ಮೂರು ಸಲ RCB ಕಪ್ ಮಿಸ್.. ಫೈನಲಿಸ್ಟ್ ಆದಾಗ ಮಾಡ್ಕೊಂಡ ಎಡವಟ್ಟುಗಳೇನು?

ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಇದುವರೆಗೂ ಕಪ್ ಗೆಲ್ಲದೇ ಇರ್ಬೋದು. ಆದ್ರೆ ಯಾವತ್ತೂ ವೀಕ್ ಟೀಂ ಅನ್ನುಸ್ಕೊಂಡಿಲ್ಲ. ಯಾಕಂದ್ರೆ 17 ಸೀಸನ್ಗಳಲ್ಲಿ 10 ಸಲ ಪ್ಲೇಆಫ್ಸ್ಗೆ ಸೆಲೆಕ್ಟ್ ಆಗೋದಂದ್ರೆ ತಮಾಷೆ ಅಲ್ಲ. ಈ ವರ್ಷನೂ ಸೇರಿ ಒಟ್ಟು 4 ಸಲ ಫೈನಲಿಸ್ಟ್ ಆಗಿದ್ದಾರೆ. ಬಟ್ ಮೂರು ಸಲ ಸೈಕಲ್ ಗ್ಯಾಪಲ್ಲಿ ಟ್ರೋಫಿ ಮಿಸ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಕಪ್ ಕನಸಿನ ಹೊಸ್ತಿಲಲ್ಲಿರೋ ಆರ್ಸಿಬಿ ಈ ಹಿಂದೆ 3 ಸಲ ಫೈನಲಿಸ್ಟ್ ಆದಾಗ ಮಾಡ್ಕೊಂಡ ಎಡವಟ್ಟುಗಳೇನು? ಟ್ರೋಫಿ ವಂಚಿತರಾಗಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಭಾರೀ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಆದೇಶ
18ನೇ ಸೀಸನ್ ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಸ್ಟೇಜ್ನಲ್ಲಿದೆ. ಈ ಸಲ ಕಪ್ ಗೆಲ್ಲೋರು ಯಾರು ಅನ್ನೋ ಕೋಟಿ ಕೋಟಿ ಅಭಿಮಾನಿಗಳ ಪ್ರಶ್ನೆಗೆ ಎರಡೇ ಎರಡು ದಿನಗಳಲ್ಲಿ ಉತ್ತರ ಸಿಗ್ಲಿದೆ. ಈಗಾಗ್ಲೇ ಫೈನಲಿಸ್ಟ್ ಆಗಿ ಸೆಲೆಕ್ಟ್ ಆಗಿರೋ ಆರ್ಸಿಬಿ ಭರ್ಜರಿ ಪ್ರಾಕ್ಟೀಸ್ ಮಾಡ್ತಿದೆ. ಮತ್ತೊಂದೆಡೆ ಇವತ್ತು ಕ್ವಾಲಿಫೈಯರ್ 2 ಮ್ಯಾಚ್ ನಡೆಯಲಿದ್ದು ಗೆದ್ದವ್ರು ಸೆಕೆಂಡ್ ಫೈನಲಿಸ್ಟ್ ಆಗಿ ಸೆಲೆಕ್ಟ್ ಆಗ್ತಾರೆ. ಜೂನ್ 3ಕ್ಕೆ ಅಂದ್ರೆ ಮಂಗಳವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಫೈನಲ್ ಮ್ಯಾಚ್ ನಡೆಯಲಿದೆ. ಈ ಮ್ಯಾಚಲ್ಲಿ ಗೆದ್ರೆ ಈ ಸಲ ಕಪ್ ನಮ್ದೇ. ಬಟ್ ಈ ಹಿಂದಿನ ಮೂರು ಫೈನಲ್ ಪಂದ್ಯಗಳಲ್ಲಿ ಆದ ಮಿಸ್ಟೇಕ್ಸ್ ಈ ಸಲ ರಿಪೀಟ್ ಮಾಡಬಾರ್ದು ಅಷ್ಟೇ.
2009ರಲ್ಲಿ ಫಸ್ಟ್ ಫೈನಲ್.. ಡೆಕ್ಕನ್ ಚಾರ್ಜರ್ಸ್ ಎದುರು ಸೋಲು!
