ಬೇಯಿಸಿದ ಮೊಟ್ಟೆ vs ಹಸಿ ಮೊಟ್ಟೆ.. ಉತ್ತಮ ಆರೋಗ್ಯಕ್ಕೆ ಯಾವುದು ಬೆಸ್ಟ್?  

ಬೇಯಿಸಿದ ಮೊಟ್ಟೆ vs ಹಸಿ ಮೊಟ್ಟೆ.. ಉತ್ತಮ ಆರೋಗ್ಯಕ್ಕೆ ಯಾವುದು ಬೆಸ್ಟ್?  

ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೊಟ್ಟೆಗಳಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಫೋಲಿಕ್ ಆಸಿಡ್, ಅಮೈನೋ ಆಸಿಡ್ ಮತ್ತು ಫಾಸ್ಪರಸ್ ಮುಂತಾದ ಅನೇಕ ಪೋಷಕಾಂಶಗಳು ಇವೆ. ಇವೆಲ್ಲವೂ ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಹೀಗಾಗಿ ಅನೇಕರು ಬೇಯಿಸಿದ ಮೊಟ್ಟೆ ತಿಂದ್ರೆ ಇನ್ನೂ ಕೆಲವರು ಹಸಿ ಮೊಟ್ಟೆ ತಿನ್ನುತ್ತಾರೆ. ಆದ್ರೆ ಇದ್ರಲ್ಲಿ ಯಾವುದು ಬೆಸ್ಟ್‌ ಅನ್ನೋ ಗೊಂದಲ ಹಲವರಲ್ಲಿದೆ.

ಇದನ್ನೂ ಓದಿ:‌ ಜಡ್ಜಸ್ ಅಂದ್ರೆ ನಾಯಿ ಎಂದಿದ್ಯಾಕೆ ರಕ್ಷಿತಾ ಶೆಟ್ಟಿ? – ತಪ್ಪು ತಪ್ಪು ಮಾತಾಡುವುದೇ ಕಾಮಿಡಿನಾ?

ಬೇಯಿಸಿದ ಮೊಟ್ಟೆಯನ್ನು ತಿಂದಾಗ ನಮ್ಮ ದೇಹವು ಅದರಲ್ಲಿರುವ ಶೇಕಡಾ 91 ರಷ್ಟು ಪ್ರೋಟೀನ್ ಅನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಅದೇ ಹಸಿ ಮೊಟ್ಟೆಯನ್ನು ಸೇವಿಸಿದಾಗ ದೇಹಕ್ಕೆ ಸಿಗುವುದು ಕೇವಲ ಶೇಕಡಾ 51 ರಷ್ಟು ಪ್ರೋಟೀನ್ ಮಾತ್ರ. ಹಸಿ ಮೊಟ್ಟೆ ತಿನ್ನುವುದರಿಂದ ನಾವು ಪಡೆಯಬೇಕಾದ ಪ್ರೋಟೀನ್‌ನಲ್ಲಿ ಸುಮಾರು ಶೇಕಡಾ 40 ರಷ್ಟು ಪ್ರೋಟೀನ್ ಅನ್ನು ಕಳೆದುಕೊಳ್ಳುತ್ತೇವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕೂದಲು ಮತ್ತು ಚರ್ಮದ ಆರೋಗ್ಯ : ಹಸಿ ಮೊಟ್ಟೆಯ ಬಿಳಿಭಾಗದಲ್ಲಿ ‘ಅವಿಡಿನ್’ ಎಂಬ ಪ್ರೋಟೀನ್ ಇರುತ್ತದೆ. ಇದು ದೇಹವು ಬಯೋಟಿನ್ (ವಿಟಮಿನ್ B7) ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ಆದರೆ ಮೊಟ್ಟೆಯನ್ನು ಬೇಯಿಸಿದಾಗ ಅವಿಡಿನ್ ನಾಶವಾಗಿ, ಬಯೋಟಿನ್ ಮುಕ್ತವಾಗಿ ಬಿಡುಗಡೆಯಾಗುತ್ತದೆ. ಇದು ಕೂದಲು ಉದುರುವಿಕೆ, ಚರ್ಮದ ಸಮಸ್ಯೆಗಳು ಮತ್ತು ಉಗುರು ಮುರಿಯುವುದನ್ನು ತಡೆಯುತ್ತದೆ.

ಸುಲಭ ಜೀರ್ಣಕ್ರಿಯೆ ಮತ್ತು ಪ್ರೋಟೀನ್ ಬಿಡುಗಡೆ: ಮೊಟ್ಟೆಯನ್ನು ಬಿಸಿ ಮಾಡಿದಾಗ ಅದರ ಪ್ರೋಟೀನ್ ರಚನೆಯು ಒಡೆಯುತ್ತದೆ. ಇದರಿಂದ ದೇಹದ ಜೀರ್ಣಕಾರಿ ಕಿಣ್ವಗಳು ಸುಲಭವಾಗಿ ಅಮೈನೋ ಆಮ್ಲಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಇದು ಪೋಷಕಾಂಶಗಳನ್ನು ನಾಶಪಡಿಸುವುದಿಲ್ಲ, ಬದಲಿಗೆ ದೇಹಕ್ಕೆ ಸುಲಭವಾಗಿ ಸಿಗುವಂತೆ ಮಾಡುತ್ತದೆ.

ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯ ಮುಕ್ತಿ: ಹಸಿ ಮೊಟ್ಟೆಗಳನ್ನು ನೇರವಾಗಿ ಸೇವಿಸುವುದರಿಂದ ‘ಸಾಲ್ಮೊನೆಲ್ಲಾ’ (Salmonella) ಎಂಬ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಿನ ಭೀತಿ ಇರುತ್ತದೆ. ಅನೇಕರು ಮೊಟ್ಟೆಯ ಚಿಪ್ಪನ್ನು ತೊಳೆದರೆ ಬ್ಯಾಕ್ಟೀರಿಯಾ ಹೋಗುತ್ತದೆ ಅಂದುಕೊಳ್ಳುತ್ತಾರೆ. ಆದರೆ ಈ ಬ್ಯಾಕ್ಟೀರಿಯಾವು ಕೋಳಿಯ ಅಂಡಾಶಯದ ಮೂಲಕವೇ ಮೊಟ್ಟೆಯೊಳಗೆ ಸೇರಿರುತ್ತದೆ (ಟ್ರಾನ್ಸ್‌ಓವೇರಿಯನ್ ಟ್ರಾನ್ಸ್‌ಮಿಷನ್). ಹಾಗಾಗಿ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದಾಗ ಮಾತ್ರ ಈ ಬ್ಯಾಕ್ಟೀರಿಯಾಗಳು ಸಾಯುತ್ತವೆ.

Shwetha M

Leave a Reply

Your email address will not be published. Required fields are marked *