RCBಯಲ್ಲಿ ಬೆಂಚ್ ಕಾದವನೇ BOSS – MI ಅಲ್ಲಾಡಿಸಿದ KKRನ ಫಿನ್ ಅಲೆನ್
ರೋಹಿತ್ ವಿರುದ್ಧ ಅನುಕುಲ್ ರಿವೇಂಜ್

ಒಬ್ಬ ಆಟಗಾರನ ಜೀವನವನ್ನ ಐಪಿಎಲ್ ಕ್ಷಣ ಮಾತ್ರದಲ್ಲಿ ಬದಲಾಯಿಸುತ್ತೆ. ಹಾಗಂತ ಅವಕಾಶ ಫಟಾಫಟ್ ಅಂತ ಸಿಗಲ್ಲ.. ಒಂದೇ ಒಂದು ಚಾನ್ಸ್‌ಗೆ ವರ್ಷಾನುಗಟ್ಟಲೇ ಕಾಯುಬೇಕಾಗುತ್ತೆ..ಈ ಪಂದ್ಯದಲ್ಲಿ ಚಾನ್ಸ್ ಸಿಗುತ್ತೆ ಮುಂದಿನ ಪಂದ್ಯದಲ್ಲಿ ಚಾನ್ಸ್ ಸಿಗುತ್ತೆ ಅಂತ ಬೆಂಚ್ ಕಾಯಬೇಕಾಗುತ್ತೆ. ತಂಡಕ್ಕೆ ಸೆಲೆಕ್ಟ್ ಆದ್ರೂ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗಲ್ಲ. ಅದಕ್ಕೆ ಉದಾಹರಣೆ ಫಿನ್ ಅಲೆನ್.. ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದು 2021 ರಲ್ಲಿ. 5 ವರ್ಷಗಳ ಹಿಂದೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ಪಡೆದರೂ ಅವರಿಗೆ ಕಣಕ್ಕಿಳಿಯಲು ಒಂದು ಚಾನ್ಸ್ ಸಿಕ್ಕಿರಲಿಲ್ಲ . ಆರ್‌ಸಿಬಿಯಲ್ಲಿ 3 ವರ್ಷವಿದ್ರೂ ಒಂದೇ ಒಂದು ಚಾನ್ಸ್ ಸಿಕ್ಕಿರಲಿಲ್ಲ. ಆದ್ರೆ ಈ ವರ್ಷ ಕೆಕೆಆರ್‌ನಲ್ಲಿ ಅಲೆನ್ ಬಿಗ್ ಚಾನ್ಸ್ ಸಿಕ್ಕಿದೆ.
ಫಿನ್ ಅಲೆನ್ ನ್ಯೂಝಿಲೆಂಡ್ನ ಸ್ಫೋಟಕ ದಾಂಡಿಗ.. ಇವರು ಐಪಿಎಲ್‌ಗೆ ಎಂಟ್ರಿ ಕೊಟ್ಟು 5 ವರ್ಷ ಆಗಿದೆ. ಆದ್ರೆ ಇಲ್ಲಿ ತನಕ ಒಂದೇ ಒಂದು ಪಂದ್ಯ ಆಡಿರಲಿಲ್ಲ.. ಆದ್ರೆ ಈಗ ಕೆಕೆಆರ್ ಫಿನ್ ಅಲೆನ್‌ಗೆ ಬಿಗ್ ಚಾನ್ಸ್ ಕೊಟ್ಟಿದೆ. ಐಪಿಎಲ್ನಲ್ಲಿ ಪಾದಾರ್ಪಣೆ ಪಂದ್ಯವನ್ನ ಅಲೆನ್ ಆಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ಮೂಲಕ ಅಲೆನ್ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈ ಗ್ರಹಣ ಬಿಡಿಸಿದ ಪಾಂಡ್ಯ – ರೋಹಿತ್ & ರಿಕಲ್ಟನ್ ಡೆಡ್ಲಿ ಓಪನರ್ಸ್
ಅಂದಹಾಗೆ ಫಿನ್ ಅಲೆನ್ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದು 2021 ರಲ್ಲಿ. 5 ವರ್ಷಗಳ ಹಿಂದೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ಪಡೆದರೂ ಅವರಿಗೆ ಕಣಕ್ಕಿಳಿಯಲು ಚಾನ್ಸ್ ಸಿಕ್ಕಿರಲಿಲ್ಲ ಅನ್ನೋದೇ ಅಚ್ಚರಿ ವಿಷ್ಯ. ಅಂದಹಾಗೇ 2021ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಅವರ ಬದಲಿಗೆ ಫಿನ್ ಅಲೆನ್ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಹೀಗೆ ಬದಲಿ ಆಟಗಾರನಾಗಿ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದ ಫಿನ್ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು.. ಅಂದರೆ ಅಲೆನ್‌ಗೆ ಒಂದೇ ಒಂದು ಪಂದ್ಯವಾಡಲು ಆರ್‌ಸಿಬಿ ಅವಕಾಶ ನೀಡಿರಲಿಲ್ಲ. ಇದಾಗ್ಯೂ ಪ್ರತಿ ಸೀಸನ್ನಲ್ಲೂ ಆರ್‌ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದರು. ಆ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿವಿಧ ಲೀಗ್ಗಳಲ್ಲೂ ಅಬ್ಬರಿಸಿದ್ದರು. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಕೂಡ ಆಡಿದ್ದರು. ಇದಾಗ್ಯೂ ಐಪಿಎಲ್‌ಗೆ ಬಂದರೆ ಬೆಂಚ್ ಕಾಯವುದೇ ಆಗಿತ್ತು. ಅಲೆನ್ ನನಗೆ ಆರ್‌ಸಿಬಿಯಲ್ಲಿ ಇವತ್ತು ಚಾನ್ಸ್ ಸಿಗುತ್ತೆ ನಾಳೆ ಚಾನ್ಸ್ ಸಿಗುತ್ತೆ ಅಂತ ತಾಳ್ಮೆಯಿಂದ ಕಾದ್ರೂ ಇವರಿಗೆ ಅವಕಾಶ ಸಿಗಲಿಲ್ಲ..
