ಟಾಪ್ ​ನಲ್ಲಿ RCB.. ಬಾಟಮ್ ನಲ್ಲಿ MI – ರಾಯ್ಪುರ್ ಮೈದಾನವೇ ಸವಾಲಾಗುತ್ತಾ?
SUPER SUNDAY ಸಕ್ಸಸ್ ಯಾರಿಗೆ?

ಟಾಪ್ ​ನಲ್ಲಿ RCB.. ಬಾಟಮ್ ನಲ್ಲಿ MI – ರಾಯ್ಪುರ್ ಮೈದಾನವೇ ಸವಾಲಾಗುತ್ತಾ?SUPER SUNDAY ಸಕ್ಸಸ್ ಯಾರಿಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್​ ಮ್ಯಾಚ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ರಿವೇಂಜ್ ರೈವಲ್ರಿಯಲ್ಲಿ ಗೆದ್ದು ಬೀಗೋಕೆ ಎರಡೂ ತಂಡಗಳೂ ಕಾಯ್ತಿವೆ. ಇಬ್ಬರೂ ಕೂಡ ಲಕ್ನೋ ವಿರುದ್ಧದ ಫೈಟ್ ಮುಗಿಸಿಯೇ ಮುಖಾಮುಖಿ ಆಗ್ತಿದ್ದಾರೆ.

ಇದನ್ನೂ ಓದಿ : 4 ದಿನ ಬಂದ್ ಆಗಿದ್ದ ಪೀಣ್ಯ ಫ್ಲೈಓವರ್ ಓಪನ್ – ವಾಹನ ಸಂಚಾರ ಆರಂಭ

ಆರ್​ಸಿಬಿ & ಎಂಐ ಅಂದಾಗ್ಲೇ ಐಪಿಎಲ್​ನಲ್ಲಿ ಮೋಸ್ಟ್ ಫ್ಯಾನ್ ಬೇಸ್ಡ್ ಟೀಮ್ಸ್.. ರೆಡ್ ಆರ್ಮಿಯಲ್ಲಿ ಕಿಂಗ್ ವಿರಾಟ್ ಕೊಹ್ಲಿ ಇದ್ರೆ ಅತ್ತ ಬ್ಲ್ಯೂ ಆರ್ಮಿಯಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಇದ್ದಾರೆ. ವೀ ಆರ್ ಬ್ರದರ್ಸ್ ಫ್ರಮ್ ಅನದರ್ ಮದರ್ಸ್ ಅನ್ನೋ ಈ ಜೋಡಿ ಐಪಿಎಲ್​ನಲ್ಲಿ ಮತ್ತೆ ಮುಖಾಮುಖಿಗೆ ರೆಡಿಯಾಗಿದ್ದಾರೆ. ಸೋ ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಮೋಸ್ಟ್ ಇಂಪಾರ್ಟೆಂಟ್.. ಟಾಪ್ 1ಗೇರೋಕೆ ಆರ್​ಸಿಬಿ ಟಾರ್ಗೆಟ್ ಇಟ್ಟಿದ್ರೆ ದ್ರೆ ಪ್ಲೇಆಫ್ ಆಸೆ ಜೀವಂತವಾಗಿರಿಸೋಕೆ ಮುಂಬೈ ಕಾಯ್ತಿದೆ.

ಮುಂಬೈ ಕಾಡುತ್ತಾ ಬೆಂಗಳೂರು?

ಪ್ಲೇ ಆಫ್ ರೇಸ್ ನಲ್ಲಿ ಮುಂಚೂಣಿಯಲ್ಲಿರುವಂತ ಬೆಂಗಳೂರು ತಂಡ

ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಈಗಾಗ್ಲೇ ಅತ್ಯುತ್ತಮ ಪ್ರದರ್ಶನ

ಕೆಲ ಪಂದ್ಯ ಸೋತಿದ್ರೂ ಮುಂದಿನ ಮ್ಯಾಚ್ ಗಳಲ್ಲಿ ಗೆದ್ದು ಕಂ ಬ್ಯಾಕ್

2026ರ ಸೀಸನ್ ನಲ್ಲೂ ಟ್ರೋಫಿ ಗೆಲುವಿನ ರೇಸ್ ನಲ್ಲಿ ಟಫ್ ಫೈಟ್

ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಸಾಕಷ್ಟು ಸ್ಟ್ರಗಲ್ ಪಡುತ್ತಿರೋ ಮುಂಬೈ ಟೀಂ

10 ಪಂದ್ಯಗಳ ಪೈಕಿ 3ರಲ್ಲಿ ಮಾತ್ರವೇ ಗೆದ್ದು ಪ್ಲೇ ಆಫ್ ಹಾದಿ ಕಠಿಣ

ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ರೂ 14 ಅಂಕ.. ಪ್ಲೇ ಆಫ್ ಕಷ್ಟ

ಬೆಂಗಳೂರು ವಿರುದ್ಧ ಗೆದ್ರೆ ಮಾತ್ರವೇ ಮುಂಬೈ ಪ್ಲೇ ಆಫ್ ಹಾದಿ ಜೀವಂತ

ಎಂಐ ತಂಡದಲ್ಲಿ ಸ್ಟಾರ್ ಆಟಗಾರರಿಂದ ಬಾರದ ನಿರೀಕ್ಷಿತ ಪ್ರದರ್ಶನ

ಬೆಂಗಳೂರು ಪಂದ್ಯವನ್ನೂ ಮಿಸ್ ಮಾಡಿಕೊಳ್ತಾರಾ ಹಾರ್ದಿಕ್ ಪಾಂಡ್ಯ?

