ಸಾಲ್ಟ್ ಬೇಕಾ.. ಬೆಥೆಲ್ ಸಾಕಾ? – ರಿವೇಂಜ್ ಗೂ ಮೊದಲು ಇಂಜುರಿ
ಹೇಗಿರುತ್ತೆ RCB ಪ್ಲೇಯಿಂಗ್ 11?

ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ಟೇಜ್ ಮ್ಯಾಚ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಈ ಮ್ಯಾಚ್ ಇಬ್ಬರಿಗೂ ಮೋಸ್ಟ್ ಇಂಪಾರ್ಟೆಂಟ್. ಒಂದ್ಕಡೆ ಬೆಂಗಳೂರಿಗೆ ರಿವೇಂಜ್ ಮ್ಯಾಚ್ ಆಗಿದ್ರೆ ಅತ್ತ ಡೆಲ್ಲಿಗೆ ಕಂ ಬ್ಯಾಕ್ ಮಾಡೋಕೆ ಕ್ರೂಶಿಯಲ್ ಟೈಂ. ಕಳೆದ ಮ್ಯಾಚಲ್ಲಿ ಆರ್‌ಸಿಬಿ ಟೀಂ ಜಿಟಿ ವಿರುದ್ಧ ಗೆದ್ದು ಬರ್ತಿದ್ರೆ ಅತ್ತ ಡೆಲ್ಲಿ ತಂಡ ಪಂಜಾಬ್ ವಿರುದ್ಧ ಹೈಸ್ಕೋರ್ ಮಾಡಿಯೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ದೇ ಸೋತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಎರಡೂ ಕಡೆಯೂ ಬಿಗ್ ಫೈಟ್ ಅಂತೂ ಇರುತ್ತೆ. ಈ ಮ್ಯಾಚ್ಗೆ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಬಿಗ್ ಟ್ವಿಸ್ಟ್ ಕೂಡ ಇದೆ.
ಇದನ್ನೂ ಓದಿ : SUPER OVER ಅಲ್ಲ ಕಾಮಿಡಿ ಓವರ್ – ಸೋಲೋಕಂತಲೇ ಆಡ್ತಿದ್ದಾರಾ ಲಕ್ನೋ?
19ನೇ ಸೀಸನ್ನ ಫಸ್ಟ್ ಆಫ್ನ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಟಾಪ್ನಲ್ಲಿರೋ ಆರ್ಸಿಬಿಗೆ ಡೆಲ್ಲಿ ವಿರುದ್ಧದ ಪಂದ್ಯ ಈ ಸೀಸನ್ನ ಮೊದಲ ರಿವೇಂಜ್ ಮ್ಯಾಚ್ ಆಗುತ್ತೆ. ಡೆಲ್ಲಿ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಆಡಿ ಸೋತಿದ್ದ ಬೆಂಗಳೂರಿಗೆ ಇದು ಮಸ್ಟ್ ಌಂಡ್ ಶುಡ್ ಗೆದ್ದು ರಿವೇಂಜ್ ಗಿಫ್ಟ್ ಕೊಡ್ಬೇಕು. ಅದೂ ಅಲ್ದೇ ಅರುಣ್ ಜೇಟ್ಲಿ ಮೈದಾನ ಕಿಂಗ್ ವಿರಾಟ್ ಕೊಹ್ಲಿಗೆ ಹೋಂ ಗ್ರೌಂಡ್. