ರಾಹುಲ್ ಖರೀದಿಗಾಗಿ ₹20 ಕೋಟಿ ಮೀಸಲಿಟ್ಟ ಫ್ರಾಂಚೈಸಿ! – ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟ ದಿನೇಶ್ ಕಾರ್ತಿಕ್!

ರಾಹುಲ್ ಖರೀದಿಗಾಗಿ ₹20 ಕೋಟಿ ಮೀಸಲಿಟ್ಟ ಫ್ರಾಂಚೈಸಿ! – ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟ ದಿನೇಶ್ ಕಾರ್ತಿಕ್!

ಐಪಿಎಲ್‌ ನಲ್ಲಿ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಗಗನಕುಸುಮವಾಗಿಯೇ ಉಳಿದಿದೆ. ಫಿನಾಲೆವರೆಗೂ ಹೋದ್ರೂ ಟ್ರೋಫಿಗೆ ಮುತ್ತಿಡೋಕೆ ಆಗಿಲ್ಲ. ಬಟ್ 18ನೇ ಸೀಸನ್ಗೆ ಶತಾಯ ಗತಾಯ ಈ ಸಲ ಕಪ್ ನಮ್ದು ಅಂತಾ ಕೂಗಿ ಕೂಗಿ ಹೇಳೋಕೆ ಬೆಂಗಳೂರು ಫ್ರಾಂಚೈಸಿ ಪಣ ತೊಟ್ಟಿದೆ. ಅದಕ್ಕಾಗಿ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಕ್ಕೂ ಬ್ರಹ್ಮಾಸ್ತ್ರಗಳನ್ನೇ ತರೋಕೆ ಸರ್ವತಂತ್ರಗಳಲ್ಲೂ ರೆಡಿ ಮಾಡಿದೆ. ಅಷ್ಟಕ್ಕೂ ಬೆಂಗಳೂರು ತಂಡ ಟಾರ್ಗೆಟ್ ಇಟ್ಟುಕೊಂಡಿರೋ ಬ್ಯಾಟರ್ ಯಾರು? ಅದೊಬ್ಬ ಬೌಲರ್ ಬಂದ್ರೆ ಈ ಸಲ ಕಪ್ ನಮ್ದೇ? ದಿನೇಶ್ ಕಾರ್ತಿಕ್ ಸ್ಟ್ರಾಟಜಿ ವರ್ಕೌಟ್ ಆಗುತ್ತಾ? ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿ ನಡೆಯುತ್ತಿರೋ ಕೆಲ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್ 

2025ರ ಐಪಿಎಲ್ ಟೂರ್ನಿ ಹಿಂದೆಂದಿಗಿಂತಲೂ ಕ್ಯೂರಿಯಾಸಿಟಿ ಹುಟ್ಟಿಸಿದೆ. ಫ್ರಾಂಚೈಸಿಗಳಲ್ಲಿ ಭಿನ್ನಾಭಿಪ್ರಾಯ, ನಾಯಕತ್ವದ ಅಸಮಾಧಾನ, ಮಾಲೀಕರು ಮತ್ತು ಆಟಗಾರರ ನಡುವೆ ವೈಮನಸ್ಸು ಹೀಗೆ ಹಲವು ಮುನಿಸುಗಳಿಂದ ಸ್ಟಾರ್ ಆಟಗಾರರೇ ತಮ್ಮ ತಂಡಗಳಿಗೆ ಗುಡ್ ಬೈ ಹೇಳೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗ್ಲೇ ನಾಯಕತ್ವದ ಅಸಮಾಧಾನದಿಂದ ಮುಂಬೈ ಇಂಡಿಯನ್ಸ್ನಿಂದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೇ ಜಸ್ಪ್ರೀತ್ ಬುಮ್ರಾ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಇನ್ನು ಓನರ್ ಜೊತೆಗಿನ ಟಾಕ್ವಾರ್ ಬಳಿಕ ಕೆಎಲ್ ರಾಹುಲ್ ಕೂಡ ಲಕ್ನೋ ತಂಡ ಬಿಡೋದು ಕನ್ಫರ್ಮ್ ಆಗಿದೆ. ಇದಿಷ್ಟೇ ಅಲ್ಲದೇ ಬಿಸಿಸಿಐನ ರಿಟೇನ್ ಮತ್ತು ಆರ್ಟಿಎಂ ರೂಲ್ಸ್ನಿಂದಾಗಿ ಸ್ಟಾರ್ ಆಟಗಾರರರೇ ಹರಾಜಿಗೆ ಬರೋದು ಫಿಕ್ಸ್ ಆಗಿದೆ. ಬಟ್ ಈಗ ಇರೋ ಕುತೂಹಲ ಅಂದ್ರೆ ಯಾವ ಆಟಗಾರ ಯಾವ ತಂಡಕ್ಕೆ ಸೇರ್ತಾರೆ ಅನ್ನೋದು. ಟೀಂ ಸ್ಟ್ರಾಂಗ್ ಮಾಡ್ಬೇಕು, ಬಲಿಷ್ಠ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋದು ಎಲ್ಲಾ ಫ್ರಾಂಚೈಸಿಗಳ ಇಂಟೆನ್ಷನ್. ಅದಕ್ಕಾಗಿ ಕೆಲ ಆಟಗಾರರ ಮೇಲೆ ಕೋಟಿಗಳ ಲೆಕ್ಕದಲ್ಲಿ ಹಣ ಸುರಿಯೋಕೆ ರೆಡಿ ಇದ್ದಾರೆ. ಅದ್ರಲ್ಲೂ ಐಪಿಎಲ್ ಹರಾಜಿಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಹೆಸ್ರು ಕೆ.ಎಲ್ ರಾಹುಲ್. ಲಕ್ನೋ ತಂಡನ ಹಾಲಿ ನಾಯಕ ಕೆ.ಎಲ್ ರಾಹುಲ್ 2025ಕ್ಕೆ ಹರಾಜಿಗೆ ಬರ್ತಾರೆ. ಬೆಂಗಳೂರು ತಂಡ ಸೇರ್ತಾರೆ ಅನ್ನೋ ಬ್ರೇಕಿಂಗ್ ಸುದ್ದಿ ಹರಿದಾಡ್ತಿದೆ. ಆರ್ಸಿಬಿ ಫ್ರಾಂಚೈಸಿ ಕೂಡ ಕೆಎಲ್ ಖರೀದಿಗೆ ಪ್ಲ್ಯಾನ್ ರೂಪಿಸಿದ್ದು ಅದಕ್ಕಾಗಿ ದೊಡ್ಡ ಮೊತ್ತವನ್ನೇ ಕೊಡೋಕೆ ರೆಡಿಯಾಗಿದೆ.

