ಆಸಿಸ್ ನಲ್ಲಿ ಕೊಹ್ಲಿ ಕಮ್ ಬ್ಯಾಕ್ – ಕಾಂಗರೂ ಪಡೆಗೆ ರವಿಶಾಸ್ತ್ರಿ ವಾರ್ನಿಂಗ್
ವಿರಾಟ್ ಗೆ ಸೈಲೆಂಟ್ ಆಗಿರು ಎಂದಿದ್ದೇಕೆ?
ಗೆಲ್ಲಲೇ ಬೇಕು ಗೆದ್ದು ತಮ್ಮ ತಾಕತ್ತು ಜೊತೆ ಬಿಸಿಸಿಐ ಮರ್ಯಾದೆ ಕೂಡ ಉಳಿಸಬೇಕು.. ಹೀಗಾಗಿ ಕಾಂಗೂರು ಪಡೆ ವಿರುದ್ಧ ಸೆಣಸಾಡಿ ಗೆಲ್ಲಲೇ ಬೇಕಾದ ಪರಿಸ್ಥಿಗೆ ಟೀಂ ಇಂಡಿಯಾ ಬಂದಿದೆ. ಅದ್ರಲ್ಲೂ ತವರಿನಲ್ಲೇ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಮುಗ್ಗರಿಸಿದ್ದನ್ನ ನಾವು ಈಗಾಗಲೇ ನೋಡಿದ್ದೇವೆ.. ಹೀಗಾಗಿ 22 ರಿಂದ ನಡೆಯೋ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಸ್ಕಾರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಗೆಲವು ಮುಖ್ಯ. ಹೀಗಾಗಿ ಸ್ಟಾರ್ ಬ್ಯಾಟರ್‌ಗಳಿಗೆ ಇದು ಅಗ್ನಿ ಪರೀಕ್ಷೆಯಾಗಿದೆ.
ಇದನ್ನೂ ಓದಿ: IPL ಹರಾಜಿಗೆ ಶಾರ್ಟ್ ಲಿಸ್ಟ್ ರಿಲೀಸ್ – 2 ಸೆಟ್.. 12 ಪ್ಲೇಯರ್ಸ್.. ಬೆಲೆ ಎಷ್ಟು?
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಹಳೆಯ ಖದರ್ ಕಳೆದುಕೊಂಡಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ ರನ್ ಗಳಿಸಲು ವಿರಾಟ್ ಪರದಾಡುತ್ತಿದ್ದು, ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಸ್ಕಾರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕೊಹ್ಲಿ ಕಾಂಗೂರುಗಳನ್ನ ಬಗ್ಗು ಬಡಿತಾರೆ ಅಂತಾ ಮಾಜಿ ಟೀಮ್ ಇಂಡಿಯಾ ಹೆಡ್‌ಕೋಚ್ ರವಿಶಾಸ್ತ್ರಿ ಭರವಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿರಾಟ್ವ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾಕ್ಕೆ ರವಿಶಾಸ್ತ್ರಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
ಕೊಹ್ಲಿ ಬಗ್ಗೆ ರವಿಶಾಸ್ತ್ರಿ ಭರವಸೆ
ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ನೀಡಿದ್ದು, ಕೊಹ್ಲಿ ಅವರು ಬ್ಯಾಟಿಂಗ್ ಮಾಡಲು ಮತ್ತು ರನ್ ಗಳಿಸಲು ಇಷ್ಟಪಡುವ ದೇಶಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ. 2011-12ರಲ್ಲಿ ಆಸ್ಟ್ರೇಲಿಯಾಕ್ಕೆ ತಮ್ಮ ಮೊದಲ ಟೆಸ್ಟ್ ಪ್ರವಾಸ ಕೈಗೊಂಡಿದ್ದ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೆನಪಿಸಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಸಿಡಿಸಿ ಶತಕವನ್ನು ಮೆಲುಕು ಹಾಕಿದ್ದಾರೆ. ಇದಾದ ನಂತರ ಕೊಹ್ಲಿ ಅವರು 2014ರ ಪ್ರವಾಸದ ಸಮಯದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 692 ರನ್ ಗಳು ಮತ್ತು 2018-19 ರ ಸರಣಿ ವೇಳೆ ಪರ್ತ್‌ನಲ್ಲಿ 123 ರನ್‌ಗಳ ಅದ್ಭುತ ಇನ್ನಿಂಗ್ ಆಡಿದ ಬಗ್ಗೆಯೂ ರವಿಶಾಸ್ತ್ರಿ ಉಲ್ಲೇಖಿಸಿ ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದ್ರ ಜೊತೆ ಕೊಹ್ಲಿಗೆ ಸಲಹೆ ಕೊಟ್ಟ ರವಿಶಾಸ್ತ್ರಿ ವಿರಾಟ್ ತಾಳ್ಮೆ ಆಟದ ಬಗ್ಗೆ ಮಾತನಾಡಿದ್ದಾರೆ. ನೀವು ಉತ್ಸಾಹದಲ್ಲಿರುವಾಗ ಶಾಂತವಾಗಿರುವುದು ಪ್ರಮುಖವಾಗಿದೆ. ಬ್ಯಾಟಿಂಗ್‌ಗೆ ಬಂದಾಗ ಅಥವಾ ಸರಣಿ ಮೊದಲ ಮೂರು ಇನ್ನಿಂಗ್ಸ್‌ಗಳವರೆಗೆ ಶಾಂತವಾಗಿರಬೇಕು. ಆತುರಪಡುವ ಬದಲು ಶಾಂತವಾಗಿ ಮತ್ತು ತಮ್ಮದೇ ಆದ ವೇಗದಲ್ಲಿ ಆಡುವುದಾದರೆ, ಕೊಹ್ಲಿ ರನ್ ಗಳಿಸುತ್ತಾರೆ ಎಂದು ವಿರಾಟ್ ಕೊಹ್ಲಿ ಬಗ್ಗೆ ರವಿಶಾಸ್ತ್ರಿ ಹೇಳಿದ್ದಾರೆ. ಹೀಗಾಗಿ ಕೊಹ್ಲಿ ಮೇಲೆ ಸಾಕಷ್ಟು ಭರವಸೆಯಿದ್ದು, ಈ ತಂಡವನ್ನ ಜವಾಬ್ದಾರಿ ಕೂಡ ಕೂಹ್ಲಿ ಮೇಲಿದೆ.