RCB ಗೆಲ್ಲಿಸಿದ ಜಿತೇಶ್ & ಜೋಶ್.. ಕೊನೇ 3 ಓವರ್.. ಕ್ಲೈಮ್ಯಾಕ್ಸ್ ಟ್ವಿಸ್ಟ್! – ಗೆಲ್ಲೋ ಮ್ಯಾಚ್ ನಲ್ಲಿ RR ಎಡವಿದ್ದೆಲ್ಲಿ?

ಒಂದು ಓವರ್ ಇಡೀ ಸ್ಟೇಡಿಯಮ್ ಫುಲ್ ಚಿಯರ್ಸ್. ನೆಕ್ಸ್ಟ್ ಓವರ್ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್.. ಒಂದ್ಸಲ ಆರ್ಸಿಬಿ ಗೆಲ್ಲುತ್ತೆ ಅನ್ಸಿದ್ರೆ ನೆಕ್ಸ್ಟ್ ಮೂಮೆಂಟ್ನಲ್ಲೇ ಆರ್ಆರ್ ಟ್ರ್ಯಾಕ್ಗೆ ಬರ್ತಿತ್ತು. ಬಟ್ ಫೈನಲ್ಲಾಗಿ ರೆಡ್ ಆರ್ಮಿ ಅಸ್ತ್ರವೇ ಗೆದ್ದಿದೆ. ಚಿನ್ನಸ್ವಾಮಿಯಲ್ಲಿ ಬೆಂಗಳೂರು ಟೀಂ ಗೆದ್ದು ಬೀಗಿದೆ.
ಇದನ್ನೂ ಓದಿ: ಸದ್ದಿಲ್ಲದೇ ಟಾಲಿವುಡ್‌ಗೆ ಕಾಲಿಟ್ಟ ಕಿಚ್ಚನ ಪುತ್ರಿ! – ಮುಂದಿನ ವಾರವೇ ಸಿನಿಮಾ ರಿಲೀಸ್
ಬೆಂಗಳೂರಲ್ಲಿ ಹ್ಯಾಟ್ರಿಕ್ ಸೋಲು ಕಂಡು ನಾಲ್ಕನೇ ಪಂದ್ಯಕ್ಕೆ ಚಿನ್ನಸ್ವಾಮಿಗೆ ಕಾಲಿಟ್ಟಿದ್ದ ಆರ್ಸಿಬಿಗೆ ಒನ್ಸ್ ಅಗೇನ್ ಟಾಸ್ ಮತ್ತೆ ಕೈಕೊಟ್ಟಿತ್ತು. ಆದ್ರೆ ಬ್ಯಾಟಿಂಗ್ಗೆ ಇಳಿದವ್ರಿಗೆ ಒಳ್ಳೆ ಓಪನಿಂಗ್ಸ್ ಸಿಕ್ಕಿತ್ತು. 50 ಕಂಪ್ಲೀಟ್ ಮಾಡಿದ್ರು ಅನ್ನುವಷ್ಟ್ರಲ್ಲೇ ಫಿಲ್ ಸಾಲ್ಟ್ ಔಟ್ ಆದ್ರು. ಆ ಬಳಿಕ ಬಂದ ಕಿಂಗ್ ಕೊಹ್ಲಿ ಌಂಡ್ ದೇವದತ್ ಪಡಿಕ್ಕಲ್ ಅದ್ಭುತ ಜೊತೆಯಾಟವಾಡಿದ್ರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ ಆರ್ ಸಿಬಿ 205 ರನ್ ಪೇರಿಸಿತ್ತು. 200 ಪ್ಲಸ್ ಸ್ಕೋರ್ ಅಂದಾಗ ಆರ್ ಸಿಬಿ ಕಡೆ ಮ್ಯಾಚ್ ಇದೆ ಅಂತಾ ಎಲ್ರೂ ಅನ್ಕೊಳ್ತಿದ್ರು. ಬಟ್ ಆರ್ ಆರ್ ತಂಡದ ಬ್ಯಾಟಿಂಗ್ ಅಬ್ಬರ ಇಡೀ ಚಿನ್ನಸ್ವಾಮಿ ಮೈದಾನವನ್ನ ಸ್ತಬ್ದ ಆಗುವಂತೆ ಮಾಡಿತ್ತು.
ರೆಡ್ ಆರ್ಮಿ ಗೆಲುವಿಗೆ ಕಾರಣಗಳು!
- ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್!
- ಜೈಸ್ವಾಲ್ ವಿಕೆಟ್ ಕಿತ್ತ ಭುವನೇಶ್ವರ್
- ಕೃನಾಲ್ ಮತ್ತು ಸುಯಾಶ್ ಬೌಲಿಂಗ್ ಸ್ಪೆಲ್!
