10 ಪ್ಲೇ ಆಫ್ಸ್.. 4 ಫೈನಲ್.. 1 ಕಪ್ – RCBಗೆ ಕ್ಲೈಮ್ಯಾಕ್ಸ್ ಪಂದ್ಯಗಳೇ ಶಾಪ
ಬೆಂಗಳೂರಿನ ಮಹಾತಪಸ್ಸು ಎಂಥಾದ್ದು?

10 ಪ್ಲೇ ಆಫ್ಸ್.. 4 ಫೈನಲ್.. 1 ಕಪ್ – RCBಗೆ ಕ್ಲೈಮ್ಯಾಕ್ಸ್ ಪಂದ್ಯಗಳೇ ಶಾಪಬೆಂಗಳೂರಿನ ಮಹಾತಪಸ್ಸು ಎಂಥಾದ್ದು?

ಐಪಿಎಲ್ ಇತಿಹಾಸದಲ್ಲೇ ದಿ ಮೋಸ್ಟ್ ಫ್ಯಾನ್ ಬೇಸ್ಡ್  ಮೋಸ್ಟ್ ವ್ಯಾಲ್ಯುಯೇಬಲ್ ಟೀಂ ಅಂದ್ರೆ ಅದು ಆರ್​ಸಿಬಿ. ರೆಕಾರ್ಡ್ಸ್ ಲಿಸ್ಟ್ ಓಪನ್ ಮಾಡಿದ್ರೂ ಬೆಂಗಳೂರೇ ನಂಬರ್ ಒನ್. ಹೀಗಿದ್ರೂ ಟ್ರೋಫಿ ಗೆಲ್ಲೋಕೆ 18 ವರ್ಷಗಳೇ ಬೇಕಾಯ್ತು. ಬರೋಬ್ಬರಿ 17 ವರ್ಷಗಳ ಮಹಾತಪಸ್ಸಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದ್ರು. ಐಪಿಎಲ್​ನಲ್ಲಿ ಇತಿಹಾಸ ಸೃಷ್ಟಿಸಿದ್ರು. ಹಾಗಂತ ಬೆಂಗಳೂರು ಏನು ಕಳಪೆ ಟೀಂ ಆಗಿರಲಿಲ್ಲ. ಕಳಪೆ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಟ್ರೋಫಿ ಅಂತಾ ಬಂದಾಗ ಮರೀಚಿಕೆಯಾಗಿತ್ತಷ್ಟೇ.

ಇದನ್ನೂ ಓದಿ : ಅಕ್ಕಿ ಆನ್ ಫೈಯರ್- 3 ವಿಕೆಟ್ ಉರುಳಿಸಿ ಚೀಟಿ ತೋರಿಸಿದ ಲಕ್ನೋ ವೇಗಿ ಆಕಾಶ್ ಸಿಂಗ್

18ನೇ ಸೀಸನ್​ನಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್​ನಲ್ಲೂ ಕಪ್ ಗೆಲ್ಲೋ ಫೇವರೆಟ್ ಟೀಂ. ಲಾಸ್ಟ್ ಸೀಸನ್​ನ ಚಾಂಪಿಯನ್ ಪ್ಲೇಯರ್​ಗಳೇ ಕಂಟಿನ್ಯೂ ಆಗಿರೋದ್ರಿಂದ 2ನೇ ಕಪ್​ ನಿರೀಕ್ಷೆ ಮಾಡ್ಬೋದು. ಪರ್ಫಾಮೆನ್ಸ್ ಕೂಡ ಹಾಗೇ ಇದೆ. ಒಂದೆರಡು ಪಂದ್ಯಗಳಲ್ಲಿ ಎಡವಿದ್ರೂ ಗ್ರೇಟ್ ಕಂ ಬ್ಯಾಕ್ ಮಾಡಿ ಕನ್ಸಿಸ್ಟೆನ್ಸಿ ತೋರಿಸ್ತಿದ್ದಾರೆ. ಹೀಗೆ ಸೆಕೆಂಡ್ ಟ್ರೋಫಿ ನಿರೀಕ್ಷೆಯಲ್ಲಿರೋ ಬೆಂಗಳೂರು ಪ್ಲೇ ಆಫ್ಸ್ ಕ್ವಾಲಿಫೈನಲ್ಲೂ ಹಿಂದೆ ಬಿದ್ದಿರಲಿಲ್ಲ. ಆದ್ರೆ ಕಪ್ ಮಾತ್ರ ಕೈ ಸೇರ್ತಾ ಇರ್ಲಿಲ್ಲ ಅಷ್ಟೇ.

18 ಸೀಸನ್.. 10 ಸಲ ಪ್ಲೇ ಆಫ್ಸ್.. 4 ಸಲ ಫೈನಲ್.. 1 ಕಪ್!

2008ರಲ್ಲಿ ಐಪಿಎಲ್ ಆರಂಭವಾದಾಗ ಉದ್ಘಾಟನಾ ಪಂದ್ಯದಿಂದ ಹಿಡಿದು 19ನೇ ಸೀಸನ್​ ವರೆಗೂ ಆರ್​ಸಿಬಿ ಎಲ್ಲಾ ಸೀಸನ್​ಗಳನ್ನೂ ಆಡ್ಕೊಂಡು ಬಂದಿದೆ. ಕಳೆದ 18 ಆವೃತ್ತಿಗಳಲ್ಲಿ 10 ಬಾರಿ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. 2026 ರಲ್ಲಿ 11 ನೇ ಬಾರಿ ಪ್ಲೇಆಫ್ ಪ್ರವೇಶ ಮಾಡಿ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದೆ. 12 ಬಾರಿ ಪ್ಲೇ ಆಫ್ಸ್​​ಗೇರಿರುವ ಸಾಧನೆ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಪ್ಲೇಆಫ್‌ಗೆ ಹೆಚ್ಚು ಬಾರಿ ಅರ್ಹತೆ ಪಡೆದಿರುವ ದಾಖಲೆ ಮಾಡಿದೆ.

