‘ದೋ ತೇರಾ, ದೋ ಮೇರಾ’- ಫನ್ನಿ ರೀಲ್ಸ್ ನಲ್ಲಿ ಕಾಣಿಸಿಕೊಂಡ ಅಶ್ವಿನ್-ಜಡೇಜಾ

‘ದೋ ತೇರಾ, ದೋ ಮೇರಾ’- ಫನ್ನಿ ರೀಲ್ಸ್ ನಲ್ಲಿ ಕಾಣಿಸಿಕೊಂಡ ಅಶ್ವಿನ್-ಜಡೇಜಾ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಕ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ವಿರಾಮದ ವೇಳೆ ಟೀಮ್ ಇಂಡಿಯಾ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಪಂದ್ಯದ ವೇಳೆ ಮೈದಾನದಲ್ಲಿ ಸೀರಿಯಸ್ ಆಗಿ ಆಟ ಆಡೋ ಕ್ರಿಕೆಟರ್ ಗಳು ವಿರಾಮದ ವೇಳೆ ತಮ್ಮ ಸ್ನೇಹಿತರೊಂದಿಗೆ ಜಾಲಿ ಮೂಡ್ ನಲ್ಲಿ ಇರುತ್ತಾರೆ. ಹಾಗೆ ಅವರೊಂದಿಗೆ ಕಳೆದ ಕೆಲವೊಂದು ಸಂತಸದ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಒಂದು ಫನ್ನಿ ರೀಲ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಸರಣಿ ಗೆದ್ದ ಹುಮ್ಮಸ್ಸಲ್ಲಿ ಟೀಮ್ ಇಂಡಿಯಾ – ಮಾರ್ಚ್ 17ರಿಂದ ಏಕದಿನ ಸರಣಿ ಆರಂಭ

ಬಾಲಿವುಡ್​ನಲ್ಲಿ 2005 ರಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ನಟನೆಯ “ದೀವಾನೆ ಹುಯೇ ಪಾಗಲ್” ಸಿನಿಮಾದ ‘ದೋ ತೇರಾ, ದೋ ಮೇರಾ’ ಫೇಮಸ್ ಕಾಮಿಡಿ ಸೀನ್​ಗೆ ರೀಲ್ಸ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕುರ್ಚಿ ಮೇಲೆ ಕುಳಿತಿರುತ್ತಾರೆ. ಬಳಿಕ “ದೀವಾನೆ ಹುಯೇ ಪಾಗಲ್” ಸಿನಿಮಾದ ‘ದೋ ತೇರಾ, ದೋ ಮೇರಾ’ಅನ್ನೋ ಡೈಲಾಗ್ ಆರಂಭವಾಗುತ್ತಿದ್ದಂತೆ ಇಬ್ಬರು ಡೈಲಾಗ್ ಗೆ ತಕ್ಕಂತೆ ನಟನೆ ಮಾಡಲು ಆರಂಭಿಸುತ್ತಾರೆ. ಬಳಿಕ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಈ ವಿಡಿಯೋವನ್ನು ಅಶ್ವಿನ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Suddi Yaana (@suddiyaana)

suddiyaana