ಸುಧಾ ಕೊಂಗರ ನಿರ್ದೇಶನದಲ್ಲಿ ಶೀಘ್ರದಲ್ಲೇ ಉದ್ಯಮಿ ರತನ್ ಟಾಟಾ ಬಯೋಪಿಕ್?
ತೆರೆಯ ಮೇಲೆ ತರಲು ಸಜ್ಜಾದ ರತನ್ ಟಾಟಾ ಲೈಫ್ ಸ್ಟೋರಿ
ಸೂರರೈ ಪೊಟ್ರು ಚಿತ್ರದ ಭರ್ಜರಿ ಸಕ್ಸಸ್ ಬಳಿಕ ನಿರ್ದೇಶಕಿ ಸುಧಾ ಕೊಂಗರ ಯಶಸ್ವಿ ಉದ್ಯಮಿ ರತನ್ ಟಾಟಾ ಬಯೋಪಿಕ್ ಮಾಡಲು ಸಜ್ಜಾಗಿದ್ದಾರೆ. 2020ರಲ್ಲಿ ನಟ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಲವು ಪ್ರಶಸ್ತಿಗಳು ಕೂಡಾ ಈ ಚಿತ್ರಕ್ಕೆ ಲಭಿಸಿತ್ತು. ಇದರ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿರುವ ಹಿಂದಿ ರಿಮೇಕ್ಗೂ ಸುಧಾ ಕೊಂಗರ ನಿರ್ದೇಶನ ಮಾಡ್ತಿದ್ದಾರೆ. ಹೀಗಿರುವಾಗಲೇ ಈಗ ಉದ್ಯಮಿ ರತನ್ ಟಾಟಾ ಅವರ ಬಯೋಪಿಕ್ ಮಾಡುವುದಾಗಿ ಸುಧಾ ಕೊಂಗರ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಬಿಸ್ಲೆರಿ ಕಂಪನಿ ಟಾಟಾ ತೆಕ್ಕೆಗೆ – ಉತ್ತರಾಧಿಕಾರಿಯಿಲ್ಲದೇ ಕಂಪನಿ ಮಾರಾಟ
ರತನ್ ಟಾಟಾ ಕಥೆಯನ್ನ ತೆರೆ ಮೇಲೆ ತರಲು ಈಗಾಗಲೇ ಸುಧಾ ಕೊಂಗರ ಭರ್ಜರಿಯಾಗಿಯೇ ತಯಾರಿ ನಡೆಸಿದ್ದಾರೆ. 2023ರ ಕೊನೆಯಲ್ಲಿ ಚಿತ್ರ ಪೂರ್ಣಗೊಳ್ಳಲಿದೆ ಎನ್ನಲಾಗ್ತಿದೆ. ರತನ್ ಟಾಟಾ ಅವರು ನಮ್ಮ ದೇಶದ ಹೆಸರಾಂತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು ಮತ್ತು ಅವರ ಕಥೆಯನ್ನು ಬೆಳ್ಳಿ ಪರದೆ ಮೇಲೆ ದಾಖಲಿಸುವುದು ಹೆಮ್ಮೆಯ ವಿಷಯವಾಗಿದೆ. ಅವರ ಜೀವನ ಪ್ರಪಂಚದಾದ್ಯಂತ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದೆ. ಸ್ಕ್ರಿಪ್ಟ್ ಕೆಲಸವು ಸಹ ಕೆಲಸದಲ್ಲಿದೆ ಅನ್ನೋ ವಿಚಾರ ಈಗ ರಿವೀಲ್ ಆಗಿದೆ.
ನಟರಾದ ಅಭಿಷೇಕ್ ಬಚ್ಚನ್ ಮತ್ತು ನಟ ಸೂರ್ಯ ಈ ಚಿತ್ರಕ್ಕೆ ಆಯ್ಕೆ ಆಗುವ ನಿರೀಕ್ಷೆಯಿದೆ ಎಂದು ಚೆನ್ನೈ ಟೈಮ್ಸ್ ವರದಿ ಮಾಡಿದ್ದು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.