2008ರಿಂದ ಐಪಿಎಲ್ ಲೀಸ್ಟ್ ಸ್ಟಾರ್ಟ್ ಆಗಿದ್ದು ಟೂರ್ನಿ ಶುರುವಾದ ಎರಡೇ ವರ್ಷಕ್ಕೆ ಆರ್ಸಿಬಿ ಫೈನಲಿಸ್ಟ್ ಆಗಿತ್ತು. 2009ರಲ್ಲಿ ನಡೆದ ಟೂರ್ನಿ ವೇಳೆ ಭಾರತದಲ್ಲಿ ಲೋಕಸಭಾ ಚುನಾವಣೆ ನಡೀತಿತ್ತು. ಹೀಗಾಗಿ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. ಅನಿಲ್ ಕುಂಬ್ಳೆ ನಾಯಕತ್ವದಲ್ಲಿ RCB ಮೊದಲ ಬಾರಿಗೆ ಫೈನಲ್ ತಲುಪಿತ್ತು. ಮೇ 24, 2009 ರಂದು ಜೋಹಾನ್ಸ್ಬರ್ಗ್ನಲ್ಲಿ ಫೈನಲ್ ಪಂದ್ಯ ಆಯೋಜನೆ ಮಾಡ್ಲಾಗಿತ್ತು. RCB ತಂಡ ಆ್ಯಡಮ್ ಗಿಲ್ ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಎದುರಿಸಿತು. ಆಡಮ್ ಗಿಲ್ಕ್ರಿಸ್ಟ್ DC ತಂಡದ ನಾಯಕರಾಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ DC ತಂಡವು 6 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಹರ್ಷಲ್ ಗಿಬ್ಸ್ 53 ರನ್ ಮತ್ತು ಆಂಡ್ರ್ಯೂ ಸೈಮಂಡ್ಸ್ 33 ರನ್ ಗಳಿಸಿದರು. 144 ರನ್ಗಳ ಗುರಿಯನ್ನು ಬೆನ್ನಟ್ಟಿದ RCBಗೆ ಪ್ರಗ್ಯಾನ್ ಓಜಾ ಬೌಲಿಂಗ್ ದಾಳಿಕೆ ಶರಣಾಗಿತ್ತು. 28 ರನ್ ನೀಡಿ 3 ವಿಕೆಟ್ ಪಡೆದಿದ್ದ ಪ್ರಗ್ಯಾನ್ ಆರ್ ಸಿಬಿ ಟ್ರೋಫಿ ಕನಸಿಗೆ ಕೊಳ್ಳಿ ಇಟ್ಟಿದ್ರು. ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಆರ್ ಸಿಬಿ 9 ವಿಕೆಟ್ ನಷ್ಟಕ್ಕೆ ಕೇವಲ 137 ಮಾತ್ರ ಗಳಿಸಿ 6 ರನ್ಗಳಿಂದ ಸೋಲಬೇಕಾಯ್ತು.
2011ರಲ್ಲಿ ಸಿಎಸ್ ಕೆ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು!
ಇದಾದ ಎರಡೇ ವರ್ಷ ಅಂದ್ರೆ 2011ರಲ್ಲಿ ಮತ್ತೆ ಆರ್ ಸಿಬಿ ಫೈನಲ್ ಪ್ರವೇಶ ಪಡೆದಿತ್ತು. ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ RCBಯು 2ನೇ ಬಾರಿ ಫೈನಲ್ ಸೇರಿತ್ತು. ಫೈನಲ್ ಪಂದ್ಯದಲ್ಲಿ CSK ತಂಡ ಕಣಕ್ಕಿಳಿದಿತ್ತು. ಈ ವೇಳೆ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಚೆನ್ನೈ ಪರ ಮುರಳಿ ವಿಜಯ್ 95 ರನ್ ಗಳಿಸಿದ್ರೆ ಮೈಕೆಲ್ ಹಸ್ಸಿ 63 ರನ್ ಬಾರಿಸಿದ್ದರು. 206 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಆರ್ ಸಿಬಿ ಪರ ಆವತ್ತು ಬಿಗ್ ಹಿಟ್ಟರ್ಸೇ ಕೈಕೊಟ್ಟಿದ್ರು. ಓಪನರ್ ಆಗಿ ಆಡಿದ್ದ ಮಯಾಂಕ್ ಅಗರ್ವಾಲ್ ಕೇವಲ 10 ರನ್ಗಳಿಗೆ ಔಟ್ ಆಗಿದ್ರು. ಕ್ರಿಸ್ ಗೇಲ್ 0, ವಿರಾಟ್ ಕೊಹ್ಲಿ 35, ಎಬಿಡಿ 18, ಕ್ಯಾಪ್ಟನ್ ವೆಟ್ಟೋರಿ ಡಕ್ ಔಟ್ ಆಗಿದ್ರು. ಆವತ್ತು ಆರ್ ಸಿಬಿ ಪರ ಹೆಚ್ಚು ರನ್ ಗಳಿಸಿದ್ದೇ ಸೌರಭ್ ತಿವಾರಿ ಅದೂ ಕೂಡ 42 ರನ್. ಅಂತಿಮಬಾಗಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ 58 ರನ್ಗಳಿಂದ ಸೋತಿತು.
