ಪಾಟಿದಾರ್ ಗೇಮ್ ಪ್ಲ್ಯಾನ್ ಸಕ್ಸಸ್ – ಕೈ ಜಾರಿದ್ದ ಮ್ಯಾಚ್ ಟರ್ನ್ ಆಗಿದ್ದೆಲ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಬಗ್ಗು ಬಡಿದಿದೆ. ಈ ಮೂಲಕ 10 ವರ್ಷಗಳಿಂದ ಗೆದ್ದೇ ಇಲ್ಲ ಎನ್ನುವ ಹಣೆಪಟ್ಟಿಯನ್ನ ಅಳಿಸಿ ಹಾಕಿದೆ. 2 ವರ್ಷಗಳ ಬಳಿಕ ಕೆಕೆಆರ್ ವಿರುದ್ಧ ವಿಕ್ಟರಿ, 17 ವರ್ಷಗಳ ಬಳಿಕ ಚೆಪಾಕ್ನಲ್ಲಿ ಜಯಬೇರಿ ಬಾರಿಸಿದ್ದ ಬೆಂಗಳೂರು ಟೀಂ ತವರಿನಲ್ಲಿ ಜಿಟಿ ವಿರುದ್ಧ ಸೋಲು ಕಂಡಿದ್ರು. ಬಟ್ ನಾವು ಬೌನ್ಸ್ ಬ್ಯಾಕ್ ಮಾಡೇ ಮಾಡ್ತೀವಿ ಅಂತಾ ವಾಂಖೆಡೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ವೀ ಆರ್ ಸೂಪರ್ ಸ್ಟ್ರಾಂಗ್ ಅಂತಾ ಪ್ರೂವ್ ಮಾಡಿದ್ದಾರೆ.
ಇದನ್ನೂ ಓದಿ : ಮುಂಬೈ ವಿರುದ್ಧ RCBಗೆ ರಣರೋಚಕ ಗೆಲುವು- 10 ವರ್ಷದ ಬಳಿಕ ವಾಂಖೆಡೆ ಕೋಟೆ ಛಿದ್ರ
ವಾಂಖೆಡೆಯಲ್ಲಿ ಟಾಸ್ ಸೋತ ಆರ್ಸಿಬಿ ಟೀಂ ಫಸ್ಟ್ ಬ್ಯಾಟಿಂಗ್ಗೆ ಇಳಿಯಿತು. ಗೆಲ್ಲಲೇಬೇಕು ಅಂತಾ ಫೀಲ್ಡಿಗಿಳಿದಿದ್ದ ಆರ್ಸಿಬಿ ಬ್ಯಾಟರ್ಸ್ ಐಪಿಎಲ್ ಇತಿಹಾಸದಲ್ಲೇ ವಾಂಖೆಡೆಯಲ್ಲಿ 5ನೇ ಗರಿಷ್ಠ ರನ್ ದಾಖಲಿಸಿತ್ತು. ಫಿಲ್ ಸಾಲ್ಟ್ ಬೇಗ ಔಟ್ ಆದ್ರೂ ಕೂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟವಾಡಿದ್ರು. 37 ರನ್ ಗಳಿಸಿದ್ದ ಪಡಿಕ್ಕಲ್ ಔಟ್ ಆದ್ಮೇಲೆ ಎಂಟ್ರಿ ಕೊಟ್ಟ ರಜತ್ ಪಾಟಿದಾರ್ ಅಕ್ಷರಶಃ ಕ್ಯಾಪ್ಟನ್ ಆಟ ಆಡಿದ್ರು. ಒಂದ್ಕಡೆ ಕೊಹ್ಲಿ ಮತ್ತೊಂದ್ಕಡೆ ಪಾಟಿದಾರ್ ಮುಂಬೈ ಬೌಲರ್ಗಳ ಬೆವರಿಳಿಸಿದ್ರು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 67 ರನ್ಗಳಿಸಿದರೆ, ರಜತ್ ಕೇವಲ 32 ಎಸೆತಗಳಲ್ಲಿ 5ಬೌಂಡರಿ, 4 ಸಿಕ್ಸರ್ಗಳ ಸಹಿತ 64 ರನ್ಗಳಿಸಿದರು. ಕೊನೆಯ ಓವರ್ಗಳಲ್ಲಿ ಸ್ಫೋಟಕ ಆಟವಾಡಿದ ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳೊಂದಿಗೆ ಅಜೇಯ 40 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು. ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳ್ಕೊಂಡು 221 ರನ್ಗಳಿಸಿತ್ತು.