- ಜಿತೇಶ್ ಶರ್ಮಾ ಡಿಆರ್ ಎಸ್ ಕ್ಯಾಚ್
- ಜೋಶ್ ಹೇಜಲ್ ವುಡ್ ಬೌಲಿಂಗ್ ಜಾದೂ
- ನಂಬಿಕೆ ಉಳಿಸಿಕೊಂಡ ಯಶ್ ದಯಾಳ್
ನಿನ್ನೆ ಮ್ಯಾಚಲ್ಲಿ ಆರ್ ಸಿಬಿ 200+ ಸ್ಕೋರ್ ಮಾಡೋಕೆ ಮುಖ್ಯ ಕಾರಣವೇ ಕಿಂಗ್ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್. ಫಿಲ್ ಸಾಲ್ಟ್ 26 ರನ್ ಗಳಿಗೆ ಔಟಾದಾಗ ಜೊತೆಯಾದ ಪಡಿಕ್ಕಲ್ ಅದ್ಭುತ ಆಟವಾಡಿದ್ರು. 27 ಎಸೆತಗಳಲ್ಲೇ 50 ಕಂಪ್ಲೀಟ್ ಮಾಡಿದರು. ಮತ್ತೊಂದೆಡೆ ಕಳೆದ ಮೂರು ಪಂದ್ಯಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಬರೀ 30 ರನ್ ಕಲೆಹಾಕಿದ್ದ ಕೊಹ್ಲಿ ಆರ್ ಆರ್ ವಿರುದ್ಧ 42 ಎಸೆತಗಳಲ್ಲಿ 70 ರನ್ ಗಳ ಇನ್ನಿಂಗ್ಸ್ ಆಡಿದ್ರು. ಇವ್ರಿಬ್ಬರ ಕಾರಣದಿಂದಲೇ ಆರ್ ಸಿಬಿ ಸ್ಕೋರ್ 200+ ಆಯ್ತು. ಌಂಡ್ ಸೆಕೆಂಡ್ ರೀಸನ್ ಜೈಸ್ವಾಲ್ ವಿಕೆಟ್. ಯಬ್ಬಾ ನಿನ್ನೆ ಮ್ಯಾಚಲ್ಲಿ ಜೈಸ್ವಾಲ್ ಬೌಲರ್ಗಳಿಗೆ ಮರ್ಯಾದೆನೇ ಕೊಡ್ದಂಗೆ ಚಚ್ಚುತ್ತಾ ಇದ್ರು. ಫೋರ್, ಸಿಕ್ಸ್ ಮೂಲಕನೇ ಡೀಲ್ ಮಾಡ್ತಿದ್ರು. ಅವ್ರಿದ್ದ ಫಾರ್ಮ್ ನೋಡಿದ್ರೆ ಇನ್ನೂ ಮೂರು ಓವರ್ ಮುಂಚೆಯೇ ಟಾರ್ಗೆಟ್ ರೀಚ್ ಆಗಿ ಬಿಡ್ತಿದ್ರು. ಜಸ್ಟ್ 19 ಬಾಲ್ಗಳನ್ನೇ 49 ರನ್ ಬಾರಿಸಿದ್ದ ಜೈಸ್ವಾಲ್ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಭುವನೇಶ್ವರ್ ಕುಮಾರ್. ಇದೇ ದೊಡ್ಡ ಬ್ರೇಕ್ ಥ್ರ್ಯೂ ಆಯ್ತು ಅಂದ್ರೂ ತಪ್ಪಿಲ್ಲ. ಇನ್ನು ಮೂರನೇ ರೀಸನ್, ಕೃನಾಲ್ ಮತ್ತು ಸುಯಾಶ್ ಶರ್ಮಾ ಬೌಲಿಂಗ್ ಸ್ಪೆಲ್. ರಿಯಾನ್ ಪರಾಗ್, ಧ್ರುವ್ ಜುರೇಲ್ ಆರ್ ಸಿಬಿ ಪೇಸರ್ಸ್ಗೆ ಬೆಂಡೆತ್ತಿದ್ರು. ಈ ವೇಳೆ ಜಾಸ್ತಿ ರನ್ ಕೊಡದೆ ಮ್ಯಾಚ್ನ ಆರ್ಸಿಬಿ ಕಡೆ ಎಳ್ಕೊಂಡ್ ಬಂದ್ರು. ಅದ್ರಲ್ಲೂ ಕೃನಾಲ್ ಪಾಂಡ್ಯ ನಿತೀಶ್ ರಾಣಾ ಹಾಗೇ ರಿಯಾನ್ ಪರಾಗ್ ವಿಕೆಟ್ ಕಿತ್ರು. ಈ ಇಬ್ಬರೂ ಸ್ಪಿನ್ ಬೌಲರ್ಸ್ ತಲಾ 4 ಓವರ್ ಬೌಲ್ ಮಾಡಿ 31, 31 ರನ್ ನೀಡಿದ್ರು. ಸೋ ಎಕಾನಮಿಕಲಿನಲ್ಲೂ ಒಳ್ಳೆ ಇಂಪ್ಯಾಕ್ಟ್ ಮಾಡಿದ್ರು. ಬಟ್ 18ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ಭುವಿ ದೊಡ್ಡ ಡ್ಯಾಮೇಜ್ ಮಾಡಿಬಿಟ್ರು. ರಾಜಸ್ಥಾನ್ ಗೆಲುವಿಗೆ ಕೊನೆಯ 3 ಓವರ್ಗಳಲ್ಲಿ 40 ರನ್ ಬೇಕಾಗಿದ್ದವು. ಈ ವೇಳೆ ಆರ್ಸಿಬಿ ಮೇಲುಗೈ ಸಾಧಿಸಿತ್ತು. ಆದರೆ 18ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು.