2016ರಲ್ಲೂ ಸ್ವಲ್ಪದರಲ್ಲೇ ಟ್ರೋಫಿ ಕಳ್ಕೊಂಡ ಆರ್ ಸಿಬಿ!
ಇನ್ನು ಆರ್ಸಿಬಿ 2016ರಲ್ಲೂ ಫೈನಲ್ಗೆ ಪ್ರವೇಶ ಪಡೆದಿತ್ತು. ಆ ಸೀಸನ್ನಲ್ಲಿ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ ಅತ್ಯದ್ಭುತ ಫಾರ್ಮ್ನಲ್ಲಿದ್ರು. ಈ ಆವೃತ್ತಿಯಲ್ಲಿ ಆಡಿದ್ದ 16 ಇನಿಂಗ್ಸ್ಗಳಿಂದ ವಿರಾಟ್ ಕೊಹ್ಲಿ 81.08ರ ಸರಾಸರಿ ಮತ್ತು 152.03ರ ಸ್ಟ್ರೈಕ್ ರೇಟ್ನಲ್ಲಿ 973 ರನ್ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು 4 ಶತಕಗಳು ಹಾಗೂ 7 ಅರ್ಧಶತಕಗಳು ಸೇರಿದ್ವು. ಮೇ 29ರಂದು ಬೆಂಗಳೂರಿನಲ್ಲಿ ನಡೆದ ಫೈನಲ್ನಲ್ಲಿ RCBಯು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತು. ಮೊದಲು ಬ್ಯಾಟ್ ಮಾಡಿದ್ದ SRH ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಸೋ 209 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿಗೆ ಸಾಲಿಡ್ ಓಪನಿಂಗ್ ಸಿಕ್ಕಿತ್ತು. ವಿರಾಟ್ ಕೊಹ್ಲಿ 54 ರನ್ ಬಾರಿಸಿದ್ರು. 114 ರನ್ಗಳ ಜೊತೆಯಾಟವಾಡಿದ್ರು. ಆದ್ರೆ ನೆಕ್ಸ್ಟ್ ಬಂದ ಬ್ಯಾಟರ್ಸ್ ಕಂಪ್ಲೀಟ್ ಫೇಲ್ಯೂರ್ ಆಗಿದ್ರು. ಎಬಿಡಿ 5 ರನ್, ಕೆಎಲ್ ರಾಹುಲ್ 11 ರನ್, ಶೇನ್ ವ್ಯಾಟ್ಸನ್ 11 ರನ್, ಸಚಿನ್ ಬೇಬಿ 18 ರನ್, ಸ್ಟುವರ್ಟ್ ಬಿನ್ನಿ 9 ಹೀಗೆ ಎಲ್ಲರೂ ಪೆವಿಲಿಯನ್ ಪರೇಡ್ ನಡೆಸಿದ್ರು. ಪರಿಣಾಮ RCB 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಎಂಟು ರನ್ಗಳಿಂದ ಸೋತಿತು.
ಸದ್ಯ ಕಳೆದ 17 ಸೀಸನ್ಗಳಲ್ಲಿ 3 ಸಲ ಟ್ರೋಫಿ ಮಿಸ್ ಮಾಡಿಕೊಂಡಿರೋ ಆರ್ಸಿಬಿ ಇದೀಗ 18ನೇ ಸೀಸನ್ ಗೆ ನಾಲ್ಕನೇ ಸಲ ಫೈನಲಿಸ್ಟ್ ಆಗಿದೆ. ಜೂನ್ 3ಕ್ಕೆ ಚಾಂಪಿಯನ್ಗಾಗಿ ಫೈಟ್ ನಡೆಸಲಿದೆ. ಈ ಸಲ ಕಪ್ ನಮ್ದೇ ಆಗಲಿ ಅಂತಾ ಕೋಟ್ಯಂತರ ಅಭಿಮಾನಿಗಳು ಕೂಡ ಕಾಯ್ತಿದ್ದಾರೆ.