RCB ಬದಲಿ ಆಟಗಾರರಿಗೆ ಗುಡ್ ಬೈ – ಮಯಾಂಕ್, ಟಿಮ್, ಬ್ಲೆಸ್ಸಿಂಗ್ ರಿಲೀಸ್
2026ಕ್ಕೆ ಯಾರೆಲ್ಲಾ ಡೇಂಜರ್ ಜೋನ್?

 RCB ಬದಲಿ ಆಟಗಾರರಿಗೆ ಗುಡ್ ಬೈ – ಮಯಾಂಕ್, ಟಿಮ್, ಬ್ಲೆಸ್ಸಿಂಗ್ ರಿಲೀಸ್2026ಕ್ಕೆ ಯಾರೆಲ್ಲಾ ಡೇಂಜರ್ ಜೋನ್?

18ನೇ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆದ್ರೆ ಸೀಸನ್​ನ ಅರ್ಧದಲ್ಲಿ 9 ದಿನಗಳ ಕಾಲ ಟೂರ್ನಿಯನ್ನೇ ಸಸ್ಪೆಂಡ್ ಮಾಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಪೆಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವೆ ಯುದ್ಧದ ಉದ್ಘಿಗ್ನತೆ ತಾರಕಕ್ಕೇರಿತ್ತು. ಹೀಗಾಗಿ ಮೇ 9ರಿಂದ 17ರವರೆಗೆ ಯಾವುದೇ ಪಂದ್ಯಗಳನ್ನ ಆಡಿಸಿರಲಿಲ್ಲ. ಟೂರ್ನಿ ಎಕ್ಸ್​ಟೆಂಡ್ ಆಗಿದ್ರಿಂದ ಆರ್​ಸಿಬಿ ಸೇರಿದಂತೆ ಹಲವು ತಂಡಗಳ ಕೆಲ ಆಟಗಾರರು ನ್ಯಾಷನಲ್ ಡ್ಯೂಟಿಗಳಿಗಾಗಿ ತವರಿಗೆ ವಾಪಸ್ ಆಗಿದ್ರು. ಕೊನೆಗೆ ಅನಿವಾರ್ಯವಾಗಿ ಬದಲಿ ಆಟಗಾರರನ್ನ ಖರೀದಿ ಮಾಡಬೇಕಾಯ್ತು. ಆರ್​ಸಿಬಿ ಕೂಡ ಟೆಂಪರರಿ ರಿಪ್ಲೇಸ್​ಮೆಂಟ್ ಪ್ಲೇಯರ್ಸ್​ನ ಖರೀದಿ ಮಾಡಿದ್ದು ಅವ್ರನ್ನ ರಿಲೀಸ್ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪೈಕಿ ಕನ್ನಡಿಗ ಮಯಾಂಕ್ ಹೆಸರೂ ಲಿಸ್ಟ್ ನಲ್ಲಿದೆ.

ಇದನ್ನೂ ಓದಿ :  ಹರಿಣಗಳಿಗೆ ನೀರಿಳಿಸಿದ ಸಾಲ್ಟ್, ಬಟ್ಲರ್ – T-20Iನಲ್ಲಿ ಭಾರತಕ್ಕೆ ENG ಸೆಡ್ಡು

ಮಯಾಂಕ್ ರನ್ನು ರಿಲೀಸ್ ಮಾಡುತ್ತಾ ಬೆಂಗಳೂರು?

ಆರ್​ಸಿಬಿ ಫ್ರಾಂಚೈಸಿ ಕನ್ನಡಿಗ ದೇವದತ್ ಪಡಿಕ್ಕಲ್ ಅವ್ರನ್ನ 2 ಕೋಟಿ ರೂಪಾಯಿಗೆ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಪರ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಡಿಕ್ಕಲ್ ಎರಡು ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದರು. ಆದ್ರೆ ಇಂಜುರಿ ಕಾರಣದಿಂದ ನಂತ್ರದ ಪಂದ್ಯಗಳಿಂದ ರೂಲ್ಡ್ ಔಟ್ ಆಗಿದ್ರು. ಈ ವೇಳೆ ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್​ರನ್ನ ಬದಲಿ ಆಟಗಾರನಾಗಿ ಸೇರಿಸಿಕೊಂಡಿತ್ತು.  ಆರ್‌ಸಿಬಿ ಪರ 4 ನಾಲ್ಕು ಪಂದ್ಯಗಳನ್ನು ಆಡಿದ ಮಯಾಂಕ್ 94 ರನ್ ಗಳಿಸಿದ್ರು. ಆದ್ರೆ ಮುಂದಿನ ಸೀಸನ್​ನಲ್ಲಿ ದೇವದತ್ ಪಡಿಕ್ಕಲ್ ತಂಡಕ್ಕೆ ಕಮ್ ಬ್ಯಾಕ್ ಮಾಡೋದ್ರಿಂದ ಮಯಾಂಕ್ ಅವರನ್ನು ರಿಲೀಸ್ ಮಾಡಬಹುದು. ಅಥವಾ ಮತ್ತೆ ಖರೀದಿ ಮಾಡಬೇಕಾಗುತ್ತೆ.

