ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠ
ರಾಹುಲ್ ದ್ರಾವಿಡ್‌ಗೆ ಶುರುವಾಯ್ತು ರಜೆ ರಗಳೆ

ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠರಾಹುಲ್ ದ್ರಾವಿಡ್‌ಗೆ ಶುರುವಾಯ್ತು ರಜೆ ರಗಳೆ

ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಬಗ್ಗೆ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮಾತಿನಲ್ಲೇ ಚುಚ್ಚಿದ್ದಾರೆ. ಸದ್ಯ  ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್‌ ಮತ್ತು ಏಕದಿನ ಕ್ರಿಕೆಟ್‌ ಸರಣಿ ಪಂದ್ಯವನ್ನು ಆಡಲು ಟೀಮ್ ಇಂಡಿಯಾ  ಕಿವೀಸ್ ಪ್ರವಾಸದಲ್ಲಿದೆ.  ಈ ಕ್ರಿಕೆಟ್‌ ಸರಣಿಯಿಂದ ರಾಹುಲ್ ದ್ರಾವಿಡ್ ಮತ್ತು ಅವರ ಕೋಚಿಂಗ್ ಸಿಬ್ಬಂದಿ ರಜೆ ತೆಗೆದುಕೊಂಡಿದ್ದಾರೆ.  ರಾಹುಲ್ ದ್ರಾವಿಡ್ ಈ ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಬಗ್ಗೆ  ರವಿಶಾಸ್ತ್ರಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:   ಟಿ20 ವಿಶ್ವಕಪ್‌ಲ್ಲಿ ಹೋದ ಟೀಮ್ ಇಂಡಿಯಾ ಮಾನ ಕಿವೀಸ್‌ಲ್ಲಿ ಬರುತ್ತಾ ?

ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಟಿ20 ಪಂದ್ಯಕ್ಕೂ ಮುನ್ನ ವರ್ಚುವಲ್ ಪತ್ರಿಕಾಗೋಷ್ಠಿ ವೇಳೆ ರವಿಶಾಸ್ತ್ರಿ ರಾಹುಲ್ ದ್ರಾವಿಡ್ ವಿಶ್ರಾಂತಿಯಲ್ಲಿರುವುದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಗೆ ಪದೇ ಪದೇ ವಿಶ್ರಾಂತಿ ಯಾಕೆ ಬೇಕು?. ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ತಂಡದಲ್ಲಿ ಇಲ್ಲದಿರುವುದು ಇದೇ ಮೊದಲೇನು ಅಲ್ಲ. ಇದಕ್ಕೂ ಮೊದಲು, ಜಿಂಬಾಬ್ವೆ ಪ್ರವಾಸ ಮತ್ತು ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿ ವೇಳೆಯೂ ಅವರು ವಿಶ್ರಾಂತಿ ಪಡೆದಿದ್ದರು. ರಾಹುಲ್ ದ್ರಾವಿಡ್ ಅವರ ಈ ರಜಾದಿನಗಳು ಕೋಚ್-ಆಟಗಾರರ ನಡುವಣ ಸಂಬಂಧವನ್ನು ಬೆಳೆಯಲು ಬಿಡುವುದಿಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಕೋಚ್‌ ಮತ್ತು ಆಟಗಾರರ ನಡುವಣ ಬಾಂಧವ್ಯ ಬೆಳೆಯುವುದು ತಂಡದ ಸುಧಾರಣೆಗೆ ಅವಶ್ಯಕವಾಗಿದೆ. ಐಪಿಎಲ್ ಸಮಯದಲ್ಲಿ ಸಿಗುವ 2-3 ತಿಂಗಳ ವಿರಾಮ ವಿಶ್ರಾಂತಿ ಪಡೆಯಲು ಸಾಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ ಮತ್ತು ಏಕದಿನ ಸರಣಿ ಪಂದ್ಯಗಳನ್ನಾಡಲಿದೆ. ಈ ವೇಳೆ ಟೀಮ್ ಇಂಡಿಯಾ ಜವಾಬ್ದಾರಿಯನ್ನು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನಿರ್ವಹಿಸುತ್ತಿದ್ದಾರೆ.  ಡಿಸೆಂಬರ್ 4ರಿಂದ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಲಿದೆ. ಆಗ ರಾಹುಲ್ ದ್ರಾವಿಡ್ ಮತ್ತು ಕೋಚಿಂಗ್‌ ಬಳಗ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ.

suddiyaana