ಪಂಜಾಬ್, ಆರ್ಸಿಬಿ ಕ್ವಾಲಿಫೈಯರ್ ಹೋರಾಟ – ಯಾರಿಗೆ ಸಿಗುತ್ತೆ ಫೈನಲ್ ಟಿಕೆಟ್?

ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿಂದು ಅಂಕ ಪಟ್ಟಿಯಲ್ಲಿ ಎರಡು ಸ್ಥಾನ ಪಡೆದಿರುವ ಪಂಜಾಬ್ ಹಾಗೂ ಆರ್ಸಿಬಿ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಆರ್ಸಿಬಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.
ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿ ಆಗಿದ್ದು, ಎರಡೂ ತಂಡಗಳು ತಲಾ ಒಂದು ಬಾರಿ ಜಯ ಸಾಧಿಸಿವೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಒಟ್ಟು 19 ಅಂಕಗಳನ್ನು ಕಲೆ ಹಾಕಿವೆ. ಪಂಜಾಬ್ ಮೊದಲ ಸ್ಥಾನ, ಆರ್ಸಿಬಿ ಎರಡನೇ ಸ್ಥಾನದಲ್ಲಿವೆ. ಇನ್ನು ಒಟ್ಟಾರೆ ತಂಡಗಳು 35 ಬಾರಿ ಕಾದಾಟ ನಡೆಸಲಿವೆ. ಈ ವೇಳೆ ಪಂಜಾಬ್ 18, ಆರ್ಸಿಬಿ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮುಲ್ಲನ್ಪುರ ಪಿಚ್ ಬ್ಯಾಟರ್ಗಳಿಗೆ ಕೊಂಚ ಸಹಾಯ ನೀಡಲಿದೆ. ಅಲ್ಲದೆ ಈ ಪಿಚ್ನಲ್ಲಿ 200 ರನ್ಗಳಿಸುವುದು ಸುಲಭದ ಮಾತಲ್ಲ. ಈ ಪಿಚ್ ಮೇಲೆ ಪಂಜಾಬ್ 111 ರನ್ಗಳಿ ಡಿಫೆಂಡ್ ಮಾಡಿಕೊಟ್ಟಿತ್ತು. ಆರ್ಸಿಬಿ ಇದೇ ಅಂಗಳದಲ್ಲಿ ಚೇಸ್ ಮಾಡಿ ಗೆದ್ದಿತ್ತು.
ಇದನ್ನೂ ಓದಿ : ರಾವಣನಾಗಿ ಮಿಂಚಲು ರಾಕಿಂಗ್ ಸ್ಟಾರ್ ರೆಡಿ – ಸೆಟ್ನಲ್ಲಿ ರಾಕಿ ಬಾಯ್ ಹೊಸ ಲುಕ್
ಆರ್ಸಿಬಿ ತಂಡ 18ನೇ ಆವೃತ್ತಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುತ್ತಿದೆ. ಆರ್ಸಿಬಿ ತಂಡದ ಸ್ಟಾರ್ ಆಟಗಾರರು ಲಯದಲ್ಲಿರುವುದು ತಂಡದ ಆಸೆಯನ್ನು ಚಿಗುರಿಸಿದೆ. ಈ ವೇಳೆ ವಿರಾಟ್ ಕೊಹ್ಲಿಯ ಮೇಲೂ ಹೆಚ್ಚಿನ ಒತ್ತಡವಿಲ್ಲ. ಭರವಸೆಯ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಟಾಪ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಆಗಿದೆ. ಟಾಪ್ ಆರ್ಡರ್ನಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡುತ್ತಿರುವುದು ವಿಶ್ವಾಸ ಮೂಡಿಸಿದೆ.
ಆರ್ಸಿಬಿಗೆ ಜೋಷ್ ಎಂಟ್ರಿ
ಜೋಶ್ ಹ್ಯಾಜಲ್ವುಡ್ ಮತ್ತೆ ತಂಡಕ್ಕೆ ಮರಳಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ವೇಳೆ ಜೋಶ್ ಹ್ಯಾಜಲ್ವುಡ್ ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇನ್ನು ಭುವನೇಶ್ವರ್ ಕುಮಾರ್, ಯಶ್ ದಾಯಳ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಸ್ಪಿನ್ ಬೌಲರ್ಗಳಾಗಿ ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ಸ್ಪಿನ್ ಮೋಡಿ ನಡೆಸಬೇಕಿದೆ.
ತವರಿನಲ್ಲಿ ಪಂಜಾಬ್ ಕಿಂಗ್ಸ್ ಬಲ ಪ್ರದರ್ಶನ
ತವರಿನ ಬಲ ಪಂಜಾಬ್ ಕಿಂಗ್ಸ್ ತಂಡ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ಫೈನಲ್ಗೆ ಪ್ರವೇಶಿಸುವ ಕನಸು ಕಾಣುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತಿದ್ದು ಭರವಸೆ ಮುಡಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ಜೋಸ್ ಇಂಗ್ಲಿಂಷ್, ಮಾರ್ಕಸ್ ಸ್ಟೋಯ್ನಿಸ್ ಅವರ ಅನುಭವ ತಂಡಕ್ಕೆ ನೆರವಾಗಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸನ್ ಬಿಗುವಿನ ದಾಳಿ ನಡೆಸಬೇಕಿದೆ. ಇನ್ನು ಹರ್ಪಿತ್ ಬ್ರಾರ್, ಯುಜುವೇಂದ್ರ ಚಹಾಲ್ ತಮ್ಮ ಸ್ಪಿನ್ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡಿದರೆ ಫೈನಲ್ ಪಂದ್ಯವನ್ನು ಆಡುವ ಕನಸು ನನಸಾಗುತ್ತದೆ.