ನಂ.1ನಲ್ಲಿದ್ರೂ RCBಗೆ ಅಸಲಿ ಟಾಸ್ಕ್ – ಗುಜರಾತ್ ವಿರುದ್ಧ ಗೇರ್ ಬದಲಿಸ್ತಾರಾ?
ಭುವಿ Vs ರಬಾಡ.. ಪರ್ಪಲ್ ಯುದ್ಧ     

ನಂ.1ನಲ್ಲಿದ್ರೂ RCBಗೆ ಅಸಲಿ ಟಾಸ್ಕ್ – ಗುಜರಾತ್ ವಿರುದ್ಧ ಗೇರ್ ಬದಲಿಸ್ತಾರಾ?ಭುವಿ Vs ರಬಾಡ.. ಪರ್ಪಲ್ ಯುದ್ಧ     

2026ರ ಐಪಿಎಲ್​ನಲ್ಲಿ ಎಲ್ಲರ ಕಣ್ಣು ಈಗ ಪ್ಲೇ ಆಫ್ಸ್ ಸುತ್ತಿನತ್ತ ನೆಟ್ಟಿದೆ. ಟಾಪ್ 1ನಲ್ಲಿ ಆರ್​ಸಿಬಿ, ಟಾಪ್-2ನಲ್ಲಿ ಗುಜರಾತ್ ಹಾಗೇ ಟಾಪ್3ನಲ್ಲಿ ಹೈದ್ರಾಬಾದ್ ಟೀಂ ಇದೆ. ಌಂಡ್ ನಾಲ್ಕನೇ ಟಿಕೆಟ್ ಯಾರಿಗೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಲೀಗ್ ಹಂತದ ಲಾಸ್ಟ್​ ಮ್ಯಾಚ್​ವರೆಗೂ ಕ್ಯೂರಿಯಾಸಿಟಿ ಇದ್ದದ್ದೇ. ಆದ್ರೆ ಆರ್​ಸಿಬಿ ಫ್ಯಾನ್ಸ್ ಚಿತ್ತ ಮಾತ್ರ ಕ್ವಾಲಿಫೈಯರ್ 1ನತ್ತ ನೆಟ್ಟಿದೆ. ಮಂಗಳವಾರ ಗುಜರಾತ್ ವಿರುದ್ಧ ಅಖಾಡಕ್ಕಿಳಿಯಲಿರೋ ಆರ್​ಸಿಬಿ ಗೆದ್ದು ಫೈನಲ್​ಗೆ ಲಗ್ಗೆ ಇಡ್ಬೇಕಿದೆ. ಹಾಗಂತ ಗುಜರಾತ್ ಏನು ಸುಲಭಕ್ಕೆ ಸೋಲೋ ತಂಡ ಅಲ್ಲ.

ಇದನ್ನೂ ಓದಿ : ಧೋನಿ ಪ್ರಾಕ್ಟೀಸ್ ಫೋಟೋ ಹಾಕಿ ನಂಬಿಕೆ ಹುಟ್ಟಿಸಿದ್ರು– ಧೋನಿ ಹೆಸರಲ್ಲಿ CSK ಮ್ಯಾನೇಜ್ ಮೆಂಟ್ ಮೋಸ ?

ಒಂದ್ಕಡೆ ಚೆನ್ನೈ ವಿರುದ್ಧ 89 ರನ್​ಗಳ ಬಿಗ್ ಮಾರ್ಜಿನ್​ನಲ್ಲಿ ಗೆದ್ದು ಬರ್ತಿರೋ ಗುಜರಾತ್ ಟೈಟನ್ಸ್.. ಮತ್ತೊಂದ್ಕಡೆ 55 ರನ್​ಗಳ ಬೃಹತ್ ಅಂತರದಲ್ಲಿ ಸೋತು ಬರ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಇಬ್ಬರ ಇಂಟೆಂಟ್ ಕೂಡ ಒಂದೇ. ಮಸ್ಟ್ ಌಂಡ್ ಶುಡ್ ಕ್ವಾಲಿಫೈಯರ್ 1 ಗೆದ್ದು ಸೀದಾ ಫೈನಲ್​ಗೆ ಲಗ್ಗೆ ಇಡ್ಬೇಕು ಅಂತಾ. ಹಾಗೆ ಲೀಗ್ ಹಂತದಲ್ಲಿ ಇಬ್ಬರೂ ಬಲಿಷ್ಠ ತಂಡಗಳು. ಈ ಸೀಸನ್​ನಲ್ಲೂ ಅದ್ಭುತ ಪ್ರದರ್ಶನದ ಮೂಲಕ ಟಾಪ್-2 ಸ್ಥಾನದಲ್ಲಿ ಕೂತಿದ್ದಾರೆ. ಮಸ್ಟ್ ಌಂಡ್ ಶುಡ್ ಗೆದ್ದು ಫೈನಲ್​ನಲ್ಲಿ ಕೂರಬೇಕು ಅಂತಾ ಕಾಯ್ತಾ ಇರ್ತಾರೆ. ಎರಡೂ ತಂಡಗಳಲ್ಲಿನ ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂಥ್ ಹೇಗಿದೆ ಅನ್ನೋದನ್ನ ನೋಡೋಣ. ಮೊದ್ಲಿಗೆ ಬೆಂಗಳುರು ಸ್ಟ್ರೆಂಥ್ ಌಂಡ್ ವೀಕ್​ನೆಸ್ ಏನು ಅನ್ನೋದನ್ನ ನೋಡೋಣ.

