ನಿಮ್ಮ BPL ಕಾರ್ಡ್ ರದ್ದಾಗುತ್ತೆ – ಯಾವ್ಯಾವ ಸೌಲಭ್ಯ ಕಟ್.. ಮುಂದೇನು?
ಮರಳಿ BPL ಪಡೆಯೋದು ಹೇಗೆ?

ರಾಜ್ಯದಲ್ಲಿ ಜನರಲ್ಲಿ ಈಗ ಆತಂಕ ಶುರುವಾಗಿದೆ. ಬಿಬಿಪಿಎಲ್ ಕಾರ್ಡ್ ರದ್ದಾದ್ರೆ ಮುಂದೆ ಕಥೆಯೇನು ಅನ್ನೋ ಭಯ ಹೆಚ್ಚಾಗಿದೆ. ಯಾಕಂದ್ರೆ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೇ ಕರ್ನಾಟಕದಲ್ಲಿ ಅನರ್ಹ ರೇಷನ್ ಕಾರ್ಡ್ಗಳ ಆಪರೇಷನ್ ಶುರುಮಾಡಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿ ಕ್ಯಾನ್ಸಲ್ ಮಾಡಲಾಗುತ್ತಿದೆ. ಇದ್ರಿಂದ ಬಿಪಿಎಲ್ ಕಾರ್ಡ್ ಹೊಂದಿರೋ ಪ್ರತಿಯೊಬ್ಬರಿಗೂ ನಮ್ಮ ಕಾರ್ಡ್ ಕೂಡ ಕ್ಯಾನ್ಸಲ್ ಆಗುತ್ತಾ?.. ಕ್ಯಾನ್ಸಲ್ ಆದ್ರೆ ಏನ್ ಮಾಡ್ಬೇಕು? ಯಾವ್ಯಾವ ಕಾರಣಕ್ಕೆ ಕ್ಯಾನ್ಸಲ್ ಆಗುತ್ತೆ? ಸರ್ಕಾರ ಏನೆಲ್ಲಾ ದಂಡ ಹಾಕುತ್ತೆ ಅನ್ನೋ ಪ್ರಶ್ನೆಗಳು ಸಾಮಾನ್ಯ ಜನರನ್ನ ಕಾಡುತ್ತಿದೆ.
ಆಪ‘ರೇಷನ್’ ಬಿಪಿಎಲ್ ಕಾರ್ಡ್..!
- ರಾಜ್ಯದಲ್ಲಿ ಅನರ್ಹತೆಗೊಳ್ಳಲಿರುವ ಅಂತ್ಯೋದಯ/ಬಿಪಿಎಲ್ ಕಾರ್ಡ್ ಸಂಖ್ಯೆ – 10,97,621
- ಆದಾಯ ತೆರಿಗೆ ಪಾವತಿದಾರರ ಬಿಪಿಎಲ್ ಕಾರ್ಡ್ ಸಂಖ್ಯೆ – 1,06,152
- 1 ಲಕ್ಷದ 20 ಸಾವಿರ ಆದಾಯವಿರುವ ಬಿಪಿಎಲ್ ಕಾರ್ಡ್ ಸಂಖ್ಯೆ – 10,54,368
- ಸರ್ಕಾರಿ ನೌಕರರಾಗಿದ್ದು ಬಿಪಿಎಲ್ ಕಾರ್ಡ್ ಹೊಂದಿರುವ ಸಂಖ್ಯೆ – 4,272
- ಬಿಪಿಎಲ್ ರದ್ದಾದರೆ ಈ ಸೌಲಭ್ಯ ಕಟ್
ಬಿಪಿಎಲ್ ರದ್ದಾದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ ಸಿಗೋದಿಲ್ಲ. ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿಯನ್ನ ಕೈಗೊಳ್ಳಲು ಆಗುವುದಿಲ್ಲ.