ಕೊನೆಯ 2 ಓವರ್ಗಳಲ್ಲಿ 18 ರನ್ ಬೇಕಿದ್ದಾಗ ವಿಜಯಲಕ್ಷ್ಮಿ ರಾಜಸ್ಥಾನ್ ಪರ ವಾಲಿದ್ದಂತೆ ಕಾಣುತ್ತಿತ್ತು. ಆದರೆ 19ನೇ ಓವರ್ನಲ್ಲಿ ದಾಳಿಗಿಳಿದ ಹೇಜಲ್ವುಡ್ ಪಂದ್ಯವನ್ನು ಮತ್ತೆ ಆರ್ಸಿಬಿಯತ್ತ ತಿರುಗಿಸಿದರು. ಹಾಗೇ ಪಂದ್ಯದ ದಿಕ್ಕನ್ನೇ ಬದಲಿಸುವಂಥ ಡಿಆರ್‌ಎಸ್ ತಗೊಂಡಿದ್ದು ಜಿತೇಶ್ ಶರ್ಮಾ. ಭರ್ಜರಿ ಫಾರ್ಮ್ನಲ್ಲಿದ್ದ ಧ್ರುವ್ ಜುರೆಲ್ ಅವರನ್ನು ಜಿತೇಶ್ ಶರ್ಮಾ ತೆಗೆದುಕೊಂಡ ಡಿಆರ್‌ಎಸ್ ಪೆವಿಲಿಯನ್‌ಗೆ ಕಳುಹಿಸುವಂತೆ ಮಾಡಿತು. ಬಟ್ ಇದು ಕ್ಯಾಚ್ ಆಗಿದೆ ಅನ್ನೋದು ಸ್ವತಃ ಬೌಲರ್, ಅಂಪೈರ್ ಯಾರಿಗೂ ಡೌಟ್ ಕೂಡ ಬಂದಿರ್ಲಿಲ್ಲ. ಚೆಂಡು ಧೃವ್ ಅವರ ಬ್ಯಾಟ್ಗೆ ತಾಗಿದೆ ಎಂಬುದು ಜಿತೇಶ್ಗೆ ಮಾತ್ರ ಗೊತ್ತಿತ್ತು. ಹೀಗಾಗಿ ಮೊದಲು ಅಂಪೈರ್ ಬಳಿ ಔಟ್ಗೆ ಮನವಿ ಮಾಡಿದ ಜಿತೇಶ್, ಅಂಪೈರ್ ಔಟ್ ನೀಡದಿದ್ದಾಗ ರಜತ್ಗೆ ರಿವ್ಯೂವ್ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕೊನೆಗೆ ಡಿಆರ್ ಎಸ್ ನಲ್ಲಿ ಜುರೇಲ್ ಔಟ್ ಅಂತಾ ಬಂತು. ಈ ವಿಕೆಟ್ನ ಕ್ರೆಡಿಟ್ ಆರ್ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಸಲ್ಲಬೇಕು. ಹಾಗೇ ವನಿಂದು ಹಸರಂಗನ ಕ್ವಿಕ್ ರನ್ ಔಟ್ ಮಾಡಿದ್ದು ಕೂಡ ಜಿತೇಶ್. ಇನ್ನು ಇದೆಲ್ಲಕ್ಕಿಂತ ದೊಡ್ಡ ಚೇಂಜಿಂಗ್ ಅಂದ್ರೆ ಜೋಶ್ ಹೇಜಲ್ ವುಡ್ ಬೌಲಿಂಗ್. 19ನೇ ಓವರ್ನಲ್ಲಿ ಹೇಜಲ್ವುಡ್ ಕೇವಲ 1 ರನ್ ನೀಡಿ 2 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಸೋ ಲಾಸ್ಟ್ ಬಟ್ ನಾಟ್ ದಿ ಲೀಸ್ಟ್ ಅನ್ನುವಂತೆ ಲಾಸ್ಟ್ ಓವರ್ ಸ್ಪೆಲ್ ಹಾಕಿದ್ದು ಯಶ್ ದಯಾಳ್. ಕೊನೇ ಓವರ್ನಲ್ಲಿ 6 ಬಾಲ್ಗಳಲ್ಲಿ ಗೆಲುವಿಗೆ 17 ರನ್ಗಳ ಅಗತ್ಯ ಇತ್ತು. ಯಶ್ ದಯಾಳ್ ಬೌಲಿಂಗ್ಗೆ ಇಳ್ದಿದ್ರು. 