ಹೆಂಡ್ತಿಗಾಗಿ ಅಪ್ಪನ ದೂರ‌ ಮಾಡಿದ್ರಾ ಜಡ್ಡು? – ಬಡತನದಲ್ಲಿದ್ದಾಗ ಅಕ್ಕನ ಬೆಂಬಲ ಹೇಗಿತ್ತು?
ರಾಕ್‌ಸ್ಟಾರ್ ಜಡ್ಡು ರೋಚಕ ಜರ್ನಿ

ಹೆಂಡ್ತಿಗಾಗಿ ಅಪ್ಪನ ದೂರ‌ ಮಾಡಿದ್ರಾ ಜಡ್ಡು? – ಬಡತನದಲ್ಲಿದ್ದಾಗ ಅಕ್ಕನ ಬೆಂಬಲ ಹೇಗಿತ್ತು?ರಾಕ್‌ಸ್ಟಾರ್ ಜಡ್ಡು ರೋಚಕ ಜರ್ನಿ

ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಿ 17 ವರ್ಷಗಳ T20 ಟ್ರೋಫಿ ಬರವನ್ನ ನೀಗಿಸಿದೆ. ಇದರಿಂದಾಗಿ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೇಲಾಡಿದೆ.. ಫ್ಯಾನ್ಸ್ ವಿಜಯದ ಸಂಭ್ರಮದಲ್ಲಿ ತೇಲಾಡ್ತಾ ಇದ್ರೆ, ಇತ್ತ ಸ್ಟಾರ್ ಕ್ರಿಕೆಟರ್ಸ್ ಒಬ್ಬೊಬ್ಬರಾಗಿ ಟಿ20 ವಿಶ್ವಕಪ್ ಗೆ ನಿವೃತ್ತಿ ಘೋಷಣೆ ಮಾಡಿದ್ರು.. ವಿರಾಟ್ ಕೊಹ್ಲಿ.. ರೋಹಿತ್ ಶರ್ಮಾ.. ಬಳಿಕ ರವೀಂದ್ರ ಜಡೇಜಾ ಟಿ20 ವಿಶ್ವಕಪ್ಗೆ ಗುಡ್ ಬೈ ಹೇಳಿದ್ರು.. ಜಡೇಜಾ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗ್ತಾ ಇದೆ.  ಅಂದ್ಹಾಗೆ ಟೀಂ ಇಂಡಿಯಾದ ಆಟಗಾರ ರವೀಂದ್ರ ಜಡೇಜಾಗೆ ಸ್ಟಾರ್ ಪಟ್ಟ ಸುಲಭಕ್ಕೆ ಸಿಕ್ಕಿದ್ದಲ್ಲ.. ಆತ ಕ್ರಿಕೆಟರ್ ಆಗಿದ್ದೇ ರೋಚಕ.. ಸಾಗಿ ಬಂದ ಹಾದಿ ಬರೀ ಕಲ್ಲು ಮುಳ್ಳುಗಳಿಂದಲೇ ಕೂಡಿತ್ತು.. ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ಸಣ್ಣ ವಯಸ್ಸಿನಲ್ಲೇ ತಾಯಿಯನ್ನ ಕಳೆದುಕೊಂಡ ಮಕ್ಕಳು..  ಮಕ್ಕಳ ಭವಿಷ್ಯದ ಬಗ್ಗೆ ತಂದೆಯ ಸಾವಿರಾರು ಕನಸು.. ಇದಕ್ಕೆಲ್ಲಾ ತನ್ನ ಸಂಪಾದನೆ ಸಾಕಾಗಲ್ಲ ಅಂತಾ ತಂದೆಯ ಕೊರಗು.. ಈ ಹೊತ್ತಲ್ಲೇ ಜಡ್ಡು ಕನಸಿಗೆ ಆಸರೆಯಾಗಿದ್ದು ಆತನ ಅಕ್ಕ.. ಆದಾದ ಬಳಿಕ ಜಡ್ಡು ಬಾಳಲ್ಲಿ ಅದೃಷ್ಟ ಕೈ ಹಿಡಿಯಿತು.. ಬ್ಯಾಟಿಂಗ್, ಬೌಲಿಂಗ್ ಮೂಲಕ ಕಮಾಲ್ ಮಾಡಿದ್ರು.. ಇದೀಗ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ರು.. ಆದ್ರೆ ಇಷ್ಟೆಲ್ಲಾ ಸಾಧನೆ ಮಾಡಲು ಕಾರಣಕರ್ತರಾದವರನ್ನೇ ದೂರ ಮಾಡಿದ್ರಾ ಜಡ್ಡು?.. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? – ಕೈಯಲ್ಲಿನ ಟ್ಯಾಟೂ ಮೀನಿಂಗ್‌ ಏನು?

ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆ ರವೀಂದ್ರ ಜಡೇಜಾ ಟೂರ್ನಿಗೆ ವಿದಾಯ ಹೇಳಿದ್ದಾರೆ.. ಜಡ್ಡು ಕ್ರಿಕೆಟ್ ಜರ್ನಿ ರೋಚಕವಾಗಿದೆ.. ಕಡು ಬಡತನದಲ್ಲಿ ಬೆಳೆದ ಜಡ್ಡು ಇಂದು ಕೋಟಿಗಳ ಒಡೆಯ. ಜಡ್ಡು ಫೀಲ್ಡ್ಗೆ ಇಳಿದ್ರೆ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟುತ್ತೆ.. ಅದ್ಭುತ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲೂ ಆರ್ಭಟಿಸುತ್ತಿದ್ರು ಜಡೇಜಾ. ಆದ್ರೆ ಈ ಬಾರಿಯ ಟಿ 20 ವಿಶ್ವಕಪ್ ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ ಉತ್ತಮ ಫಾರ್ಮ್ನಲ್ಲಿರಲಿಲ್ಲ. ಆದರೆ ಕಳೆದ ಒಂದು ದಶಕದಲ್ಲಿ ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಭಾಗವಾಗಿದ್ದರು.  ಅಂದ್ಹಾಗೆ ಅ ಟೀಮ್ ಇಂಡಿಯಾದ ಅತ್ಯಂತ ಬೇಡಿಕೆಯ ಆಟಗಾರನಾಗಿರುವ ಗುಜರಾತ್ ನ ಜಾಮ್ ನಗರದ ಹುಡುಗ, ಕ್ರಿಕೆಟರ್ ಆಗಿದ್ದೇ ರೋಚಕ. ಜಡ್ಡು ಅಪ್ಪ ವಾಚ್ ಮ್ಯಾನ್, ಅಮ್ಮ ನರ್ಸ್. ಈ ಕಡುಬಡತನ ನಡುವೆಯೂ ಬೆಳೆದ ಜಡ್ಡು ಇಂದು ಶ್ರೀಮಂತ. ಅಂದ್ಹಾಗೆ ರವೀಂದ್ರ ಜಡೇಜಾ ಅಲಿಯಾಸ್ ರವೀಂದ್ರ ಸಿನ್ಹ್ ಅನಿರುದ್ಧ್ ಜಡೇಜಾ, ಹುಟ್ಟಿದ್ದು 1988ರ ಡಿ. 6ರಂದು ಗುಜರಾತ್ನ ನವಾಗಂಜ್ ಗೇಡ್ ಎಂಬಲ್ಲಿ. ತಂದೆ ಅನಿರುದ್ದ್ ಸಿನ್ಹ್ ಜಡೇಜಾ, ತಾಯಿ ಲತಾ ಜಡೇಜಾ. ತಂದೆ ಕೆಲಸ ಮಾಡುತ್ತಿದ್ದರೂ ಎಲ್ಲಾ ಟೈಮಲ್ಲೂ ಕೆಲಸ‌ಇರುತ್ತೆ ಎಂಬ ಭರವಸೆ ಇರಲಿಲ್ಲ. ಹೀಗಾಗಿ ತಾಯಿ ವೇತನದಲ್ಲೇ ಸಂಸಾರದ ಬಂಡಿ ಸಾಗ್ಬೇಕಿತ್ತು.. ಆಷ್ಟೊಂದು ಬಡತನ ಇದ್ರೂ ಮಕ್ಕಳ ಪೋಷಣೆಯಲ್ಲಿ ಯಾವುದೇ ಕಡಿಮೆ ಮಾಡಿರಲಿಲ್ಲ. ಮನೆಯಲ್ಲಿ ತಂದೆ ತುಂಬಾ ಶಿಸ್ತಿನ ಮನುಷ್ಯ. ಅಪ್ಪನಿಗೆ ಜಡೇಜಾರನ್ನು ಆರ್ಮಿಗೆ ಸೇರಿಸುವ ಬಯಕೆ, ಆದರೆ ಜಡ್ಡುಗೆ ಕ್ರಿಕೆಟ್ ಮೇಲೆ ಆಸೆ. ಹೀಗಾಗಿ ತಂದೆಗೆ ತಿಳಿಯದಂತೆ ಅಮ್ಮನ ಸಹಾಯ ಪಡೆದು ಜಡ್ಡು ಕ್ರಿಕೆಟ್ ಆಡುತ್ತಿದ್ದರು. ದುರಾದೃಷ್ಟವಶಾತ್ ಜಡ್ಡು ತನ್ನ 15 ವರ್ಷದಲ್ಲೇ ತಾಯಿಯನ್ನ ಕಳೆದುಕೊಳ್ತಾರೆ.. ಅಮ್ಮ ರಸ್ತೆ ಅಪಘಾತದಿಂದ ಮೃತಪಟ್ಟಿದ್ದರು. ಇದು ಜಡೇಜಾ ಬದುಕಿನಲ್ಲಿ ಕರಾಳ ದಿನಗಳನ್ನು ಆವರಿಸುವಂತೆ ಮಾಡಿತು. ಆದರೆ ಅಕ್ಕ ನೈನಾ, ಜಡ್ಡುಗೆ ತಾಯಿ ಇಲ್ಲದ ಕೊರಗನ್ನು ತೀರಿಸಿದ್ದರು. ಸಣ್ಣ ಮಗುವಿನಂತೆ ಜಡೇಜಾರನ್ನು ನೋಡಿಕೊಂಡಿದ್ದರು. ಅಮ್ಮ ತೀರಿಕೊಂಡ ನಂತ್ರ ಅವರ ಕೆಲಸ ಅಕ್ಕ ನೈನಾಗೆ ಸಿಕ್ಕಿತು. ಇಲ್ಲಿಂದ ಜಡ್ಡು ಕನಸಿಗೆ ಅಕ್ಕ ನೈನಾ ಬ್ಯಾಕ್ ಬೋನ್ ಆದ್ರು.. ತಮ್ಮನಿಗೆ ಕ್ರಿಕೆಟ್ ಆಡಲು ಪ್ರೋತ್ಸಾಹಿಸಿದರು.. ಪ್ರತಿ ಹೆಜ್ಜೆಯಲ್ಲೂ ಜಡ್ಡು ಬೆನ್ನಿಗೆ ನಿಂತರು. ಆರಂಭದಲ್ಲಿ ತಂದೆಗೆ‌ ಮಗ  ಕ್ರಿಕೆಟರ್ ಆಗುವುದು ಇಷ್ಟ ಇರಲಿಲ್ಲ. ಕೊನೆಗೆ ಮಗನ ಅಸಕ್ತಿ ಕಂಡು ಆತನ ಕನಸಿಗೆ ನೀರೆರೆದ ತಂದೆ ಕೂಡ ಜಡ್ಡು ಕ್ರಿಕೆಟ್ ಆಡಲು ಬೆಂಬಲ ನೀಡಿದರು. ಅಲ್ಲಿಂದಾಚೆ ತನಗೆ ಸಿಕ್ಕ ಪ್ರತಿ ಅವಕಾಶವನ್ನೂ ಎರಡೂ ಕೈಗಳಿಂದ ಬಾಚಿಕೊಂಡಿದ್ದರು ರವೀಂದ್ರ ಜಡೇಜಾ.