ಯಾರೆಲ್ಲಾ ಬಿಪಿಎಲ್ ಕಾರ್ಡ್ ಅನರ್ಹ ಆಗುತ್ತೆ?
- ನಿಮ್ಮ ಕುಟುಂಬದಲ್ಲಿ ಯಾರಾದರು ಸರ್ಕಾರಿ ನೌಕರರು ಇದ್ದರೆ ಅನರ್ಹ.
- ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ನೌಕರರು ಇದ್ದರೆ ಅನರ್ಹ.
- ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿ ಮಾಡುತ್ತಿದ್ದರೆ ಅನರ್ಹ
- ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅನರ್ಹ.
- ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಅನರ್ಹ
- ಜೀವನೋಪಾಯಕ್ಕಾಗಿ ಒಂದು ವಾಣಿಜ್ಯ ವಾಹನ ಇದ್ರೆ ಏನಾಗಲ್ಲ
- ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಅನರ್ಹ.
- ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಅನರ್ಹ.
ಬಿಪಿಎಲ್ ಕಾರ್ಡ್ ರದ್ದಾದ್ರೆ ಮುಂದೇನು?
ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆ ಕುಟುಂಬಕ್ಕೆ ಎಪಿಎಲ್ ಯೋಜನೆಯಡಿ ಕಾರ್ಡ್ ನೀಡಲು ಅಗತ್ಯ ಕ್ರಮಕೈಗೊಳ್ಳುತ್ತಾರೆ. ಈ ಬಗ್ಗೆ ಸ್ವತಂ ಆಹಾರ ಇಲಾಖೆ ಸಚಿವರು ಮಾಹಿತಿ ನೀಡಿದ್ದಾರೆ. ” ರೇಷನ್ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅರ್ಹರು ಅಲ್ಲದೇ ಇರೋರನ್ನು ಎಪಿಎಲ್ ಮಾಡಿದ್ದೇವೆ. ಎಪಿಎಲ್‌ಗೆ ಅರ್ಜಿ ಹಾಕಿದವರನ್ನು ರದ್ದು ಮಾಡುವುದಿಲ್ಲ ” ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಆಹಾರ ಇಲಾಖೆಗೆ ಮಾಹಿತಿ ನೀಡಿ
ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಪಡೆದಿರುವವರಿಗೆ ಅಥವಾ ಅನರ್ಹರಿಗೆ ಕಾರ್ಡ್‌ಗಳನ್ನು ಹಿಂದಿರುಗಿಸಲು ಅವಕಾಶ ನೀಡಲಾಗಿದೆ. ಕಾರ್ಡ್ ದಾರರು ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಹಶೀಲ್ದಾರ್ ಕಚೇರಿನಿ ನೀಡಿ ಅಲ್ಲಿ ಕಾರ್ಡ್ ರದ್ದು ಮಾಡಿಸಿಕೊಳ್ಳಬಹುದು.
ಅನರ್ಹರಾಗಿ ಅಕ್ಕಿ ಪಡೆದ್ರೆ ಬೀಳುತ್ತೆ ದಂಡ!
ಇನ್ನು ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರು ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಅಕ್ಕಿಯನ್ನು ಪಡೆದುಕೊಂಡಿದ್ದದ್ದರೆ ಅವರಿಗೆ ದಂಡ ಹಾಕಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 33 ರೂಪಾಯಿಗಳಂತೆ ದಂಡ ವಿಧಿಸಲಾಗುತ್ತದೆ. ದಂಡ ಪಾವತಿಗೆ ನಿರಾಕರಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಿಯೇ ಸದ್ದ ಅಂತಾ ಸಿದ್ದರಾಮಯ್ಯ ಸರ್ಕಾರ ಹೊರಟ್ಟಿದ್ದು, ಜನರಲ್ಲಿ ನಮ್ಮ ಕಾರ್ಡ್ ಏನಾಗುತ್ತೋ ಅಂತಾ ಭಯ ಶುರುವಾಗಿದೆ.