2,000 ಮುಖಬೆಲೆಯ ನೋಟು ಹಿಂಪಡೆದ ಆರ್ ಬಿಐ! – ನೋಟು ಬದಲಿಸಲು ಎಷ್ಟು ದಿನ ಅವಕಾಶ?

2,000 ಮುಖಬೆಲೆಯ ನೋಟು ಹಿಂಪಡೆದ ಆರ್ ಬಿಐ! – ನೋಟು ಬದಲಿಸಲು ಎಷ್ಟು ದಿನ ಅವಕಾಶ?

ನವದೆಹಲಿ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ. ಆದರೂ ಕೂಡ 2,000 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ.

ಇದನ್ನೂ ಓದಿ: ಭಾರತಕ್ಕೆ ಮತ್ತೆ ಕಾಲಿಡುತ್ತಿದೆ ಡೆಡ್ಲಿ ಗೇಮ್‌! – ಮಕ್ಕಳ‌ ಬಗ್ಗೆ ಇರಲಿ‌ ಎಚ್ಚರ

2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಆದೇಶ ನೀಡಿದೆ. 2,000 ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಲು ಆರ್ ಬಿಐ ಕಾಲಾವಕಾಶ ನೀಡಿದೆ. ಸೆಪ್ಟೆಂಬರ್ 30 ರೊಳಗೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.

RBI 19 ಪ್ರಾದೇಶಿಕ ಕಚೇರಿಗಳು ಮೇ 23 ರಿಂದ ಕಡಿಮೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯಕ್ಕಾಗಿ 2,000 ರೂ.ನೋಟುಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ. ಎಲ್ಲಾ ಬ್ಯಾಂಕ್‌ಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂ. ನೋಟುಗಳ ಠೇವಣಿ /ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

2,000 ರೂಪಾಯಿ ಮುಖಬೆಲೆಯ ನೋಟು ಯಾವ ಕಾರಣಕ್ಕೆ ಹಿಂಪಡೆಯಲಾಗುತ್ತಿದೆ ಎಂಬುವುದರ ಬಗ್ಗೆಯೂ ಆರ್ ಬಿಐ ವಿವರಿಸಿದೆ. ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಕಪ್ಪು ಹಣ ಮತ್ತು ಭಾರಿ ಪ್ರಮಾಣದಲ್ಲಿ ಕೋಟಾ ನೋಟು ಚಲಾವಣೆಯಲ್ಲಿವೆ. ಭ್ರಷ್ಟಾಚಾರ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ ಬಿ ಐ ಹೇಳಿದೆ.

2018-19ರಲ್ಲಿ 2000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. 2000 ಮುಖಬೆಲೆಯ ಬ್ಯಾಂಕ್‌ನೋಟುಗಳಲ್ಲಿ ಸುಮಾರು 89% ಅನ್ನು ಮಾರ್ಚ್ 2017 ಕ್ಕಿಂತ ಮೊದಲು ನೀಡಲಾಗಿತ್ತು ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳ ಅಂತ್ಯದಲ್ಲಿದೆ.

suddiyaana