ಸಿನಿಮಾ ಇತಿಹಾಸದಲ್ಲಿ ಇದೇ ಮೊದಲು – ವೀರ ಚಂದ್ರಹಾಸ ಟೀಸರ್ OUT
ರವಿ ಬಸ್ರೂರು ಯಕ್ಷಗಾನ ಪ್ರಯೋಗ

ಸಿನಿಮಾ ಇತಿಹಾಸದಲ್ಲಿ ಇದೇ ಮೊದಲು – ವೀರ ಚಂದ್ರಹಾಸ ಟೀಸರ್ OUTರವಿ ಬಸ್ರೂರು ಯಕ್ಷಗಾನ ಪ್ರಯೋಗ

ಯಕ್ಷಗಾನ. ಕರಾವಳಿಯ ಅದ್ಭುತ ಕಲೆ. ಇದೇ ಯಕ್ಷಗಾನ ಈಗ ಬೆಳ್ಳಿತೆರೆ ಮೇಲೆ ಮೆರೆಯಲು ರೆಡಿಯಾಗಿದೆ. ಸಿನಿಮಾ ಇತಿಹಾಸದಲ್ಲಿಯೇ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು. ಸಿನಿಮಾಗಳಲ್ಲಿ ಯಕ್ಷಗಾನದ ಸೀನ್ ಬಂದು ಹೋಗಿದೆ. ಆದ್ರೆ, ಇಡೀ ಒಂದು ಸಿನಿಮಾವೇ ಯಕ್ಷಗಾನ ರೂಪದಲ್ಲಿ ತೋರಿಸೋ ಸಾಹಸ ಇದುವರೆಗೆ ಆಗಿರಲಿಲ್ಲ. ಇದೀಗ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಈ ಒಂದು ಸಾಹಸಕ್ಕೆ ಕೈಹಾಕಿದ್ದಾರೆ. ಈ ಸಿನಿಮಾ ಯಾವುದು? ಫಿಲ್ಮ್ ಟೈಟಲ್ ಏನು? ಯಾರೆಲ್ಲಾ ಈ ಸಿನಿಮಾದಲ್ಲಿ ಯಕ್ಷಗಾನ ಕಲೆ ಮೂಲಕ ಪ್ರಯೋಗಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCBಗೆ ಸಿಕ್ಸರ್ ಕಿಂಗ್ ರಿಂಕು? – ರಿಂಕು ಸೆಳೆದಿದ್ದೇ ವಿರಾಟ್ ಕೊಹ್ಲಿ