ಪ್ಲೇ ಆಫ್ ಪಂದ್ಯಗಳಲ್ಲಿ ತಂಡಕ್ಕೆ ಬಂದವರಿಗೂ ಗೇಟ್ ಪಾಸ್?

18ನೇ ಸೀಸನ್​ನಲ್ಲಿ ಆರ್​ಸಿಬಿ ಟೀಂ ಪ್ಲೇಆಫ್​ಗೆ ಎಂಟ್ರಿ ಪಡೆದ ವೇಳೆ ತಂಡದ ಕೆಲ ಪ್ಲೇಯರ್ಸ್ ನ್ಯಾಷನಲ್ ಡ್ಯೂಟಿಗಾಗಿ ತಮ್ಮ ದೇಶಗಳಿಗೆ ವಾಪಸ್ ಆಗಿದ್ರು. ಇಂಥಾ ಟೈಮಲ್ಲಿ ಅವ್ರ ಬದಲಿಗೆ ಬೇರೆ ಆಟಗಾರರನ್ನ ಖರೀದಿ ಮಾಡಲಾಗಿತ್ತು. ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರ ಬದಲಿಯಾಗಿ ಆರ್‌ಸಿಬಿಗೆ ಸೇರಿಸಿಕೊಂಡಿತ್ತು. ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಮಾತ್ರ ಆಯ್ಕೆ ಮಾಡಲಾಗಿತ್ತು. ಹಾಗೇ ಇಂಗ್ಲೆಂಡ್ ತಂಡದ ಆಟಗಾರ ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್​ಸಿಬಿ ನ್ಯೂಝಿಲೆಂಡ್​ನ ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಇವ್ರಿಬ್ಬರು ಕೂಡ  ಆರ್​ಸಿಬಿ ಪರ ಯಾವುದೇ ಪಂದ್ಯವನ್ನ ಆಡಿರಲಿಲ್ಲಲ್ಲ. ರೂಲ್ಸ್ ಪ್ರಕಾರ  ತಾತ್ಕಾಲಿಕ ಬದಲಿ ಆಟಗಾರರಾಗಿ ಬಂದವ್ರನ್ನ ಆ ಸೀಸನ್ ಬಳಿಕ ರಿಲೀಸ್ ಮಾಡ್ಬೇಕು. ಒಂದು ವೇಳೆ ಮುಂದಿನ ಆವೃತ್ತಿಗೆ ಬೇಕಿದ್ರೆ ಮತ್ತೆ ಖರೀದಿ ಮಾಡ್ಬೇಕಾಗುತ್ತೆ.

ಇನ್ನು ಇವ್ರಿಷ್ಟೇ ಅಲ್ಲದೆ ಆರ್​ಸಿಬಿ ಟೀಮ್​ನಲ್ಲಿದ್ದು ಪ್ಲೇಯಿಂಗ್​ 11ನಲ್ಲಿ ಚಾನ್ಸ್ ಸಿಗದೇ ಇದ್ದವ್ರಿಗೂ ತಂಡದಿಂದ ಹೊರ ಬೀಳೋ ಆತಂಕ ಇದೆ. ಈ ಬಾರಿಯ ಐಪಿಎಲ್​ನಲ್ಲಿ ಅಭಿನಂದನ್ ಸಿಂಗ್ ಆರ್​ಸಿಬಿ ಪರ ಒಂದೇ ಒಂದು ಪಂದ್ಯವಾಡಿಲ್ಲ. ಅದರಲ್ಲೂ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮುಂಬರುವ ಸೀಸನ್​ಗಾಗಿ ಅಭಿನಂದನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಹಾಗೇ ಆರ್​ಸಿಬಿ ತಂಡದಲ್ಲಿರುವ ಯುವ ಆಲ್​ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅತ್ತ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್​ಗೆ ಸ್ಥಾನ ಲಭಿಸಿಲ್ಲ. ಹೀಗಾಗಿ ಅವರನ್ನು ಸಹ ತಂಡದಿಂದ ಕೈ ಬಿಡಬಹುದು. ಸೋ ಇಷ್ಟು ಆಟಗಾರರು ಡೇಂಜರ್ ಝೋನ್​ನಲ್ಲಿದ್ದಾರೆ.

Shantha Kumari