ಭಾರತದ ಟೆಸ್ಟ್ ಕೋಟೆ ಕಟ್ಟಿದ್ದೇ ಕೊಹ್ಲಿ & ಶಾಸ್ತ್ರಿ – 5 ವರ್ಷ.. ನಂ.1 ಪಟ್ಟ.. ಹೇಗಿತ್ತು ಆರ್ಭಟ?
ಕೆಣಕಿದವರನ್ನು ಮೆಟ್ಟಿ ನಿಂತಿದ್ದೇಗೆ KING?

ಶ್ರೀಲಂಕಾ ವಿರುದ್ಧ ವಾರ್ಮ್ ಅಪ್ ಮ್ಯಾಚಲ್ಲಿ ಬ್ಯುಸಿ ಇರೋ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ನಲ್ಲಿ ಉಳೀಬೇಕು ಅಂದ್ರೆ ಮಸ್ಟ್ ಌಂಡ್ ಶುಡ್ ಕ್ಲೀನ್ ಸ್ವೀಪ್ ಸಾಧನೆ ಮಾಡ್ಬೇಕು. ಅದೂ ಅಲ್ದೇ ಕಳೆದ ಎರಡು ವರ್ಷಗಳಿಂದ ಟೆಸ್ಟ್ ಫಾರ್ಮೆಟ್ನಲ್ಲಿ ಟೀಂ ಇಂಡಿಯಾ ಕಂಪ್ಲೀಟ್ ಹಳ್ಳ ಹಿಡಿದಿದೆ. ಇದೇ ಈಗ ಕೋಟಿ ಕೋಟಿ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ. ಯಾಕಂದ್ರೆ ಕೋಚ್ ರವಿಶಾಸ್ತ್ರಿ ಮತ್ತು ಕ್ಯಾಪ್ಟನ್ ಕೊಹ್ಲಿ ಕಾಲದಲ್ಲಿ ಕಟ್ಟಿದ್ದ ಸಾಮ್ರಾಜ್ಯ ಅಲುಗಾಡತೊಡಗಿದೆ.
ಇದನ್ನೂ ಓದಿ : Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?
ಕ್ರಿಕೆಟ್ನಲ್ಲಿ ಯಾವುದೇ ತಂಡಕ್ಕಾದ್ರೂ ಟಿ-20ಐ ಹಾಗೇ ಏಕದಿನ ಗೆಲುವಿಗಿಂತ ಟೆಸ್ಟ್ ಕ್ರಿಕೆಟ್‌ನ ಯಶಸ್ಸು ಸರ್ವಶ್ರೇಷ್ಠ ಅಂತಾನೇ ಲೆಕ್ಕ. ಸೀಮಿತ ಓವರ್ಗಳ ಕ್ರಿಕೆಟ್ ಎಂಟರ್ಟೈನ್ಮೆಂಟ್ ಆಗಿದ್ರೆ ಟೆಸ್ಟ್ ಮಾದರಿಯ ಸಕ್ಸಸ್ ಆ ದೇಶದ ಕ್ರಿಕೆಟ್‌ನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರಿ ಹೇಳುತ್ತೆ. ಟೀಂ ಇಂಡಿಯಾ ಪರ ಹಿಂದೆಲ್ಲಾ ಟೆಸ್ಟ್ ಮಾದರಿಯಲ್ಲಿ ಲೆಜೆಂಡರಿ ಬ್ಯಾಟರ್ಗಳೇ ಇದ್ರು. ಆದ್ರೆ ಒಂದು ತಂಡವಾಗಿ ಭಾರತ ಗ್ರೇಟೆಸ್ಟ್ ಎನಿಸಿಕೊಂಡಿದ್ದು ಕೋಚ್ ರವಿಶಾಸ್ತ್ರಿ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಯುಗದಲ್ಲಿ. ಈ ಜೋಡಿಯ ಅವಧಿಯನ್ನ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವೀ ಮತ್ತು ಸುವರ್ಣಯುಗ ಎಂದೇ ಕರೆಯಲಾಗಿದೆ. ಇವ್ರಿಬ್ಬರು ಕಟ್ಟಿ ಬೆಳೆಸಿದ್ದ ಭಾರತದ ನಂಬರ್ 1 ಪಟ್ಟ ಈಗ ಗೌತಮ್ ಗಂಭೀರ್ ಅವ್ರ ಅವಧಿಯಲ್ಲಿ ಕುಸಿಯುತ್ತಿರೋದೇ ಆತಂಕ ಮೂಡಿಸಿದೆ.
