RCBಗೆ HAT-TRICK ಟಾರ್ಗೆಟ್ – SRH & PBKS ಪಂದ್ಯಗಳ ಸವಾಲೇನು?
ಟಾಪ್-2ಗಾಗಿ ಹೇಗಿದೆ 6 ಟೀಂ ಫೈಟ್?

ಪ್ಲೇ ಆಫ್ಸ್ ರೇಸ್ನಲ್ಲಿರೋ ತಂಡಗಳಿಗೆ ಒಂದೊಂದು ಪಂದ್ಯಗಳ ಗೆಲುವು ಎಷ್ಟು ಮುಖ್ಯ ಆಗುತ್ತೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ನಿನ್ನೆ ಮ್ಯಾಚ್. ಸೂಪರ್ ಸಂಡೇಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಟೇಬಲ್ ಟಾಪರ್ ಆಗಿದೆ. ಪಂದ್ಯಕ್ಕೂ ಮುನ್ನ ನಾಲ್ಕನೇ ಸ್ಥಾನ.. ಗೆದ್ಮೇಲೆ ನಂಬರ್ 1 ಸ್ಥಾನ. ಸೆಕೆಂಡ್ ಆಫ್ನಲ್ಲಿರೋ ಟ್ವಿಸ್ಟ್ಗಳು ಅಂದ್ರೆ ಇದೇ. ಆರ್ಸಿಬಿಯೇನೋ ಸದ್ಯಕ್ಕೆ ಸೆಫ್ ಝೋನ್ನಲ್ಲಿದೆ. ಬಟ್ ಅಸಲಿ ಆಟ ಇನ್ಮುಂದೆ ಶುರುವಾಗುತ್ತೆ. ಟಾಪ್-2ಗೆ ಹೋಗ್ಬೇಕು ಅಂದ್ರೆ ಹ್ಯಾಟ್ರಿಕ್ ವಿಕ್ಟರಿ ಬೇಕು.
ಇದನ್ನೂ ಓದಿ : ಪಂಜಾಬ್ ವಿರುದ್ಧ ಕನ್ನಡಿಗ ಕೆ.ಎಲ್ ಆಗ್ತಾರಾ ಕಿಂಗ್? – ಗೆದ್ದರೂ ಡಿಸಿಗೆ ಪ್ಲೇಆಫ್ ಎಂಟ್ರಿ ಕಷ್ಟ
ಗುಜರಾತ್ ಮತ್ತು ಲಕ್ನೋ ವಿರುದ್ಧ ಬ್ಯಾಕ್ ಟು ಬ್ಯಾಕ್ ಮ್ಯಾಚಸ್ ಸೋತಿದ್ದ ಆರ್ಸಿಬಿ ಮುಂಬೈ ವಿರುದ್ಧ ಗೆದ್ದು ಬೀಗಿದೆ. ಲಾಸ್ಟ್ ಬಾಲಲ್ಲಿ ರಣರೋಚಕವಾಗಿ ಗೆದ್ದು ಕಂ ಬ್ಯಾಕ್ ಮಾಡಿದೆ. ಸೋ ಪ್ರಸ್ತುತ 14 ಅಂಕಗಳೊಂದಿಗೆ ಸಾಲಿಡ್ ನೆಟ್ ರನ್ ರೇಟ್ ಇರೋದ್ರಿಂದ ಪಾಯಿಂಟ್ಸ್ ಟೇಬಲ್ ನಲ್ಲಿ ನಂಬರ್ 1 ಪ್ಲೇಸ್ನಲ್ಲಿದೆ. ಲೀಗ್ ಹಂತದಲ್ಲಿ ಇನ್ನು 3 ಪಂದ್ಯಗಳು ಬಾಕಿ ಇದ್ದು ಟಾಪ್-2 ಪ್ಲೇಸ್ಗೆ ಹೋಗ್ಬೇಕು ಅಂದ್ರೆ ಮೂರು ಪಂದ್ಯಗಳು ಮಸ್ಟ್ ವಿನ್ ಮ್ಯಾಚ್ ಆಗ್ಬೇಕು. ಹ್ಯಾಟ್ರಿಕ್ ವಿಕ್ಟರಿ ಬಂತು ಅಂದ್ರೆ ಬೆಂಗಳೂರನ್ನ ತಡೆಯೋರೇ ಯಾರೂ ಇರಲ್ಲ.
ಆರ್ ಸಿಬಿಗೆ ಬೇಕು ಹ್ಯಾಟ್ರಿಕ್ ವಿಕ್ಟರಿ!
