ಜಡ್ಡು ಬಿಟ್ಟು ಕೆಟ್ಟ CSK – 2 ವಿಕೆಟ್ ಕಿತ್ತು ಗನ್ ಶಾಟ್ ಗುನ್ನಾ
ಕಣ್ಣೀರೇ ಹೇಳಿತಾ ಎಮೋಷನ್ಸ್?

ಸಿಎಸ್‌ಕೆ ವರ್ಸಸ್ ಆರ್ಆರ್ ನಡುವಿನ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ಗೆ ಬಂದ ಚೆನ್ನೈ ಪರ ಬ್ಯಾಟರ್ಗಳೆಲ್ಲಾ ಪೆವಿಲಿಯನ್ ಪರೇಡ್ ನಡೆಸ್ತಿದ್ರು. 5 ಬಾರಿ ಪ್ರಶಸ್ತಿ ವಿಜೇತ ತಂಡ ಹೀನಾಯವಾಗಿ ಪರ್ಫಾಮ್ ಮಾಡ್ತಿದ್ರೆ ರಾಜಸ್ಥಾನದ ಬೌಲರ್ಸ್ ಡಾಮಿನೇಷನ್ ಮಾಡ್ತಾ ಸೆಲೆಬ್ರೇಟ್ ಮಾಡ್ತಿದ್ರು. ಆದ್ರೆ ಚೆನ್ನೈನ ಸ್ಥಿತಿ ಕಂಡು ಅಕ್ಷರಶಃ ಮರುಗಿದ್ದು ಸರ್ ರವೀಂದ್ರ ಜಡೇಜಾ. ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿದ ಜಡ್ಡು ದಶಕದವರೆಗೆ ಮೆರೆದಿದ್ದ ತನ್ನ ಹಳೇ ಟೀಂ ಸ್ಥಿತಿ ಕಂಡು ಕಣ್ಣೀರಾಗಿದ್ರು.
ಇದನ್ನೂ ಓದಿ : ಧುರಂಧರ್ -2 ಹವಾಕ್ಕೆ ಬಾಹುಬಲಿ ದಾಖಲೆ ಉಡೀಸ್ – ಜಸ್ಟ್ 12 ದಿನಕ್ಕೆ 1400 ಕೋಟಿ ಕಲೆಕ್ಷನ್!
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಬಳಿಕ ರವೀಂದ್ರ ಜಡೇಜಾ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಚೆನ್ನೈನ ಸೋಲು.. ರಾಜಸ್ಥಾನದ ಗೆಲುವು.. ಹಾಗೇ ಈ ಪಂದ್ಯದಲ್ಲಿ ಕಂಡ ಜಡ್ಡು ಅವ್ರ ವರ್ತನೆ. ದಶಕದವರೆಗೆ ಯೆಲ್ಲೋ ಜೆರ್ಸಿಯಲ್ಲಿ ಪಾರುಪತ್ಯ ಮೆರೆದ ರವೀಂದ್ರ ಜಡೇಜಾ ಈಗ ಅದೇ ತಂಡದ ವಿರುದ್ಧ ಮೊದಲ ಪಂದ್ಯದಲ್ಲೇ ಗೇಮ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಚೆನ್ನೈ ಫ್ರಾಂಚೈಸಿಗೆ ಖಡಕ್ ಸೆಲೆಬ್ರೇಷನ್ನಲ್ಲೇ ಗುನ್ನಾ ಇಟ್ಟಿದ್ದಾರೆ.
ಸಿಎಸ್ ಕೆ ದತ್ತುಪುತ್ರನಂತಿದ್ದ ಜಡ್ಡು ಬಿಟ್ಟು ಕೆಟ್ಟ ಸಿಎಸ್ ಕೆ!