ಭಾರತ ಟೆಸ್ಟ್ ತಂಡದ ದಿಕ್ಕನ್ನೇ ಬದಲಿಸಿದ ಕಿಂಗ್ ಕೊಹ್ಲಿ!
ಮೂರೂ ಮಾದರಿಯಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಂತಾ ಬಂದಾಗ ರನ್ ಮಷಿನ್. ಹಾಗೇ ಕ್ಯಾಪ್ಟನ್ ಆಗಿಯೂ ಕೂಡ ಭಾರತ ಕಂಡ ಯಶಸ್ವೀ ನಾಯಕನೇ. ಆದ್ರೆ ಐಸಿಸಿ ಟೂರ್ನಮೆಂಟ್ಗಳಲ್ಲಿ ಕಪ್ ಗೆಲ್ಲದೆ ದುರಂತ ನಾಯಕನಾಗಿ ಕಂಡ್ರು ಅಷ್ಟೇ. ಹೀಗಿದ್ರೂ ಟೆಸ್ಟ್ ಫಾರ್ಮೆಟ್ ಅಂತಾ ಬಂದಾಗ ಭಾರತ ತಂಡದ ದಿಕ್ಕನ್ನೇ ಬದಲಿಸಿದ್ರು. ಮಹೇಂದ್ರ ಸಿಂಗ್ ಧೋನಿ ಬಳಿಕ 2014 ರ ಕೊನೆಯಲ್ಲಿ ಟೆಸ್ಟ್ ತಂಡದ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಕೊಹ್ಲಿ, 2022ರ ಜನವರಿವರೆಗೆ ಭಾರತ ತಂಡವನ್ನು ಮುನ್ನಡೆಸಿದರು. ಈ ಪಿರಿಯಡ್ನ ಗೋಲ್ಡನ್ ಎರಾ ಅಂತಾನೇ ಕರೀತಾರೆ. ಸೋ ಕೊಹ್ಲಿ ಕ್ಯಾಪ್ಟನ್ ಮತ್ತು ಕೋಚ್ ರವಿಶಾಸ್ತ್ರಿ ಅಂಡರ್ನಲ್ಲಿ ಭಾರತದ ಟೆಸ್ಟ್ ಪಾರುಪತ್ಯ ಹೇಗಿತ್ತು ಅನ್ನೋದನ್ನ ನೋಡೋಣ.
ಕೊಹ್ಲಿ ನಿಜಕ್ಕೂ ಕಿಂಗ್!
ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯಿಂದ ಇಳಿಯುವಾಗ ಭಾರತಕ್ಕೆ 7ನೇ ಸ್ಥಾನ
ಕಠಿಣ ಪರಿಸ್ಥಿತಿಯಲ್ಲಿ ಕ್ಯಾಪ್ಟನ್ ಆದ್ರೂ ನಂಬರ್ 1ಸ್ಥಾನಕ್ಕೇರಿಸಿದ ಕಿಂಗ್
2016 ರಿಂದ 2021 ರವರೆಗೆ ಸತತವಾಗಿ 5 ವರ್ಷಗಳ ಕಾಲ ನಂ.1 ಸ್ಥಾನ
ಆಸ್ಟ್ರೇಲಿಯಾದಲ್ಲಿ ಅವ್ರನ್ನೇ ಸೋಲಿಸಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ
2021ರಲ್ಲಿ ಚೊಚ್ಚಲ ಐಸಿಸಿ ಡಬ್ಲ್ಯೂಟಿಸಿ ಟೂರ್ನಿಯಲ್ಲಿ ಫೈನಲ್ ಗೆ ಮುನ್ನಡೆಸಿದರು
ಇಂಗ್ಲೆಂಡ್ ನ ಲಾರ್ಡ್ಸ್, ಓವಲ್ ಪಿಚ್, ದ.ಆಫ್ರಿಕಾದ ಸೆಂಚುರಿಯನ್ ಗೆಲುವು
ಭಾರತದ ನೆಲದಲ್ಲಿ ನಾಯಕನಾಗಿ 31 ಟೆಸ್ಟ್ ಪಂದ್ಯಗಳಲ್ಲಿ 24 ಗೆಲುವು 2ರಲ್ಲಿ ಸೋಲು
ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನೂ ಸೋಲಲು ಬಿಡದ ನಾಯಕ
ನಾಯಕನಾಗಿ 68 ಟೆಸ್ಟ್, 5,864 ರನ್, 20 ಶತಕ, 18 ಅರ್ಧಶತಕ, 7 ದ್ವಿಶತಕ
ವಿದೇಶದಲ್ಲಿ 36 ಟೆಸ್ಟ್ ಗಳಲ್ಲಿ 16 ಪಂದ್ಯಗಳನ್ನು ಗೆದ್ದು, 14 ಪಂದ್ಯಗಳಲ್ಲಿ ಸೋಲು
ಒಬ್ಬ ನಾಯಕನಾಗಿ ತಂಡವನ್ನ ಉತ್ತುಂಗಕ್ಕೇರಿಸಿದ್ರು. ನಾಯಕತ್ವ ಬಿಟ್ಟು ಕೆಳಗಿಳಿಯುವಾಗಲೂ ಭಾರತ ಮೊದಲ ಸ್ಥಾನದಲ್ಲೇ ಇತ್ತು. ಆದ್ರೆ ಅದಕ್ಕಿಂತ ಮುಖ್ಯವಾಗಿ ಇಡೀ ತಂಡದ ಮೈಂಡ್ಸೆಟ್ನೇ ಬದಲಿಸಿದ್ರು. ಕೊಹ್ಲಿ ಯುಗಕ್ಕೂ ಮುನ್ನ ಇದ್ದ ಸಾಫ್ಟ್ನೆಸ್ ಕೊಹ್ಲಿ ಅಧಿಕಾರ ವಹಿಸಿಕೊಂಡ ಮೇಲೆ ಗರಡ್ ಆಗಿ ಬದಲಾಗಿತ್ತು.
ಕೊಹ್ಲಿ ನಡೆದಿದ್ದೇ ದಾರಿ!
ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಅತಿದೊಡ್ಡ ಬದಲಾವಣೆ ವಿದೇಶಿ ಪಿಚ್ ಡಾಮಿನೇಷನ್
ವಿದೇಶಗಳಲ್ಲಿ ಗೆಲ್ಲೋದಲ್ಲ ಜಸ್ಟ್ ಡ್ರಾ ಆದ್ರೆ ಸಾಕಪ್ಪ ಅನ್ನೋ ಮೈಂಡ್ ಸೆಟ್
ಪಿಚ್ ಯಾರದ್ದಾದ್ರೇನು ಗೆಲ್ಲೋರು ನಾವೇ ಆಗಿರ್ಬೇಕು ಅನ್ನೋ ಅಗ್ರೆಶನ್
ಸೆನಾ ರಾಷ್ಟ್ರಗಳಲ್ಲಿ ಭಾರತೀಯ ತಂಡಕ್ಕೆ ಗೆಲುವಿನ ಹಸಿವು ಮೂಡಿಸಿದ್ದೇ ಕೊಹ್ಲಿ
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ
ಟೆಸ್ಟ್ ಮಾದರಿಯೇ ಕ್ರಿಕೆಟ್ ನ ಸರ್ವೋನ್ನತ ಮಾದರಿ ಅಂತಾ ಜಗತ್ತೀಗೇ ಸಾರಿದ್ರು
ವಿದೇಶಿ ಆಟಗಾರರ ಸ್ಲೆಡ್ಜಿಂಗ್ ಗೆ ಅವ್ರದ್ದೇ ದಾಟಿಯಲ್ಲಿ ಉತ್ತರ ನೀಡಿ ಠಕ್ಕರ್
ಫಿಟ್ನೆಸ್ ಕ್ರಾಂತಿ, ಯೋ-ಯೋ ಟೆಸ್ಟ್ ಪಾಸ್ ಆಗುವುದು ಕಡ್ಡಾಯವಾಗಿತ್ತು.
