ದೆಹಲಿಯಲ್ಲಿ ದತ್ತು ಮಗ VS ಮನೆ ಮಗನ ನಡುವೆ ಕಾದಾಟ – ಎರಡನೇ ಬಾರಿ ಆರ್ಸಿಬಿ ಮತ್ತು ಡಿಸಿ ಮುಖಾಮುಖಿ

ಆರ್ಸಿಬಿ ಮತ್ತು ಡಿಸಿ ಎರಡನೇ ಬಾರಿ ಮುಖಾಮುಖಿಗೆ ಸಜ್ಜಾಗಿದೆ. ದೆಹಲಿಯಲ್ಲಿ ಬೆಂಗಳೂರು ಮತ್ತು ದೆಹಲಿ ತಂಡಗಳ ನಡುವೆ ಕಾದಾಟ ನಡೆಯಲಿದೆ. ಸೋಮವಾರ (ಏಪ್ರಿಲ್ 27) ನಡೆಯಲಿರುವ ಈ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ.
ಇದನ್ನೂ ಓದಿ:ಮಿಂಚಿದ ನರೈನ್- ರಿಂಕು.. ಸೂಪರ್ ಓವರ್ನಲ್ಲಿ KKR ಗೆಲುವಿನ ಕೇಕೆ! – ಅಂಕಪಟ್ಟಿಯಲ್ಲಿ LSGಗೆ ಕೊನೆ ಸ್ಥಾನ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಗೆಲುವಿನ ಉತ್ಸಾಹದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೈದ್ರಾಬಾದ್ ತಂಡದ ವಿರುದ್ಧ ಸೋತ ನಿರಾಶೆಯಲ್ಲಿದೆ. ಇದೀಗ ಡೆಲ್ಲಿ ಗೆಲ್ಲುವ ಹಠದಲ್ಲಿದೆ. ಬೆಂಗಳೂರು ತಂಡದ ಕಣ್ಣು ನಂಬರ್ ಒನ್ ಸ್ಥಾನದ ಮೇಲಿದೆ. ಹೀಗಾಗಿ ಇವತ್ತು ನಡೆಯಲಿರುವ ಪಂದ್ಯ ಹೈವೋಲ್ಟೇಜ್ ಪಂದ್ಯ ಎಂದೇ ಹೇಳಬಹುದು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಆರ್ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಿದೆ. ಬೆಂಗಳೂರು ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆರ್ಸಿಬಿ ವೇಗಿ ರಾಸಿಖ್ ದಾರ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಫಿಲ್ ಸಾಲ್ಟ್ ಬದಲಿಗೆ ಆರ್ಸಿಬಿ ಪರ ಜೇಕಬ್ ಬೆಥೆಲ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಮ್ಯಾಚ್ನಲ್ಲಿ ಬೆಥೆಲ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಮತ್ತೊಂದೆಡೆ ಕೆ.ಎಲ್ ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಡಿಸಿ ತಂಡ ಕೂಡಾ ಉತ್ತಮ ಸ್ಕೋರ್ ಮಾಡುವ ಕಡೆ ಗಮನಹರಿಸಬಹುದು. ಒಟ್ನಲ್ಲಿ ದೆಹಲಿಯಲ್ಲಿ ಇವತ್ತು ಮದಗಜಗಳ ಕಾಳಗ ನಡೆಯಲಿದೆ.

ನೋಡಿರಿ