ಯಕ್ಷಗಾನ ನೋಡೋದು ಒಂದು ವಿಶೇಷ ಅನುಭವ. ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನವೇ ಪ್ರಮುಖ ಕಲೆ. ಯಕ್ಷಗಾನದ ಒಂದು ಪದ ಕೇಳಿದ್ರೂ ಸಾಕು, ದಕ್ಷಿಣಕನ್ನಡ, ಉಡುಪಿ, ಕಾರವಾರ ಜಿಲ್ಲೆಯ ಜನರ ಖುಷಿಯಂತೂ ಕೇಳೋದೇ ಬೇಡ. ಇದೀಗ ಇದೇ ಯಕ್ಷಗಾನ ನೀವು ರಂಗಸ್ಥಳದಲ್ಲಿ ಮಾತ್ರ ನೋಡಬೇಕಿಲ್ಲ. ಬೆಳ್ಳಿ ತೆರೆ ಮೇಲೂ ನೋಡಿ ಅನ್ನೋ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್. ಈ ವಿಭಿನ್ನ ಚಿತ್ರಕ್ಕೆ ವೀರ ಚಂದ್ರಹಾಸ ಅನ್ನೋ ಟೈಟಲ್ ನೀಡಲಾಗಿದೆ. ಈ ಚಿತ್ರದ ಟೀಸರ ಕೂಡ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ವೀರ ಚಂದ್ರಹಾಸ ಚಿತ್ರದ ಟೀಸರ್ ತುಂಬಾ ಡಿಫರೆಂಟ್ ಆಗಿದೆ. ವೀರ ಚಂದ್ರಹಾಸ ಪಾತ್ರದ ವಿರಾಟ್ ರೂಪ ಟೀಸರ್ ನ ಹೈಲೆಟ್ಸ್. ಸಿನಿಮಾ ಮೂಲಕ ಕರಾವಳಿಯ ಯಕ್ಷಗಾನ ಕಲೆಯನ್ನ ಇನ್ನೂ ಒಂದು ಲೆವಲ್ಗೆ ತೆಗೆದುಕೊಂಡು ಹೋಗಿದ್ದಾರೆ ಅಂತಾ ಅನ್ಸುತ್ತೆ. ಯಕ್ಷಗಾನದ ಸಂದರ್ಭದಲ್ಲಿ ರಂಗಸ್ಥಳದಲ್ಲಿ ಇರೋ ಲೈಟಿಂಗ್, ಆ ಒಂದು ವೈಬ್ರೇಷನ್ ಈ ಟೀಸರ್ನಲ್ಲೂ ಫೀಲ್ ಆಗುತ್ತಿದೆ. ಸಿನಿಮಾ ಅಂದಾಕ್ಷಣ ಅಲ್ಲಿ ಸಿನಿಮ್ಯಾಟಿಕ್ ಟಚ್ ಇದ್ದೇ ಇರುತ್ತದೆ. ವೀರ ಚಂದ್ರಹಾಸ ಸಿನಿಮಾದಲ್ಲೂ ಪ್ರೇಕ್ಷಕರು ಇದನ್ನೂ ಕೂಡಾ ನಿರೀಕ್ಷೆ ಮಾಡಬಹುದು. ಅದರೆ, ಇಡೀ ಸಿನಿಮಾ ಇಲ್ಲಿ ಯಕ್ಷಗಾನದ ರೂಪದಲ್ಲಿಯೇ ಇರುತ್ತದೆ. ಇದು ನಿಜಕ್ಕೂ ವಿಶ್ವ ಸಿನಿಮಾದಲ್ಲಿಯೇ ಮೊದಲ ಪ್ರಯತ್ನವೇ ಆಗಿದೆ. ಇದನ್ನ ಸ್ವತಃ ರವಿ ಬಸ್ರೂರ್ ಕೂಡ ಹೇಳಿಕೊಂಡಿದ್ದಾರೆ. ವೀರ ಚಂದ್ರಹಾಸ ಸಿನಿಮಾ ಕಂಪ್ಲೀಟ್ ರೆಡಿ ಆಗಿದೆ. ಇನ್ನೇನು ರಿಲೀಸ್ ಡೇಟ್ ಮಾತ್ರ ಅನೌನ್ಸ್ ಆಗಬೇಕಿದೆ. ವೀರ ಚಂದ್ರಹಾಸ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಯಕ್ಷಗಾನ ಕಲಾವಿದೆ ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ಗುಣಶ್ರೀ, ಶ್ವೇತಾ ಅರೆಹೊಳೆ ಸೇರಿದಂತೆ ಅನೇಕ ಕಲಾವಿದರು, ಜೊತೆಗೆ ಯಕ್ಷಗಾನ ಕಲಾವಿದರು ಕೂಡಾ ವೀರ ಚಂದ್ರಹಾಸ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟೀಸರ್ ನ ಕೊನೆಯಲ್ಲೇ ಬರೋ ಚಂದ್ರಹಾಸನ ಅಟ್ಟಹಾಸ ನೋಡಿದ್ರೆ ಸಿನಿಮಾ ಅದೆಷ್ಟರ ಮಟ್ಟಿಗೆ ವೈಬ್ರೇಶನ್ ಕೊಡಲಿದೆ ಅನ್ನೋದು ನಿಮಗೂ ಗೊತ್ತಾಗಲಿದೆ.

ರವಿ ಬಸ್ರೂರು, ಸಿನಿಮಾ ರಂಗದಲ್ಲಿ ಹೊಸ ಹೊಸ ಪ್ರಯೋಗಕ್ಕೆ ಫೇಮಸ್. ಈ ಹಿಂದೆ ಚಿಕ್ಕಮಕ್ಕಳನ್ನ ಹಾಕಿಕೊಂಡು ದೊಡ್ಡವರ ಪಾತ್ರ ಮಾಡಿಸಿ ಗಿರ್ಮಿಟ್ ಅನ್ನೋ ಸಿನಿಮಾವನ್ನ ತೆರೆಮೇಲೆ ತಂದಿದ್ರು. ಅದಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಧ್ವನಿ ನೀಡಿರೋದು ಮತ್ತೊಂದು ಪ್ರಯೋಗವೇ ಆಗಿತ್ತು. ಇದೀಗ ತಮ್ಮೂರಿನ ಕಲೆಯನ್ನ ಸಿನಿಮಾ ಮೂಲಕ ದೊಡ್ಡಮಟ್ಟದಲ್ಲೇ ತೆರೆಗೆ ತರಲು ರವಿಬಸ್ರೂರು ಸಜ್ಜಾಗಿದ್ದಾರೆ. ಇವರ ಪ್ರಯೋಗ ಯಾವ ರೀತಿ ಸಕ್ಸಸ್ ಆಗುತ್ತೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್ ಗೂ ಇದೆ.

Shwetha M

Leave a Reply

Your email address will not be published. Required fields are marked *