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2025ರವರೆಗೆ 10 ಬಾರಿ ಪ್ಲೇ ಆಫ್ಸ್​ಗೆ ಅರ್ಹತೆ ಪಡೆದುಕೊಂಡಿದೆ. ಹೀಗಿದ್ರೂ ಅದನ್ನ ವಿನ್ನಿಂಗ್ ಮೂಮೆಂಟ್​ವರೆಗೂ ಕನ್ವರ್ಟ್ ಮಾಡೋಕೆ ಸಾಧ್ಯವಾಗಿರಲಿಲ್ಲ. 2009, 2010, 2011, 2015, 2016, 2020, 2021, 2022, 2024, 2025 ಹೀಗೆ 10 ಆವೃತ್ತಿಗಳಲ್ಲಿ ಟಾಪ್​ 4ನಲ್ಲಿ ಸ್ಥಾನ ಪಡೆದಿದೆ. ಹಾಗೇ 4 ಸಲ ಫೈನಲ್​ಗೂ ಏರಿದೆ. 2009ರಲ್ಲಿ ಅಂದ್ರೆ ಎರಡನೇ ಆವೃತ್ತಿಯಲ್ಲೇ ಫೈನಲ್​ಗೂ ತಲುಪಿದ್ದ ಬೆಂಗಳೂರು ರನ್ನರ್ ಅಪ್ ಆಗಿತ್ತು. ಆ ನಂತ್ರ 2011ರಲ್ಲಿ ಮತ್ತೆ ಫೈನಲ್ ಗೆ ಬಂದ್ರೂ ಮತ್ತೆ ರನ್ನರ್ ಅಪ್.. 2016ರಲ್ಲಿ ಮತ್ತೆ ಫೈನಲ್​ನಲ್ಲಿ ನಿರಾಸೆ.. ರನ್ನರ್​ ಅಪ್.. ಹೀಗೆ ಮೂರು ಸಲ ಒಂದೇ ಹೆಜ್ಜೆಯಲ್ಲಿ ಟ್ರೋಫಿ ಮಿಸ್ ಮಾಡಿಕೊಂಡಿದ್ದ ಬೆಂಗಳೂರು ಕೊನೆಗೂ 2025ರಲ್ಲಿ ಪಂಜಾಬ್ ತಂಡವನ್ನ ಸೋಲಿಗೆ ಟ್ರೋಫಿ ಗೆದ್ದು ಬೀಗಿದೆ

ಪ್ಲೇ ಆಫ್ಸ್ ಮತ್ತು ಟ್ರೋಫಿ ಗೆದ್ದ ತಂಡಗಳು!

ತಂಡ                            ಪ್ಲೇ ಆಫ್ಸ್ ಸಂಖ್ಯೆ                    ಪ್ರಶಸ್ತಿಗಳ ಸಂಖ್ಯೆ

ಚೆನ್ನೈ                             12 ಬಾರಿ                             5

ಮುಂಬೈ                          11 ಬಾರಿ                             5

ಬೆಂಗಳೂರು                      10 ಬಾರಿ                            1

ಕೋಲ್ಕತ್ತಾ                         8 ಬಾರಿ                           8

ಹೈದರಾಬಾದ್                    7 ಬಾರಿ                            2

ರಾಜಸ್ಥಾನ್                       6 ಬಾರಿ                             1

ಡೆಲ್ಲಿ                              6 ಬಾರಿ                             0

ಗುಜರಾತ್                           3 ಬಾರಿ                         1

ಪಂಜಾಬ್ ಕಿಂಗ್ಸ್                     3 ಬಾರಿ                       0

ಲಕ್ನೋ                               2 ಬಾರಿ                       0

ಇಲ್ಲಿ ಆರ್​ಸಿಬಿ ಪ್ಲೇಆಫ್​ಗೆ ಎಂಟ್ರಿ ಪಡೆಯೋದ್ರಲ್ಲಿ ಟಾಪ್-3ನಲ್ಲಿದೆ. ಬಟ್ ಕಪ್ ಗೆಲ್ಲೋಕೆ ಸಾಧ್ಯ ಆಗಿರಲಿಲ್ಲ ಅಷ್ಟೇ. ಅದ್ರಲ್ಲೂ 2020ರಿಂದ ಈಚೆಗೆ 6 ಆವೃತ್ತಿಗಳಲ್ಲಿ 5 ಸಲ ಪ್ಲೇಆಫ್ಸ್​ಗೆ ಬಂದಿದ್ದಾರೆ. ಸೋ ಬೇರೆಲ್ಲಾ ತಂಡಗಳಿಗೆ ಕಂಪೇರ್ ಮಾಡಿದ್ರೆ ಆರ್​ಸಿಬಿಯ ಪವರ್ ಏನು ಅನ್ನೋದು ಇಲ್ಲೇ ಗೊತ್ತಾಗ್ತಿದೆ.

Shantha Kumari

Leave a Reply

Your email address will not be published. Required fields are marked *