ಬಾಲ್ಯದಲ್ಲಿ ಕಠಿಣ ಪರಿಶ್ರಮ ಹಾಕಿದ್ದ ಜಡೇಜಾ, ಇಂದು ವಿಶ್ವ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್.  ಜಿಲ್ಲಾ, ರಾಜ್ಯ ಮಟ್ಟದಲ್ಲೂ ಎಲ್ಲರ ಕಣ್ಣುಕುಕ್ಕುವಂತೆ ಕ್ರಿಕೆಟ್ ಆಡುತ್ತಿದ್ದರು. ತನ್ನ 10ನೇ ವಯಸ್ಸಿಗೆ ಕ್ರಿಕೆಟ್ ಬಂಗಲೆ’ ಎಂಬ ಅಕಾಡೆಮಿಗೆ ಸೇರಿದರು. ಅಲ್ಲಿ ಕೋಚ್ ಮಹೇಂದ್ರಸಿನ್ಹ್ ಚೌಹಾಣ್, ಜಡೇಜಾ ಆಲ್ರೌಂಡ್ ಆಟ ಕಂಡು ಬೆರಗಾಗಿದ್ದರು.  ಬಡತನ, ನೋವು, ಹತಾಶೆ, ಅವಮಾನ ಎಲ್ಲವನ್ನೂ ಮೆಟ್ಟಿ ನಿಂತ ಜಡ್ಡು, 2008ರ ಅಂಡರ್-19 ವಿಶ್ವಕಪ್ನಲ್ಲೂ ಆಡುವ ಅವಕಾಶ ಪಡೆದರು. ವಿಶೇಷ ಅಂದರೆ ಈ ತಂಡಕ್ಕೆ ಆಗ ಕೊಹ್ಲಿ ಕ್ಯಾಪ್ಟನ್ ಆಗಿದ್ರು..ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿತ್ತು. ಆ ಬಳಿಕ ಜಡ್ಡು, ಅದೃಷ್ಟವೇ ಸಂಪೂರ್ಣ ಬದಲಾಯಿತು. ಅದೇ ವರ್ಷ ಐಪಿಎಲ್ ಟೂರ್ನಿಗೂ ಕಾಲಿಟ್ಟರು. ಐಪಿಎಲ್ ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಗೂ ಪ್ರವೇಶಿಸಿದರು. ವರ್ಷದಿಂದ ವರ್ಷಕ್ಕೆ ತನ್ನ ಪ್ರತಿಭೆ ಅನಾವರಣಗೊಳಿಸಿ ತಂಡದ ಯಶಸ್ಸಿಗೆ ಕಾರಣರಾದರು.

ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟರ್ ಜಡ್ಡು ಮದುವೆಯಾಗಿದ್ದು ಆಗರ್ಭ ಶ್ರೀಮಂತನ ಪುತ್ರಿಯನ್ನು. ಆಕೆ ಹೆಸರು ರಿವಾಬಾ ಸೋಲಂಕಿ. ಅಚ್ಚರಿ ಅಂದರೆ ಈಕೆ ಜಡ್ಡು ಅಕ್ಕ ನೈನಾ ಸ್ನೇಹಿತೆ. ಪಾರ್ಟಿಯೊಂದರಲ್ಲಿ ರಿವಾಬಾರನ್ನು ನೈನಾ, ಜಡೇಜಾಗೆ ಪರಿಚಯ ಮಾಡಿದ್ದರು. ಪರಿಚಯ ಮುಗಿದ ನಂತರ ಉತ್ತಮ ಸ್ನೇಹಿತರಾಗುತ್ತಾರೆ. ಸ್ನೇಹ ಪೀತಿಗೆ ತಿರುಗುತ್ತೆ. ಆಕೆಯ ಸೌಂದರ್ಯಕ್ಕೆ ಮೊದಲ ನೋಟದಲ್ಲೇ ಮಾರುಹೋಗಿದ್ದ ಜಡೇಜಾ, ಅಕ್ಕನಿಗೆ ತಿಳಿಯದಂತೆ ಡೇಟಿಂಗ್ ನಡೆಸುತ್ತಾರೆ. ಮೊದಲು ಮದುವೆಗೆ ಒಪ್ಪದ ಜಡೇಜಾ, ಬಳಿಕ ರಿವಾಬಾರನ್ನು ಮದುವೆ ಆಗುವುದಾಗಿ ಹೇಳುತ್ತಾರೆ. ಈ ಮಾತು ಕೇಳಿ ಅಕ್ಕ ಅಚ್ಚರಿಯಾಗುತ್ತಾರೆ. 2016ರ ಫೆಬ್ರವರಿ. 5ರಂದು ನಿಶ್ಚಿತಾರ್ಥ, ಅದೇ ವರ್ಷ ಏಪ್ರಿಲ್ 17ರಂದು ರಿವಾಬಾ ಹಾಗೂ ಜಡೇಜಾ ವಿವಾಹವಾದರು. ಈ ದಂಪತಿಗೆ ನಿಧ್ಯಾನ ಎಂಬ ಮುದ್ದಿನ ಹೆಣ್ಣು ಮಗು ಇದೆ. ಜಡೇಜಾ ಮದುವೆಯಾದ ಕೆಲವೇ ತಿಂಗಳಲ್ಲಿ ಫ್ಯಾಮಿಲಿ ವಾರ್ ಶುರುವಾಗುತ್ತೆ.. ಜಡೇಜಾ ಪತ್ನಿ ರಿವಾಬಾ ವಿರುದ್ದ ಜಡ್ಡು ಅಪ್ಪ ಸಾಲು ಸಾಲು ಆರೋಪ ಮಾಡ್ತಾರೆ.. ಮಗನ ಮೇಲೆ ಸೊಸೆ ಏನು ಮಾಟ ಮಾಡಿದ್ದಾಳೆ ಎಂಬುದು ಗೊತ್ತಿಲ್ಲ.. ತನ್ನ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಬಾರದಿತ್ತು.. ಸೊಸೆ ಬಂದ ಬಳಿಕ ಮಗ ನಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಾನೆ ಎಂದು ಅನಿರುದ್ಧ್  ಆರೋಪಿಸಿದ್ರು.. ಆದ್ರೆ ತಂದೆ ಮಾಡಿದ ಆರೋಪಗಳಿಗೆಲ್ಲಾ ಸತ್ಯಕ್ಕೆ ದೂರವಾದ್ದದ್ದು ಅಂತಾ ಜಡೇಜಾ ಸ್ಪಷ್ಟನೆ ನೀಡಿದ್ರು.. ಇದಾದ ಬಳಿಕ ಜಡೇಜಾ ತನ್ನ ಕುಟುಂಬದಿಂದ ದೂರ ಆದ್ರು.. ಇದರ‌ ನಡುವೆ  ಪತ್ನಿ ರಿವಾಬಾ, 2019ರಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್ ನಗರದಿಂದ ಕಣಕ್ಕೆ ಇಳಿದಿದ್ರು ಇಲ್ಲೂ ಕೂಡ ಫ್ಯಾಮಿಲಿ ವಾರ್ ಜೋರಾಗೆ ಇತ್ತು. ಜಡೇಜಾ ಪತ್ನಿ ಪರ ಪ್ರಚಾರ ಮಾಡಿದ್ರೆ, ನೈನಾ ಜಡೇಜಾ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ರು.. ಬಳಿಕ ಈ ಚುನಾವಣೆಯಲ್ಲಿ ರಿವಾಬಾ ದೊಡ್ಡ ಅಂತರದಿಂದ ಗೆದ್ದಿದ್ರು.. ಹಾಗಿದ್ದರೂ ಫ್ಯಾಮಿಲಿ ವಿಚಾರದಲ್ಲಿ ನಾವು ಒಂದಾಗಿದ್ದೇವೆ ಎಂಬ ಮಾತನ್ನು ಅಂದು ‌ನೈನಾ ಜಡೇಜಾ ಹೇಳಿದ್ದರು. ಆದರೆ 2024ರಲ್ಲಿ ರವೀಂದ್ರ ಜಡೇಜಾ ತಂದೆ ಮಗನ ಬಗ್ಗೆ ಅಸಮಾಧಾನ ಹೊರಹಾಕಿದ್ದರು.‌ ಹೆಂಡತಿ ಸಿಕ್ಕ ಮೇಲೆ‌ ಮಗ ನಮ್ಮಿಂದ ದೂರವಾಗಿದ್ದಾನೆ.. ನಾವು ಕೇವಲ 20,000 ರುಪಾಯಿ ಪೆನ್ಷನ್ ದುಡ್ಡಲ್ಲಿ  ಬದುಕುತ್ತಿದ್ದೇವೆ ಎಂದಿದ್ದರು. ಆದ್ರೆ ಅದೆಲ್ಲಾ ಸುಳ್ಳು ಆರೋಪ‌ಎಂದು ರವೀಂದ್ರ ಜಡೇಜಾ ತನ್ನ ಹೆಂಡತಿಯ ಬೆಂಬಲಕ್ಕೆ ನಿಂತಿದ್ದರು.