ರಾಹುಲ್ ಖರೀದಿಗಾಗಿ ₹20 ಕೋಟಿ ಮೀಸಲಿಟ್ಟ ಫ್ರಾಂಚೈಸಿ!

ಐಪಿಎಲ್ನಲ್ಲಿ ಒನ್ ಆಫ್ ದಿ ಬೆಸ್ಟ್ ಥಿಂಗ್ ಅಂದ್ರೆ ಮೆಗಾ ಆಕ್ಷನ್. ಆಕ್ಷನ್ನಲ್ಲಿ ಆಟಗಾರರ ಮೇಲೆ ಫ್ರಾಂಚೈಸಿಗಳ ಬಿಡ್ಡಿಂಗ್ ಮೇಲೆ ಇಡೀ ಜಗತ್ತೇ ಕಣ್ಣಿಟ್ಟಿರುತ್ತೆ. ಕಳೆದ ಬಾರಿಯಂತೂ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಿಚೆಲ್ ಸ್ಟಾರ್ಕ್ ಕೆಕೆಆರ್ ತಂಡಕ್ಕೆ ಖರೀದಿಯಾಗಿದ್ರು. ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಆಸ್ಟ್ರೇಲಿಯಾದ ಮಾರಕ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತ್ತು. 2024ರ ಸೀಸನ್ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಹಾಗೇ ಭಾತೀಯ ಆಟಗಾರರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ಆಟಗಾರ ಕೆಎಲ್ ರಾಹುಲ್. ಲಕ್ನೋ ಪರ ಆಡ್ತಿರುವ ರಾಹುಲ್ ಒಂದು ಆವೃತ್ತಿಗೆ 17 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಾಗಿ 2025ರ ಐಪಿಎಲ್ ಗೂ ಮುನ್ನ ಹರಾಜಿಗೆ ಬಂದ್ರೆ ಭರ್ಜರಿ ಮೊತ್ತ ನೀಡಿ ಖರೀದಿ ಮಾಡೋಕೆ ಆರ್ಸಿಬಿ ಫ್ರಾಂಚೈಸಿ ಮುಂದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ 40 ವರ್ಷ ತುಂಬಿದೆ. ಹೀಗಾಗಿ ಭವಿಷ್ಯದ ನಾಯಕನ ಹುಡುಕಾಟದಲ್ಲಿರೋ ಆರ್ಸಿಬಿಗೆ ಕೆಎಲ್ ರಾಹುಲ್ ಬೆಸ್ಟ್ ಚಾಯ್ಸ್ ಆಗಿದ್ದಾರೆ. ಇದೇ ಕಾರಣಕ್ಕೆ ರಾಹುಲ್ಗಾಗಿ ಆರ್ಸಿಬಿ ತಂಡ ಭಾರೀ ಮೊತ್ತ ಮೀಸಲಿಟ್ಟಿದೆ. ಅದರಲ್ಲೂ ಕೊಹ್ಲಿಗಿಂತಲೂ ಹೆಚ್ಚು ಎಂದರೆ ಬರೋಬ್ಬರಿ 20 ಕೋಟಿವರೆಗೂ ಕೆ.ಎಲ್ ರಾಹುಲ್ ಮೇಲೆ ಹೂಡಿಕೆ ಮಾಡಲು ಆರ್ಸಿಬಿ ಮುಂದಾಗಿದೆ.

ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟ ದಿನೇಶ್ ಕಾರ್ತಿಕ್!

ಆರ್ಸಿಬಿಯ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಈಗಾಗ್ಲೇ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಸೋ 2025ರ ಐಪಿಎಲ್ಗೆ ಬೆಂಗಳೂರು ತಂಡ ಟ್ರೋಫಿ ಗೆಲ್ಲಲೇಬೇಕು ಅಂತಾ ತಂಡವನ್ನ ಬಲಿಷ್ಠಗೊಳಿಸೋಕೆ ಈಗಿನಿಂದಲೇ ತಯಾರಿ ನಡೆಸ್ತಿದ್ದಾರೆ. ಮೊದ್ಲಿಂದಲೂ ಬೆಂಗಳೂರು ತಂಡಕ್ಕೆ ಇರೋ ಪ್ರಾಬ್ಲಂ ಅಂದ್ರೆ ಬೌಲಿಂಗ್ ವಿಭಾಗ. ಬ್ಯಾಟಿಂಗ್ ವಿಭಾಗದಲ್ಲೇ ಎಷ್ಟೇ ರನ್ ಗಳಿಸಿದ್ರೂ ಕೂಡ ಬೌಲಿಂಗ್ನಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗ್ತಿದ್ದಾರೆ. ಅದ್ರಲ್ಲೂ 2024ರ ಟೂರ್ನಿಯಲ್ಲಿ ಹೈದ್ರಾಬಾದ್ ಟೀಂ ವಿರುದ್ಧ ನಮ್ಮ ಬೌಲರ್ಸ್ ಅತ್ಯಂತ ಹೀನಾಯವಾಗಿ ಹೊಡೆಸಿಕೊಂಡಿದ್ರು. ಭರ್ಜರಿ 287 ರನ್ ಸಿಡಿಸಿ ಎಸ್ ಆರ್ ಹೆಚ್ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿತ್ತು.  ಸೋ ಈ ಸಲ ಈ ತಪ್ಪು ರಿಪೀಟ್ ಆಗಬಾರದು ಅಂತಾ ಸ್ಟಾರ್ ಬೌಲರ್ಗಳನ್ನೇ ತಂಡಕ್ಕೆ ತರೋ ಪ್ಲ್ಯಾನ್ ನಡೀತಿದೆ. ಅದ್ರಲ್ಲೂ ತಂಡದ ಮೆಂಟರ್ ದಿನೇಶ್ ಕಾರ್ತಿಕ್, ಮಾರಕ ಬೌಲರ್ ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಎಂಟ್ರಿಯಿಂದ ಬೇಸರಗೊಂಡಿರೋ ಬುಮ್ರಾ 2025ರ ಐಪಿಎಲ್ಗೂ ಮುನ್ನ ಮುಂಬೈ ತಂಡ ಬಿಡ್ತಾರೆ ಅನ್ನೋ ಸುದ್ದಿ ಇದೆ. ಹಾಗೇನಾದ್ರೂ ಬುಮ್ರಾ ಹರಾಜಿಗೆ ಬಂದ್ರೆ ಎಲ್ಲಾ ಫ್ರಾಂಚೈಸಿಗಳೂ ಹಣ ಸುರಿಯೋಕೆ ರೆಡಿ ಇವೆ. ಹೀಗಾಗಿ ಮೆಗಾ ಆಕ್ಷನ್ನಲ್ಲಿ ಬುಮ್ರಾಗೆ ಆರ್ಸಿಬಿಯೂ ಬಿಡ್ ಮಾಡಲಿದೆ.  ಬುಮ್ರಾರನ್ನ ಕರೆತರೋಕೆ ದಿನೇಶ್ ಕಾರ್ತಿಕ್ ಕೂಡ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Shwetha M

Leave a Reply

Your email address will not be published. Required fields are marked *