15 ವರ್ಷ.. 10 ಪಂದ್ಯ.. 95 ರನ್ – ಬ್ಯಾಟಿಂಗ್ ಮರೆತ್ರಾ JADEJA?
ವಿಶ್ವಕಪ್ ನಲ್ಲಿ ಜಡ್ಡು ಫ್ಲ್ಯಾಪ್ ಹೀರೋ

ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳನ್ನ ಗೆದ್ದಿದೆ ನಿಜ. ಬಟ್ ಎರಡೂ ಪಂದ್ಯಗಳಲ್ಲಿನ ಪ್ರದರ್ಶನ ಆತಂಕ ಮೂಡಿಸಿದೆ. ಅದ್ರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕವಂತೂ ಈ ಟೆನ್ಷನ್ ಇನ್ನೂ ಜಾಸ್ತಿಯಾಗಿದೆ. ಅದಕ್ಕೆ ಕಾರಣ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ಗಳೇ ಕೈ ಕೊಟ್ಟಿದ್ದು. ಕ್ರಿಕೆಟ್ ಲೋಕದ ಲೆಜೆಂಡರಿ ಬ್ಯಾಟರ್ಗಳೇ ಪೆವಿಲಿಯನ್ ಪರೇಡ್ ನಡೆಸಿದ್ರು. ಬೌಲಿಂಗ್ ಯುನಿಟ್ ಮ್ಯಾಜಿಕ್ನಿಂದಾಗಿ ಭಾರತ ಮ್ಯಾಚ್ ಗೆದ್ದು ಬೀಗಿತ್ತು. ಪಾಕ್ ವಿರುದ್ಧದ ಗೆಲುವಿನ ಸಂಪೂರ್ಣ ಶ್ರೇಯ ವೇಗಿಗಳಿಗೆ ಸಲ್ಲಬೇಕು. ಬ್ಯಾಟಿಂಗ್ ವಿಚಾರದಲ್ಲಿ ರಿಷಬ್ ಪಂತ್ ಹೊರತುಪಡಿಸಿದ್ರೆ ಟೀಂ ಇಂಡಿಯಾದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಸ್ಟಾರ್ ಬ್ಯಾಟರ್ಸ್ ಸಪ್ಪೆ ಪ್ರದರ್ಶನ ನೀಡಿದ್ರು. ಅದ್ರಲ್ಲೂ ಇಲ್ಲಿ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಸತತ ವೈಫಲ್ಯ ತಂಡವನ್ನು ಚಿಂತೆಗೀಡುಮಾಡಿದೆ. ಹಾಗಂತ ಜಡೇಜಾರದ್ದು ಇಂದು ನಿನ್ನೆಯ ಕಥೆಯಲ್ಲಿ. ಬರೋಬ್ಬರಿ ಕಳೆದ 15 ವರ್ಷಗಳಿಂದಲ್ಲೂ ಟಿ20 ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೀಡಿದ ಕೊಡುಗೆ ಅಷ್ಟಕಷ್ಟೆ. ಯಾಕೆ ಹೀಗೆ ಹೇಳ್ತಿದ್ದೇವೆ ಅನ್ನೋದಕ್ಕೆ ಕಾರಣ ಕೂಡ ಇದೆ.
ಇದನ್ನೂ ಓದಿ: IND Vs USA.. ಸೋತರೆ ಸಂಕಷ್ಟ! – ಅಮೆರಿಕ ತಂಡದಲ್ಲಿ ಭಾರತೀಯರ ದಂಡು
ವಿಶ್ವಕಪ್ ನಲ್ಲಿ ಜಡೇಜಾ ಫೇಲ್!