2023ರಲ್ಲಿ ರಿಂಕುಸಿಂಗ್ ಕೈಯಲ್ಲಿ 5 ಬಾಲಲ್ಲಿ 5 ಸಿಕ್ಸ್ ಹೊಡೆಸ್ಕೊಂಡಿದ್ದ ದಯಾಳ್ ಮೇಲೆ ಫ್ಯಾನ್ಸ್ಗೆ ಸ್ವಲ್ಪ ಭಯ ಇತ್ತು. ಬಟ್ ಆರ್ಸಿಬಿ ಮ್ಯಾನೇಜ್ಮೆಂಟ್ ತಮ್ಮ ಮೇಲೆ ಇಟ್ಟಿರೋ ನಂಬಿಕೆಯನ್ನ ಉಳಿಸಿಕೊಂಡ್ರು. ಕೊನೇ ಓವರ್ನಲ್ಲಿ 6 ರನ್ಗಳನ್ನ ಮಾತ್ರ ಬಿಟ್ಟುಕೊಟ್ರು. ಹೀಗಾಗಿ ಆರ್ಸಿಬಿ 11 ರನ್ಗಳಿಂದ ಗೆಲುವನ್ನ ಕಂಡಿತು. ಇದು ಆರ್ ಸಿಬಿ ಕತೆಯಾದ್ರೆ ಆರ್ಆರ್ನದ್ದು ಮಾತ್ರ ಅದೇ ವ್ಯಥೆ. ಕೈಯಲ್ಲಿರೋ ಮ್ಯಾಚ್ಗಳನ್ನ ತಾವೇ ಕಳ್ಕೊಳ್ತಿದ್ದಾರೆ.
ಬ್ಯಾಟಿಂಗ್ ಡೆಪ್ತ್ ಇಲ್ಲದೇ ಸೋಲುತ್ತಿದೆ ರಾಜಸ್ಥಾನ!
ಕಳೆದ ಬಾರಿ ಪ್ಲೇಆಫ್ ಗೇರಿದ್ದ ರಾಜಸ್ಥಾನ ಈ ಸಲ ಕಂಪ್ಲೀಟ್ ಫ್ಲ್ಯಾಪ್ ಆಗಿದೆ. ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ್ ಪ್ರಸ್ತುತ 8ನೇ ಸ್ಥಾನದಲ್ಲಿದ್ದು, ಇವ್ರ ಪರ್ಫಾಮೆನ್ಸ್ ನೋಡ್ತಿದ್ರೆ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯ ಅನ್ನಿಸ್ತಿದೆ. ರಾಜಸ್ಥಾನ್ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ಡೆಪ್ತ್ ಇಲ್ಲದೆ ಇರೋದೇ ಮೇನ್ ರೀಸನ್. ಸತತ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ್ ಅದೇ ತಪ್ಪನ್ನು ಮಾಡಿ ಸೋತಿದೆ.
ಒಟ್ನಲ್ಲಿ ಆರ್ಸಿಬಿ ತವರಿನಲ್ಲಿ ಖಾತೆ ಓಪನ್ ಮಾಡಿಯಾಯ್ತು. ಲೀಗ್ ಹಂತದಲ್ಲಿ ಇನ್ನು 5 ಪಂದ್ಯಗಳು ಬಾಕಿ ಇವೆ. ಸದ್ಯ 9 ಪಂದ್ಯಗಳನ್ನ ಆಡಿ 6 ಮ್ಯಾಚ್ ಗೆದ್ದು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇಆಫ್ ಗೆ ಏರೋಕೆ ಇನ್ನು ಎರಡು ಮ್ಯಾಚ್ ಗೆದ್ರೂ ಸಾಕಿದೆ. 16 ಅಂಕ ಪಡೆದು ಡೈರೆಕ್ಟ್ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಡಲಿದೆ.