RCBಗೆ 17+4=21 ಚಾಲೆಂಜ್  – ಟಾಪ್ -2 ಸೇಫ್.. ಡೇಂಜರ್ ಝೋನ್ ಏನು?
ರೆಡ್ ಆರ್ಮಿಗೆ ಎಲಿಮಿನೇಟರ್ ವಿಲನ್!

RCBಗೆ 17+4=21 ಚಾಲೆಂಜ್  – ಟಾಪ್ -2 ಸೇಫ್.. ಡೇಂಜರ್ ಝೋನ್ ಏನು?ರೆಡ್ ಆರ್ಮಿಗೆ ಎಲಿಮಿನೇಟರ್ ವಿಲನ್!

ಒಂದಲ್ಲ ಎರಡಲ್ಲ ಬರೋಬ್ಬರಿ 17 ವರ್ಷ. ಐಪಿಎಲ್ ಟ್ರೋಫಿ ಎತ್ತಿ ಹಿಡಿಬೇಕು ಅನ್ನೋ ಆರ್​ಸಿಬಿ ಆಟಗಾರರು ಹಾಗೇ ಅಭಿಮಾನಿಗಳ ಕನಸು ಕನಸಾಗೇ ಉಳಿದಿದೆ. ಆದ್ರೆ ಈ ಸೀಸನ್​ನಲ್ಲಿ ರೆಡ್ ಆರ್ಮಿ ಜರ್ನಿ ತುಂಬಾನೇ ಸ್ಪೆಷಲ್ ಆಗಿದೆ. ಫಸ್ಟ್ ಮ್ಯಾಚ್​ನಿಂದ ಹಿಡ್ದು ಈವರೆಗೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಾ ಬಂದಿದ್ದಾರೆ. ಬ್ಯಾಟಿಂಗ್ & ಬೌಲಿಂಗ್ ಡೆಪ್ತ್ ಚೆನ್ನಾಗಿದೆ. ಅದ್ರಲ್ಲೂ ಒಂದು ಸಲನೂ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಸೋತಿಲ್ಲ. ಪಾಯಿಂಟ್ಸ್ ಟೇಬಲ್​ನ ಟಾಪ್ 3, 4 ಪ್ಲೇಸ್​ನಲ್ಲೇ ಪರ್ಫಾಮೆನ್ಸ್ ಮಾಡಿದೆ. ಸದ್ಯ ಲೀಗ್ ಹಂತದಲ್ಲಿ ಬೆಂಗಳೂರಿಗೆ ಉಳಿದಿರೋದು ಎರಡೇ ಮ್ಯಾಚ್ ಆದ್ರೂ ಇಷ್ಟು ದಿನದ್ದೇ ಒಂದು ಲೆಕ್ಕ ಇನ್ಮುಂದಿನ ಹೋರಾಟವೇ ಮತ್ತೊಂದು ಲೆಕ್ಕ ಎನ್ನುವಂತೆ ಅಬ್ಬರಿಸಬೇಕಿದೆ. ಮಸ್ಟ್ ವಿನ್ ಪ್ರದರ್ಶನ ನೀಡ್ಬೇಕಿದೆ.

ಇದನ್ನೂ ಓದಿ : RCB ಟೀಂ ಅಲ್ಲ.. ಎಮೋಷನ್ – ವೈಟ್ ಜೆರ್ಸಿ.. ಪಕ್ಷಿಗಳ ಟ್ರಿಬ್ಯೂಟ್

ಆರ್ ಸಿಬಿ ಟಾಪ್-2 ಟಾರ್ಗೆಟ್!

12 ಪಂದ್ಯಗಳು ಮುಗಿದಿದ್ದು 8 ಪಂದ್ಯಗಳಲ್ಲಿ ಗೆಲುವು, ಒಂದು ರದ್ದು

17 ಅಂಕಗಳನ್ನ ಪಡೆದಿರೋ ಆರ್ ​ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ

ಉಳಿದಿರೋ ಎರಡೂ ಪಂದ್ಯಗಳನ್ನ ಗೆದ್ರೆ ಆರ್​ ಸಿಬಿಗೆ ಹೆಚ್ಚುವರಿ 4 ಅಂಕ

ಈಗಿರುವ 17+4 ಸೇರಿ ಒಟ್ಟು 21 ಅಂಕ, ಮೊದಲ ಅಥವಾ 2ನೇ ಸ್ಥಾನ

ಟಾಪ್ 2 ಪ್ಲೇಸ್ ​ನ ಅಡ್ವಾಂಟೇಜ್, ಕ್ವಾಲಿಫೈಯರ್ ಒನ್ ​ನಲ್ಲಿ ಮುಖಾಮುಖಿ

ಗೆದ್ದವ್ರು ಸೀದಾ ಫಿನಾಲೆಗೆ, ಸೋತ್ರೂ ಕೂಡ ಇನ್ನೊಂದು ಮ್ಯಾಚ್ ಆಡಲು ಚಾನ್ಸ್

ಮೂರು & ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ನಡುವೆ ಎಲಿಮಿನೇಟ್ ಫೈಟ್

ಗೆದ್ದವ್ರು ಸೆಕೆಂಡ್ ಕ್ವಾಲಿಫೈಯರ್ ​ಗೆ, ಸೋತವ್ರು ಟೂರ್ನಿಯಿಂದ ಹೊರಗೆ

ಟಾಪ್ 1ನಲ್ಲಿರೋ ಗುಜರಾತ್ ಟೈಟಾನ್ಸ್ ತಂಡ 18 ಅಂಕಗಳನ್ನ ಪಡೆದಿದೆ

ಸೆಕೆಂಡ್ ಪ್ಲೇಸ್ ​ನಲ್ಲಿರೋ ಆರ್​ಸಿಬಿ ಎರಡು ಪಂದ್ಯಗಳಲ್ಲಿ ಗೆದ್ರೆ 21 ಅಂಕ

ಪಂಜಾಬ್ ಕಿಂಗ್ಸ್ 2ರಲ್ಲಿ ಗೆದ್ರೆ 21 ಅಂಕ, ನೆಟ್ ರನ್ ರೇಟ್ ಮೇಲೆ ಡಿಪೆಂಡ್

ಆರ್ ಸಿಬಿಗೆ ಗೆಲ್ಲೋದ್ರ ಜೊತೆಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳೋ ರಿಸ್ಕ್

ಆರ್​ಸಿಬಿ ಏನಾದ್ರೂ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಬಂದ್ರೆ ಫೈನಲ್ ತಲುಪೋದು ರಿಸ್ಕ್ ಆಗುತ್ತೆ. ಯಾಕಂದ್ರೆ ಎಲಿಮಿನೇಟರ್ ಮ್ಯಾಚಲ್ಲಿ ಸೋತ್ರೆ ಸೀದಾ ಮನೆಗೆ. ಹಾಗಂತ ಗೆದ್ರೂ ಏನ್ ಫೈನಲ್​ಗೆ ಹೋಗಲ್ಲ. ಫಸ್ಟ್ ಕ್ವಾಲಿಫೈಯರ್​ನಲ್ಲಿ ಸೋತ ಟೀಂ ಎದುರು ಕಣಕ್ಕಿಳಿಯಬೇಕು. ಆ ಟೀಮ್​ನೂ ಸೋಲಿಗೆ ಆ ಬಳಿಕ ಫೈನಲ್​ಗೆ ಏರ್ಬೇಕು. ಸೋ ಅಲ್ಲಿ ಮತ್ತೆ ಗೆದ್ರಷ್ಟೇ ಈ ಸಲ ಕಪ್ ನಮ್ದೇ ಅಂತಾ ಹೇಳೋಕೆ ಆಗಲ್ಲ. ಸೋ ಬೆಸ್ಟ್ ಅಂದ್ರೆ ಟಾಪ್ 2 ಸ್ಥಾನಗಳನ್ನೇ ಟಾರ್ಗೆಟ್ ಮಾಡೋದು. ಅಷ್ಟಕ್ಕೂ ನಾವಿಲ್ಲಿ ಯಾಕೆ ಆರ್​ಸಿಬಿ ಟಾಪ್ 2ನಲ್ಲೇ ಇದ್ರೆ ಬೆಸ್ಟ್ ಅಂತಾ ಹೇಳ್ತಿದ್ದೀವಿ ಅಂದ್ರೆ ಅದಕ್ಕೆ ಕಾರಣ ಕೂಡ ಇದೆ. ಯಾಕಂದ್ರೆ ಎಲಿಮಿನೇಟರ್ ಮ್ಯಾಚ್ ಆರ್ ಸಿಬಿ ಪಾಲಿಗೆ ವಿಲನ್ ಇದ್ದಂತೆ. 2021 ಮತ್ತು 2024ರ ಪಂದ್ಯಗಳೇ ಇದ್ದಕ್ಕೆ ಬೆಸ್ಟ್ ಎಕ್ಸಾಂಪಲ್.

ಎಲಿಮಿನೇಟರ್ ಮ್ಯಾಚ್ ವಿಲನ್!

2024ರ ಸೀಸನ್​ ನಲ್ಲಿ ಸೆಕೆಂಡ್ ಆಫ್​​ನಲ್ಲಿ ಸೋಲೇ ಕಾಣದೆ ಪ್ಲೇಆಫ್

​ ಕೊನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ 18 ರನ್​ ಗಳ ಲೆಕ್ಕಾಚಾರದಲ್ಲಿ ಗೆಲುವು

4ನೇ ಸ್ಥಾನ ಪಡೆದಿದ್ದ ಆರ್ ​ಸಿಬಿ 3ನೇ ಸ್ಥಾನದಲ್ಲಿದ್ದ ರಾಜಸ್ಥಾನ ವಿರುದ್ಧ ಫೈಟ್

2021ರ ಐಪಿಎಲ್ ​ನಲ್ಲಿ ಟೇಬಲ್ ಟಾಪರ್, ಕೊರೊನಾದಿಂದ ಮುಂಡೂಡಿಕೆ

ಲೀಗ್​ ಹಂತದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನ ಗೆದ್ದು ಪ್ಲೇಆಫ್

ರನ್​ ರೇಟ್ ಆಧಾರದಲ್ಲಿ 2ನೇ ಸ್ಥಾನಕ್ಕೇರಿದ್ದ ಚೆನ್ನೈ, 3ನೇ ಸ್ಥಾನಕ್ಕೆ ಆರ್ ಸಿಬಿ

ಎಲಿಮಿನೇಟರ್​ ನಲ್ಲೇ ಸೋಲುಂಡು ಔಟ್, ಟಾಪ್ 2 ನಲ್ಲಿದ್ರೆ ಸೇಫ್

Shantha Kumari

Leave a Reply

Your email address will not be published. Required fields are marked *