‘ಕೆಡಿ’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಖಡಕ್ ಲುಕ್ – ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ

‘ಕೆಡಿ’ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಖಡಕ್ ಲುಕ್ – ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳಿಗೆ ಹೊಸವರ್ಷದಂದೇ ಸಿಹಿಸುದ್ದಿ ಸಿಕ್ಕಿದೆ. ‘ಕೆಡಿ’ ಸಿನಿಮಾ (KD Movie) ದಲ್ಲಿ ರವಿಮಾಮನ ಲುಕ್ ರಿವೀಲ್ ಆಗಿದೆ. ಹೊಸವರ್ಷದಂದು ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ರವಿಚಂದ್ರನ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಜೋಗಿ’ ಪ್ರೇಮ್​ (Jogi Prem) ನಿರ್ದೇಶನದ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್​ ಅವರು ಅಣ್ಣಯ್ಯಪ್ಪ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬ ಪೋಸ್ಟರ್‌ನ್ನು ಚಿತ್ರ ತಂಡ  ಹಂಚಿಕೊಂಡಿದೆ.

ಇದನ್ನೂ ಓದಿ:  ಪವಿತ್ರಾ ಲೋಕೇಶ್‌ಗೆ ನರೇಶ್ ಲಿಪ್ ಕಿಸ್ – ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಣೆ

ಕೆವಿಎನ್​ ಪ್ರೊಡಕ್ಷನ್ಸ್​ ಮೂಲಕ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ರವಿಚಂದ್ರನ್​ ಅವರ ಡಿಫರೆಂಟ್ ಲುಕ್​ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಪ್ಪು ಬಟ್ಟೆ, ಉದ್ದ ಕೂದಲು, ಕೂಲಿಂಗ್​ ಗ್ಲಾಸ್​, ಹಣೆಯಲ್ಲಿ ವಿಭೂತಿ.. ಹೀಗೆ ವಿಶೇಷ ಗೆಟಪ್​ನಲ್ಲಿ ರವಿಚಂದ್ರನ್​ ಅವರ ಪಾತ್ರ ಇರೋದು ಪೋಸ್ಟರ್‌ನಿಂದ ತಿಳಿದುಬಂದಿದೆ. ಕಾರೊಳಗೆ ಕುಳಿತಿರುವ ಸ್ಟೈಲ್ ನೋಡಿದ್ರಂತೂ, ರವಿಮಾಮ ರಗಡ್ ಲುಕ್‌ಲ್ಲಿ ಪಾತ್ರ ನಿರ್ವಹಿಸಲಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಜೊತೆಗೆ ಈ ಪಾತ್ರಕ್ಕೆ ಸಿಕ್ಕಾಪಟ್ಟೆ ಹೈಪ್ ಇರುವುದು ಗೊತ್ತಾಗುತ್ತಿದೆ. ಈ ಖಡಕ್​ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಪ್ರೇಮ್​ ಅವರು ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

ಮಾಸ್​ ಸಿನಿಮಾಗಳಿಂದ ಫೇಮಸ್​ ಆದವರು ‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ. ‘ಕೆಡಿ’ ಚಿತ್ರದಲ್ಲೂ ಅವರ ಮಾಸ್​ ಅವತಾರ ಮುಂದುವರಿಯಲಿದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ನೀಡಲಾಗಿತ್ತು. ರೆಟ್ರೋ ಕಾಲದ ಕಥೆ ಈ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆಯೇ ರವಿಚಂದ್ರನ್​ ಅವರ ಲುಕ್​ ಮೂಡಿಬಂದಿದೆ. ಅಭಿಮಾನಿಗಳ ವಲಯದಲ್ಲಿ ಹೊಸ ಪೋಸ್ಟರ್​ ವೈರಲ್​ ಆಗುತ್ತಿದೆ.

‘ಕೆಡಿ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

suddiyaana