ಆರ್ ಸಿಬಿ ಮುಂದಿನ 3 ಮ್ಯಾಚ್ ಗೆದ್ರೆ ಟಾಪ್-2 ಸ್ಥಾನ ಫಿಕ್ಸ್
ಕೆಕೆಆರ್, ಪಂಜಾಬ್ ಮತ್ತು ಹೈದ್ರಾಬಾದ್ ವಿರುದ್ಧ ಪಂದ್ಯಗಳು
ಕೆಕೆಆರ್ ಸತತ 4 ಮ್ಯಾಚ್ ಗೆದ್ದು ಅದ್ಭುತ ಫಾರ್ಮ್, ಪ್ಲೇ ಆಫ್ ರೇಸ್
ಪಂಜಾಬ್ ಟೀಂ ಸತತ 3 ಮ್ಯಾಚ್ ಸೋತಿದ್ರೂ ಟಫ್ ಫೈಟರ್
ಹೈದ್ರಾಬಾದ್ ತಂಡ ಅದ್ಭುತ ಫಾರ್ಮ್ ನಲ್ಲಿದ್ದು ಪ್ಲೇ ಆಫ್ ಗೆ ಹತ್ತಿರ
ಅಂಕಗಳು ಸಮ ಆದ್ರೂ ಆರ್ ಸಿಬಿಗೆ ನೆಟ್ ರನ್ ರೇಟ್ ಅಡ್ವಾಂಟೇಜ್
ಇಲ್ಲಿ ಆರ್ಸಿಬಿ ಇರೋ ಸಿಚುಯೇಷನ್ ಬೇರೆಲ್ಳಾ ತಂಡಗಳಿಗಿಂತ ಬೆಸ್ಟ್ ಅನ್ನೋ ಥರ ಇದೆ. ಯಾಕಂದ್ರೆ ನೆಟ್ ರನ್ ರೇಟ್ನಲ್ಲಿ ಆರ್ಸಿಬಿ ಹತ್ತಿರಕ್ಕೆ ಬರೋಕೂ ಯಾರಿಂದಲೂ ಆಗಲ್ಲ. ಸೋ ಬೆಂಗಳೂರು ಲಾಸ್ಟ್ ಬಾಲಲ್ಲಿ ಗೆಲ್ತಾರೋ ಇಲ್ಲ ಲಾಸ್ಟ್ ಬಾಲಲ್ಲಿ ಡಿಫೆಂಡ್ ಮಾಡಿಕೊಳ್ತಾರೋ ಒಟ್ನಲ್ಲಿ ಗೆಲ್ಬೇಕು. ಅಂಕಗಳಷ್ಟೇ ಮುಖ್ಯ ಆಗುತ್ತೆ. ಅದೂ ಅಲ್ದೇ ಮೇ 17ಕ್ಕೆ ಪಂಜಾಬ್ ವಿರುದ್ಧ ಹಾಗೇ 22ಕ್ಕೆ ಹೈದ್ರಾಬಾದ್ ವಿರುದ್ಧ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು. ಯಾಕಂದ್ರೆ ಇಬ್ರಿಬ್ರೂ ಕೂಡ ಟಾಪ್-2ನಲ್ಲಿ ಸ್ಟ್ರಾಂಗ್ ಕಂಟೆಂಡರ್ಸ್. ಸೋ ಇವ್ರ ವಿರುದ್ಧ ಗೆದ್ರೆ ಆರ್ಸಿಬಿ ಟಾಪ್ನಲ್ಲಿರುತ್ತೆ. ಒಂದ್ವೇಳೆ ಸೋತ್ರೆ 3 ಅಥವಾ 4ನೇ ಸ್ಥಾನಕ್ಕೆ ಜಾರುತ್ತೆ. ಹೀಗಾಗಿ ಪಂಜಾಬ್ ಮತ್ತು ಹೈದ್ರಾಬಾದ್ ವಿರುದ್ಧದ ಪಂದ್ಯಗಳು ಆರ್ಸಿಬಿಗೆ ಇರೋ ದೊಡ್ಡ ಟಾಸ್ಕ್.. ಆರ್ಸಿಬಿ ಪ್ಲೇ ಆಫ್ ಜರ್ನಿ ನೋಡಿದ್ರೆ ಉಳಿದ 3 ಪಂದ್ಯಗಳ ಪೈಕಿ 1 ಪಂದ್ಯ ಗೆದ್ರೆ ಸೇಫ್ ಜೋನ್ನಲ್ಲಿ ಇರ್ತಾರೆ. 2 ಮ್ಯಾಚ್ ಗೆದ್ರೆ ಶತಾಯ ಗತಾಯ ಟಾಪ್ 4ನಲ್ಲಿ ಇರ್ತಾರೆ. ಮೂರಕ್ಕೆ ಮೂರೂ ಗೆದ್ರೆ ಟಾಪ್-2 ಟಿಕೆಟ್ ಪಕ್ಕಾ. ಇದು ಈಗಿರೋ ಸಿಂಪಲ್ ಲಾಜಿಕ್. ಹಾಗಂತ ಇಲ್ಲಿ ಸ್ವಲ್ಪ ಯಾಮಾರಿದ್ರೂ ದೊಡ್ಡ ಹೊಡೆತಯೇ ಬೀಳುತ್ತೆ. ಯಾಕಂದ್ರೆ ಟಾಪ್-2 ಸ್ಥಾನಕ್ಕೆ ದೊಡ್ಡ ರೇಸ್ ಇದೆ.
