Reply

Your email address will not be published. Required fields are marked *