ಫಿಟ್ ನೆಸ್ ಸಾಮರ್ಥ್ಯವನ್ನ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ರು
ವಿಶ್ವದ ಅತ್ಯಂತ ಡೇಂಜರಸ್ ಫಾಸ್ಟ್ ಬೌಲಿಂಗ್ ಪಡೆಯನ್ನು ಸೃಷ್ಟಿಸಿದ್ದು ಕೊಹ್ಲಿ
ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 20 ಶತಕಗಳು ಮತ್ತು 7 ಡಬಲ್ ಸೆಂಚುರಿ ಸಿಡಿಸಿದ್ರು
ಹೀಗೆ ಟೆಸ್ಟ್ ಕ್ರಿಕೆಟ್ ಅನ್ನೋದು ಬರೀ ಪಂದ್ಯಗಳಲ್ಲ. ಐದು ದಿನಗಳ ಆಟ ಒಬ್ಬ ಕ್ರಿಕೆಟರ್ನ ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸುತ್ತೆ. 5 ದಿನಗಳ ಪಂದ್ಯ ಆಗಿರೋದ್ರಿಂದ ಸತತವಾದ ಏಕಾಗ್ರತೆ ಇರ್ಬೇಕು. ಬದಲಾಗುವ ಪಿಚ್ಗಳ ಪರಿಸ್ಥಿತಿಗೆ ತಕ್ಕಂತೆ ಆಟ ಆಡ್ಬೇಕು. ಹೀಗಾಗೇ ಕ್ರಿಕೆಟ್‌ನ ‘ಅಲ್ಟಿಮೇಟ್ ಟೆಸ್ಟ್’ ಎನ್ನಲಾಗುತ್ತದೆ. ಒಂದು ದೇಶದ ಕ್ರಿಕೆಟ್ ಮಂಡಳಿ ಎಷ್ಟು ಸ್ಟ್ರಾಂಗ್ ಅನ್ನೋದು ಕೂಡ ಟೆಸ್ಟ್ ಕ್ರಿಕೆಟ್ ಪ್ರದರ್ಶನದ ಆಧಾರದ ಮೇಲೆ ಅಳೆಯಲಾಗುತ್ತೆ. ವಿದೇಶಿ ಪಿಚ್ಗಳಲ್ಲಿ ಗೆಲ್ಲುವ ಟೆಸ್ಟ್ ಸರಣಿಗಳು ಇತಿಹಾಸ ಪುಟಗಳಲ್ಲಿ ದಾಖಲಾಗುತ್ತೆ. ವಿರಾಟ್ ಕೊಹ್ಲಿ ಅಂದ್ರೆ ಬರೀ ಒಬ್ಬ ಸ್ಟಾರ್ ಬ್ಯಾಟರ್ ಅಲ್ಲ. ಅವ್ರೊಬ್ಬ ರೋಲ್ ಮಾಡೆಲ್. ಬ್ಯಾಟರ್ ಆಗಿ ಕ್ಯಾಪ್ಟನ್ ಆಗಿ ತಾನು ಗೆಲ್ಲೋದ್ರ ಜೊತೆಗೆ ತಂಡವನ್ನೂ ಗೆಲ್ಲಿಸಿದ್ರು. ಇದೇ ಕಾರಣಕ್ಕೆ ಅವ್ರನ್ನ ಕ್ರಿಕೆಟ್‌ನ ಗೋಟ್ ಅನ್ನೋದು. ಹಾಗೇ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಕಾಂಬಿನೇಷನ್ ಭಾರತ ತಂಡಕ್ಕೆ ಯಾವತ್ತಿಗೂ ಕೂಡ ಸರ್ವಶ್ರೇಷ್ಠವೇ.

ನೋಡಿರಿ