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪರ್ಫಾಮೆನ್ಸ್ ಕೂಡ ಇಂಪಾರ್ಟೆಂಟ್ ಆಗುತ್ತೆ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 67 ಬಾಲಲ್ಲೇ 152 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಅದೂ ಅಲ್ದೇ 2018ರಲ್ಲಿ ಆರ್‌ಸಿಬಿ ಬಿಟ್ಟ ಮೇಲೆ 789 ರನ್ ಕಲೆಹಾಕಿದ್ದಾರೆ. ಇದು ಐಪಿಎಲ್‌ನಲ್ಲಿ ಯಾವುದೇ ತಂಡದ ವಿರುದ್ಧ ಗಳಿಸಿದ ಹೈಸ್ಕೋರ್ ಇದು. ಹಾಗೇ ಹೇಜಲ್‌ವುಡ್ ವಿರುದ್ಧ 100+ ರನ್ ಕಲೆಹಾಕಿದ ಏಕೈಕ ಬ್ಯಾಟರ್ ರಾಹುಲ್. ಸೋ ಆರ್‌ಸಿಬಿ ವಿರುದ್ಧ ಆಡೋದಂದ್ರೆ ರಾಹುಲ್ಗೂ ಫೇವರೆಟ್. ಹೀಗಾಗಿ ಈ ಪಂದ್ಯದಲ್ಲೂ ಅವ್ರ ಪರ್ಫಾಮೆನ್ಸ್ ಬಗ್ಗೆ ತುಂಬಾನೇ ನಿರೀಕ್ಷೆ ಇರುತ್ತೆ. ಮತ್ತೊಂದೆಡೆ ಡೆಲ್ಲಿ ವಿರುದ್ಧ ಪಂದ್ಯಕ್ಕೆ ಸಜ್ಜಾಗ್ತಿರೋ ಬೆಂಗಳೂರಿಗೆ ಎರಡು ಬ್ಯಾಡ್ ನ್ಯೂಸ್ ಇದೆ.
ಫಿಲ್ ಸಾಲ್ಟ್ ಮತ್ತು ರಸಿಕ್ ಸಲಾಂ ದಾರ್ ಗೆ ಇಂಜುರಿ!
ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಸ್ವಲ್ಪ ಸೆಟ್ ಬ್ಯಾಕ್ ಆಗಿದೆ. ಏನಂದ್ರೆ ಆರ್ಸಿಬಿಯ ಓಪನರ್ ಫಿಲ್ ಸಾಲ್ಟ್ ಇಂಜುರಿ ಕಾರಣಕ್ಕೆ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಜೇಕಬ್ ಬೆಥೆಲ್ ಓಪನರ್ ಆಗಿ ಕಣಕ್ಕಿಳಿದಿದ್ರು. ಬಟ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಹಾಗೇ ಮತ್ತೊಬ್ಬ ಆಟಗಾರ ರಸಿಕ್ ಸಲಾಂ ದಾರ್ ಬೌಲಿಂಗ್ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡ್ತಿದ್ರೂ ಸದ್ಯ ಸ್ನಾಯು ಸೆಳೆತದಿಂದ ಬಳಲ್ತಿದ್ದಾರೆ. ಗುಜರಾತ್ ವಿರುದ್ಧ 3 ಓವರ್ ಗಳಲ್ಲಿ 9.33ರ ಎಕಾನಮಿಯಲ್ಲಿ 28 ರನ್ಸ್ ಕೊಟ್ಟಿದ್ರು. ಸದ್ಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹೊರಗುಳಿಯೋ ಸಾಧ್ಯತೆಗಳಿವೆ. 