ಬೆಂಗಳೂರು ಪ್ಲಸ್ & ಮೈನಸ್!

ಆರ್ ಸಿಬಿ ಪರ 557 ರನ್ಸ್ ಪಡೆದು ಹೈಸ್ಕೋರ್ ಆಗಿರುವ ಕೊಹ್ಲಿ

ನಾಯಕ ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಸ್ಟ್ರೆಂತ್

ಪವರ್‌ ಪ್ಲೇನಲ್ಲಿ ಭುವನೇಶ್ವರ್ ಕುಮಾರ್ & ಜೋಶ್ ಬೌಲಿಂಗ್ ಅಟ್ಯಾಕ್

ಮಿಡಲ್ ಆರ್ಡನ್ ನಲ್ಲಿ ಮ್ ಡೇವಿಡ್, ಕೃನಾಲ್ ಪಾಂಡ್ಯ ಅದ್ಭುತ ಆಟ

ಟಾಪ್ ಆರ್ಡರ್ ಬೇಗ ಔಟ್ ಆದ್ರೆ ಮಧ್ಯಮ ಕ್ರಮಾಂಕ ಸ್ಟ್ರಾಂಗ್ ಇಲ್ಲ

ಧರ್ಮಶಾಲಾದ ವೇಗ ಮತ್ತು ಬೌನ್ಸ್ ಇರುವ ಪಿಚ್‌ ಸ್ವಲ್ಪ ಸವಾಲ್

ಆರಂಭದಲ್ಲಿ ಬೇಗ ವಿಕೆಟ್ಸ್ ಬಿದ್ರೆ ಫಿನಿಶ್ ಮಾಡುವಂಥ ಪ್ಲೇಯರ್ ಇಲ್ಲ

ಫೀಲ್ಡಿಂಗ್ ಎಫೆಕ್ಟಿವ್ ಇಲ್ಲ, ಸಾಕಷ್ಟು ಕ್ಯಾಚ್ ಗಳನ್ನ ಡ್ರಾಪ್ ಮಾಡಿ ಬರೆ

ಭುವಿಗೆ ಸಾಥ್ ಸಿಗ್ತಾ ಇಲ್ಲ.. ಹೇಜಲ್ ವುಡ್ ಇತ್ತೀಚಿನ ಪಂದ್ಯಗಳಲ್ಲಿ ದುಬಾರಿ

ಹೀಗೆ ಆರ್​ಸಿಬಿ ಕಪ್ ಗೆಲ್ಬೇಕು ಅಂದ್ರೆ ತಂಡದಲ್ಲಿರೋ ಕೆಲ ಮೈನಸ್​​ನೂ ತಿದ್ದಿಕೊಳ್ಬೇಕಿದೆ. ಗುಜರಾತ್ ವಿರುದ್ಧದ ಮ್ಯಾಚಲ್ಲಿ ಗೇರ್ ಬದಲಿಸ್ಬೇಕಿದೆ. ಎಲ್ಲರಿಂದಲೂ ಸಪೋರ್ಟ್ ಸಿಕ್ಕಾಗಷ್ಟೇ ಕಪ್ ನಮ್ದು ಅಂತಾ ಹೇಳಿಕೊಳ್ಬೋದು. ಇದು ಬೆಂಗಳೂರು ಕತೆಯಾದ್ರೆ ಗುಜರಾತ್ ಟೈಟಾನ್ಸ್ ಮಾತ್ರ ಡಿಫ್ರೆಂಟ್ ಆಗೇ ಕಾಣ್ತಿದೆ.

ಗುಜರಾತ್ ಪ್ಲಸ್ & ಮೈನಸ್!

ಗಿಲ್ (616 ರನ್ಸ್) & ಸುದರ್ಶನ್ (638 ರನ್ಸ್) ಜೋಡಿ ಡೇಂಜರ್
ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಬಿಗ್ ಸಪೋರ್ಟ್

ರಶೀದ್ ಖಾನ್ ಸ್ಪಿನ್ (19 ವಿಕೆಟ್) ಕಗಸೊ ರಬಾಡ (24 ವಿಕೆಟ್)