ಚೆನ್ನೈ ಸೂಪರ್ ಕಿಂಗ್ಸ್ ಅಂದಾಗ ಮೂವರು ಆಟಗಾರರು ಥಟ್ ಅಂತಾ ನೆನಪಾಗ್ತಾರೆ. ಅದ್ರಲ್ಲಿ ನಂಬರ್ 1 ತಲಾ ಅಂತಾನೇ ಫೇಮಸ್ ಆಗಿರೋ ಮಹೇಂದ್ರ ಸಿಂಗ್ ಧೋನಿ. ಹಾಗೇ ನಂಬರ್ 2 ಚಿನ್ನ ತಲಾ ಸುರೇಶ್ ರೈನಾ. ಇನ್ನು ಸರ್ ರವೀಂದ್ರ ಜಡೇಜಾ. ಈ ಮೂವರೂ ಆಟಗಾರರು ಸಿಎಸ್ ಕೆ ತಂಡದ ಐಕಾನ್ ಪ್ಲೇಯರ್ಗಳು. ಕಳೆದ 12 ವರ್ಷಗಳಿಂದ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ರು. ಆದ್ರೆ ಈ ಬಾರಿ ಐಪಿಎಲ್ಗೂ ಮುನ್ನ ಟ್ರೇಡ್ ವಿಂಡೋ ಮೂಲಕ ಸಂಜು ಸ್ಯಾಮ್ಸನ್ರನ್ನ ಕರೆತಂದ ಸಿಎಸ್‌ಕೆ ಜಡ್ಡುರನ್ನ ರಾಜಸ್ಥಾನಕ್ಕೆ ಬಿಟ್ಟುಕೊಟ್ಟಿತ್ತು. ಯೆಲ್ಲೋ ಆರ್ಮಿಯಲ್ಲೇ ಐಪಿಎಲ್ ಕರಿಯರ್ ಎಂಡ್ ಮಾಡ್ಬೇಕು ಅನ್ಕೊಂಡಿದ್ದ ಜಡ್ಡು ಆಸೆಗೆ ತಣ್ಣೀರೆರಚಿತ್ತು. ಇದೇ ಬೇಸರದಲ್ಲಿದ್ದ ಜಡ್ಡು ಈಗ ತನ್ನ ಹಳೇ ತವರು ತಂಡಕ್ಕೆ ಗುನ್ನಾ ಇಟ್ಟಿದ್ದಾರೆ. ಎಡಗೈ ಸ್ಪಿನರ್, ಆಲ್‌ರೌಂಡರ್ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದು 3 ಓವರ್ಗಳಲ್ಲಿ ಕೇವಲ 18 ರನ್ಸ್ ನೀಡಿದ್ರು. ತಮ್ಮ ಮೊದಲ ಓವರ್ನಲ್ಲೇ ಇಬ್ಬರು ಬಲಿಷ್ಠ ಆಟಗಾರರನ್ನ ಪೆವಿಲಿಯನ್ಗೆ ಅಟ್ಟಿದ ಜಡ್ಡು, ಗನ್ ಪೋಸ್ ಕೊಟ್ಟು ಸೆಲೆಬ್ರೇಷನ್ ಮಾಡುವ ಮೂಲಕ CKS ಮ್ಯಾನೇಜ್ಮೆಂಟ್ ವಿರುದ್ಧ ಪರೋಕ್ಷವಾಗಿ ಡಿಚ್ಚಿ ಕೊಟ್ರು. ನೀವು ನನ್ನನ್ನು ತಂಡದಿಂದ ಬಿಟ್ಟು ತಪ್ಪು ಮಾಡಿದ್ರಿ ಅನ್ನೋ ರೀತಿಯಲ್ಲಿ ಸಂದೇಶ ರವಾನಿಸಿದ್ರು.
ಫ್ರಾಂಚೈಸಿ ಬಿಟ್ರೂ ಅಭಿಮಾನ ಬಿಡದ ಫ್ಯಾನ್ಸ್.. ಜಡ್ಡು ಕಣ್ಣೀರು!
12 ವರ್ಷಗಳ ಕಾಲ ಸಿಎಸ್‌ಕೆ ಕ್ಯಾಂಪ್ನಲ್ಲಿದ್ದ ಜಡ್ಡುಗೆ ಈಗ ಪಿಂಕ್ ಆರ್ಮಿಯಲ್ಲಿ ಕಣಕ್ಕಿಳಿಯೋದು ಸುಲಭದ ಮಾತಾಗಿರಲಿಲ್ಲ. ಧೋನಿಯವ್ರ ರೈಟ್ ಹ್ಯಾಂಡ್ನಂತೆ ಇದ್ದ ಜಡ್ಡು ರಾಜಸ್ಥಾನದಲ್ಲಿ ಒಗ್ಗಿಕೊಳ್ಳೋಕೆ ಸುಮಾರು ಸಮಯವೇ ಬೇಕಾಗಿತ್ತು. ಸಿಎಸ್‌ಕೆ ವಿರುದ್ಧದ ಮ್ಯಾಚಲ್ಲೂ ಅದು ಗೊತ್ತಾಗ್ತಿತ್ತು. ಆಡ್ತಿದ್ದದ್ದು ರಾಜಸ್ಥಾನ ಪರವೇ ಆದ್ರೂ ಎಮೋಷನ್ಸ್ ಎಲ್ಲಾ ಚೆನ್ನೈ ಪರವೇ ಇತ್ತು. ಜಡ್ಡು ಬೌಂಡರಿಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಜಡೇಜಾ ಬೌಂಡರಿಯ ಬಳಿ ಫೀಲ್ಡಿಂಗ್ ಮಾಡಲು ಹೋದ ತಕ್ಷಣ, ಸಿಎಸ್‌ಕೆ ಅಭಿಮಾನಿಗಳು ಜಡ್ಡು ಜಡ್ಡು ಎಂದು ಘೋಷಿಸಲು ಪ್ರಾರಂಭಿಸಿದರು. ಈ ವೇಳೆ ಕಂಪ್ಲೀಟ್ ಆಗಿ ಎಮೋಷನಲ್ ಆದ ಜಡ್ಡು ಮೈದಾನದಲ್ಲೇ ಕಣ್ಣುಗಳು ತುಂಬಿದ್ವು. ಭಾರವಾದ ಮನಸ್ಸಿನಿಂದಲೇ ತಮ್ಮ ಭಾವನೆಗಳನ್ನ ಮುಚ್ಚಿಟ್ಟುಕೊಂಡ್ರು. ಸಿಎಸ್‌ಕೆ ಅಭಿಮಾನಿಗಳ ಪ್ರೀತಿಯನ್ನು ನೋಡಿ ಜಡೇಜಾ ಭಾವುಕರಾದರು. ಜೆರ್ಸಿ ಬದಲಾದರೂ, ಚೆನ್ನೈ ಅಭಿಮಾನಿಗಳಿಗೆ ಜಡ್ಡು ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ‘ಜಡ್ಡು-ಜಡ್ಡು’ ಘೋಷಣೆ ಕೇಳಿ ರವೀಂದ್ರ ಜಡೇಜಾ ಕಣ್ಣೀರು ಹಾಕದೆ ಇರಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ಫ್ರಾಂಚೈಸಿ ಅವ್ರನ್ನ ತಂಡದಿಂದ ಬಿಟ್ರೂ ಅಭಿಮಾನಿಗಳ ಪ್ರೀತಿಯಲ್ಲಿ ನಾನಿದ್ದೇನೆ ಅಂತಾ ಜಡ್ಡು ಭಾವುಕರಾದ್ರು.