ಇದನ್ನೂ ಓದಿ: 6.5 ತಿಂಗಳ ಮಗುವಿನ ಪ್ರಾಣ ಕಸಿದ ಒಣಗಿದ ದಾಸವಾಳ – ನಿಜಕ್ಕೂ ಆಗಿದ್ದೇನು ಗೊತ್ತಾ?
ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ. 3 ಸೀಸನ್ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 45 ಪಂದ್ಯಗಳನ್ನಾಡಿತ್ತು. ಅಂದರೆ ಫಿನ್ ಅಲೆನ್ ಬರೋಬ್ಬರಿ 45 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ 2024 ರಲ್ಲಿ ಫಿನ್ ಅಲೆನ್ ಆರ್‌ಸಿಬಿ ತಂಡದಿಂದ ಹೊರಬರುವ ಮೂಲಕ ಈ ಕಾಯುವಿಕೆಗೆ ಬ್ರೇಕ್ ಹಾಕಿದ್ದರು. ಇದೀಗ ಅಲೆನ್ ಕೊಲ್ಕತ್ತಾ ನೈಟ್ ರೈಡರ್ಡ್ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷವೇ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿದೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 17 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಫಿನ್ ಅಲೆನ್, “ಈ ಕ್ಷಣಕ್ಕಾಗಿ ನಾನು ಬಹಳ ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ವಿಶ್ವದ ಅತಿದೊಡ್ಡ ಟಿ20 ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಇದು ನಿಜಕ್ಕೂ ಸಂತಸದ ಕ್ಷಣ ಎಂದಿದ್ದಾರೆ.
ಮುಂಬೈ ವಿರುದ್ಧ ಅನುಕುಲ್ ಸೇಡು
ಅಲೆನ್ ತರನೇ ಮತ್ತೊಬ್ಬ ಆಟಗಾರ ಅಂದ್ರೆ ಅನುಕುಲ್ ರಾಯ್.. ಹೇಗೆ ಅಲೆನ್‌ಗೆ ಆರ್‌ಸಿಬಿ ಚಾನ್ಸ್ ಕೊಟ್ಟಿರಲಿಲ್ಲವೋ ಹಾಗೇ ಈ ರಾಯ್‌ಗೆ ಮುಂಬೈ ಚಾನ್ಸ್ ಕೊಟ್ಟಿರಲಿಲ್ಲ.. ಹೀಗಾಗಿಯೇ ನಿನ್ನೆ ನಡೆದ ಮುಂಬೈ Vs ಕೆಕೆಆರ್ ಪಂದ್ಯದಲ್ಲಿ ರೋಹಿತ್ ಶಾರ್ಮಾರನ್ನ ಔಟ್ ಮಾಡೋ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ 78 ರನ್ ಗಳಿಸಿ ಆಡುತ್ತಿದ್ದರು. ರೋಹಿತ್ ಆಡುವ ರೀತಿ ನೋಡಿದರೆ, ಅವರು ಶತಕ ಗಳಿಸುತ್ತಾರೆ ಎಂದು ಅನಿಸಿತು. ಆದರೆ ವೈಭವ್ ಅರೋರಾ ಅವರ 12ನೇ ಓವರ್ ಅವರಿಗೆ ದುರಂತವಾಗಿ ಕಾಡಿತು. ಸಿಕ್ಸರ್ ಹೊಡೆಯಲು ಪ್ರಯತ್ನಿಸುವಾಗ ರೋಹಿತ್ ಶರ್ಮಾ ಕ್ಯಾಚ್ ಔಟ್ ಆದರು. ಮೈದಾನದಲ್ಲಿ ನಿಂತಿದ್ದ ಅನುಕುಲ್ ರಾಯ್ ಹಿಂದಕ್ಕೆ ಓಡುವ ಮೂಲಕ ಅದ್ಭುತವಾದ ಕ್ಯಾಚ್ ಹಿಡಿದರು. ಈ ಕ್ಯಾಚ್ ತುಂಬಾ ಕಷ್ಟಕರವಾಗಿತ್ತು ಆದರೂ ಓಡೋಡಿ ಹೋಗಿ ಕ್ಯಾಚ್ ಹಿಡಿದು ರೋಹಿತ್ ಶರ್ಮಾ ಶತಕ ಕನಸನ್ನು ನುಚ್ಚುನೂರು ಮಾಡಿದರು.
ಅಂದಹಾಗೇ ಅನುಕುಲ್ ರಾಯ್ ಈ ಹಿಂದೆ ಒಮ್ಮೆ ಮುಂಬೈ ತಂಡದಲ್ಲಿದ್ದರು. ಅದ್ಭುತವಾದ ಪ್ರತಿಭೆಯಾದರು ಅನುಕುಲ್ ರಾಯ್ 2018 ರಿಂದ 2021 ರವರೆಗೆ ಮುಂಬೈ ಪರ ಐಪಿಎಲ್ ಆಡಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ರೋಹಿತ್ ಶರ್ಮಾ ಅವಕಾಶ ನೀಡಿರಲಿಲ್ಲ. ಆದ್ದರಿಂದ ರೋಹಿತ್ ಶರ್ಮಾರ ಕ್ಯಾಚ್ ಹಿಡಿದು ಶತಕವನ್ನು ತಡೆದು ಸೇಡು ತೀರಿಸಿಕೊಂಡಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ನೋಡಿರಿ