ಬಿಗ್ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಹಾಗೇ ರಯಾನ್ ರಿಕಲ್ಟನ್ ಹೊಡಿಬಡಿ ಆಟದ ಮೂಲಕವೇ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಫಾರ್ಮ್ ಕಳ್ಕೊಂಡಿದ್ದ ರೋಹಿತ್ ಈ ಪಂದ್ಯದಲ್ಲೂ ಬೇಗನೆ ವಿಕೆಟ್ ಒಪ್ಪಿಸಿದ್ರು. ರೋಹಿತ್ ಶರ್ಮಾ 17 ರನ್ ಹಾಗೂ ರಿಕಲ್ಟೆನ್ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಲ್ ಜಾಕ್ಸ್ 22 ರನ್ಗಳಿಸಿದರು. ಬ್ಯಾಟಿಂಗ್ ಪಿಚ್ನಲ್ಲಿ ರನ್ ಗಳಿಸೋಕೆ ಪರದಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 28 ರನ್ಗಳಿಸಿ ಔಟ್ ಆದರು. ಈ ವೇಳೆ ತಿಲಕ್ ವರ್ಮಾಗೆ ಜೊತೆಯಾದ ಹಾರ್ದಿಕ್ ಪಾಂಡ್ಯ ಪಂದ್ಯದ ದಿಕ್ಕನ್ನೇ ಬದಲಿಸಿದ್ರು.
12 ಓವರ್ ವೇಳೆಗೆ ಮುಂಬೈ 99ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಟೈಮಲ್ಲಿ ಮುಂಬೈಗೆ 48 ಎಸೆತಗಳಲ್ಲಿ ಗೆಲ್ಲಲು 123 ರನ್ ಬೇಕಿತ್ತು. ಈ ವೇಳೆ ಆರ್ಸಿಬಿಯೇ ಗೆಲ್ಲೋದು ಅಂತಾ ಎಲ್ರೂ ಅನ್ಕೊಳ್ತಿದ್ರು. ಬಟ್ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಬ್ಯಾಟಿಂಗ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. 13ನೇ ಓವರ್ನಲ್ಲಿ ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ತಿಲಕ್ ವರ್ಮಾ 17 ರನ್ ಚಚ್ಚಿದರೆ, 14 ಮತ್ತು 15ನೇ ಓವರ್ನಲ್ಲಿ ಹ್ಯಾಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ಬೌಲಿಂಗ್ ಹಾರ್ದಿಕ್ ಪಾಂಡ್ಯಗೆ 22 ಮತ್ತು 19 ರನ್ ಬಿಟ್ಟುಕೊಟ್ರು. ಕೇವಲ 9 ಎಸೆತಗಳಲ್ಲಿ 37 ರನ್ ಕಲೆಹಾಕಿದರು. 16ನೇ ಓವರ್ನಲ್ಲಿ ತಿಲಕ್ ವರ್ಮಾ ಭುವನೇಶ್ವರ್ ಕುಮಾರ್ಗೆ 13 ರನ್ ಸಿಡಿಸಿದರು. ಈ ಜೋಡಿ ಜಸ್ಟ್ 24 ಎಸೆತಗಳಲ್ಲಿ 71 ರನ್ ಕಲೆಯಾಕಿತು. ಇನ್ನು 17ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ಯಶ್ ದಯಾಳ್ 11 ರನ್ ಬಿಟ್ಟುಕೊಟ್ಟರು. ಕೊನೆಯ 18 ಎಸೆತಗಳಲ್ಲಿ ಮುಂಬೈಗೆ ಗೆಲುವಿಗೆ ಕೇವಲ 41 ರನ್ ಅಷ್ಟೇ ಬೇಕಾಯ್ತು. ಪಾಂಡ್ಯ ಮತ್ತು ತಿಲಕ್ ಆಡೋದನ್ನ ನೋಡಿದ್ರೆ ಗೆದ್ದೇ ಗೆಲ್ತಾರೇ ಎನ್ನುವಂತೆಯೇ ಕಾಣ್ತಿದ್ರು. ಇಂಥಾ ಟೈಮಲ್ಲಿ ಆರ್ ಸಿಬಿಗೆ ಬ್ರೇಕ್ ಥ್ರ್ಯೂ ತಂದುಕೊಟ್ಟಿದ್ದೇ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್.
ಕೊನೇ 3 ಓವರ್ಗಳಲ್ಲಿ ಭುವಿ, ಜೋಶ್ ಹಾಗೇ ಕೃನಾಲ್ಗೆ ಒಂದೊಂದು ಓವರ್ ಬೌಲ್ ಮಾಡೋಕೆ ಅವಕಾಶ ಇತ್ತು. ಇಂಥಾ ಟೈಮಲ್ಲಿ ಭುವನೇಶ್ವರ್ 18ನೇ ಓವರ್ನಲ್ಲಿ ತಿಲಕ್ರನ್ನ ಔಟ್ ಮಾಡಿ ಬಿಗ್ ಬ್ರೇಕ್ ಕೊಟ್ಟರು. ನಂತರ 12 ಎಸೆತಗಳಲ್ಲಿ ಮುಂಬೈ ಗೆಲುವಿಗೆ 28 ರನ್ಗಳ ಅಗತ್ಯವಿತ್ತು. 19ನೇ ಓವರ್ನಲ್ಲಿ ಹ್ಯಾಜಲ್ವುಡ್ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯರನ್ನ ಪೆವಿಲಿಯನ್ಗಟ್ಟಿದ್ರು. 9 ರನ್ ಬಿಟ್ಟುಕೊಟ್ಟರು. ಕೊನೆ ಓವರ್ನಲ್ಲಿ ಮುಂಬೈಗೆ 19 ರನ್ಗಳ ಅಗತ್ಯವಿತ್ತು. ತಂಡದಲ್ಲಿದ್ದ ಏಕೈಕ ಬೌಲರ್ ಕೃನಾಲ್ ಪಾಂಡ್ಯ ಲಾಸ್ಟ್ ಓವರ್ ಬೌಲಿಂಗ್ಗೆ ಇಳಿದ್ರು. ಬಟ್ ಫಸ್ಟ್ ಬಾಲ್, ಸೆಕೆಂಡ್ ಬಾಲ್ನಲ್ಲಿ 2 ವಿಕೆಟ್ ಕಿತ್ರು. ಅದ್ರಲ್ಲೂ ಸಾಲ್ಟ್ ಮತ್ತು ಟಿಮ್ ಡೇವಿಡ್ ಜೊತೆಯಾಗಿ ಹಿಡಿದ ಕ್ಯಾಚ್ ಅಂತೂ ಅಲ್ಟಿಮೇಟ್. ಹೀಗೇ ಲಾಸ್ಟ್ ಓವರ್ನಲ್ಲಿ 6 ರನ್ ನೀಡಿ 3 ವಿಕೆಟ್ ಪಡೆದ ಕೃನಾಲ್ 12 ರನ್ಗಳಿಂದ ಬೆಂಗಳೂರು ತಂಡವನ್ನ ಗೆಲ್ಲಿಸಿಕೊಟ್ರು. ಆರ್ಸಿಬಿರ ಕೃನಾಲ್ ಪಾಂಡ್ಯ 45ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್ವುಡ್ 37ಕ್ಕೆ2, ಯಶ್ ದಯಾಳ್ 46ಕ್ಕೆ 2, ಭುವನೇಶ್ವರ್ ಕುಮಾರ್ 48ಕ್ಕೆ1 ವಿಕೆಟ್ ಪಡೆದರು.

ನೋಡಿರಿ