ಚೆನ್ನೈ ಜೆರ್ಸಿಗೆ ಮುತ್ತಿಟ್ಟ ಜಡ್ಡು!
ಇನ್ನು ಪಂದ್ಯದ ಬಳಿಕ ಜಡ್ಡು ಸಿಎಸ್‌ಕೆ ತಂಡದ ತನ್ನ ಹಳೇ ಟೀಮ್ಮೇಟ್ಸ್ ಜೊತೆ ಮಾತನಾಡ್ತಿದ್ರು. ಸಿಎಸ್‌ಕೆ ಆಟಗಾರ ಖಲೀಲ್ ಅಹ್ಮದ್ ಅವರೊಂದಿಗೆ ಮಾತನಾಡಲು ಹೋದಾಗ ಜಡ್ಡಿ ಸಿಎಸ್‌ಕೆ ತಂಡವನ್ನ ಎಷ್ಟು ಮಿಸ್ ಮಾಡಿಕೊಳ್ತಿದ್ದಾರೆ ಅನ್ನೋದು ಗೊತ್ತಾಯ್ತು. ಯಾಕಂದ್ರೆ ಜಡೇಜಾ ಖಲೀಲ್ ಅಹ್ಮದ್ ಅವರ ಜೆರ್ಸಿಯಲ್ಲಿರುವ ಸಿಎಸ್‌ಕೆ ಲೋಗೋಗೆ ಮುತ್ತಿಟ್ಟರು. ಇದು ಐಪಿಎಲ್ 2026 ರಲ್ಲಿ ರವೀಂದ್ರ ಜಡೇಜಾ ಅವರ ಜೆರ್ಸಿ, ತಂಡ ಬದಲಾಗಿರಬಹುದು. ಆದರೆ ಅವರ ಹಾರ್ಟಲ್ಲಿ ಚೆನ್ನೈ ತಂಡಕ್ಕೆ ವಿಶೇಷ ಸ್ಥಾನವಿದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್..
ಇನ್ನು ಪಂದ್ಯದ ಬಳಿಕ ಮಾತ್ನಾಡಿದ ಜಡ್ಡು, ನನಗೆ ಪಿಂಕ್ ಚೆನ್ನಾಗಿ ಕಾಣುತ್ತದೆ. ಯೆಲ್ಲೋ ಜೆರ್ಸಿ ಸ್ವಲ್ಪ ಹಳತು ಅನ್ನಿಸ್ತಿದೆ ಆದ್ರೆ 12-13 ವರ್ಷ ಆಡಿದ ತಂಡ ಮರೆಯಲು ಸಾಧ್ಯವಿಲ್ಲ. ಇನ್ನು ಶಿವಂ ದುಬೆ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸಾಕಷ್ಟು ಸಲ ನೆಟ್ಸ್‌ನಲ್ಲಿ ಅವರಿಗೆ ಬೌಲಿಂಗ್ ಮಾಡಿದ್ದೇನೆ. ಹಾಗಾಗಿ ಸ್ಪಿನ್ನರ್‌ಗಳನ್ನು ಹೇಗೆ ಡೀಲ್ ಮಾಡ್ತಾರೆ ಅನ್ನೋದು ಗೊತ್ತು. ಅದಕ್ಕೆ ನಾನು ಪ್ರಿಪೇರ್ ಆಗಿ ಹೊರಗೆ ಬೌಲಿಂಗ್ ಮಾಡಿದೆ. ಬಿಗ್ ಹಿಟ್ಗೆ ಪ್ರಯತ್ನ ಪಡ್ತಾರೆ ಅನ್ನೋದು ಗೊತ್ತಿತ್ತು ಎಂದಿದ್ದಾರೆ.

ನೋಡಿರಿ