ಒಟ್ಟಿನಲ್ಲಿ ಅಂದು ತಂದೆ ಮಾತು ಕೇಳಿ ಸೇನೆ ಸೇರಿದ್ದರೆ, ಜಡೇಜಾ ಇಂದು ಕ್ರಿಕೆಟರ್ ಆಗ್ತಿರಲಿಲ್ಲ,. ಆದರೆ, ಕುಟುಂಬದಲ್ಲಾದ ಸಣ್ಣ ಪುಟ್ಟ ಮನಸ್ತಾಪ ಜಡ್ಡುವನ್ನು ಕಾಡದೆಯೂ ಇರಲಿಲ್ಲ. ಸಾಧನೆಗೆ ಬೆಂಬಲವಾಗಿ ನಿಂತರ ಅಕ್ಕ, ತಂದೆಯ ಜೊತೆ ಮುನಿಸಿಕೊಂಡಿದ್ದಾರೆ ಎಂಬ ಆರೋಪ, ಎಲ್ಲವೂ ಸರಿಯಿದೆ ಅಂದರೂ ಏನೂ ಸರಿಯಿಲ್ಲ ಎಂಬ ಮಾತು, ಇದೆಲ್ಲವನ್ನೂ ಮೀರಿ ಟೀಮ್ ಇಂಡಿಯಾ ರಾಕಿಂಗ್ ಸ್ಟಾರ್ ಜಡೇಜಾ ಭಾರತದ ಹೆಮ್ಮೆ ಅನ್ನೋದು ಅಷ್ಟೇ ಸತ್ಯ.

Shwetha M

Leave a Reply

Your email address will not be published. Required fields are marked *