ಎಟಿಎಂನಲ್ಲಿ ಇಲಿಗಳ ದರ್ಬಾರ್ – 12 ಲಕ್ಷ ಮೌಲ್ಯದ ನೋಟುಗಳು ಪೀಸ್ ಪೀಸ್!  

ಎಟಿಎಂನಲ್ಲಿ ಇಲಿಗಳ ದರ್ಬಾರ್ – 12 ಲಕ್ಷ ಮೌಲ್ಯದ ನೋಟುಗಳು ಪೀಸ್ ಪೀಸ್!  

ಮನೆಯೊಳಗೆ ಇಲಿ ಸೇರಿದ್ರೆ ಮುಗೀತು. ಅವುಗಳ ಉಪಟಳ  ಅಷ್ಟಿಷ್ಟಲ್ಲ. ಅದು ಸೇರಿಕೊಂಡಲ್ಲೆಲ್ಲಾ ಏನಾದರೊಂದು ರಾದ್ಧಾಂತ ಮಾಡಿಬಿಡುತ್ತೆ. ಪುಸ್ತಕ, ಬಟ್ಟೆ, ಅಕ್ಕಿ, ಬೇಳೆ, ಕಾಳು ಎಲ್ಲವನ್ನೂ ಸರ್ವನಾಶ ಮಾಡಿಬಿಡುತ್ತೆ. ಈ ಇಲಿಗಳ ಕಾಟ ಕೇವಲ ಮನೆಗಳಲ್ಲಿ ಮಾತ್ರ ಅಲ್ಲ ಅಂಗಡಿ, ಕಚೇರಿಗಳಲ್ಲಿ, ತೋಟಗಳಲ್ಲಿ ಇದ್ದೇ ಇರುತ್ತೆ. ಇಲಿಗಳ ಕಾಟದಿಂದಾಗಿ ಎಷ್ಟೋ ಜನರು ತಮ್ಮ ಅಗತ್ಯ ದಾಖಲೆಗಳನ್ನೇ ಕಳೆದುಕೊಂಡಿದ್ದಾರೆ. ಇದೀಗ ಅಸ್ಸಾಂನ ಎಟಿಎಂನಲ್ಲಿ ನಡೆದ ಘಟನೆ ಎಲ್ಲರಿಗೂ ಶಾಕ್ ನೀಡಿದೆ.

ಇದನ್ನೂ ಓದಿ:ಸರ್ಜರಿ ವೇಳೆ ಬಾಲಕಿಯ ಅಂಗಾಂಗ ಕದ್ದರಾ ವೈದ್ಯರು? – ಹೆತ್ತವರ ಕಣ್ಣೀರಿಗೆ ಯಾರು ಹೊಣೆ?

ಅಸ್ಸಾಂನ ಎಟಿಎಂನಲ್ಲಿ ಜನರು ಹಣ ಡ್ರಾ ಮಾಡಲು ತೆರಳಿದ್ದಾರೆ. ಈ ವೇಳೆ ಹಣ ತೆಗೆಯಲು ಎಷ್ಟು ಬಾರಿ ಪ್ರಯತ್ನಿಸಿದ್ರೂ ಬರುತ್ತಿರಲಿಲ್ಲ. ಎಟಿಎಂ ನಲ್ಲಿ ಹಣ ಖಾಲಿಯಾಗಿರಬಹುದು ಅಥವಾ  ಎಟಿಎಂ ಯಂತ್ರ ಹಾಳಾಗಿರಬಹುದು ಎಂದು ಜನ ವಾಪಾಸ್ಸಾಗುತ್ತಿದ್ದರು. ಪ್ರತಿನಿತ್ಯ ಬಂದು ಪರಿಶೀಲಿಸಿದಾಗಲೂ ಇದೇ ರೀತಿ ಆಗುತ್ತಿತ್ತು. ಒಂದು ವಾರ ಕಳೆದ ನಂತರ ಎಟಿಎಂ ಬಳಿ ಏನೋ ವಾಸನೆ ಬರಲು ಆರಂಭವಾಗಿದೆ. ಅನುಮಾನಗೊಂಡ ಜನರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಲಿಂದ ಮೇಲೆ ದೂರು ಬಂದಿದ್ದನ್ನು ನೋಡಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಎಟಿಎಂಗೆ ತೆರಳಿದ್ದಾರೆ. ಇದೇನಿದು ಎಂದು ಮಿಷನ್​ ತೆಗೆದು ನೋಡಿದಾಗ ದೊಡ್ಡ ಅನಾಹುತ ನಡೆದಿರುವುದು ಬೆಳಕಿಗೆ ಬಂದಿದೆ. ಎಟಿಎಂ ಯಂತ್ರವನ್ನು ತೆರೆದು ನೋಡಿದಾಗ ನೋಟುಗಳು ಚೂರು ಚೂರಾಗಿ ಬಿದ್ದಿದ್ದವು. ಇದರ ಪಕ್ಕದಲ್ಲೇ ಇಲಿಯೂ ಸತ್ತು ಬಿದ್ದಿತ್ತು. ಇದನ್ನು ಕಂಡ ಅಧಿಕಾರಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಎಟಿಎಂನಲ್ಲಿ 500 ಮತ್ತು 2000 ಮುಖಬೆಲೆಯ ನೋಟುಗಳು ಇತ್ತು. ಇಲಿಗಳು ಅಂದಾಜು 12 ಲಕ್ಷ ರೂಪಾಯಿ ಛಿದ್ರ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮುಗ್ಧಜ್ಯೋತಿ ದೇವ್ ಮಹಂತ ತಿಳಿಸಿದ್ದಾರೆ.

suddiyaana