4 ಪಂದ್ಯಗಳಲ್ಲಿ 5 ವಿಕೆಟ್ ಪಡೆದಿರುವ ರಸಿಕ್ ಸಲಾಂ ದಾರ್ ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಹಾಗೇನಾದ್ರೂ ರಸಿಕ್ ಪ್ಲೇಯಿಂಗ್ 11ನಿಂದ ಹೊರ ಬಿದ್ರೆ ಮಂಗೇಶ್ ಯಾದವ್ ಗೆ ಅವಕಾಶ ಸಿಗಬಹುದು. ಯಾಕಂದ್ರೆ ಅಭಿನಂದನ್ ಸಿಂಗ್ ಮತ್ತು ಮಂಗೇಶ್ ಯಾದವ್ ಮಾತ್ರ ಆರ್‌ಸಿಬಿ ತಂಡದಲ್ಲಿ ಭಾರತೀಯ ವೇಗದ ಬೌಲರ್‌ಗಳಾಗಿದ್ದಾರೆ. ಅಭಿನಂದನ್ ಸಿಂಗ್ ಈಗಾಗಲೇ ಆರ್‌ಸಿಬಿ ಪರ 3 ಪಂದ್ಯಗಳನ್ನು ಆಡಿದ್ದಾರೆ. ಪ್ರತಿ ಓವರ್‌ಗೆ 12.62 ರನ್ ರೇಟ್‌ನಲ್ಲಿ ರನ್ಸ್ ಕೊಟ್ಟು 3 ವಿಕೆಟ್ ತಗೊಂಡಿದ್ದಾರೆ. ತುಂಬಾ ಎಕ್ಸ್ಪೆನ್ಸಿವ್ ಅಂತಾನೇ ಹೊರಗಿಡಲಾಗಿದೆ. ಹೀಗಾಗಿ, ಈಗ ಮಂಗೇಶ್ ಯಾದವ್ ಅವರನ್ನು ಕರೆತರುವ ಸಾಧ್ಯತೆಯಿದೆ.
ಡೆಲ್ಲಿ ಬೇಟೆಗೆ ಸಜ್ಜಾಯ್ತು ಬೆಂಗಳೂರು!
ವಿರಾಟ್ ಕೊಹ್ಲಿ
ಜೇಕಬ್ ಬೆಥೆಲ್
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಟಿಮ್ ಡೇವಿಡ್
ಜಿತೇಶ್ ಶರ್ಮಾ
ಕೃನಾಲ್ ಪಾಂಡ್ಯ
ರೊಮಾರಿಯೊ ಶೆಫರ್ಡ್
ಭುವನೇಶ್ವರ್ ಕುಮಾರ್
ಮಂಗೇಶ್ ಯಾದವ್
ಜೋಶ್ ಹೇಝಲ್ ವುಡ್
ಸುಯಾಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್)
ಇಲ್ಲಿ ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆಗಳನ್ನ ನಿರೀಕ್ಷೆ ಮಾಡ್ಬೋದು. ಆಲ್ರೆಡಿ ಪ್ಲೇ ಆಫ್ ಲೆಕ್ಕಾಚಾರ ಶುರು ಆಗಿರೋದ್ರಿಂದ ಒಂದೊಂದು ಪಂದ್ಯ ಕೂಡ ಕ್ರೂಶಿಯಲ್ ಆಗ್ತಾ ಹೋಗುತ್ತೆ. ಆರ್‌ಸಿಬಿ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಡೆಲ್ಲಿ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 7ನೇ ಸ್ಥಾನದಲ್ಲಿದೆ. ಅದೂ ಅಲ್ದೇ ಡೆಲ್ಲಿ ಟೀಂ ಕೊನೆ 5 ಪಂದ್ಯಗಳ ಪೈಕಿ 4ರಲ್ಲಿ ಸೋತಿದೆ. ಇನ್ನೊಂದು ಸೋಲು ಎದುರಾದ್ರೂ ಪ್ಲೇ-ಆಫ್ ಹಾದಿ ಕಠಿಣವಾಗುತ್ತೆ. ಹೀಗಾಗಿ ಅವ್ರು ಕೂಡ ಕಂ ಬ್ಯಾಕ್ ಮಾಡೋಕೆ ಕಾಯ್ತಿದ್ದಾರೆ. ಲಾಸ್ಟ್ ಮ್ಯಾಚಲ್ಲಿ ಲುಂಗಿ ಎಂಗಿಡಿ ಕೂಡ ಇಂಜುರಿ ಆಗಿರೋದ್ರಿಂದ ಬೌಲಿಂಗ್ ವೀಕ್ ಆಗ್ಬಹುದು.

ನೋಡಿರಿ