ಟಾಪ್-2ಗಾಗಿ 6 ಟೀಂ ರೇಸ್!
ತಂಡ ಈಗಿರುವ ಅಂಕ ಬಾಕಿ ಪಂದ್ಯ ಒಟ್ಟು ಅಂಕ
ಬೆಂಗಳೂರು 14 3 20
ಹೈದ್ರಾಬಾದ್ 14 3 20
ಗುಜರಾತ್ 14 3 20
ಪಂಜಾಬ್ 13 4 21
ಚೆನ್ನೈ 12 4 18
ರಾಜಸ್ಥಾನ 12 4 18
ಇಲ್ಲಿ 6 ತಂಡಗಳಿಗೆ ಟಾಪ್ 2 ಅವಕಾಶ ಇದೆ. ಬಟ್ ಸೋಲುಗೆಲುವಿನ ಪ್ರಮಾಣದಲ್ಲಿ ಒಂದಷ್ಟು ಕ್ಯಾಲ್ಕುಲೇಷನ್ಸ್ ಇದೆ. ಅಂದ್ರೆ ಟಾಪ್ ನಲ್ಲಿರೋ ಟೀಮ್ಸ್ ಒಂದೆರಡು ಮ್ಯಾಚಸ್ ಸೋತು ಮಿಡಲ್ ನಲ್ಲಿರೋ ಟೀಮ್ಸ್ ಎಲ್ಲಾ ಪಂದ್ಯ ಗೆಲ್ಬೇಕಾಗುತ್ತೆ. ಅಪ್ಕಮಿಂಗ್ ಮ್ಯಾಚ್ಗಳ ರಿಸಲ್ಟ್ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಬಟ್ ಸದ್ಯಕ್ಕಂತೂ ಮುಂಬೈ ಹಾಗೇ ಲಕ್ನೋ ತಂಡಗಳು ಅಧಿಕೃತವಾಗಿ ಈ ಸೀಸನ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿವೆ. ಮುಂದಿನ ಎಲ್ಲಾ ಮ್ಯಾಚ್ ಗೆದ್ರೂ ಚಾನ್ಸೇ ಇಲ್ಲ. ಇನ್ನು ಡೆಲ್ಲಿ ಟೀಂಗೂ ಅವಕಾಶ ಸಿಗಲ್ಲ. ಯಾಕಂದ್ರೆ ಉಳಿದಿರೋ ಮೂರು ಪಂದ್ಯ ಗೆದ್ರೂ 14 ಅಂಕ ಆಗುತ್ತೆ. ಆಲ್ರೆಡಿ ಮೂರು ಟೀಮ್ಸ್ 14 ಅಂಕದಲ್ಲಿವೆ. ಸೋ ಡೆಲ್ಲಿ ಕನಸೂ ಕೂಡ ಭಗ್ನವಾಗಿದೆ. ಸದ್ಯಕ್ಕೆ ಟಾಪ್ 4 ರೇಸ್ಗೆ 7 ತಂಡಗಳು ಫೈಟ್ನಲ್ಲಿದ್ದು ಹಾವು ಏಣಿ ಆಟ ಆಲ್ರೆಡಿ ಸ್ಟಾರ್ಟ್ ಆಗಿದೆ. ಬೆಂಗಳೂರು ಈ ಆಟದಲ್ಲಿ ಒಳ್ಳೆ ಸ್ಟೇಜ್ನಲ್ಲಿದ್ದು ಹ್ಯಾಟ್ರಿಕ್ ವಿಕ್ಟರಿ ಬಂತು ಅಂದ್ರೆ ಕ್ವಾಲಿಪೈಯರ್ 1 ಟಿಕೆಟ್ ಕನ್ಫರ್ಮ್ ಆಗುತ್ತೆ.

ನೋಡಿರಿ