ನ್ಯೂಯಾರ್ಕ್‌ನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಪಿಚ್ ಬ್ಯಾಟಿಂಗ್‌ಗೆ ಅನುಕೂಲವಾಗುವುದಿಲ್ಲ ಎಂಬ ಆತಂಕ ಮೊದಲಿನಿಂದಲೂ ಇತ್ತು. ಅಲ್ಲದೆ ಮಳೆಯಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಇನ್ನಷ್ಟು ಕಷ್ಟಕರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ತನ್ನ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳ ಕೊಡುಗೆಯ ಅಗತ್ಯವಿತ್ತು. ಇದರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರಂತಹ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ರು. ಇಂತಹ ಪರಿಸ್ಥಿತಿಯಲ್ಲಿ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಕೊಡುಗೆ ಅತ್ಯಗತ್ಯವಾಗಿತ್ತು. ಆದರೆ ಜಡೇಜಾಗೆ ಈ ಪಂದ್ಯದಲ್ಲಿ ಖಾತೆ ತೆರೆಯೋಕೂ ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ 15 ಓವರ್ಗಳಲ್ಲಿ ಕೇವಲ 96 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಜಡೇಜಾ ಕ್ರೀಸ್ಗೆ ಕಾಲಿಟ್ಟಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಇನ್ನೂ 35 ಎಸೆತಗಳು ಬಾಕಿ ಇದ್ದಿದ್ದರಿಂದ ಜಡೇಜಾಗೆ ಉತ್ತಮ ಇನ್ನಿಂಗ್ಸ್ ಕಟ್ಟುವ ಅವಕಾಶವಿತ್ತು. ಆದರೆ ಜಡೇಜಾ ಮೊದಲ ಎಸೆತದಲ್ಲೇ ಖಾತೆ ತೆರೆಯದೆ ಔಟಾದರು. ಹಾಗಂತ ಜಡೇಜಾ ಅವರ ಬ್ಯಾಟಿಂಗ್ ವೈಫಲ್ಯದ ಕಥೆ ಹೊಸದಲ್ಲ. ಜಡೇಜಾ 2009 ರಿಂದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದಾರೆ ಮತ್ತು 2022 ರ ವಿಶ್ವಕಪ್ ಹೊರತುಪಡಿಸಿ ಪ್ರತಿ ಬಾರಿ ಆಡಿದ್ದಾರೆ. ಈ ಎಲ್ಲಾ ಆವೃತ್ತಿಗಳಲ್ಲಿ ಜಡೇಜಾಗೆ ಯಾವಾಗಲೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗುತ್ತಿರಲಿಲ್ಲ. ಆದರೆ ಅವಕಾಶ ಸಿಕ್ಕಾಗಲೂ ಜಡೇಜಾಗೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 10 ಇನ್ನಿಂಗ್ಸ್‌ಗಳನ್ನು ಆಡಿರುವ ಜಡೇಜಾ 99 ಎಸೆತಗಳನ್ನು ಆಡಿದ್ದರೂ 95 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದರಲ್ಲಿ ಕೇವಲ 6 ಬೌಂಡರಿ ಮತ್ತು 1 ಸಿಕ್ಸರ್ ಮಾತ್ರ ಸೇರಿವೆ.
ಬಟ್ ಇಲ್ಲಿ ಜಡೇಜಾ ಆಲ್‌ರೌಂಡರ್ ಸ್ಥಾನದಲ್ಲಿ ಪ್ಲೇಯಿಂಗ್ ಇಲೆವೆನ್ಗೆ ಸೆಲೆಕ್ಟ್ ಆಗಿದ್ರೂ ಕೂಡ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಆದ್ರೆ ಬೌಲಿಂಗ್ನಲ್ಲಿ ಮಾತ್ರ ತಮ್ಮ ಕೊಡುಗೆ ನೀಡಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಅವರು 21 ವಿಕೆಟ್ ಪಡೆದಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿಯೂ ಅವರಿಂದ ದೊಡ್ಡ ನಿರೀಕ್ಷೆಗಳಿವೆ. ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಆಸರೆಯಾಗಬೇಕಿದೆ.