ಮೊಹಮ್ಮದ್ ಸಿರಾಜ್ ಅವರ ವೇಗ & ಡಾಟ್ ಬಾಲ್ ಪ್ರೆಶರ್

ರಾಹುಲ್ ತೇವಾಟಿಯಾ ಮತ್ತು ಶಾರುಖ್ ಖಾನ್ ಫಿನಿಶಿಂಗ್ ಪವರ್

ರಬಾಡ, ಹೋಲ್ಡರ್, ಸಿರಾಜ್ & ರಶೀದ್ ಬೌಲಿಂಗ್ ಬೆಸ್ಟ್ ಅಟ್ಯಾಕ್

ಫೀಲ್ಡಿಂಗ್ ಚೆನ್ನಾಗಿದೆ, ತುಂಬಾ ಆಟಗಾರರಿಗೆ ಸಾಕಷ್ಟು ಅನುಭವ

ಗಿಲ್ ಅಥವಾ ಸುದರ್ಶನ್ ಮೇಲೆಯೇ ಡಿಪೆಂಡ್ ಆಗಿರುವ ತಂಡ

ಓಪನರ್ಸ್ ಬೇಗ ಔಟಾದ್ರೆ ದೊಡ್ಡ ಸ್ಕೋರ್ ಗಳಿಸಲು ಪರದಾಡುತ್ತದೆ

ಹೀಗೆ ಎರಡೂ ತಂಡಗಳಲ್ಲೂ ಒಂದಷ್ಟು ಪ್ಲಸ್ & ಮೈನಸ್ ಅಂತಾ ಇದ್ದೇ ಇದೆ. ಈ ಸೀಸನ್​ನಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿ ಆಗಿದ್ರು. ಮೊದಲ ಮ್ಯಾಚಲ್ಲಿ ಬೆಂಗಳೂರು ಗೆದ್ರೆ ಎರಡನೇ ಮ್ಯಾಚಲ್ಲಿ ಗುಜರಾತ್ ಗೆದ್ದಿತ್ತು. ಸೋ ಈಕ್ವಲ್ ಫೈಟ್ ಅಂತೂ ಇದ್ದೇ ಇದೆ. ಇನ್ನು ಈ ಮ್ಯಾಚಲ್ಲಿ ಎಲ್ಲರ ಕಣ್ಣು ಇರುವಂಥದ್ದು ಬೌಲಿಂಗ್ ಬ್ಯಾಟಲ್ ಬಗ್ಗೆ. ಅದ್ರಲ್ಲೂ ಭುವನೇಶ್ವರ್ ವರ್ಸಸ್ ರಬಾಡ ಫೈಟಲ್ಲಿ ಗೆಲ್ಲೋದ್ಯಾರು ಅಂತಾ.

ತಲಾ 24 ವಿಕೆಟ್ಸ್.. ಯಾರಿಗೆ ಪರ್ಪಲ್ ಕ್ಯಾಪ್?

ಬೆಂಗಳೂರು ತಂಡಕ್ಕೆ ಬೌಲಿಂಗ್ ಬ್ಯಾಕ್ ಬೋನ್ ಅಂದ್ರೆ ಅದು ಭುವನೇಶ್ವರ್ ಕುಮಾರ್. ಹಾಗೇ ಗುಜರಾತ್ ತಂಡಕ್ಕೆ ಬೌಲಿಂಗ್ ಬ್ರಹ್ಮಾಸ್ತ್ರ ಕಗಿಸೋ ರಬಾಡ. ಈ ಸೀಸನ್​ನಲ್ಲಿ ಇಬ್ಬರೂ ಕೂಡ 14 ಪಂದ್ಯಗಳಲ್ಲಿ 24 ವಿಕೆಟ್ ತೆಗೆದು ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಬೆಸ್ಟ್ ಎಕಾನಮಿ ಇರೋದ್ರಿಂದ ಭುವಿ ನಂಬರ್ 1ನಲ್ಲಿ ಇದ್ದಾರೆ. ಈಗ ಇಬ್ರಿಬ್ಬರ ಕಾಳಗದಲ್ಲಿ ಯಾರಿಗೆ ಪರ್ಪಲ್ ಕ್ಯಾಪ್ ಗೆಲುವು ಅನ್ನೋ ಕುತೂಹಲವೂ ಇದೆ. ಹಾಗೇ ಕ್ವಾಲಿಫೈಯರ್ 1ನಲ್ಲಿ ಇವ್ರಿಬ್ಬರ ಪ್ರದರ್ಶನವೇ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೂಡ ಆಗಲಿದೆ. ಒಟ್ನಲ್ಲಿ ಎರಡೂ ತಂಡಗಳು ಸೇಮ್ ಪೊಸಿಷನ್​ನಲ್ಲೇ ಇದ್ದಾರೆ. ಇಬ್ಬರಿಗೂ ಈಕ್ವಲ್ ಚಾನ್ಸ್ ಅಂತೂ ಇದೆ. ಆದ್ರೆ ರೈಟ್ ಟೈಮಲ್ಲಿ ಯಾರು ರೈಟ್ ಗೇಮ್ ಆಗಿ ಡೈರೆಕ್ಟ್ ಫೈನಲ್​ಗೆ ಹೋಗ್ತಾರೆ. ಯಾರು ಜಾರಿ ಬಿದ್ದು ಮತ್ತೊಂದು ಪಂದ್ಯಕ್ಕಾಗಿ ಕಾಯ್ತಾರೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *