RCBಯಲ್ಲಿ ನಾಲ್ವರಷ್ಟೇ ಸೇಫ್ – ಹೊಸ ಕೋಚ್.. ಯಾರೆಲ್ಲಾ ರಿಲೀಸ್?

2026ರ ಐಪಿಎಲ್ಗೆ ಸಿದ್ಧವಾಗ್ತಿರೋ ಫ್ರಾಂಚೈಸಿಗಳಲ್ಲಿ ಮೇಜರ್ ಸರ್ಜರಿಗಳೇ ಆಗ್ತಿವೆ. ಅದ್ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫ್ರಾಂಚೈಸಿ ಮಾರಾಟ, ಆಟಗಾರರ ರಿಲೀಸ್, ಕೋಚ್ ಚೇಂಜ್ ಹೀಗೆ ಬಿಗ್ ಟ್ವಿಸ್ಟ್ಗಳೇ ಸಿಕ್ಕಿವೆ. ವುಮೆನ್ಸ್ ಟೀಮ್ನಲ್ಲಿ ಜಸ್ಟ್ ನಾಲ್ಕರಷ್ಟೇ ಸೇಫ್ ಆಗಿದ್ದು ಉಳಿದವ್ರೆಲ್ಲಾ ಹೊರ ಬಿದ್ದಿದ್ದಾರೆ.
ಇದನ್ನೂ ಓದಿ : ಸೆಂಚುರಿ ಸ್ಟಾರ್ ಕರುಣ್ ನಾಯರ್ಗೆ ಮತ್ತೆ ಅನ್ಯಾಯ – ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಸಿಗದ ಚಾನ್ಸ್
ರಿಟೈನ್, ರಿಲೀಸ್, ಟ್ರೇಡ್ ವಿಂಡೋ, ಕ್ಯಾಶ್ ಡೀಲ್ ಅಂತ ಐಪಿಎಲ್ ಫ್ರಾಂಚೈಸಿಗಳಲ್ಲಿ ಹತ್ತಾರು ಲೆಕ್ಕಾಚಾರಗಳು ನಡೀತಿವೆ. ಆಟಗಾರರ ರಿಟೆನ್ಶನ್ ಡೆಡ್ಲೈನ್ಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಇನ್ನು ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮೆಗಾ ಹರಾಜು ನಡೆಯೋದ್ರಿಂದ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ ಐವರನ್ನು ಮಾತ್ರ ಉಳಿಸಿಕೊಂಡು ಮಿಕ್ಕವ್ರನ್ನ ರಿಲೀಸ್ ಮಾಡ್ಲೇಬೇಕು. ಒಂದು ಫ್ರಾಂಚೈಸಿ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಬಯಸಿದರೆ ಅದರಲ್ಲಿ ಒಬ್ಬರು ಅನ್ಕ್ಯಾಪ್ಡ್ ಆಟಗಾರ್ತಿ ಇರಬೇಕು. ಅಂದರೆ ರಾಷ್ಟ್ರೀಯ ತಂಡದ ಪರ ಆಡಿರದ ಆಟಗಾರ್ತಿಯನ್ನೂ ಸೇರಿ ಐವರನ್ನ ಉಳಿಸಿಕೊಳ್ಬೋದು. ಬಟ್ ಆರ್ಸಿಬಿ ಫ್ರಾಂಚೈಸಿ ನಾಲ್ವರನ್ನಷ್ಟೇ ರಿಟೇನ್ ಮಾಡಿಕೊಂಡಿದೆ. ಅದಕ್ಕೆ ಕಾರಣವೂ ಇದೆ. ಯಾಕಂದ್ರೆ ಅನ್ಕ್ಯಾಪ್ಡ್ ಆಗಿರುವ ಪ್ಲೇಯರ್ಸ್ ಕಳೆದ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಯಾರನ್ನೂ ಉಳಿಸಿಕೊಂಡಿಲ್ಲ.
ಮೆಗಾ ಹರಾಜಿಗೂ ಮುನ್ನ ನಾಲ್ವರನ್ನ ಉಳಿಸಿಕೊಂಡ ಆರ್ ಸಿಬಿ!
ಇನ್ನು ಮೆಗಾ ಹರಾಜಿಗೂ ಮುನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ಆರ್ಸಿಬಿ ಫ್ರಾಂಚೈಸಿ ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡಿದೆ. ಅದರಂತೆ ಸ್ಮೃತಿ ಮಂಧಾನ ಅವರಿಗೆ ಆರ್ಸಿಬಿ 3.50 ಕೋಟಿ ರೂಪಾಯಿ ಸಂಭಾವನೆ ನೀಡಲಿದೆ. ಌಂಡ್ ಸೆಕೆಂಡ್ ಆಪ್ಶನ್ ಆಸ್ಟ್ರೇಲಿಯನ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಆಯ್ಕೆ ಮಾಡಿದೆ. ಎಲ್ಲಿಸ್ ಪೆರ್ರಿಗೆ ಆರ್ಸಿಬಿ ಫ್ರಾಂಚೈಸಿ 2.5 ಕೋಟಿ ರೂ. ಸಂಭಾವನೆ ನೀಡಲಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆಗಿರುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ರಿಚಾ ಘೋಷ್ ಆಯ್ಕೆಯಾಗಿದ್ದಾರೆ. ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ರಿಚಾ ಘೋಷ್ಗೆ ಆರ್ಸಿಬಿ 1.75 ಕೋಟಿ ರೂ. ಪಾವತಿಸಲಿದೆ. ಇನ್ನು ಕನ್ನಡತಿ ಹಾಗೇ ಟಗರುಪುಟ್ಟಿ ಅಂತಾನೇ ಕರೆಸಿಕೊಳ್ಳೋ ಶ್ರೇಯಾಂಕಾ ಪಾಟೀಲ್ ಅವರನ್ನು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಲ್ಕನೇ ಆಟಗಾರ್ತಿಯಾಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಶ್ರೇಯಾಂಕಾ ಆರ್ಸಿಬಿಯಿಂದ 1 ಕೋಟಿ ರೂಪಾಯಿ ಪಡೆಯಲಿದ್ದಾರೆ. ಇನ್ನು ಕಳೆದ ಸೀಸನ್ನಲ್ಲಿ ಶ್ರೇಯಾಂಕಾ ಇಂಜುರಿ ಕಾರಣದಿಂದ ಟೂರ್ನಿಯಿಂದಲೇ ರೂಲ್ಡ್ ಔಟ್ ಆಗಿದ್ರು. ಮಹಿಳಾ ಪ್ರಿಮಿಯರ್ ಲೀಗ್ನ 4ನೇ ಆವೃತ್ತಿಯ ಮೆಗಾ ಹರಾಜು ಇದೇ ತಿಂಗಳ 27 ರಂದು ನಡೆಯುವ ಸಾಧ್ಯತೆಗಳಿವೆ. ಇನ್ನು ಮೆಗಾ ಆಕ್ಷನ್ನಲ್ಲಿ ಬಿಗ್ ಪ್ಲೇಯರ್ಸ್ ಮೇಲೆ ಕಣ್ಣಿಟ್ಟಿದ್ದು ಕೋಚಿಂಗ್ ವಿಭಾಗದಲ್ಲೂ ಮೇಜರ್ ಸರ್ಜರಿ ಮಾಡ್ಲಾಗಿದೆ.
ಆರ್ ಸಿಬಿ ವುಮೆನ್ಸ್ ತಂಡಕ್ಕೆ ಹೊಸ ಕೋಚ್ ನೇಮಕ!
2026ರ ಐಪಿಎಲ್ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾವಣೆ ಮಾಡ್ಲಾಗಿದೆ. ಹಾಲಿ ಕೋಚ್ ಲುಕ್ ವಿಲಿಯಮ್ಸ್ ಬಿಗ್ಬ್ಯಾಷ್ ಲೀಗ್ನಲ್ಲಿ ಬ್ಯುಸಿಯಾಗಲಿರುವ ಕಾರಣ ಅಸಿಸ್ಟೆಂಟ್ ಕೋಚ್ ಮಲೋಲಾ ರಂಗರಾಜನ್ಗೆ ಕೋಚ್ ಆಗಿ ಪ್ರಮೋಷನ್ ನೀಡಲಾಗಿದೆ. ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ಆಟಗಾರ್ತಿ ಅನ್ಯಾ ಶ್ರಬ್ಸೋಲ್, ಆರ್ಸಿಬಿ ಮಹಿಳಾ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಹೀಗೆ ಆಕ್ಷನ್, ಕೋಚಿಂಗ್ ಸ್ಟಾಫ್ಸ್ ಅಂತಾ ಒಂದಷ್ಟು ಬದಲಾವಣೆಗಳ ನಡುವೆಯೇ ಫ್ರಾಂಚೈಸಿ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ವೊಂದು ಹೊರ ಬಿದ್ದಿದೆ.
ಆರ್ ಸಿಬಿ ಫ್ರಾಂಚೈಸಿ ಮಾರಾಟ ಅಧಿಕೃತವಾಗಿ ಘೋಷಣೆ!
ಕಳೆದ ಎರಡು ವರ್ಷಗಳಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. 2024ರಲ್ಲಿ ವುಮೆನ್ಸ್ ಌಂಡ್ 2025ರಲ್ಲಿ ಮೆನ್ಸ್ ಟೀಂ ಚಾಂಪಿಯನ್ ಪಟ್ಟಕ್ಕೇರಿದ್ರು. ಆದ್ರೆ ಇತ್ತೀಚಿನ ಕೆಲ ತಿಂಗಳುಗಳಿಂದ ಫ್ರಾಂಚೈಸಿಯ ಮಾರಾಟದ ಬಗ್ಗೆ ಪದೇಪದೆ ಸುದ್ದಿಯಾಗ್ತಾನೇ ಇದೆ. ಫ್ರಾಂಚೈಸಿ ಮಾರಾಟವಾಗೋದು ಅಧಿಕೃತವಾಗಿ ಧೃಡಪಟ್ಟೊದೆ. ಆರ್ ಸಿಬಿ ಮೆನ್ಸ್ ಌಂಡ್ ವುಮೆನ್ಸ್ ಟೀಂ ಮಾಲೀಕರಾದ ಡಿಯಾಜಿಯೊ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮಾರ್ಚ್ 31, 2026 ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ಭರವಸೆ ನೀಡಿದೆ. ಡಿಯಾಜಿಯೊ ಎರಡೂ ತಂಡಗಳನ್ನ ಸೇರಿ 2 ಬಿಲಿಯನ್ ಯುಎಸ್ ಡಾಲರ್ಗಳ ಬೇಡಿಕೆ ಇಟ್ಟಿದೆ. ಇನ್ನು ಆರ್ ಸಿಬಿ ಖರೀದಿಗೆ ಪಾರ್ಥ್ ಜಿಂದಾಲ್ ಗ್ರೂಪ್, ಅದಾನಿ ಗ್ರೂಪ್, ಪೂನಾವಾಲ ಗ್ರೂಪ್ ನಡುವೆ ಬಾರೀ ಪೈಪೋಟಿ ನಡೀತಿದೆ.

ನೋಡಿರಿ

