ಮಾರಾಟಕ್ಕಿಟ್ಟಿದ್ದ ವಜ್ರದ ನೆಕ್ಲೇಸ್ ಕಳ್ಳತನ – ಸಿಸಿ ಕ್ಯಾಮರಾದಲ್ಲಿ ಕಳ್ಳನ ಕಂಡು ಖಾಕಿಯೇ ದಂಗು!

ಮಾರಾಟಕ್ಕಿಟ್ಟಿದ್ದ ವಜ್ರದ ನೆಕ್ಲೇಸ್ ಕಳ್ಳತನ – ಸಿಸಿ ಕ್ಯಾಮರಾದಲ್ಲಿ ಕಳ್ಳನ ಕಂಡು ಖಾಕಿಯೇ ದಂಗು!

ಚಿನ್ನದಂಗಡಿಯಲ್ಲಿ ಮಾರಾಟಕ್ಕಾಗಿ ಡಿಸ್​ಪ್ಲೇನಲ್ಲಿ ಇಟ್ಟಿದ್ದ ವಜ್ರದ ನೆಕ್ಲೇಸ್ ದಿಢೀರ್ ಕಾಣೆಯಾಗಿತ್ತು. ಶಾಪ್​ನ ಬಾಗಿಲು ಮುರಿದಿಲ್ಲ, ಕಳ್ಳರು ಒಳಬಂದಿಲ್ಲ. ಹಾಗಾದ್ರೆ ನೆಕ್ಲೇಸ್ ಮಾಯವಾಗಿದ್ದೇಗೆ ಅಂತಾ ಎಲ್ರೂ ಶಾಕ್ ಆಗಿದ್ರು. ಜ್ಯುವೆಲ್ಲರಿ ಶಾಪ್ ಮಾಲೀಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಂಗಡಿ ತುಂಬಾ ತಲಾಶ್ ನಡೆಸಿದ್ರು. ಎಷ್ಟು ಹುಡುಕಿದ್ರೂ ಸಣ್ಣ ಕ್ಲ್ಯೂ ಕೂಡ ಸಿಕ್ಕಿಲ್ಲ. ಹೀಗಾಗಿ ಸಿಸಿಟಿವಿ ಪರಿಶೀಲನೆ ಮಾಡಿದ್ದು, ಈ ವೇಳೆ ‘ಕಳ್ಳ’ನ ಕರಾಮತ್ತು ಬಯಲಾಗಿದೆ. ಆದ್ರೆ ಕಳ್ಳನನ್ನ ಕಂಡು ಪೊಲೀಸರ ಜತೆ ಅಂಗಡಿ ಮಾಲೀಕರೂ ಶಾಕ್ ಆಗಿದ್ದಾರೆ.

ಇದನ್ನೂ ಓದಿ : ಹಿಟ್ಟು ಕಲಸಿ ಲಟ್ಟಣಿಗೆ ಹಿಡಿದ ಬಿಲ್​ಗೇಟ್ಸ್ – ಕುಬೇರನ ರೊಟ್ಟಿ ತಯಾರಿಕೆಗೆ ನೆಟ್ಟಿಗರು ಶಾಕ್!

ಹೌದು ಜ್ಯುವೆಲ್ಲರಿ ಶಾಪ್​ನಲ್ಲಿ ದುಬಾರಿ ಬೆಲೆಯ ವಜ್ರದ ನೆಕ್ಲೇಸ್ ಕದ್ದಿದ್ದು ಇಲಿ. ಮನೆಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಸೇರಿಕೊಂಡು ಕಾಟ ಕೊಡ್ತಿದ್ದ ಇಲಿ ಈಗ ಚಿನ್ನದಂಗಡಿಯಲ್ಲೂ ಕರಾಮತ್ತು ತೋರಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಜ್ರದ ನೆಕ್ಲೇಸ್ ಹೊತ್ತೊಯ್ದಿರೋ ಇಲಿ ವಿಡಿಯೋ ನೋಡಿದ ಕೆಲವ್ರು ತಮ್ಮ ಕಣ್ಣನ್ನ ತಾವೇ ನಂಬಲಾಗುತ್ತಿಲ್ಲ ಎಂದಿದ್ದಾರೆ.

ಇಷ್ಟು ದಿನ ಇಲಿ ಅಂದ್ರೆ ಮನೆಗಳಲ್ಲಿ ಬಟ್ಟೆ ಕಚ್ಚಿ ಹಾಕುತ್ತಿತ್ತು. ಇಲ್ಲದಿದ್ರೆ ದಿನಸಿ ವಸ್ತುಗಳನ್ನ ತಿಂದು ಹಾಳು ಮಾಡುತ್ತಿತ್ತು. ಆದ್ರೆ ಇಲ್ಲಿ ವಜ್ರದ ನೆಕ್ಲೇಸ್ ಮೇಲೆಯೇ ಕಣ್ಣು ಹಾಕಿದೆ. ಡಿಸ್​ಪ್ಲೇನಲ್ಲಿ ಇಟ್ಟಿರುವ ವಜ್ರದ ನೆಕ್ಲೇಸ್​ನ ಬಾಯಿಯಲ್ಲಿ ಕಚ್ಚಿಕೊಂಡು ಎಸ್ಕೇಪ್ ಆಗಿದೆ. ಆದ್ರೆ ಈ ದೃಶ್ಯ ಎಲ್ಲಿನದ್ದು ಮತ್ತು ಯಾವಾಗ ಸೆರೆಯಾಗಿದ್ದು, ಇದಾದ ಬಳಿಕ ಏನಾಯ್ತು ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಜತೆಗೆ, ಈ ದೃಶ್ಯ ಕಂಡ ಹಲವರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ರಾಜೇಶ್ ಹಿಂಗಾಂಕರ್ ಅನ್ನೋರು ವಿಡಿಯೋ ಶೇರ್ ಮಾಡಿದ್ದಾರೆ. ಮನುಷ್ಯರಂತೆ ಇಲಿಗೂ ಆಭರಣದ ಮೇಲೆ ಮೋಹ ಬಂದಿರಬೇಕು ಎಂದು ಕೆಲವರು ಹೇಳಿದ್ರೆ ಇನ್ನೂ ಕೆಲವರು ಎಲ್ಲೋ ಅದು ಗಂಡು ಇಲಿ ಆಗಿರಬಹುದು. ಅದಕ್ಕೇ ತನ್ನ ಪತ್ನಿಗೆ ಕೊಡಲು ವಜ್ರದ ನೆಕ್ಲೇಸ್ ಕದ್ದೊಯ್ದಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.

suddiyaana