ಹಸಿ ಈರುಳ್ಳಿ ತಿನ್ನೋ ಅಭ್ಯಾಸ ಇದ್ಯಾ? – ಎಚ್ಚರ.. ಈ ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡ್ಬೋದು!

ಹಸಿ ಈರುಳ್ಳಿ ತಿನ್ನೋ ಅಭ್ಯಾಸ ಇದ್ಯಾ? – ಎಚ್ಚರ.. ಈ ಆರೋಗ್ಯ ಸಮಸ್ಯೆ ನಿಮ್ಮನ್ನ ಕಾಡ್ಬೋದು!

ಅಡುಗೆಗೆ ಈರುಳ್ಳಿ ಬಹಳ ಮುಖ್ಯವಾದ ಪದಾರ್ಥ. ಈರುಳ್ಳಿ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಊಟದ ವೇಳೆ ರೊಟ್ಟಿಯ ಜೊತೆ ಇಲ್ಲವೆ ಮಾಂಸಹಾರ ಸೇವನೆ ಸಮಯದಲ್ಲಿ ಹಸಿ ಈರುಳ್ಳಿ ತಿನ್ನಲು ಬಯಸುತ್ತಾರೆ. ಆದರೆ  ಹಸಿ ಈರುಳ್ಳಿ ತಿನ್ನೋದ್ರಿಂದ ಕೆಲ ಆರೋಗ್ಯ ಸಮಸ್ಯೆಗಳು ನಿಮ್ಮನ್ನ ಕಾಡಬಹುದು.

ಹೌದು.. ಕೆಲವರು ಹಸಿ ಈರುಳ್ಳಿ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ಊಟದ ಜೊತೆ, ರೊಟ್ಟಿ ಜೊತೆ ತಿನ್ನುತ್ತಾರೆ. ಆದ್ರೆ ಹಸಿ ಈರುಳ್ಳಿ ತಿನ್ನೋದ್ರಿಂದ ಆನಾರೋಗ್ಯ ಉಂಟಾಗಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

ಬಾಯಿ ದುರ್ವಾಸನೆ

ಹಸಿ ಈರುಳ್ಳಿ ತಿಂದ ನಂತರ ಬಾಯಿಯ ದುರ್ವಾಸನೆ ಬರುವುದು ಸಾಮಾನ್ಯ. ಅದರಲ್ಲಿರುವ ಸಲ್ಫರ್ ಸಂಯುಕ್ತಗಳು ನಿಮ್ಮ ಬಾಯಿಯ ವಾಸನೆಯ ಮೇಲೆ ಪರಿಣಾಮ ಬೀರುತ್ತವೆ. ನೀವು ಹಸಿ ಈರುಳ್ಳಿ ತಿಂದು ಕಚೇರಿಯಲ್ಲಿ ಅಥವಾ ಸ್ನೇಹಿತರೊಂದಿಗೆ ಇದ್ದರೆ, ಅದು ಸ್ವಲ್ಪ ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಆದ್ದರಿಂದ ಕಚೇರಿಗೆ ಹೋಗುವಾಗ ಅಥವಾ ಸ್ನೇಹಿತರೊಂದಿಗೆ ಇರುವಾಗ ಹಸಿ ಈರುಳ್ಳಿ ತಿನ್ನುವುದನ್ನು ತಪ್ಪಿಸಲು ಪ್ರಯತ್ನಿಸಿ.

ಹೃದಯ ಮತ್ತು ರಕ್ತದೊತ್ತಡ

ಈರುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಅವು ಆರೋಗ್ಯಕರ. ಆದರೂ, ಹೆಚ್ಚು ಹಸಿ ಈರುಳ್ಳಿ ತಿನ್ನುವುದರಿಂದ ಕೆಲವು ಜನರಲ್ಲಿ ರಕ್ತದೊತ್ತಡ ಅಥವಾ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ.

ಅಲರ್ಜಿಗಳು ಮತ್ತು ಚರ್ಮದ ಸಮಸ್ಯೆಗಳು

ಕೆಲವರಿಗೆ ಈರುಳ್ಳಿ ಅಲರ್ಜಿ ಇರುತ್ತದೆ. ಇದು ಚರ್ಮದ ದದ್ದುಗಳು, ತುರಿಕೆ ಅಥವಾ ಊತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಈರುಳ್ಳಿ ತಿಂದ ನಂತರ ನಿಮ್ಮ ದೇಹದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ರಕ್ತದಲ್ಲಿನ ಸಕ್ಕರೆಯ ಮೇಲೆ ಪರಿಣಾಮ

ಹಸಿ ಈರುಳ್ಳಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ಹಠಾತ್ ಏರಿಳಿತಗಳು ಉಂಟಾಗಬಹುದು. ಈ ವಿಚಾರವನ್ನು ಮಧುಮೇಹಿಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲದೆ, ವೈದ್ಯರನ್ನು ಸಂಪರ್ಕಿಸದೆ ಹೆಚ್ಚು ಪ್ರಮಾಣದಲ್ಲಿ ಹಸಿ ಈರುಳ್ಳಿಯನ್ನು ತಿನ್ನಬೇಡಿ.

Shwetha M