ಈಗಾಗಲೇ ಏ.12ರಂದು ವಾಂಖೆಡೆಯಲ್ಲಿ ಗೆದ್ದು ಬೀಗಿರೋ ಆರ್ ಸಿಬಿ

ಹೀಗೆ ಬೆಂಗಳೂರು ತಂಡ ಈ ಸೀಸನ್​ನಲ್ಲಿ ಮುಂಬೈಗಿಂತ ಸೂಪರ್ ಸ್ಟ್ರಾಂಗ್ ಆಗಿ ಪರ್ಫಾಮೆನ್ಸ್ ನೀಡ್ತಿದೆ. ಆದ್ರೆ ಮುಂಬೈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ರೂ ರಿಸಲ್ಟ್ ಮಾತ್ರ ಉಲ್ಟಾ ಹೊಡೀತಿದೆ. ಹೀಗಾಗಿ ಪ್ಲೇ ಆಫ್ ರೇಸ್​ನಲ್ಲಿ ಉಳೀಬೇಕು ಅಂದ್ರೆ ಮಸ್ಟ್ ಌಂಡ್ ಶುಡ್ ಈ ಪಂದ್ಯ ಗೆಲ್ಲಲೇಬೇಕು. ಆದ್ರೆ ಬೆಂಗಳೂರು ಟೀಂ ಅಷ್ಟು ಈಸಿಯಾಗಿ ಬಿಟ್ಟುಕೊಡ್ತಾರಾ ಅಂದ್ರೆ ಚಾನ್ಸೇ ಇಲ್ಲ. ಲಾಸ್ಟ್ ಮ್ಯಾಚಲ್ಲೇ ಮುಂಬೈ ವಿರುದ್ಧ 240 ರನ್ಸ್ ಹೊಡೆದಿದ್ರು. ಹೀಗಾಗಿ ಈ ಪಂದ್ಯದಲ್ಲೂ ಬೆಂಗಳೂರೇ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ. ಹೀಗಿದ್ರೂ ಎರಡೂ ತಂಡಗಳಿಗೆ ಈಗ ಸ್ಟೇಡಿಯಮ್​ದೇ ಸ್ವಲ್ಪ ಟೆನ್ಷನ್ ಇದೆ.

ರಾಯ್ಪುರದಲ್ಲಿ 13 ವರ್ಷಗಳ ಬಳಿಕ ಐಪಿಎಲ್ ಪಂದ್ಯ!

ರಾಯ್ಪುರ ಮೈದಾನವನ್ನ ಹೋಂ ಗ್ರೌಂಡ್ ಅಂತಾ ಘೋಷಣೆ ಮಾಡಿದ್ದ ಬೆಂಗಳೂರು ಇಲ್ಲಿ 2 ಪಂದ್ಯಗಳನ್ನ ಆಡಲಿದೆ. ಸದ್ಯ ಈ ಸೀಸನ್​ನಲ್ಲಿ ರಾಯ್ಪುರದಲ್ಲಿ ನಡೆಯಲಿರೋ ಮೊದಲ ಮ್ಯಾಚ್ ಇದು. 65 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರೋ ಈ ಸ್ಟೇಡಿಯಂ ಭಾರತದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಮೇ 10 ರಂದು ಮುಂಬೈ ವಿರುದ್ಧ ಮತ್ತು ಮೇ 13 ರಂದು ಕೆಕೆಆರ್ ವಿರುದ್ಧದ ಪಂದ್ಯಗಳು ನಡೆಯಲಿವೆ. ಬ್ಯಾಕ್ ಟು ಬ್ಯಾಕ್ ಅದೇ ಮೈದಾನದಲ್ಲಿ ಮ್ಯಾಚ್ ಇರುತ್ತೆ. ಆದ್ರೆ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಮೈದಾನ ಆರ್​ಸಿಬಿಗೆ ಸವಾಲಾಗೋ ಸಾಧ್ಯತೆಗಳಿವೆ. ರಾಯ್ಪುರ ಪಿಚ್ ಆರ್​ಸಿಬಿಗೂ ಹೊಸದು. ರಾಯ್‌ಪುರದಲ್ಲಿ ಕೊನೆಯ ಬಾರಿಗೆ 2013 ರಲ್ಲಿ ಐಪಿಎಲ್ ಪಂದ್ಯ ನಡೆದಿದ್ದು. ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೇಸ್ ಮಾಡಿತ್ತು. ಅಂದಿನಿಂದ ಮತ್ತೆ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರಿಗೆ ಈ ಪಿಚ್​ ಸವಾಲಾಗೋ ಸಾಧ್ಯತೆಗಳಿವೆ.

Shantha Kumari